Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಅಂತ್ಯವಾಗಿಲ್ಲ ಕೊರೊನಾ : ಒಮಿಕ್ರಾನ್ ನ ಉಪತಳಿ BA.5 ಭೀಕರವಾಗಿ ಕಾಡುವ ಸಾಧ್ಯತೆ ಇದೆಯೇ?
ಕೊರೊನಾ ಸೋಂಕಿಗೆ ಮುಕ್ತಿ ಸಿಗೋದು ಡೌಟು ಅನಿಸುತ್ತಿದೆ. ಯಾಕೆಂದರೆ ಸಂಪೂರ್ಣ ಕೊರೊನಾ ಕಡಿಮೆಯಾಯ್ತು ಅನ್ನುವಾಗ ಇದೀಗ ಮತ್ತೆ ಸದ್ದಿಲ್ಲದೆ ಕೊರೊನಾ ಸೋಂಕು ಹೆಚ್ಚಾಗಲು ತೊಡಗಿದೆ. ಅದರಲ್ಲೂ ಒಮಿಕ್ರಾನ್ BA.5 ಉಪತಳಿ ಕೆಲ ಹಲವು ದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿದೆ.

ಅಮೆರಿಕ ಮತ್ತು ಯುಕೆ ದೇಶದಲ್ಲಿ BA.5 ಒಮಿಕ್ರಾನ್ ಸೋಂಕು ತೀವ್ರವಾಗಿ ಹೆಚ್ಚುತ್ತಿದ್ದು ಇಲ್ಲಿನ ಜನರನ್ನು ಭಯಭೀತಗೊಳಿಸುತ್ತಿದೆ. ಲಸಿಕೆ ಹಾಕಿದ ಜನರಲ್ಲೂ ಸೋಂಕು ಪತ್ತೆಯಾಗುತ್ತಿದೆ. ಅದರಲ್ಲೂ ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾದವರನ್ನು ಬೆಂಬಿಡದೆ ಈ BA.5 ಒಮಿಕ್ರಾನ್ ಕಾಡುತ್ತಿದೆ.
ಕಡಿಮೆ ಇಮ್ಯೂನಿಟಿ ಹಾಗೂ ಈ ಹಿಂದೆ ಸೋಂಕಿಗೊಳಗಾದ ಜನರಿಗೆ BA.5 ಸಬ್‌ವೇರಿಯಂಟ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಇನ್ನು ಭಾರತಕ್ಕೂ BA.5 ಒಮಿಕ್ರಾನ್ ಲಗ್ಗೆ ಇಟ್ಟಿದೆ.

ಯಾವ ದೇಶದಲ್ಲಿ ಹೇಗಿದೆ ಉಪತಳಿಯ ಅಟ್ಟಹಾಸ!
ಜಗತ್ತಿನಾದ್ಯಂತ ಒಮಿಕ್ರಾನ್ ಉಪತಳಿಗಳ ಅಟ್ಟಹಾಸ ಹೆಚ್ಚುತ್ತಿದೆ. ಒಮಿಕ್ರಾನ್ ಹಾಗೂ ಇದರ ಉಪತಳಿಯಾದ BA.4, BA.5 ನಿಂದ ಶೇ.30 ರಷ್ಟು ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇನ್ನು ಯುರೋಪ್ ನಲ್ಲಿ ಶೇ.25ರಷ್ಟು ಕೊರೊನಾ ಪ್ರಕರಣಗಳು ಒಮಿಕ್ರಾನ್ ನ ಉಪತಳಿಗಳಿಂದ ಹೆಚ್ಚುತ್ತಿದೆ ಎನ್ನಲಾಗಿದೆ. ಇನ್ನು ಚೀನಾದಲ್ಲಿ BA.5 ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಲಾಕ್ ಡೌನ್ ನಂತಹ ಕ್ರಮಗಳಿಗೆ ಮುಂದಾಗಿದೆ. ಇನ್ನು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, BA.5 ಒಮಿಕ್ರಾನ್ ನಿಂದ ಅಮೆರಿಕದಲ್ಲಿ ತೀವ್ರ ತರದ ಕೊರೊನಾ ಸೋಂಕು ಹೆಚ್ಚುತ್ತಿದೆ. ಜುಲೈ ಎರಡನೇ ವಾರದಲ್ಲಿ 65 ಪ್ರತಿಶತದಷ್ಟು ಹೊಸ ಸೋಂಕುಗಳಿಗೆ ಈ ಉಪತಳಿ ಕಾರಣ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಇನ್ನು ರೋಗಶಾಸ್ತ್ರಜ್ಞರ ಪ್ರಕಾರ, BA.5 ಒಮಿಕ್ರಾನ್ ಈ ಹಿಂದೆ ಸೋಂಕು ತಗುಲಿದವರನ್ನು ಟಾರ್ಗೆಟ್ ಮಾಡುತ್ತಿದೆಯಂತೆ ಅಲ್ಲದೇ ಲಸಿಕೆ ಪಡೆದವರಿಗೂ ಸೋಂಕು ತಗುಲುತ್ತಿದೆ ಎಂದು ತಿಳಿಸಿದ್ದಾರೆ.

