For Quick Alerts
ALLOW NOTIFICATIONS  
For Daily Alerts

ವಿಟಮಿನ್ ಸಿ ಆಹಾರಗಳ ಕೊರೊನಾವೈರಸ್‌ ವಿರುದ್ಧ ಹೋರಾಡುತ್ತದೆಯೇ?

|

ಕೋವಿಡ್ 19 ಕಾಯಿಲೆ ಭಾರತದಲ್ಲಿ ತಾಂಡವಾಡುತ್ತಿದೆ. ಈ ಕಾಯಿಲೆಯನ್ನು ನಿಯಂತ್ರಿಸಲು ಇದುವರೆಗೆ ಯಾವುದೇ ಸೂಕ್ತ ಔಷಧಿ ಸಿಕ್ಕಿಲ್ಲ, ಇದಕ್ಕಾಗಿ ವಿಜ್ಞಾನಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ.

Can Vitamin C Prevent Or Treat Corona Virus? | Boldsky Kannada

ಕೊರೊನಾವೈರಸ್‌ನಿಂದ ಬರುವ ಕೋವಿಡ್ 19 ತಡೆಗಟ್ಟಲು ಸದ್ಯಕ್ಕೆ ನಮ್ಮ ಮುಂದೆ ಇರುವ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳುವುದು.

ಕೊರೊನಾವೈರಸ್ ತಡೆಗಟ್ಟುವುದು ಹೇಗೆ ಎಂಬುವುದರ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಿವೆ, ಆದರೆ ವೈಜ್ಞಾನಿಕವಾಗಿ ಯಾವುದೇ ಔಷಧಿಗೆ ಅಧಿಕೃತ ಅನುಮತಿ ಸಿಕ್ಕಿಲ್ಲ. ಮತ್ತೊಂದೆಡೆ ನ್ಯೂಯಾರ್ಕ್‌ನ ಡಾ. ಆ್ಯಂಡ್ರಿವ್ ಜಿ ವೇಬರ್ ಪ್ರಕಾರ ವಿಟಮಿನ್ ಸಿ ಡೋಸ್ ಸಿಕ್ಕ ರೋಗಿಗಳು ಬೇಗನೆ ಚೇತರಿಸಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಸೋಂಕು, ರಕ್ತದೊತ್ತಡ ಮುಂತಾದ ಸಮಸ್ಯೆಯಿಂದ ಐಸಿಯುವಿನಲ್ಲಿರುವ ರೋಗಿಗೆ ವಿಟಮಿನ್ ಸಿ ಕೊಡುವುದರಿಂದ ಅವರ ದೇಹದಲ್ಲಿ ಬೇಗನೆ ಚೇತರಿಕೆ ಕಂಡು ಬರುತ್ತಿರುವುದಾಗಿ ಹೇಳಿದ್ದಾರೆ.

Can Vitamin C Help Prevent COVID-19?

ವಿಟಮಿನ್ ಸಿ ಮತ್ತು ರೋಗ ನಿರೋಧಕ ಶಕ್ತಿ

ವಿಟಮಿನ್ ಸಿ ಆರೋಗ್ಯಕ್ಕೆ ತುಂಬಾ ಅವಶ್ಯಕ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಜೀವಕಣಗಳ ಚಟುವಟಿಕೆ ವೃದ್ಧಿಸಲು ಸಹಕಾರಿಯಾಗಿದೆ. ಈ ವಿಟಮಿನ್‌ನ ಕೊರತೆ ಉಂಟಾದರೆ ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಇದರ ಪ್ರಮುಖ ಲಕ್ಷಣಗಳೆಂದರೆ ಗಡಸು ತ್ವಚೆ, ಬಳಲಿಕೆ, ರಕ್ತಹೀನತೆ, ಸಂದುಗಳಲ್ಲಿ ನೋವು ಕಂಡು ಬರುತ್ತದೆ.

