Latest Updates
-
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ
ಕೊರೊನಾವೈರಸ್ ಲಕ್ಷಣಗಳು: ಈ ಪಿಡುಗಿನ 10 ಮುನ್ಸೂಚನೆಗಳಿವು
ಕೊರೊನಾವೈರಸ್ ಆರ್ಭಟ ಶುರುವಾದಾಗಿನಿಂದ ಜನರಿಗೆ ಚಿಕ್ಕದಾಗಿ ಕೆಮ್ಮು ಬಂದರೂ, ಸಾಮಾನ್ಯ ಜ್ವರ ಬಂದರೂ ಅದು ಕೋವಿಡ್ 19 ಭಯವಿರಬಹುದೇ ಎಂಬ ಆತಂಕ ಶುರುವಾಗುವುದು. ಇನ್ನು ಆಸ್ಪತ್ರೆಗಳಲ್ಲಿಯೂ ಸಾಮಾನ್ಯ ಜ್ವರವೆಂದು ಹೋದರೂ ಕೋವಿಡ್ 19 ಪರೀಕ್ಷೆ ಮಾಡಿಸುವಂತೆ ಸೂಚಿಸುವುದರಿಂದ ನಮಗೆ ಬಂದಿರುವುದು ಸಾಮಾನ್ಯ ಜ್ವರವೇ ಅಥವಾ ಕೋವಿಡ್ 19 ಇರಬಹುದೇ ಎಂಬ ಆತಂಕ ಜನರಿಗೆ ಕಾಡುವುದು ಸಹಜ.

ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ ಇದು ಕೋವಿಡ್ 19ನ ಪ್ರಮುಖ ಲಕ್ಷಣಗಳಾದರೂ ಕೆಲವರಿಗೆ ಮೈ ತುಂಬಾ ಚಳಿಯಾಗುವುದು ಅಥವಾ ಶೀತ ಇಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಕೊರೊನಾವೈರಸ್ ಸೋಂಕು ತಗುಲಿದ 14 ದಿನಗಳ ಒಳಗಾಗಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವರಿಗೆ ಇದರಲ್ಲಿರುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಕೆಲವೊಂದಿಷ್ಟು ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳಯತ್ತದೆ ಎಂದು ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆನ್ಸಷನ್ ಹೇಳಿದೆ.
ಇಲ್ಲಿ ನಾವು ಕೊರೊನಾವೈರಸ್ 10 ಲಕ್ಷಣಗಳ ಬಗ್ಗೆ ಹೇಳಿದ್ದೇವೆ ಹಾಗೂ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಕೊರೊನಾವೈರಸ್‌ನಿಂದ ಕಾಪಾಡಲು ಏನು ಮಾಡಬೇಕೆಂಬ ಸಲಹೆ ನೀಡಿದ್ದೇವೆ ನೋಡಿ:

1. ಉಸಿರಾಟದಲ್ಲಿ ತೊಂದರೆ
ಉಸಿರಾಟದಲ್ಲಿ ತೊಂದರೆ ಕೋವಿಡ್ 19ನ ಪ್ರಾರಂಭಿಕ ಲಕ್ಷಣವಲ್ಲವಾದರೂ ವೈರಸ್ ದೇಹದಲ್ಲಿ ಉಲ್ಬಣವಾದಾಗ ಉಸಿರಾಟದಲ್ಲಿ ತೊಂದರೆ ಉಂಟಾಗುವುದು. ಎದೆ ಬಿಗಿಯಾದಂತೆ, ಉಸಿರಾಟದಲ್ಲಿ ತೊಂದರೆ ಇವೆಲ್ಲಾ ಗಂಟಲಿನಲ್ಲಿ ದ್ರವ ತುಂಬಿರುವುದರಿಂದ ಉಂಟಾಗುವುದು. ಮನೆಯಲ್ಲಿ ಯಾರಿಗಾದರೂ ಉಸಿರಾಟದ ತೊಂದರೆ ಕಾಣಿಸಿದರೆ ಕೂಡಲೇ ವೈದ್ಯರಿಗೆ ಕರೆ ಮಾಡಿ ತಿಳಿಸಿ.

