Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೊರೊನಾವೈರಸ್:ಸೆಲ್ಫ್ ಕ್ವಾರೆಂಟೈನ್ ಬಗ್ಗೆ ನಿಮಗೆ ತಿಳಿದಿರಲೇಬೇಕಾದ ಅಂಶಗಳಿವು
ವಿಶ್ವದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 167,511(13903 ಹೊಸ ಕೇಸ್‌ಗಳು) ಪತ್ತೆಯಾಗಿವೆ, ಇನ್ನು 6060 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ. ಇನ್ನು ಭಾರತದಲ್ಲಿಯೂ ಕೊರೊನಾವೈರಸ್ ಸಂಖ್ಯೆ 324 ತಲುಪಿದ್ದು, 8 ಜನ ಸಾವನ್ನಪ್ಪಿದ್ದಾರೆ.
ಕೊರೊನಾವೈರಸ್ ಸದ್ಯ ಭಾರತದಲ್ಲಿ ಸ್ಟೇಜ್ 2ರ ಹಂತದಲ್ಲಿದ್ದು, ಇದು ಮೂರನೇಯ ಸ್ಟೇಜ್‌ಗೆ ತಲುಪದಿರಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜನರು ಒಂದೆಡೆ ಸೇರದಂತೆ, ಗುಂಪು-ಗುಂಪು ಸೇರಿ ಸಭೆ-ಸಮಾರಂಭ ಮಾಡದಂತೆ ಆದೇಶ ನೀಡಲಾಗಿದೆ. ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲಾಗಿದೆ. ಇನ್ನು ವಿದೇಶದಿಂದ ಮರಳಿದವರು ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗುವಂತೆ ಕಟ್ಟಿನಿಟ್ಟಿನ ಆದೇಶ ನೀಡಲಾಗಿದೆ.
ವಿದೇಶದಿಂದ ಭಾರತಕ್ಕೆ ಮರಳಿದವರನ್ನು ಗುರುತಿಸಲು ಅವರ ಕೈಗಳಿಗೆ ಸೀಲ್ ಹಾಕಲಾಗಿದ್ದು ಅವರು ಕಡ್ಡಾಯವಾಗಿ ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಬೇಕಾಗಿದೆ. ಇಲ್ಲಿ ಸೆಲ್ಫ್ ಕ್ವಾರೆಂಟೈನ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ ನೋಡಿ:

ಸೆಲ್ಫ್ ಕ್ವಾರೆಂಟೈನ್ ಎಂದರೇನು?
ಸೆಲ್ಫ್ ಕ್ವಾರೆಂಟೈನ್ ಎಂದರೆ ಇತರರ ಸಂಪರ್ಕ ಮಾಡದೆ ಪ್ರತ್ಯೇಕ ಕೋಣೆಯಲ್ಲಿ ಬಂದಿಯಾಗಿರುವುದು. ಈ ಸಂದರ್ಭದಲ್ಲಿ ಯಾರೊಂದಿಗೆ ನೇರವಾಗಿ ಮಾತನಾಡುವಂತಿಲ್ಲ, ಯಾರನ್ನು ಮುಟ್ಟುವಂತಿಲ್ಲ, ಮನೆಯ ಪತ್ಯೇಕ ಕೋಣೆಯಲ್ಲಿ ಯಾರ ಸಂಪರ್ಕವೂ ಇಲ್ಲದೆ ಇರುವುದು.
ಇವರು ಬಳಸಿದ ವಸ್ತುಗಳನ್ನು ಇತರರು ಮುಟ್ಟಬಾರದು, ಇವರು ಮುಟ್ಟಿದ ವಸ್ತುಗಳನ್ನು ಸೋಪ್ ನೀರು ಹಾಕಿ ತೊಳೆಯಬೇಕು. ಇನ್ನು 14 ದಿನಗಳಲ್ಲಿ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಉಂಟಾದರೆ ಕೂಡಲೇ ವೈದ್ಯರಿಗೆ ತಿಳಿಸಬೇಕಾಗುತ್ತದೆ.
ಕೊರೊನಾವೈರಸ್ ಸೋಂಕು ತಗುಲಿದಾಗ ಕೆಮ್ಮು, ಜ್ವರ, ಉಸಿರಾಟದಲ್ಲಿ ತೊಂದರೆ ಉಂಟಾಗುವುದು. ಈ ರೀತಿಯ ಲಕ್ಷಣಗಳು ಕಂಡು ಬಂದ ತಕ್ಷಣ ಕ್ವಾರೆಂಟೈನ್‌ಗೆ ಒಳಗಾಗಬೇಕು. ಇನ್ನು ಶಂಕಿತರ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರೂ ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಬೇಕು.

ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬರದಿದ್ದರೆ ಎಷ್ಟು ದಿನ ಕ್ವಾರೆಂಟೈನ್‌ನಲ್ಲಿರಬೇಕು?
ಒಂದು ವಾರ ಯಾವುದೇ ಲಕ್ಷಣಗಳು ಕಂಡು ಬರದಿದ್ದರೆ ಹೊರಗೆ ಹೋಗಬಹುದು ಎಂದು ಭಾವಿಸಬೇಡಿ, ಏಕೆಂದರೆ ಈ ರೋಗದ ಲಕ್ಷಣಗಳು ಕಂಡು ಬರಲು 6-14 ದಿನಗಳು ಬೇಕು. ಆದ್ದರಿಂದ ನೀವು ಸಂಪೂರ್ಣ ಆರೋಗ್ಯವಂತರೇ ಆಗಿದ್ದರೂ ವಿದೇಶಕ್ಕೆ ಹೋಗಿ ಬಂದರೆ 14 ದಿನಗಳವರೆಗೆ ಕ್ವಾರೆಂಟೈನ್‌ನಲ್ಲಿರಲೇಬೇಕು.
ಈ ಸಂದರ್ಭದಲ್ಲಿ ಅವರು ಪ್ರತ್ಯೇಕ ಕೋಣೆಯಲ್ಲಿರಬೇಕು, ಯಾರ ಸಂಪರ್ಕಕಕ್ಕೂ ಬರುವಂತಿಲ್ಲ. ಅವರನ್ನು ಯಾರು ಮುಟ್ಟುವಂತಿಲ್ಲ, ಅವರು ಬಳಸುವ ತಟ್ಟೆ-ಲೋಟ ಪ್ರತ್ಯೇಕವಾಗಿಡಬೇಕು. ಕೊರೊನಾವೈರಸ್ ಶಂಕಿತರು 14 ದಿನಗಳವರೆಗೆ ಹೀಗೆ ಪ್ರತ್ಯೇಕವಾಗಿ ಇರಬೇಕಾಗುತ್ತದೆ. ಈ ಸಂದರ್ಭದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದರೆ ಕೂಡಲೇ ವೈದ್ಯರಿಗೆ ತಿಳಿಸಬೇಕು.

ಯಾರೆಲ್ಲಾ ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಬೇಕು?
ಕಾಯಿಲೆ ಇರುವವರು ಮಾತ್ರವಲ್ಲ, ಆರೋಗ್ಯವಂತರಾಗಿದ್ದರೂ ವಿದೇಶದಿಂದ ಭಾರತಕ್ಕೆ ಮರಳಿದವರು ಯಾರ ಸಂಪರ್ಕವೂ ಮಾಡದೆ ಮನೆಯಲ್ಲಿ ಬಂದಿಯಾಗಿ ಇರಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದಾಗಿದೆ.
ಯಾವಾಗ ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಬೇಕು?
ಕೊರೊನಾವೈರಸ್ ಸೋಂಕು ತಗುಲಿದಾಗ ಕೆಮ್ಮು, ಜ್ವರ, ಉಸಿರಾಟದಲ್ಲಿ ತೊಂದರೆ ಉಂಟಾಗುವುದು. ಈ ರೀತಿಯ ಲಜ್ಷಣಗಳು ಕಂಡು ಬಂದ ತಕ್ಷಣ ಕ್ವಾರೆಂಟೈನ್‌ಗೆ ಒಳಗಾಗಬೇಕು. ಇನ್ನು ಶಂಕಿತರ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರೂ ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಬೇಕು.
ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬರದಿದ್ದರೆ ಎಷ್ಟು ದಿನ ಕ್ವಾರೆಂಟೈನ್‌ನಲ್ಲಿರಬೇಕು?
ಒಂದು ವಾರ ಯಾವುದೇ ಲಕ್ಷಣಗಳು ಕಂಡು ಬರದಿದ್ದರೆ ಹೊರಗೆ ಹೋಗಬಹುದು ಎಂದು ಭಾವಿಸಬೇಡಿ, ಏಕೆಂದರೆ ಈ ರೋಗದ ಲಕ್ಷಣಗಳು ಕಂಡು ಬರಲು 6-14 ದಿನಗಳು ಬೇಕು. ಆದ್ದರಿಂದ ನೀವು ಸಂಪೂರ್ಣ ಆರೋಗ್ಯವಂತರೇ ಆಗಿದ್ದರೂ ವಿದೇಶಕ್ಕೆ ಹೋಗಿ ಬಂದರೆ 14 ದಿನಗಳವರೆಗೆ ಕ್ವಾರೆಂಟೈನ್‌ನಲ್ಲಿರಲೇಬೇಕು.

