Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಕೋವಿಡ್ ವ್ಯಾಕ್ಸಿನ್ 2 ಡೋಸ್ ಪಡೆದವರಿಗೂ ಕಾಡಿದೆ ಡೆಲ್ಟಾ ವೈರಸ್: ಏಮ್ಸ್
ಕೊರೊನಾವೈರಸ್ 2ನೇ ಅಲೆ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ ಇದೀಗ ದೇಶಕ್ಕೆ ಡೆಲ್ಟಾ ವೈರಸ್ ಆತಂಕ ಎದುರಾಗಿದೆ. ಕೊರೊನಾವೈರಸ್‌ನ ರೂಪಾಂತರ ವೈರಸ್ ಇದಗಿದೆ. ಇದರ ಬಗ್ಗೆ ಎಚ್ಚರವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ.

ಕೊರೊನಾವೈರಸ್ ವಿರುದ್ಧ ಕೋವಿಡ್ ಲಸಿಕೆ ಡ್ರೈವ್ ಆಗುತ್ತಿದೆ. ಜೂನ್ 8ರವರೆಗಿನ ಅಂಕಿ ಅಂಶ ನೋಡಿದಾಗ 23 ಕೋಟಿಗೂ ಅಧಿಕ ಜನ ಲಸಿಕೆ ಪಡೆದಿದ್ದಾರೆ, ಅದರಲ್ಲಿ 1,82,303 ಜನ ಸೆಕೆಂಡ್ ಡೋಸ್ ಪಡೆದಿದ್ದಾರೆ.
ಯಾರು ಮೊದಲ ಡೋಸ್ ಲಸಿಕೆ ಪಡೆದಿದ್ದರೋ ಅವರು ಆದಷ್ಟು ಬೇಗ ಸೆಕೆಂಡ್ ಡೋಸ್ ಲಸಿಕೆ ಪಡೆಯಬೇಕು, ಆಗ ಮಾತ್ರ ಡೆಲ್ಟಾ ವೈರಸ್‌ನಿಂದ ಉಂಟಾಗುವ ತಪ್ಪಿಸಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.
ಇದೀಗ ಏಮ್ಸ್ ವರದಿಯು ಕೊವಿಶೀಲ್ಡ್, ಕೊವಾಕ್ಸಿನ್ ತೆಗೆದುಕೊಂಡವರಿಗೂ ಡೆಲ್ಟಾ ಸೋಂಕು ತಗುಲಬಹುದು ಎಂದು ಹೇಳಿದೆ.

ಏಮ್ಸ್ ವರದಿ
ಏಮ್ಸ್ IGIB(Institute of Genomics and Integrative Biology ) ಹಾಗೂ NCDC (National Centre for Disease Control) ಜೊತೆ ಸೇರಿ ನಡೆಸಿದ ಅಧ್ಯಯನದಲ್ಲಿ ಡೆಲ್ಟಾ ರೂಪಾಂತರ ವೈರಸ್ ಕೊವಿಶೀಲ್ಡ್ ಹಾಗೂ ಕೊವಾಕ್ಸಿನ್ ಎರಡೂ ಪಡೆದವರಿಗೂ ತಗುಲಬಹುದು ಎಂದು ಹೇಳಿದೆ.
ಅಧ್ಯಯನದಲ್ಲಿ 67 ಸೋಂಕಿತರಲ್ಲಿ 36 ಜನರು 2 ಡೋಸ್ ಪಡೆದಿದ್ದರೆ 27 ಜನ ಒಂದು ಡೋಸ್ ಪಡೆದವರಾಗಿದ್ದರು.

ಸಾವಿನ ಸಂಖ್ಯೆ ವರದಿಯಾಗಿಲ್ಲ
2 ಡೋಸ್ ಲಸಿಕೆ ಪಡೆದವರಲ್ಲಿಯೂ ಸೋಂಕು ಕಂಡು ಬಂದರೂ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. ಡೆಲ್ಟಾ ವೈರಸ್ ಸೋಂಕಿತರಲ್ಲಿ ಶೇ. 70ರಷ್ಟು ಜನರು ಲಸಿಕೆ ಪಡೆದವರಾಗಿದ್ದಾರೆ.

ಬೇಟಾ ಹಾಗೂ ಡೆಲ್ಟಾ ವೈರಸ್ ಅನ್ನು ಕೊವಾಕ್ಸಿನ್ ನಿಷ್ಕ್ರಿಯೆಗೊಳಿಸುವುದು: ICMR ವರದಿ
ICMR ಅಧ್ಯಯನವು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಕೊರೊನಾ ರೂಪಾಂತರ ತಳಿಗಳಾದ B.1.351 (ಬೇಟಾ) ಮತ್ತು B.1.617.2 (ಡೆಲ್ಟಾ) ನಿಷ್ಕ್ರಿಯಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ICMR ಹೇಳಿದೆ. ಈ ಅಧ್ಯಯನಕ್ಕೆ ಒಳಪಟ್ಟವರಲ್ಲಿ ಡೆಲ್ಟಾ ವೈರಸ್ ಸೋಂಕಿದವರಲ್ಲಿ ಲಸಿಕೆ ಪಡೆಯದವರು ಚೇತರಿಸಿಕೊಳ್ಳಲು 5-20 ವಾರ ತೆಗೆದುಕೊಂಡರೆ ಕೊವಾಕ್ಸಿನ್ 2 ಡೋಸ್ ಪಡೆದವರು 28 ದಿನಗಳ ಒಂಗಾಗಿ ಚೇತರಿಸಿದ್ದಾರೆ ಎಂದು ವರದಿ ಹೇಳಿದೆ. ಕೊವಾಕ್ಸಿನ್ ಡೆಲ್ಟಾ ಮತ್ತು ಬೀಟಾ ವೈರಸ್ ನಿಷ್ಕ್ರಿಯಗೊಳಿಸುವಲ್ಲಿ ಪರಿಣಾಮಕಾರಿ ಎಂದು ವರದಿ ಹೇಳಿದೆ.

ಕೊನೆಯದಾಗಿ:
ಇದೀಗ ದೇಶದ ಮುಂದೆ ಡೆಲ್ಟಾ ವೈರಸ್ ಭೀತಿ ಇದೆ, ಈ ವೈರಸ್‌ನಿಂದ ಪಾರಾಗಲು ಕೊರೊನಾದ ಎಲ್ಲಾ ಮುನ್ನೆಚ್ಚರಿಕೆವಹಿಸಬೇಕು. ಹೊರಗಡೆ ಹೋಗುವಾಗ ಮಾಸ್ಕ್ ಧರಿಸಬೇಕು, ಕೈಗಳಿಗೆ ಸ್ಯಾನಿಟೈಸರ್ ಬಳಸಬೇಕು ಮುಖ್ಯವಾಗಿ ಎಲ್ಲರು ಕೊರೊನಾ ಲಸಿಕೆ ಪಡೆಯಬೇಕಾಗಿದೆ. ಲಸಿಕೆ ಪಡೆದವರಿಗೂ ಡೆಲ್ಟಾ ರೂಪಾಂತರ ವೈರಸ್ ತಗುಲುತ್ತಿವೆ, ಆದರೆ ಸಾವು ಸಂಭವಿಸಿಲ್ಲ ಅಲ್ಲದೆ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಲಸಿಕೆ ಪಡೆಯಿರಿ.



Click it and Unblock the Notifications