For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್: ಮನೆಯಲ್ಲಿಯೇ ಇದ್ದಿರಾ? ನಿಮ್ಮ ಕಿಚನ್‌ನಲ್ಲಿ ಈ ವಸ್ತುಗಳು ಸ್ಟಾಕ್ ಇರಲಿ

|

ಡಿಸೆಂಬರ್31,2019ರಲ್ಲಿ ಚೀನಾದ ವುಹಾನ್‌ನ ಮಾಂಸದ ಮಾರುಕಟ್ಟೆಯಲ್ಲಿ ಹುಟ್ಟಿದ ಮಾರಾಣಾಂತಿಕ ಕೊರೊನಾ ವೈರಸ್ ಎಂಬ ಸೋಂಕು ಅಲ್ಲಿಯ ಸಾವಿರಾರು ಜನರನ್ನು ಆಹುತಿ ಪಡೆದು ಇದೀಗ ವಿಶ್ವದ ಎಲ್ಲೆಡೆ ತನ್ನ ಕರಾಳ ಬಾಹು ಚಾಚಿದೆ.

ಅಮೆರಿಕ, ಜರ್ಮನಿ, ಅಮೆರಿಕ, ಸ್ಪೇನ್ ಹೀಗೆ ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳು ಈ ವೈರಸ್‌ನ ಸಾವಿನ ರಣಕೇಕೆಗೆ ತತ್ತರಿಸಿ ಹೀಗಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 400 ಗಟಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ. ನಮ್ಮ ರಾಜ್ಯದಲ್ಲಿಯೇ ಸೋಂಕಿತರ ಸಂಖ್ಯೆ 101 ದಾಟಿದೆ. ಈ ಸೋಂಕನ್ನು ವ್ಯಕ್ತಿಗಳ ಸಂಪರ್ಕ ಮಾಡದೆ ಮನೆಯಲ್ಲಿಯೇ ಇದ್ದು ತಡೆಗಟ್ಟವುದಲ್ಲದೆ ಬೇರೆ ಮಾರ್ಗ ನಮ್ಮ ಮುಂದೆ ಇಲ್ಲ.

Coronavirus: Staying In? Here’s A List Of Things To Stock In Your Kitchen

ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಕರ್ನಾಟಕವನ್ನು ಲಾಕ್‌ಡೌನ್ ಮಾಡಲಾಗಿದ್ದು ಜನರು ಹೊರಗಡೆ ಹೋಗದಂತೆ ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಪರಿಸ್ಥಿತಿ ಹತೋಟಿಗೆ ಬರುವವರಿಗೆ ಜನರು ಹೊರಗಡೆ ಸುತ್ತಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಆದರೆ ಮನೆಯಲ್ಲಿಯೇ ಇದ್ದರೆ ಅಗ್ಯತ ವಸ್ತುಗಳು ಬೇಕು ಅಲ್ಲವೇ? ಆದ್ದರಿಂದ ಈ ಸಂದರ್ಭದಲ್ಲಿ ತಿನ್ನಲು ಏನೇ ತೊಂದರೆ ಉಂಟಾಗದಿರಲು ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಸಂಗ್ರಹಿಸಿಡಿ:

1. ಅಕ್ಕಿ ಮತ್ತು ಕಾಳು

1. ಅಕ್ಕಿ ಮತ್ತು ಕಾಳು

ಅಕ್ಕಿ ಮತ್ತು ಕಾಳುಗಳನ್ನು ಎಷ್ಟು ದಿನಗಳವರೆಗೆ ಬೇಕಾದರೂ ಇಡಬಹುದು. ಆದ್ದರಿಂದ ಇವುಗಳನ್ನು ಸ್ವಲ್ಪ ಅಧಿಕವೇ ತಂದಿಟ್ಟರೂ ಏನೂ ತೊಂದರೆ ಉಂಟಾಗುವುದಿಲ್ಲ. ಕಾಳುಗಳನ್ನು ಹಾಳಾಗದಿರಲು ಬಿಸಲಿನಲ್ಲಿ ಒಣಗಿಸಿ ತೆಗೆದಿಡಿ.

ಇನ್ನು ಅಕ್ಕಿ ಮತ್ತು ಕಾಳುಗಳು ಹುಳಾಗುತ್ತವೆ ಎಂಬ ಭಯ ನಿಮಗಿದ್ದರೆ ಅವುಗಳು ಹಾಳಗದಿರಲು ಸ್ವಲ್ಪ ಬೆಳ್ಳುಳ್ಳಿ, ಲವಂಗ ಹಾಕಿಟ್ಟರೆ ಸಾಕು ಹುಳು-ಹುಪ್ಪಟೆ ಬರದೆ ತುಂಬಾ ಸಮಯದವರೆಗೆ ಇಟ್ಟು ಬಳಸಬಹುದು.

2. ತರಕಾರಿಗಳು

2. ತರಕಾರಿಗಳು

ತರಕಾರಿಗಳಾದ ಆಲೂಗಡ್ಡೆ, ಬೀಟ್‌ ರೂಟ್, ಬ್ರೊಕೋಲಿ, ಕ್ಯಾರೆಟ್, ಕ್ಯಾಬೇಜ್, ಸೌತೆಕಾಯಿ, ಟೊಮೆಟೊ, ಈರುಳ್ಳಿ ಇವುಗಳನ್ನು ತನ್ನಿ. ಇನ್ನು ಬೇಗ ಹಾಳಾಗದಿರುವ ತರಕಾರಿಗಳನ್ನು ಸಂಗ್ರಹಿಸಿ ಇಡುವುದು ಒಳ್ಳೆಯದು.

