ಕೊರೊನಾವೈರಸ್: ದಿನಸಿ ತರುವಾಗ, ತಂದ ಮೇಲೆ ವಹಿಸಿಬೇಕಾದ ಮುನ್ನೆಚ್ಚರಿಕೆಗಳಿವು

ಕೊರೊನಾವೈರಸ್‌ ಲಾಕ್‌ಡೌನ್‌ ಈ ಸಂದರ್ಭದಲ್ಲಿ ಸೋಂಕು ಹರಡದಂತೆ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾತ್ರವಲ್ಲ, ಇನ್ನು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

What Are Precaustion You Should Take While Purchasing Grocery | Boldsky Kannada

ಕೊರೊನಾವೈರಸ್: ದಿನಸಿ ತರುವಾಗ, ತಂದ ಮೇಲೆ ವಹಿಸಿಬೇಕಾದ ಮುನ್ನೆಚ್ಚರಿಕೆಗಳಿವು

ಸೋಂಕಿತ ವ್ಯಕ್ತಿ ಮುಟ್ಟಿರುವ ವಸ್ತುಗಳಿಂದಲೂ ಸೋಂಕು ಇರುವ ಅಪಾಯವಿರುವುದರಿಂದ ಹೊರಗಡೆಯಿಂದ ತಂದ ತರಕಾರಿ, ಹಾಲು, ದಿನಸಿ ವಸ್ತುಗಳನ್ನು ಮನೆಯೊಳಗೆ ತಂದಿಡುವಾಗ ಕೆಲವೊಂದು ಮುನ್ನೆಚ್ಚರಿಕೆಕ್ರಮಗಳನ್ನು ವಹಿಸುವುದು ಒಳ್ಳೆಯದು. ಹಾಗಂತ ತರಕಾರಿ ಹಣ್ಣುಗಳಿಂದ ಕೊರೊನಾವೈರಸ್‌ ಹರಡುತ್ತದೆ ಎಂದು ಭಯ ಬೀಳಬೇಡಿ. ಆದರೆ ಆ ವಸ್ತುಗಳನ್ನು ಸೋಂಕಿರುವ ವ್ಯಕ್ತಿ ಮುಟ್ಟಿದ್ದರೆ ಹರಡುವ ಸಾಧ್ಯತೆ ಇರುವುದರಿಂದ ಎಚ್ಚರವಹಿಸಿ.

ಇಲ್ಲಿ ನಾವು ಅಗ್ಯತ ವಸ್ತುಗಳನ್ನು ತರಲು ಹೋಗುವಾಗ ಹಾಗೂ ತಂದ ಮೇಲೆ ವಹಿಸಬೇಕಾದ ಮುನ್ನೆಚ್ಚರಿಕೆಕ್ರಮಗಳ ಬಗ್ಗೆ ಹೇಳಿದ್ದೇವೆ ನೋಡಿ:

ಶಾಪಿಂಗ್‌ಗೆ ಹೋಗುವ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ಶಾಪಿಂಗ್‌ಗೆ ಹೋಗುವ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ದಿನಸಿ ಸಾಮಾನು ತರಲು ಹೋದರೆ ಕೊರೊನಾವೈರಸ್‌ ಬರಬಹುದೇ ಎಂಬ ಭಯ ಹಲವರಲ್ಲಿದೆ. ದಿನಸಿ ತರಲು ಹೋದಾಗ ಅಲ್ಲಿ ಸೋಂಕಿರುವ ವ್ಯಕ್ತಿಯಿದ್ದರೆ ಸೋಂಕು ತಗುಲುವ ಅಪಾಯವಿದೆ. ಆದ್ದರಿಂದ ಜನ ಸಂದಣಿ ಅಧಿಕವಿರುವ ಕಡೆ ಹೋಗಬೇಡಿ.