ಬಿಎ.4 ಮತ್ತು ಬಿಎ.5 ಕುರಿತು ಡಬ್ಲ್ಯೂಹೆಚ್ಒ ಹೇಳುವುದೇನು?
ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಹೆಚ್ಒ) ಓಮಿಕ್ರಾನ್‌ನ ಉಪ-ರೂಪಾಂತರಗಳಾದ ಬಿಎ.4 ಮತ್ತು ಬಿಎ.5 ಅನ್ನು ಸೌಮ್ಯವೆಂದು ಪರಿಗಣಿಸಿದೆ ಮತ್ತು ಕಾಳಜಿಯ ರೂಪಾಂತರಗಳು ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಎರಡು ಉಪ-ವ್ಯತ್ಯಯಗಳ ರೋಗಲಕ್ಷಣಗಳು ತೀವ್ರವಾಗಿಲ್ಲ ಮತ್ತು ಹಿಂದಿನ ರೂಪಾಂತರಗಳಂತೆ ಅವು ಸಾಂಕ್ರಾಮಿಕವಲ್ಲ ಎಂದು ಡಬ್ಲ್ಯೂಹೆಚ್ಒ ಹೇಳುತ್ತದೆ. ಆದಾಗ್ಯೂ, ಈ ಬಗ್ಗೆ ಯಾರೂ ಮೈಮರೆಯುವಂತಿಲ್ಲ. ಆಯಾ ದೇಶಗಳು ಕೊರೊನಾ ಸೋಂಕಿತರ ಬಗ್ಗೆ ಮೇಲ್ವಿಚಾರಣೆ ಮಾಡುವ ಅವಶ್ಯಕತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

BA.5 ಒಮಿಕ್ರಾನ್ ಅತ್ಯಂತ ಡೇಂಜರ್?
ಈ ಹಿಂದಿನಿಂದಲೂ ನೋಡಿದಂತೆ ಒಮಿಕ್ರಾನ್ ಹಾಗೂ ಇದರ ತಳಿಗಳು ಜನರ ಮೇಲೆ ಅತ್ಯಂತ ಪರಿಣಾಮ ಬೀರುತ್ತಿದೆ. ಅದರಂತೆ BA.5 ಒಮಿಕ್ರಾನ್ ಅತ್ಯಂತ ವೇಗವಾಗಿ ಪ್ರಸರಣವಾಗುವ ಶಕ್ತಿಯನ್ನು ಹೊಂದಿದೆಯಂತೆ. ಅಲ್ಲದೇ ರೋಗನಿರೋಧಕ ಶಕ್ತಿಯನ್ನು ಮೀರಿ ಮನುಷ್ಯನಿಗೆ ಕಾಯಿಲೆ ತರವು ಶಕ್ತಿಯನ್ನು ಹೊಂದಿದೆ ಎಂದು ತಜ್ಞರು ತಿಳಿಸಿದ್ದಾರೆ. ಜಗತ್ತಿನಲ್ಲಿ ಕೊರೊನಾ ಸೋಂಕು ಈ ರೀತಿ ಏಕಾಏಕಿ ಹೆಚ್ಚಾಗುತ್ತಿರುವುದಕ್ಕೆ BA.5 ಒಮಿಕ್ರಾನ್ ಸೋಂಕು ಕಾರಣವೆಂದಿರುವ ತಜ್ಞರು, ಕೊರೊನಾ ಸೋಂಕು ಹೆಚ್ಚುತ್ತಿದ್ದರು ಸಾವು ಜಾಸ್ತಿ ಸಂಭವಿಸುತ್ತಿಲ್ಲ. ಅದರಲ್ಲೂ ಕೊರೊನಾ ಲಸಿಕೆ ತೆಗೆದುಕೊಂಡವರಿಗೆ ಸೋಂಕು ಬರುತ್ತಿದೆಯಾದ್ರೂ ಸಾವು ಸಂಭವಿಸುತ್ತಿಲ್ಲ ಎಂದಿದ್ದಾರೆ. BA.5 ಒಮಿಕ್ರಾನ್ ವೈರಸ್ ನಿಂದ ಕೊರೊನಾ ಸೋಂಕು ಹೆಚ್ಚುತ್ತಿದೆ. ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿದೆ. ಆದರೆ ಯಾವುದೇ ರೀತಿಯ ಸಾವುಗಳು ಸಂಭವಿಸುತ್ತಿಲ್ಲ. ಹೀಗಾಗಿ BA.5 ಒಮಿಕ್ರಾನ್ ಮಾರಣಾಂತಿಕ ಸೋಂಕಲ್ಲ. ಆದರೂ ಮಾಸ್ಕ್ ಧಾರಣೆ, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಒಳ್ಳೆಯದು ಎಂದು ವಿಶ್ವಸಂಸ್ಥೆ ತಿಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ 5ನೇ ಅಲೆ ಸೃಷ್ಟಿಸಿದ ಉಪ ತಳಿಗಳು!
ಕೊರೊನಾ ವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ ಬಿಎ.4 ಮತ್ತು ಬಿಎ.5 ಉಪ ತಳಿಗಳು ದಕ್ಷಿಣ ಆಫ್ರಿಕಾದಲ್ಲಿ ಐದನೇ ಅಲೆಗೆ ಕಾರಣವಾಗಿತ್ತು. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಇದೇ ಉಪ ತಳಿಗಳಿಂದ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದವು ಎಂದು ವರದಿಯಾಗಿದೆ.



Click it and Unblock the Notifications