2. ಜ್ವರ
ಜ್ವರ ಕೋವಿಡ್ 19ನ ಲಕ್ಷಣಗಳಲ್ಲಿ ಒಂದಾಗಿದೆ. ದೇಹದ ಉಷ್ಣತೆ 98.6 ಡಿಗ್ರಿF (37 ಡಿಗ್ರಿ C) ದಾಟಿದರೆ ಜ್ವರ ಬಂದಿದೆ ಎಂದು ಹೇಳಬಹುದು. ಆದರೆ ಕೆಲವರಿಗೆ 98.6 ಡಿಗ್ರಿF ದಾಟಿದರೆ ಜ್ವರದ ಅನುಭವವಾಗುವುದಿಲ್ಲ. ಮಕ್ಕಳಿಗೆ ಹಾಗೂ ಕೆಲವರಲ್ಲಿ ಜ್ವರ 100ಡಿಗ್ರಿF (37.7 ಡಿಗ್ರಿ C)ತಲುಪಿದಾಗ ಜ್ವರದ ಅನುಭವ ಆಗುವುದು.
ಬೆಳಗ್ಗೆ ದೇಹದ ಉಷ್ಣತೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಮಧ್ಯಾಹ್ನ ಮೇಲೆ ಅಥವಾ ಸಂಜೆ ದೇಹದ ಉಷ್ಣತೆ ಪರೀಕ್ಷಿಸಿ. ಆಗ ಉಷ್ಣತೆ 98.6 ಡಿಗ್ರಿF ಒಳಗಿದ್ದರೆ ಭಯ ಪಡಬೇಕಾಗಿಲ್ಲ. ಮಧ್ಯಾಹ್ನದ ಮೇಲೆ ಹಾಗೂ ಸಂಜೆ ಜ್ವರ ಹೆಚ್ಚಾದರೆ ಜ್ವರದ ಲಕ್ಷಣವಾಗಿದೆ.

3. ಒಣಕೆಮ್ಮು
ಒಣಕೆಮ್ಮು ಸಾಮಾನ್ಯ ಒಣಕೆಮ್ಮುವಿನ ರೀತಿ ಇರುವುದಿಲ್ಲ. ಸಾಮಾನ್ಯವಾಗಿ ಒಣಕೆಮ್ಮು ಬಂದಾಗ ಗಂಟಲಿನಿಂದ ಕೆಮ್ಮುತ್ತೇವೆ, ಆದರೆ ಕೊರೊನಾವೈರಸ್ ಸೋಂಕಿನಿಂದ ಕೆಮ್ಮು ಬಂದಾಗ ಗಂಟಲು ಮಾತ್ರವಲ್ಲ, ಎದೆಯೂ ನೋವಾಗುವಷ್ಟು ಕೆಮ್ಮು ಬರುವುದು. ಗಂಟಲಿನಲ್ಲಿ ಉರಿಯೂತ, ಕೆರೆತ ಉಂಟಾಗುವುದು ಇದರಿಂದಾಗಿ ಕೆಮ್ಮುತ್ತಲೇ ಇರುತ್ತಾರೆ.
ಕೋವಿಡ್ 19 ಪತ್ತೆಯಾದವರಲ್ಲಿ ಶೇ. 33ರಷ್ಟು ರೋಗಿಗಳಲ್ಲಿ ಮಾತ್ರ ಕೆಮ್ಮು ಮತ್ತು ಕಫ ಕಾಣಸುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