ಸೆಲ್ಫ್ ಕ್ವಾರೆಂಟೈನ್‌ನಲ್ಲಿ ಹೇಗಿರಬೇಕು?
* ಮನೆಯ ಸದಸ್ಯರಿಂದ ಅಂತರ ಕಾಯ್ದುಕೊಂಡು ಪ್ರತ್ಯೇಕವಾದ ಮನೆಯಲ್ಲಿರಬೇಕು.
* ಸಾಕು ಪ್ರಾಣಿಗಳ ಸಮೀಪ ಹೋಗುವುದು, ಮುಟ್ಟುವುದು ಮಾಡಬೇಡಿ.
* ನಿಮ್ಮ ವೈದ್ಯರಿಗೆ ಅಲ್ಲದೆ ಬೇರೆ ಯಾರೂ ಮನೆಯಲ್ಲಿ ಬರಲು ಅವಕಾಶ ನೀಡಬೇಡಿ.ಕ್ಕ
* ಬೇರೆಯವರನ್ನು ಭೇಟಿಯಾಗುವಾಗ ಮಾಸ್ಕ್ ಧರಿಸಿ.
* ನೀವು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಇಡಿ. ಅದನ್ನು ಯಾರೂ ಬರಿಗೈಯಲ್ಲಿ ಮುಟ್ಟಬಾರದು.
* ಕೆಮ್ಮುವಾಗ, ಸೀನುವಾಗ ಮಾಸ್ಕ್ ಧರಿಸಿ.
* ನೀವು ಹಿಡಿದ ಬಾಗಿಲು ಬಳಸಿದ ವಸ್ತುಗಳನ್ನು ಸ್ವಚ್ಛ ಮಾಡಬೇಕು.
* ಸಾಕಷ್ಟು ನೀರು ಕುಡಿಯಿರಿ.
* ನಿಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಲೇ ಇರಿ.

ಸೆಲ್ಫ್ ಕ್ವಾರೆಂಟೈನ್ ಮಾಡುವ ಮುನ್ನ ವೈದ್ಯರನ್ನು ಕಾಣಬೇಕಾ?
ನೀವು ಸೆಲ್ಫ್ ಕ್ವಾರೆಂಟೈನ್ ಆಗುವ ಮುನ್ನ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅವರು ನಿಮ್ಮ ಆರೋಗ್ಯ ಸ್ಥಿತಿಯನ್ನು ಗಮನಿಸುತ್ತಾ ಇರುತ್ತಾರೆ.
ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗುವುದರಿಂದ ನೀವು ನಿಮ್ಮವರನ್ನು ಕೊರೊನಾವೈರಸ್ ಸೋಂಕಿನಿಂದ ರಕ್ಷಿಸಬಹುದು. ಕೊರೊನಾವೈರಸ್ ಸೋಂಕಿನ ಬಗ್ಗೆ ಜನರು ಭಯ ಪಡುತ್ತಿದ್ದಾರೆ, ಆದರೆ ಈ ರೋಗದ ಬಗ್ಗೆ ಭಯ ಬೇಡ, ಆದರೆ ತುಂಬಾ ಮುನ್ನೆಚ್ಚರಿಕೆಯಿಂದ ಇರಬೇಕಾಗಿದೆ. ಇನ್ನು ವಿದೇಶದಿಂದ ಯಾರಾದರೂ ಬಂದರೆ ಅವರ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ.



Click it and Unblock the Notifications