ದಿನಸಿ ವಸ್ತುಗಳನ್ನು ತರಲು ಹೋಗುವಾಗ ಅಂತರ ಕಾಯ್ದುಕೊಳ್ಳಿ, ಆಪ್ತರು ಸಿಕ್ಕರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಾಗೂ ಹೊರಗಡೆ ತುಂಬಾ ಹೊತ್ತು ಕಳೆಯಬೇಡಿ. ನಿಮ್ಮ ಶಾಪಿಂಗ್‌ ಬೇಗ ಮುಗಿಸಿ.

ಮಾಸ್ಕ್ ಧರಿಸಿ

ಮಾಸ್ಕ್ ಧರಿಸಿ

ದಿನಸಿ ಸಾಮಾನು ತರಲು ಹೋಗುವಾಗ ಮುಖವನ್ನು ಮಾಸ್ಕ್‌ನಿಂದ ಮುಚ್ಚಿರಿ, ಮುಖವನ್ನು ಕೈಯಿಂದ ಮುಟ್ಟುವುದು ಮಾಡಲೇಬೇಡಿ. ಮಾಸ್ಕ್‌ ಧರಿಸುವ ಮುನ್ನ ಕೈಗಳನ್ನು ತೊಳೆದು ಮಾಸ್ಕ್‌ ಧರಿಸಿ ಮನೆಯಿಂದ ಹೊರಗಡೆ ಕಾಲಿಡಬೇಕು.

ಒಬ್ಬರೇ ಹೋಗಿ

ಒಬ್ಬರೇ ಹೋಗಿ

ದಿನಸಿ ತರಲು ಮನೆಯಿಂದ ಒಬ್ಬರು ಹೋಗಿ, ಅದರಲ್ಲೂ ವಯಸ್ಸಾದದವರು ಹೊರಗಡೆ ಹೋಗಬೇಡಿ. ಮನೆಯಲ್ಲಿ ಆರೋಗ್ಯವಂತರು ಹೊರಗಡೆ ಸಾಮಾನು ತರುವುದು ಒಳ್ಳೆಯದು. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಸೋಂಕು ಬೇಗನೆ ಹರಡುವುದು.

ಕಾರ್ಟ್ಸ್ ಹಾಗೂ ಕೈಗಳನ್ನು ಸ್ಯಾನಿಟೈಸ್ ಮಾಡಿ

ಕಾರ್ಟ್ಸ್ ಹಾಗೂ ಕೈಗಳನ್ನು ಸ್ಯಾನಿಟೈಸ್ ಮಾಡಿ

ದೊಡ್ಡ ದಿನಸಿ ಸ್ಟೋರ್‌ಗೆ ಹೋಗಿ ದಿನಸಿಕೊಳ್ಳುವಾಗ ದಿನಸಿ ಹಾಕಲು ಇರುವ ಬಾಸ್ಕೆಟ್‌ನ ಹಿಡಿಯುವ ಭಾಗವನ್ನು ಸ್ಯಾನಿಟೈಸರ್ ಹಾಕಿ ಒರೆಸಿ, ನಂತರ ಹಿಡಿಯಿರಿ, ವಸ್ತುಗಳನ್ನು ಕೊಂಡ ಮೇಲೆ ಆನ್‌ಲೈನ್‌ ವ್ಯವಹಾರ ಒಳ್ಳೆಯದು. ಇಲ್ಲಾಂದರೆ ಹಣ ಪಡೆಯುವಾಗ ನೀವು ಕೈಗೆ ಸ್ಯಾನಿಟೈಸ್‌ ಉಜ್ಜಿ ನಂತರ ಪಡೆಯಿರಿ. ಇನ್ನು ಕ್ರೆಡಿಡ್‌ ಹಾಗೂ ಡೆಬಿಟ್‌ ಕಾರ್ಡ್ ಬಳಸಿದ ಮೇಲೂ ಕೈಗಳಿಗೆ ಸ್ಯಾನಿಟೈಸರ್‌ ಬಳಸಿ.

ಕೈಗಳಿಗೆ ಗ್ಲೌಸ್ ಧರಿಸಬಹುದೇ?

ಕೈಗಳಿಗೆ ಗ್ಲೌಸ್ ಧರಿಸಬಹುದೇ?

