Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಧ್ವನಿಯಲ್ಲಿ ವ್ಯತ್ಯಾಸ ಉಂಟಾದರೆ ಅದು ಕೊರೊನಾ ಲಕ್ಷಣವಾಗಿರಬಹುದು
ಕೊರೊನಾವೈರಸ್ ಎರಡನೇ ಅಲೆ ಮೊದಲಿನ ಅಲೆಯಂತೆ ಅಲ್ಲ, ಎರಡು ಪಟ್ಟು ವೇಗವಾಗಿ ಹರಡುತ್ತಿದೆ. ಈ ರೂಪಾಂತರ ಕೊರೊನಾವೈರಸ್ ಚಿಕ್ಕ ಪ್ರಾಯದವರಿಗೂ ತಗುಲುತ್ತಿದೆ. ಕಳೆದ ಬಾರಿಯ ಪರಿಸ್ಥಿತಿ ಇಷ್ಟು ಭೀಕರವಾಗಿರಲಿಲ್ಲ, ಆದರೆ ಈ ಬಾರಿ ಪ್ರತೀ ಕೋವಿಡ್ ವಾರ್ಡ್‌ಗಳು ಸೋಂಕಿತರಿಂದ ತುಂಬಿ ತುಳುಕುತ್ತಿದೆ.
ಈ ಸಮಯದಲ್ಲಿ ಕೊರೊನಾವೈರಸ್ ಲಕ್ಷಣಗಳ ಕಡೆ ಗಮನ ನೀಡಬೇಕು, ಒಂದು ಚಿಕ್ಕ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷೆಗೆ ಕೊಟ್ಟು ಹೋಂಕ್ವಾರಂಟೈನ್ ಆಗಬೇಕು, ಈ ರೀತಿ ಮಾಡುವುದರಿಂದ ರೋಗ ಇರುವುದನ್ನು ಬೇಗನೆ ಪತ್ತೆ ಹಚ್ಚುವುದು ಮಾತ್ರವಲ್ಲ, ಮತ್ತೊಬ್ಬರಿಗೆ ಹರಡುವುದನ್ನು ಕೂಡ ತಡೆಯಬಹುದಾಗಿದೆ.
ಕೊರೊನಾವೈರಸ್ ಸಾಮಾನ್ಯ ಲಕ್ಷಣಗಳೆಂದರೆ ಶೀತ, ಕೆಮ್ಮು ಹಾಗೂ ಚಳಿ, ಜ್ವರ. ಇನ್ನು ಕೆಲವರಿಗೆ ವಾಸನೆ ಗ್ರಹಿಸುವ ಹಾಗೂ ರುಚಿ ತಿಳಿಯುವ ಸಾಮರ್ಥ್ಯ ಇಲ್ಲವಾಗುವುದು. ಈ ಲಕ್ಷಣಗಳ ಕುರಿತು ಇದೀಗ ಅನೇಕರಿಗೆ ತಿಳಿದಿದೆ. ಆದರೆ ಈ ಹೊಸ ಸಂಶೋಧನೆ ಪ್ರಕಾರ ಧ್ವನಿಯಿಂದಲೂ ಕೊರೊನಾ ಲಕ್ಷಣಗಳನ್ನು ಕಂಡು ಹಿಡಿಯಬಹುದೆಂದು ತಿಳಿದು ಬಂದಿದೆ.

ಧ್ವನಿಯಲ್ಲಿ ಬದಲಾವಣೆ ಕೊರೊನಾ ಲಕ್ಷಣವಿರಬಹುದು
ಸಂಶೋಧಕರ ಪ್ರಕಾರ ಧ್ವನಿಯಲ್ಲಿ ಆಗುವ ಬದಲಾವಣೆ ಕೊರೊನಾ ಲಕ್ಷಣದ್ದಾಗಿರಬಹುದು. ಆದರೆ ಇದು ವ್ಯಕ್ತಯಿಂದ-ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರಿಗೆ ಧ್ವನಿಯಲ್ಲಿ ವ್ಯತ್ಯಾಸ ಕಂಡು ಬಂದರೆ ಇನ್ನು ಕೆಲವರಿಗೆ ವಿಪರೀತ ಕೆಮ್ಮು ಕಂಡು ಬರುವುದು.
ನಿಮಗೆ ನಿಮ್ಮ ಧ್ವನಿಯಲ್ಲಿ ಏನಾದರೂ ವ್ಯತ್ಯಾಸ ಉಂಟಾಗಿದೆ ಎಂದು ಅನಿಸಿದರೆ ತಡಮಾಡದೆ ಕೊರೊನಾ ಪರೀಕ್ಷೆ ಮಾಡಿಸಿ.

ಧ್ವನಿಯಲ್ಲಿ ಸಾಮಾನ್ಯ ಲಕ್ಷಣಗಳು ಕಂಡು ಬಂದಾಗ ಏನು ಮಾಡಬೇಕು?
ಧ್ವನಿಯಲ್ಲಿ ವ್ಯತ್ಯಾಸ ಉಂಟಾಗುವುದು ಜೊತೆಗೆ ಕೊರೊನಾದ ಇತರ ಲಕ್ಷಣಗಳು ಕಂಡು ಬಂದರೆ ನೀವು ಯಾರ ಸಂಪರ್ಕಕ್ಕೆ ಬರಬಾರದು ಅಲ್ಲದೆ ಕೋವಿಡ್ ಪರೀಕ್ಷೆ ಮಾಡಬೇಕು, ರಿಸಲ್ಟ್ ಬರುವವರೆಗೆ ಹೋಂ ಕ್ವಾರಂಟೈನ್‌ನಲ್ಲಿರಿ.
ಅಲ್ಲದೆ ಗಂಟಲು ನೋವು ಕಡಿಮೆಯಾಗಲು ಬಾಯಲ್ಲಿ ಹಾಕಲು ಸಾಧ್ಯವಾಗಷ್ಟು ಬಿಸಿ ಇರುವ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ. ಅಲ್ಲದೆ ಕಷಾಯ ಕುಡಿಯಿರಿ. ಆಗಾಗ ಬಿಸಿ ನೀರು ಕುಡಿಯುತ್ತಾ ಇರಿ.

ಈ ಲಕ್ಷಣಗಳನ್ನೂ ಗಮನಿಸಿ
ಈ ರೀತಿಯ ಲಕ್ಷಣಗಳು ಕೊರೊನಾದಾಗಿರಬಹುದು
* ಜ್ವರ
* ಒಣ ಕೆಮ್ಮು
* ಶೀತ
* ಎದೆ ನೋವು ಹಾಗೂ ಉಸಿರಾಟಕ್ಕೆ ತೊಂದರೆ
* ತಲೆಸುತ್ತು
* ಹೊಟ್ಟೆ ಸಮಸ್ಯೆ



Click it and Unblock the Notifications