ವಿಟಮಿನ್ ಸಿ ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರ ಹಾಕುವಲ್ಲಿ ಹಾಗೂ ಉಸಿರಾಟದ ಸಮಸ್ಯೆಗಳನ್ನು ನಿವಾರಿಸುವಲ್ಲಿ ತುಂಬಾ ಸಹಕಾರಿ. ಅಲ್ಲದೆ ಊರಿಯೂತದಂಥ ಸಮಸ್ಯೆಗಳ ವಿರುದ್ಧವೂ ಹೋರಾಡುತ್ತದೆ ಹಾಗೂ ಸೋಂಕು ಹಾಗೂ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಕೂಡ ಪಡೆದಿದೆ.

ವಿಟಮಿನ್ ಸಿ ಪ್ರಮಾಣ ಕಡಿಮೆಯಾದರೆ

ವಿಟಮಿನ್ ಸಿ ಪ್ರಮಾಣ ಕಡಿಮೆಯಾದರೆ

ನಮ್ಮ ದೇಹದಲ್ಲಿರುವ ಟಿ ಸೆಲ್ಸ್ ಸರಿಯಾಗಿ ಕಾರ್ಯನಿವರ್ಹಿಸಲು ವಿಟಮಿನ್ ಸಿ ಅವಶ್ಯಕ, ಇದು ವೈರಸ್‌ಗಳ ಆಕ್ರಮಣವನ್ನು ಕಡಿಮೆ ಮಾಡುತ್ತದೆ ಅಲ್ಲದೆ ನಮ್ಮ ದೇಹವು ನ್ಯೂಮೋನಿಯಾದಂಥ ಸೋಂಕಾಣುಗಳ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಹೊಂದುವಂತೆ ಮಾಡುವುದು.

ನ್ಯೋಮೋನಿಯಾ ಕಡಿಮೆ ಮಾಡುವ ವಿಟಮಿನ್ ಸಿ

ನ್ಯೋಮೋನಿಯಾ ಕಡಿಮೆ ಮಾಡುವ ವಿಟಮಿನ್ ಸಿ

ವಿಟಮಿನ್ ಸಿ ಪ್ರಮಾಣ ಕಡಿಮೆಯಾದರೆ ನ್ಯೂಮೋನಿಯಾ ಹಾಗೂ ಇತರ ಶ್ವಾಸಕೋಶದ ಅಪಾಯಗಳು ಉಂಟಾಗುವುದು. ಆದ್ದರಿಂದ ವಿಟಮಿನ್ ಸಿ ವ್ಯಕ್ತಿಯ ಆರೋಗ್ಯಕ್ಕೆ ಅತ್ಯವರ್ಶಯಕ. ಒಂದು ವಯಸ್ಕ ಪುರಿಷರಿಗೆ 75ಮಿಗ್ರಾಂ ಹಾಗೂ ವಯಸ್ಕ ಮಹಿಳೆಯರಿಗೆ 75ಮಿಗ್ರಾಂ ವಿಟಮಿನ್ ಸಿ ಅವಶ್ಯಕ.

ಇನ್ನು ವಿಟಮಿನ್ ಸಿ ಆಹಾರಗಳನ್ನು ತೆಗೆದುಕೊಳ್ಳುವುದರಿಂದ ನ್ಯೂಮೋನಿಯಾ ಕಾಯಿಲೆಯಿಂದ ಶೇ. 80ರಷ್ಟು ಜನರು ಚೇತರಿಸಿಕೊಂಡಿದ್ದಾರೆ ಎಂದು ಅಧ್ಯಯನ ಹೇಳಿದೆ. ಇನ್ನು ಸಾಮಾನ್ಯ ಶೀತ ಕೂಡ ವಿಟಮಿನ್ ಸಿಯಿಂದಾಗಿ ಶೇ.50ರಷ್ಟು ಕಡಿಮೆಯಾಗುವುದು.