4. ಮೈ ಚಳಿಯಾಗುವುದು, ಮೈಕೈ ನೋವು
ಮೈ ತುಂಬಾ ಚಳಿಯಾಗುವುದು, ಮೈಕೈ ತುಂಬಾ ನೋವಾಗುವುದು. ಆದರೆ ಈ ರೀತಿ ಕೊರೊನಾವೈರಸ್ ಸೋಂಕಿದ ಎಲ್ಲರಲ್ಲಿಯೂ ಕಂಡು ಬರುವುದಿಲ್ಲ. ಇನ್ನು ಕೆಲವರಿಗೆ ಸ್ವಲ್ಪ ಮೈ ಚಳಿಯಾಗುವುದು, ತಲೆಸುತ್ತು, ಸಂಧುಗಳಲ್ಲಿ ನೋವು ಕಂಡು ಬರುವುದು. ಇದರಿಂದ ಸಾಮಾನ್ಯ ಜ್ವರವೇ, ಕೋವಿಡ್ 19 ಇರಬಹುದೇ ಎಂದು ಹೇಳಲು ಸಾಧ್ಯವಿಲ್ಲ. ಈ ಲಕ್ಷಣಗಳು ಒಂದು ವಾರವಾದರೂ ಕಡಿಮೆಯಾಗದಿದ್ದರೆ ಅದು ಕೋವಿಡ್ 19 ಲಕ್ಷಣವಿರಬಹುದು, ಕೂಡಲೇ ಪರೀಕ್ಷೆ ಮಾಡಿಸಿ.
ಆದರೆ ಈ ಲಕ್ಷಣ ಗೋಚರಿಸಿದ ಪ್ರಾರಂಭದ ದಿನದಿಂದಲೇ ಇತರರಿಮದ ಪ್ರತ್ಯೇಕವಾಗಿ ನಿಮ್ಮ ಆರೋಗ್ಯ ಗಮನಿಸಿ.

5. ಇದ್ದಕ್ಕಿದ್ದಂತೆ ಗೊಂದಲ
ಮಾತನಾಡುವಾಗ ಏನೋ ಗೊಂದಲ ಉಂಟಾಗುವುದು, ಮಲಗಿದ್ದಲ್ಲಿಂದ ಎದ್ದೇಳುವಾಗ ಕಷ್ಟವಾಗುವುದು ಇದು ಕೂಡ ಕೊರೊನಾಸೋಂಕು ತಗುಲಿರುವ ಮುನ್ಸೂಚನೆ ಆಗಿದೆ. ಮಾತನಾಡುವಾಗ ತೊದಲುವುದು, ಉಸಿರಾಟದಲ್ಲಿತೊಂದರೆ ಕಾಣಿಸುವುದು, ಎದೆ ನೋವು ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ಕರೆ ಮಾಡಿ ತಿಳಿಸಿ.

6. ಜೀರ್ಣಕ್ರಿಯೆಯಲ್ಲಿ ತೊಂದರೆ
ಕೆಲವರಿಗೆ ಜ್ವರ ಕಾಣಿಸಿಕೊಳ್ಳದಿದ್ದರೂ ಜೀರ್ಣಕ್ರಿಯೆಯಲ್ಲಿ ತೊಂದರೆ ಕಾಣಿಸಿಕೊಳ್ಳುವುದು. ಚೀನಾದಲ್ಲಿ ಪ್ರಾರಂಭದಲ್ಲಿ ಸಾಕಷ್ಟು ಜನರಲ್ಲಿ ಈ ಲಕ್ಷಣಗಳು ಮಾತ್ರ ಕಂಡು ಬಂದಿತ್ತು ಎಂದು CDC ಹೇಳಿದೆ.
ಪ್ರಾರಂಭದಲ್ಲಿ ಬರೀ ಬೇಧಿ ಮಾತ್ರ ಕಾಣಿಸಿಕೊಳ್ಳಬಹುದು. ಪರೀಕ್ಷೆ ಮಾಡಿಸಲು ವಿಳಂಬವಾದರೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು.

7. ಕಣ್ಣು ಕೆಂಪಾಗುವುದು
ಇದುವರೆಗೆ ಪತ್ತೆಯಾದ ಕೋವಿಡ್ 19 ಕೇಸ್‌ಗಳಲ್ಲಿ ಶೇ. 1ರಿಂದ 3ರಷ್ಟು ರೋಗಿಗಳಲ್ಲಿ ಪ್ರಾರಂಭದಲ್ಲಿ ಕಣ್ಣು ಕೆಂಪಾಗುವ ಲಕ್ಷಣ ಕಂಡು ಬಂದಿತ್ತು. ಇದನ್ನು ಪಿಂಕ್ ಐ ಎಂದು ಕರೆಯುತ್ತಾರೆ. ಕಣ್ಣುಗಳಲ್ಲಿ ನೋವು, ಉರಿ ಕಂಡು ಬರಬಹುದು. ಈ ಲಕ್ಷಣಗಳು ಜ್ವರ ಕಾಣಿಸಿಕೊಳ್ಳುವ ಮೊದಲೇ ಕಾಣಿಸಿಕೊಳ್ಳಬಹುದು.

