Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ತುರ್ತು ಸಂದರ್ಭದಲ್ಲಿ ಮಕ್ಕಳಿಗೆ ನೀಡಲು 5 ಕೋಟಿ ಕಾರ್ಬೆವ್ಯಾಕ್ಸ್ ಲಸಿಕೆ ಖರೀದಿ, ಇದರ ವಿಶೇಷತೆಯೇನು?
ರಾಷ್ಟ್ರೀಯ ಔಷಧೀಯ ನಿಯಂತ್ರಕದ ಅಧಿಕೃತ ಲಸಿಕೆ ಬಯೋಲಾಜಿಕಲ್ E's ಕಾರ್ಬೆವ್ಯಾಕ್ಸ್ ಸಿದ್ಧವಾಗಿದ್ದು ಇದನ್ನು ತುರ್ತು ಪರಿಸ್ಥಿತಿ ಸಮಯದಲ್ಲಿ 12-17 ವರ್ಷದ ಮಕ್ಕಳಿಗೆ ಮೂರನೇ ಡೋಸ್ ಆಗಿ ನೀಡಲಾಗುವುದು.

ಕೇಂದ್ರ ಸರ್ಕಾರ ಈಗಾಗಲೇ 5 ಕೋಟಿ ಲಸಿಕೆಯನ್ನು ಖರೀದಿಸಿದ್ದು ಫೆಬ್ರವರಿ ಕೊನೆಯ ವಾರದಲ್ಲಿ ರಾಜ್ಯಗಳಿಗೆ ಲಭ್ಯವಾಗಲಿದೆ.

ತುರ್ತು ಸಂದರ್ಭದಲ್ಲಿ ಬಳಸಲು ಸಿದ್ಧವಾದ ಲಸಿಕೆ
ಈ 2ನೇ ಡೋಸ್ ಲಸಿಕೆಯನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನೀಡಲು ಖರೀದಿಸಲಾಗಿದೆ. ಈಗಾಗಲೇ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಹಗೂ ಜೈಡಸ್ ಕ್ಯಾಡಿಲಾದ ಜೈಕೋ-ಡಿ ಲಸಿಕೆಯನ್ನು ಮಕ್ಕಳಿಗಾಗಿ ಸಿದ್ಧ ಪಡಿಸಲಾಗಿದೆ. ಆದರೆ ಈಗ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಬರೀ ಕೊವಾಕ್ಸಿನ್ ಲಸಿಕೆಯನ್ನಷ್ಟೇ 2 ಡೋಸ್ ನೀಡಲಾಗುತ್ತಿದೆ. ಬಯೋಲಾಜಿಕಲ್ E's ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಬರೀ ತುರ್ತು ಸಂದರ್ಭದಲ್ಲಿ ಅಷ್ಟೇ ಬಳಸಲಾಗುವುದು.

ಕೋವಾವ್ಯಾಕ್ಸ್‌ಗೂ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ
ಕೋವಿಶೀಲ್ಡ್ ತಯಾರಕರು ಕೋವಾವ್ಯಾಕ್ಸ್ ತಯಾರಿಸಿದ್ದು ಇದಕ್ಕೂ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಇದೆ. ಕೋವಾವ್ಯಾಕ್ಸ್ ಅನ್ನು 12-17 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವುದು.
NTAGI (The National Technical Advisory Group on Immunisation) ಒಮಿಕ್ರಾನ್ ಡಾಟಾಗಳನ್ನು ಪರಿಶೀಲಿಸಿ, ಡಿಸೆಂಬರ್ -ಜನವರಿಯಲ್ಲಿ ಒಮಿಕ್ರಾನ್‌ನ3ನೇ ಅಲೆ ಇರಬಹುದು ಎಂದು ಹೇಳಲಾಗಿದೆ. ಈ ಗ್ರೂಪ್ ಲಸಿಕೆಗಳ ಉತ್ಪಾದನೆ ಹೆಚ್ಚಿಸಲು ವ್ಯಾಕ್ಸಿನೇಷನ್ ಸ್ಟ್ರಾಟಜಿ ಮೋಡಿಫಿಕೇಷನ್‌ಗೆ ಸಲಹೆ ನೀಡಿದೆ.
ವ್ಯಾಕ್ಸಿನೇಷನ್ ಸ್ಟ್ರಾಟಜಿಯನ್ನು ವಿಜ್ಞಾನಿಗಳ ಸಲಹೆ ಮೇರೆಗೆ ತಯಾರಿಸಲಾಗುವುದು. ಕೋವಾಕ್ಸಿನ್ ಉತ್ಪಾದನೆ ತಿಂಗಳಿಗೆ 5-6 ಕೋಟಿ ಇದೆ. ಈ ಲಸಿಕೆಯನ್ನು ಹದಿ ಹರೆಯದವರಿಗೆ ಮಾತ್ರವಲ್ಲ, ದೊಡ್ಡವರಿಗೂ ಪ್ರಿಕಾಷನ್ ಡೋಸ್ ಆಗಿ ನೀಡಲಾಗುವುದು. ಆದ್ದರಿಂದ ತುರ್ತು ಸಂದರ್ಭಕ್ಕೆ ಇತರ ಲಸಿಕೆಗಳ ಅವಶ್ಯಕತೆ ಇದೆ.

ಕಾರ್ಬೆವ್ಯಾಕ್ಸ್ ಲಸಿಕೆ ಎಷ್ಟು ಡೋಸ್ ನೀಡಲಾಗುವುದು
ಈ ಲಸಿಕೆಯನ್ನುದ 2 ಡೋಸ್ ಆಗಿ 28 ದಿನಗಳ ಅಂತರದಲ್ಲಿ ನೀಡಲಾಗುವುದು. ಇದನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಲಾಗುವುದು, ಇದನ್ನು 0.5ml, 5ml, 10ml ವಯಲ್‌ನಲ್ಲಿ ಸಪ್ಲೈ ಮಾಡಲಾಗುವುದು.
ಭಾರತದಲ್ಲಿ ಶೇ. 97ರಷ್ಟು ಜನರಿಗೆ ಒಂದು ಡೋಸ್ ಆದರೂ ಲಸಿಕೆ ಸಿಕ್ಕಿದೆ, ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಸರ್ಕಾರ ಕಾಳಜಿ ವಹಿಸುತ್ತಿದೆ. ಇದೀಗ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ತುರ್ತು ಸಂದರ್ಭ ಬಂದರೆ ಬಳಸಿಕೊಳ್ಳಲು ಈಗಾಗಲೇ ಲಸಿಕೆಗಳನ್ನು ಖರೀದಿಸುತ್ತಿದೆ. ಪ್ರತಿಯೊಬ್ಬರು ಲಸಿಕೆ ಹಾಕಿಸಿ, ಕೊರೊನಾ ತಡೆಗಟ್ಟಲು ಸಹಕಾರ ನೀಡಿ.



Click it and Unblock the Notifications