ಕೊರೊನಾ ವೈರಸ್ ಸೋಂಕಿದಾಗ ಶ್ವಾಸಕೋಶದ ಎರಡೂ ಬದಿಗಳಲ್ಲಿ ದ್ರವ ತುಂಬುವುದು, ಇದು ಶ್ವಾಸಕೋಶದ ಕಾರ್ಯಕ್ಕೆ ಅಡಚಣೆ ಉಂಟು ಮಾಡುತ್ತದೆ. 2020ರಲ್ಲಿ ನಡೆಸಿದ ಕ್ಲಿನಿಕಲ್ ಅಧ್ಯಯನದಲ್ಲಿ ವಿಟಮಿನ್ ಸಿ ಗಂಟಲಿನಲ್ಲಿ ದ್ರವ ಸಂಗ್ರಹವಾಗುವುದನ್ನು ತಡೆಗಟ್ಟುತ್ತದೆ, ಇದು ಸಾಮಾನ್ಯ ಶೀತ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಸಾಮಾನ್ಯ ಜ್ವರ ಕಾಣಿಸಿದಾಗ ವಿಟಮಿನ್ ಸಿ ಆಹಾರ ತೆಗೆದುಕೊಳ್ಳುವುದರಿಂದ ಬೇಗನೆ ಕಡಿಮೆಯಾಗುವುದು ಎಂದು ಹೇಳಲಾಗಿದೆ.

ವಿಟಮಿನ್ ಸಿ ಮತ್ತು ಸಾರ್ಸ್-COv

ವಿಟಮಿನ್ ಸಿ ಮತ್ತು ಸಾರ್ಸ್-COv

ಜರ್ನಲ್ ಆಫ್ ಆ್ಯಂಟಿಮೈಕ್ರೋಬಯಲ್ ಕೀಮೋಥೆರಪಿ ಅಧ್ಯಯನ ವರದಿ ಪ್ರಕಾರ ವಿಟಮಿನ್ ಸಿ ವ್ಯಕ್ತಿಯಲ್ಲಿ ಶೀತ ಹಾಗೂ ಉಸಿರಾಟದ ತೊಂದರೆಯ ಪ್ರಮಾಣವನ್ನು ಕಡಿಮೆ ಮಾಡುವುದು ಎಂದು ಹೇಳಲಾಗಿದೆ. ನ್ಯೂಮೋನಿಯಾ ಹಾಗೂ ಸಾರ್ಸ್ ಕಾಯಿಲೆ ಬಂದಾಗ ವಿಟಮಿನ್ ಸಿ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡಿರುವುದು ಈ ಕುರಿತು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಕೋವಿಡ್ 19 ಗುಣಪಡಿಸುವಲ್ಲಿ ಪರಿಣಾಮಕಾರಿಯೇ?

ಕೋವಿಡ್ 19 ಗುಣಪಡಿಸುವಲ್ಲಿ ಪರಿಣಾಮಕಾರಿಯೇ?

ವಿಟಮಿನ್ ಸಿಯಿಂದ ಹಲವಾರು ಆರೋಗ್ಯಕರ ಗುಣಗಳಿವೆ. ಅನೇಕ ಅಧ್ಯಯನಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ವಿಟಮಿನ್ ಸಿ ಪರಿಣಾಮಕಾರಿ ಎಂದು ತಿಳಿದು ಬಂದಿದೆ ಆದರೆ ಇದು ಕೊರೊನಾವೈರಸ್ ತಡೆಯುವಲ್ಲಿ ಎಷ್ಟು ಪರಿಣಾಮಕಾರಿ ಎನ್ನುವುದು ಇನ್ನು ಸಾಬೀತಾಗಬೇಕಾಗಿದೆ.

ವಿಟಮಿನ್ ಸಿ ಇರುವ ಆಹಾರಗಳು

ವಿಟಮಿನ್ ಸಿ ಇರುವ ಆಹಾರಗಳು

  • ಸೀಬೆಹಣ್ಣು
  • ನಿಂಬೆಹಣ್ಣು
  • ಕಿವಿಹಣ್ಣು
  • ಬ್ರೊಕೋಲಿ
  • ಕಿತ್ತಳೆ
  • ಟೊಮೆಟೊ ಜ್ಯೂಸ್
  • ಆಲೂಗಡ್ಡೆ
  • ಮಾವಿನಕಾಯಿ
  • ದುಂಡು ಮೆಣಸಿನಕಾಯಿ
  • ಎಲೆಕೋಸು
English summary

Can Vitamin C Help Prevent COVID-19?

The revelation is done based on a study that says vitamin C has beneficial effects on the infections, blood pressure and bronchoconstriction and tend to shorten the stay period of the patient in the ICU.
Story first published: Monday, March 30, 2020, 12:01 [IST]
X
Desktop Bottom Promotion