8. ವಾಸನೆ ಮತ್ತು ರುಚಿ ಕಂಡು ಹಿಡಿಯುವ ಸಾಮಾರ್ಥ್ಯ ಕಡಿಮೆಯಾಗುವುದು
ಜ್ವರ, ಕೆಮ್ಮು ಈ ರೀತಿಯ ಲಕ್ಷಣಗಳು ಕಂಡು ಬರುವ ಮೊದಲೇ ಯಾವುದೇ ವಾಸನೆ ಹಾಗೂ ಆಹಾರದ ರುಚಿ ಗ್ರಹಿಸುವ ಸಾಮಾರ್ಥ್ಯ ಕಡಿಮೆಯಾಗುವುದು. ಈ ಲಕ್ಷಣಗಳು ಕಂಡು ಬಂದರೆ ಅದು ಕೋವುಡ್ 19ನ ಪ್ರಾರಂಭಿಕ ಲಕ್ಷಣವಾಗಿದೆ. ಬೇಗನೆ ಪರೀಕ್ಷೆಗೆ ಒಳಪಡುವುದರಿಂದ ಪರಿಸ್ಥಿತಿ ಗಂಭೀರವಾಗುವ ಮೊದಲೇ ಚೇತರಿಸಿಕೊಳ್ಳಬಹುದು.

9. ತಲೆಸುತ್ತು
ತುಂಬಾ ತಲೆಸುತ್ತು ಕೂಡ ಕೊರೊನಾವೈರಸ್ ಸೋಂಕಿನ ಪ್ರಾರಂಭಿಕ ಲಕ್ಷಣವಾಗಿದೆ. ಕೊರೊನಾವೈರಸ್ ಸೋಂಕಿದ ಶೇ.40ರಷ್ಟು ಜನರಲ್ಲಿ ಈ ಲಕ್ಷಣಗಳು ಕಂಡು ಬಂದಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೋವಿಡ್ 19ನಿಂದ ಗುಣಮುಖರಾದ ಬಳಿಕವೂ ಸ್ವಲ್ಪ ದಿನಗಳವರೆಗೆ ಈ ತಲೆಸುತ್ತು ಇರುವುದು.

10. ತಲೆನೋವು, ಗಂಟಲಿನಲ್ಲಿ ಕೆರೆತ, ಮೂಗು ಕಟ್ಟುವುದು
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ತಲೆನೋವು, ಗಂಟಲು ಕೆರೆತ , ಕಣ್ಣು ಕೆಂಪಾಗುವುದು ಈ ಲಕ್ಷಣಗಳು ಪ್ರಾರಂಭದಲ್ಲಿ ಕಂಡು ಬರುವುದು. ಕೋವಿಡ್ 19 ಪತ್ತೆಯಾದ ಶೇ.5ರಷ್ಟು ರೋಗಿಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡಿದ್ದೆವು. ಸಾಮಾನ್ಯ ಜ್ವರದಲ್ಲಿಯೂ ಈ ಲಜ್ಷಣಗಳು ಕಂಡು ಬರುವುದು. ಇದರ ಜೊತೆಗೆ ಇತರ ಕೋವುಡ್ ಲಕ್ಷಣಗಳು ಕಂಡು ಬಂದರೆ ಕೂಡಲೇ ಕೋವಿಡ್ 19 ಪರೀಕ್ಷೆ ಮಾಡಿಸಿ.
ಈ ಲಕ್ಷಣಗಳು ಕಂಡು ಕೂಡಲೇ ವೈದ್ಯರಿಗೆ ಕರೆ ಮಾಡಿ ತಿಳಿಸಿ ಹಾಗೂ ಇತತರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮಾಸ್ಕ್ ಧರಿಸಿ, ನಿಮ್ಮನ್ನು, ಮನೆಯವರನ್ನು ಮಹಾಮಾರಿಯಿಂದ ರಕ್ಷಿಸಿ.



Click it and Unblock the Notifications











