Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕೊರೊನಾ ವೈರಸ್ ಹೊಸ ತಳಿ ಲಂಬ್ಡಾ 29 ರಾಷ್ಟ್ರಗಳಲ್ಲಿ ಪತ್ತೆ: ಇದರ ಲಕ್ಷಣಗಳೇನು?
ಭಾರತದಲ್ಲಿ ಕೊರೊನಾವೈರಸ್‌ನ 2ನೇ ಅಲೆಯ ಆರ್ಭಟ ತಗ್ಗಿದೆ, ಹಾಗಂತ ಎಚ್ಚರ ತಪ್ಪಬಾರದು, ಏಕೆಂದರೆ ಕೊರೊನಾವೈರಸ್ ಈ ವಿಶ್ವದಿಂದ ಇನ್ನೂ ಹೋಗಿಲ್ಲ ಕೊರೊನಾವೈರಸ್‌ನ ಹಲವಾರು ರೂಪಾಂತರ ತಳಿಗಳು ಕಂಡು ಬರುತ್ತಿವೆ. ಇದೀಗ ಹೊಸ ರೂಪಾಂತರ ತಳಿ ಲಂಬ್ಡಾ ಪತ್ತೆಯಾಗಿದ್ದು 29 ರಾಷ್ಟ್ರಗಳಲ್ಲಿ ಇದು ಕಂಡು ಬಂದಿದೆ. ಈ ವೈರಸ್ ಹುಟ್ಟಿರುವುದು ದಕ್ಷಿಣ ಅಮೆರಿಕದಲ್ಲಿ ಎಂದು ಹೇಳಲಾಗಿದೆ.

ಲಂಬ್ಡಾ ವೈರಸ್ ಪತ್ತೆ
ಏಪ್ರಿಲ್ 21, 2021ರಲ್ಲಿ ಪೆರುವಿನಲ್ಲಿ ಶೇ. 81ರಷ್ಟು ಕೊರೊನಾ ಸೋಂಕಿತರಲ್ಲಿ ಲಂಬ್ಡಾ ರೂಪಾಂತರ ತಳಿ ಕಂಡು ಬಂದಿದೆ. ಈ ರೂಪಾಂತರ ವೈರಸ್ ತಳಿ ಅರ್ಜೆಂಟಿನಾ, ಇಕ್ವಾಡೋರ್‌ನಲ್ಲಿ ಕೂಡ ಕಂಡು ಬಂದಿದೆ.
ಚಿಲಿ ದೇಶದಲ್ಲಿ ಕಳೆದ 60 ದಿನಗಳಲ್ಲಿ ಶೇ. 32ರಷ್ಟು ಕೊರೊನಾ ಸೋಂಕಿತರಲ್ಲಿ ಈ ತಳಿ ಪತ್ತೆಯಾಗಿದೆ. ಈ ರೂಪಾಂತಾರ ವೈರಸ್ ಈಗಾಗಲೇ 29 ದೇಶಗಳಲ್ಲಿ ಕಂಡು ಬಂದಿದ್ದು ಇತರ ದೇಶಗಳಿಗೂ ಹರಡುವ ಸಾಧ್ಯತೆ ಇದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವ ಸಂಸ್ಥೆ 50ಕ್ಕೂ ಅಧಿಕ ರೂಪಾಂತರ ವೈರಸ್ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಿದೆ.

ಲಂಬ್ಡಾ ಕೊರೊನಾವೈರಸ್ ಲಕ್ಷಣಗಳು
ಈ ರೂಪಾಂತರ ತಳಿಯ ಲಕ್ಷಣಗಳೇನು ತುಂಬಾ ಭಿನ್ನವಾಗಿಲ್ಲ. ಇದುವರೆಗಿನ ಕೋವಿಡ್ 19 ಲಕ್ಷಣಗಳೇ ಇದರಲ್ಲೂ ಕಂಡು ಬಂದಿವೆ. ಈ ರೂಪಾಂತರ ವೈರಸ್ ತಗುಲಿದವರಲ್ಲಿ ಜ್ವರ, ತಲೆನೋವು, ಕೆಮ್ಮು, ಶೀತ, ರುಚಿ, ವಾಸನೆ ಇಲ್ಲದಿರುವುದು ಇಂಥ ಲಕ್ಷಣಗಳೇ ಕಂಡು ಬಂದಿದೆ.
ಭಾರತದಲ್ಲಿ ಪತ್ತೆಯಾಗಿರುವ ಕೋವಿಡ್-19 ರ B.1.617.1 ಮತ್ತು B.1.617.2 ರೂಪಾಂತರ ಡೆಲ್ಟಾ ವೈರಸ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಕಪ್ಪಾ ಎಂದು ಹೆಸರಿಸಿದೆ.

ಕೊನೆಯದಾಗಿ:
ಕೊರೊನಾವೈರಸ್ ರೂಪಾಂತರ ತಳಿಗಳು ಕಂಡು ಬರುತ್ತಲೇ ಇವೆ. ಆದ್ದರಿಂದ ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ. ಮಾಸ್ಕ್ ಧರಿಸಬೇಕು. ಆಗಾಗ ಕೈತೊಳೆಯಬೇಕು ಹಾಗೂ ಹೊರಗಡೆ ಸಾಮಾಜಿಕ ಅಂತರ ಕಾಪಾಡಲು ಮರೆಯದಿರಿ. ಅಲ್ಲದೆ ಬಹುಮುಖ್ಯವಾಗಿ ಪ್ರತಿಯೊಬ್ಬರು ಕೋವಿಡ್ 19 ಲಸಿಕೆ ಪಡೆದುಕೊಳ್ಳಿ.



Click it and Unblock the Notifications