ಕೈಗಳಿಗೆ ಗ್ಲೌಸ್ ಧರಿಸಲು ಹೋಗಬೇಡಿ, ನೀವು ಗ್ಲೌಸ್ ಬಳಸಿ ಏನಾದರೂ ವಸ್ತುಗಳನ್ನು ಮುಟ್ಟಿದರೆ ಅದರಲ್ಲಿರುವ ಬ್ಯಾಕ್ಟಿರಿಯಾಗಳು ಕೂಡ ಗ್ಲಾಸ್‌ಗೆ ಅಂಟಿಕೊಳ್ಳುವುದು, ನಂತರ ಅದೇ ಗ್ಲೌಸ್‌ ಕೈಗಳಿಂದ ಇತರ ಆಹಾರ ವಸ್ತುಗಳನ್ನು ಮುಟ್ಟುವುದು ಸೂಕ್ತವಲ್ಲ, ಗ್ಲೌಸ್ ಬಳಸ ಬೇಡಿ, ಬರೀ ಸ್ಯಾನಿಟೈರಸ್ ಬಳಸಿ.

ಆಹಾರವಸ್ತುಗಳನ್ನು ತಂದ ಮೇಲೆ ಯಾವುದೇ ಸ್ಪ್ರೇ ಹಾಕಬೇಡಿ

ಆಹಾರವಸ್ತುಗಳನ್ನು ತಂದ ಮೇಲೆ ಯಾವುದೇ ಸ್ಪ್ರೇ ಹಾಕಬೇಡಿ

ಕೆಲವರು ತರಕಾರಿ ಹಣ್ಣುಗಳಿಗೆ ಸೋಫು ನೀರು ಹಾಕುವುದೆಲ್ಲಾ ಮಾಡುತ್ತಾರೆ, ಅಂಥದ್ದೆಲ್ಲಾ ಮಾಡಬೇಡಿ, ಇದರಿಂದ ಮತ್ತಿತ್ತರ ಆರೋಗ್ಯ ಸಮಸ್ಯೆ ಬರುವುದು. ನೀವು ತಂದ ತರಕಾರಿ, ಹಣ್ಣುಗಳನ್ನು ನೀರಿನಲ್ಲಿ ಹಾಕಿ ತೊಳೆದು ಇಡಿ, ಇನ್ನು ಪ್ಯಾಕೆಟ್‌ನಲ್ಲಿದ್ದರೆ ಪ್ಯಾಕೆಟ್‌ ಒರೆಸಿದರೆ ಸಾಕು.

ಹಾಲು, ಮೊಸರು ತೊಳೆಯಿರಿ

ಹಾಲು, ಮೊಸರು ತೊಳೆಯಿರಿ

ಹಾಲು, ಮೊಸರು ತಂದ ಮೇಲೆ ಅದರ ಪ್ಯಾಕೆಟ್ ತೊಳೆದು ಬಳಸಿ. ಸೊಪ್ಪುಗಳನ್ನು ನೀರಿನಲ್ಲಿ ತೊಳೆದು ಬಳಸಿ. ಹಳ್ಳಿಗಳಲ್ಲಿ ಹಾಲು ತರುವಾಗ ಸುತ್ತ-ಮುತ್ತ ಕೊರೊನಾಕೇಸ್‌ ಪತ್ತೆಯಾದರೆ ಜಾಗ್ರತೆವಹಿಸಿ. ಯಾವಯದೇ ಪ್ಯಾಕೆಟ್ ವಸ್ತುಗಳನ್ನು ತೊಳೆಯದೆ ಇಡಬೇಡಿ.

ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ, ಸ್ನಾನ ಮಾಡಬೇಕೆ?

ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ, ಸ್ನಾನ ಮಾಡಬೇಕೆ?