3. ಹಣ್ಣುಗಳು

3. ಹಣ್ಣುಗಳು

ಒಂದು ಹದಿನೈದು ದಿನಕ್ಕೆ ಸಾಕಾಗುವಷ್ಟು ಹಣ್ಣುಗಳನ್ನು ಸಂಗ್ರಹಿಸಿಡಿ. ಹಣ್ಣುಗಳು ತುಂಬಾ ಸಮಯ ಹೊರಗಡೆ ಇಟ್ಟರೆ ಹಾಳಾಗಬಹುದು. ಆದ್ದರಿಂದ ಅವುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಿ. ಇನ್ನು ಕೆಲವು ಹಣ್ಣುಗಳನ್ನು ಒಣಗಿಸಬಹುದು. ಅಂಥ ಹಣ್ಣುಗಳನ್ನು ತಂದು ಒಣಗಿಸಿ ಬಳಸಬಹುದು. ಇನ್ನು ಡ್ರೈಫ್ರೂಟ್ಸ್ ಕೂಡ ಬಳಸಬಹುದು.

4. ನಟ್ಸ್

4. ನಟ್ಸ್

ಕುಂಬಳಕಾಯಿ ಬೀಜ, ಶಿಯಾ ಬೀಜ ಇವುಗಳಲ್ಲಿ ಪ್ರೊಟೀನ್ ಹಾಗೂ ನಾರಿನಂಶವಿರುತ್ತದೆ. ಇನ್ನು ಬಾದಾಮಿ, ಗೋಡಂಬಿ ಇವುಗಳನ್ನು ತಂದಿಡಿ. ಈ ನಟ್ಸ್ ದೇಹದಲ್ಲಿ ಪೋಷಕಾಂಶ ಕಾಪಾಡುವಲ್ಲಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುಲ್ಲಿ ಸಹಕಾರಿ.

5. ಮೊಟ್ಟೆ

5. ಮೊಟ್ಟೆ

ಮೊಟ್ಟೆಗಳನ್ನು ಒಂದರಿಂದ ಎರಡುವಾರ ಇಡಬಹುದು ಅಷ್ಟೆ. ಇದನ್ನು ತುಂಬಾ ಕೊಳ್ಳದೆ ಅಗ್ಯತವಿರುವಷ್ಟು ಮಾತ್ರ ತನ್ನಿ.

6. ಬಿಸ್ಕೆಟ್, ಸ್ನ್ಯಾಕ್ಸ್]

6. ಬಿಸ್ಕೆಟ್, ಸ್ನ್ಯಾಕ್ಸ್]

ಮನೆಯಿಂದ ಹೊರಗಡೆ ಹೋಗದೆ ಎಷ್ಟು ದಿನಗಳನ್ನು ದೂಡಬೇಕು ಎಂದು ಇನ್ನೂ ಹೇಳಲು ಸಾಧ್ಯವಾಗಿಲ್ಲ. ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಈ ಸೋಂಕು ಹತೋಟಿಗೆ ಬರುವವರಿಗೆ ಹೊರಗಡೆ ಹೋಗುವುದು ಕ್ಷೇಮವಲ್ಲ. ಆದ್ದರಿಂದ ಸ್ವಲ್ಪ ಬಿಸ್ಕೆಟ್, ಸ್ನ್ಯಾಕ್ಸ್ , ಬ್ರೆಡ್ ತಂದಿಡಿ.

Precautions To Take To Avoid Corona Virus Once You Reach Home And Leave Home | Boldsky Kannada
7. ಹಾಲಿನ ಪುಡಿ

7. ಹಾಲಿನ ಪುಡಿ

ಇದುವರೆಗೆ ಹಾಲಿಗೆ ಕೊರತೆ ಉಂಟಾಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಲ್ಪ ಹಾಲಿನ ಪುಡಿಯನ್ನು ಸಂಗ್ರಹಿಸಿ ಇಡಿ.

ಸೂಚನೆ: ಅಗ್ಯತ ವಸ್ತುಗಳನ್ನು ಕೊಳ್ಳಲು ಹೋಗುವಾಗ ಮಾಸ್ಕ್ ಧರಿಸಿ ಹೋಗಿ ಹಾಗೂ ಜನರು ಸೇರಿರುವ ಕಡೆ ಹೋಗಿ ಕೊಳ್ಳಬೇಡಿ. ವಸ್ತುಗಳನ್ನು ಮನೆಗೆ ತಂದ ಮೇಲೆ ತರಕಾರಿ, ಹಣ್ಣುಗಳನ್ನು ತೊಳೆದಿಡಿ.

English summary

Coronavirus: Staying In? Here’s A List Of Things To Stock In Your Kitchen

With the country on lockdown and government guidelines to stay at home until further notice, it is important that you sensibly stock your fridge for the coming days.
Story first published: Tuesday, March 24, 2020, 15:35 [IST]
X
Desktop Bottom Promotion