ಚಿಕ್ಕ ಮಕ್ಕಳು ಮನೆಯಲ್ಲಿದ್ದರೆ ಅವರು ಬಂದು ಮೈಗೆ ಹತ್ತುವುದು ಎಲ್ಲಾ ಮಾಡುತ್ತಾರೆ. ಅಂಥವರು ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆಗಳನ್ನು ತೊಳೆಯಲು ಹಾಕುವುದು ಒಳ್ಳೆಯದು. ಇನ್ನು ಸ್ನಾನ ಮಾಡಿದರೆ ಒಳ್ಳೆಯದು.ಇಲ್ಲಾಂದರೆ ಕೈಗಳನ್ನು, ಕಾಲುಗಳನ್ನು ಚೆನ್ನಾಗಿ ಸೋಪ್ ಹಾಕಿ ತೊಳೆಯಿರಿ. ಧರಿಸಿದ್ದ ಮಾಸ್ಕ್ ಕಸದ ಬುಟ್ಟಿಗೆ ಹಾಕುವುದು, ಮರು ಬಳಕೆ ಮಾಡುವ ಮಾಸ್ಕ್‌ ಅನ್ನು ಬಿಸಿ ನೀರಿಗೆ ಹಾಕಿ ತೊಳೆಯುವುದು ಮಾಡಬೇಕು, ನಂತರ ಸೋಪ್‌ನಿಂದ ಕೈ ತೊಳೆದು ನಂತರ ಮುಖ ತೊಳೆಯಿರಿ.

ಹೊರಗಡೆ ಹೋಗಿ ಬಂದ ಮೇಲೆ ಆತಂಕ ಕಾಡುವುದೇ?

ಹೊರಗಡೆ ಹೋಗಿ ಬಂದ ಮೇಲೆ ಆತಂಕ ಕಾಡುವುದೇ?

ದಿನಸಿ ಸಾಮಾನುಗಳಿಗೆ ಹೊರಗಡೆ ಹೋಗಿ ಬಂದ ಮೇಲೆ ಕೊರೊನಾವೈರಸ್‌ ಬಗ್ಗೆ ಆತಂಕ ಕಾಡಿದರೆ ಹೊರಗಡೆ ಹೋಗಲೇಬೇಡಿ. ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿ ದಿನಸಿ ಸಾಮಾನುಗಳನ್ನು ತರಿಸಬಹುದು, ಅವುಗಳನ್ನು ಒರೆಸಿ, ತೊಳೆದು ತೆಗೆದು ಇಡಬಹುದು. ಇದು ಸೇಫ್‌ ಕೂಡ.

ವಸ್ತುಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ವೈರಾಣು ಸಾಯುವುದೇ?

ವಸ್ತುಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ವೈರಾಣು ಸಾಯುವುದೇ?

ಇದು ತಪ್ಪು ಕಲ್ಪನೆ, ಇವುಗಳು ವೈರಸ್‌ ಹೆಚ್ಚು ಕಾಲ ಬದುಕಿರುವಂತೆ ಮಾಡುತ್ತವೆ. ನೀವು ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಆಹಾರ ಮಾಡುವ ಮುನ್ನ ನಿಮ್ಮ ಕೈಗಳನ್ನು ಸೋಪ್ ಹಾಕಿ ತೊಳೆದು ಮಾಡಿ. ಮನೆಯಲ್ಲಿರುವಾಗ ಸ್ಯಾನಿಟೈಸರ್ ಬದಲಿಗೆ ಸೋಪ್ ಬಳಸಿ. ಇನ್ನು ಮಾಂಸಾಹಾರ ಕತ್ತರಿಸಲು ಪ್ರತ್ಯೇಕ ಮಣೆ ಬಳಸಿ. ಹಣ್ಣುಗಳನ್ನು ಸ್ವಲ್ಪ ಹಪತ್ತು ಉಪ್ಪು ನೀರಿನಲ್ಲಿ ಹಾಕಿಟ್ಟು ನಂತರ ಬಳಸಿ.

English summary

Coronavirus: What Are Precaustion should Take while purchasing Grocery

The vast majority of the country is under lockdown right now. But stay-at-home orders come with a few exceptions — like grocery shopping.Here are what are the precautions one must take while getting grocery item, Read on.
Story first published: Monday, April 13, 2020, 18:00 [IST]
X
Desktop Bottom Promotion