Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್: ಲಕ್ಷಣಗಳೇನು, ಯಾವುದು ಹೆಚ್ಚು ಅಪಾಯಕಾರಿ, ಚಿಕಿತ್ಸೆಯೇನು?
ಭಾರತದಲ್ಲಿ ಕೋವಿಡ್‌ನಷ್ಟೇ ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್ ಆತಂಕ ಎದುರಾಗಿದೆ. ಕೋವಿಡ್ 19 ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಾಗೂ ಕೋವಿಡ್‌ನಿಂದ ಗುಣಮುಖರಾದವರಿಗೆ ಅದರಲ್ಲೂ ಮಧುಮೇಹಿಗಳಿಗೆ, ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುವವರಿಗೆ ಮ್ಯೂಕೋರ್ಮೈಕೋಸಿಸ್ ಅಪಾಯ ಎದುರಾಗಿದೆ. ಈ ಕಾಯಿಲೆಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಫಂಗಸ್‌ಗಳು ಜನರಲ್ಲಿ ಆತಂಕ ಮೂಡಿಸಿದೆ.
ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶದಲ್ಲಿ ಅತೀ ಹೆಚ್ಚು ಜನರಲ್ಲಿ ಈ ಫಂಗಸ್ ಸಮಸ್ಯೆ ಕಂಡು ಬರುತ್ತಿದೆ. ಆರೋಗ್ಯ ಇಲಾಖೆ ಈಗಾಗಲೇ ಬ್ಲ್ಯಾಕ್ ಪಂಗಸ್ ಅನ್ನು ಸಾಂಕ್ರಾಮಿಕ ಎಂದು ಘೋಷಿಸಿದೆ.
ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿರುವಾಗ ಉತ್ತರ ಪ್ರದೇಶದಲ್ಲಿ ವೈಟ್ ಮತ್ತು ಯೆಲ್ಲೋ ಫಂಗಸ್ ಕೂಡ ಪತ್ತೆಯಾಗಿದೆ. ಈ ಮೂರು ಫಂಗಸ್‌ಗಳಲ್ಲಿ ಯಾವುದು ಹೆಚ್ಚು ಅಪಾಯಕಾರಿ, ಈ ಫಂಗಸ್‌ಗಳ ಲಕ್ಷಣಗಳೇನು, ಹೇಗೆ ಭಿನ್ನವಾಗಿರುತ್ತದೆ ಎಂದು ನೋಡೋಣ ಬನ್ನಿ:

ಈ ಫಂಗಸ್ ಸಮಸ್ಯೆ ಯಾರಲ್ಲಿ ಕಂಡು ಬರುತ್ತಿದೆ?
ಮಧುಮೇಹಿಗಳಿಗೆ ಕೋವಿಡ್ 19 ಸೋಂಕು ತಗುಲಿದಾಗ ಚಿಕಿತ್ಸೆಯಲ್ಲಿ ಸ್ಟಿರಾಯ್ಡ್ ನೀಡಿದಾಗ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ತುಂಬಾನೇ ಇದೆ. ಶ್ವಾಸಕೋಶದಲ್ಲಿನ ಉರಿಯೂತ ಕಡಿಮೆ ಮಾಡಲು ಸ್ಟಿರಾಯ್ಡ್ ನೀಡಬೇಕಾಗುತ್ತದೆ, ಆದರೆ ಇದರಿಂದ ದೇಹದಲ್ಲಿ ಸಕ್ಕರೆಯಂಶ ತುಂಬಾನೇ ಹೆಚ್ಚುವುದು. ಇದು ಮಧುಮೇಹಿಗಳಿಗೆ ತುಂಬಾನೇ ಅಪಾಯಕಾರಿಯಾಗಿದೆ.
ಈಗ ಫಂಗಸ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ

ಬ್ಲ್ಯಾಕ್ ಫಂಗಸ್
ಬ್ಲ್ಯಾಕ್ ಫಂಗಸ್‌ನಲ್ಲಿ 3 ಬಗೆಯಿದೆ. ಮೊದಲನೆಯದು ಸಾಮಾನ್ಯವಾಗಿ ಮೂಗು, ಪ್ಯಾರಾನಾಸಲ್ ಸೈನಸಸ್, ಕಣ್ಣು, ಮೆದುಳಿಗೆ ಹಾನಿಯುಂಟು ಮಾಡುವುದು. ಮತ್ತೊಂದು ಅಂದ್ರೆ ಶ್ವಾಸಕೋಶದ ಮ್ಯೂಕಾರ್ಮೈಕೋಸಿಸ್ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವುದು, ಮೂರನೇಯದು ಕರುಳಿನ ಮ್ಯೂಕಾರ್ಮೈಕೋಸಿಸ್.
ಈ ಬ್ಲ್ಯಾಕ್ ಫಂಗಸ್‌ನ ಅಪಾಯವೆಂದರೆ ಇದು ರಕ್ತನಾಳಗಳನ್ನು ಸುತ್ತುವರೆದು ಅವುಗಳನ್ನು ನಾಶಪಡಿಸುತ್ತದೆ, ಇದರಿಂದಾಗಿ ಸಾವು ಸಂಭವಿಸುವುದು. ಅಂಗಾಂಗಗಳು ಸತ್ತಾಗ ಅದು ಕಪ್ಪಾಗುವುದರಿಂದ ಕಪ್ಪು ಬಣ್ಣದಲ್ಲಿ ಕಂಡು ಬರುವುದು.
ಬ್ಯಾಕ್ ಫಂಗಸ್: 2-6 ವಾರಗಳ ಕೋವಿಡ್ 19 ಚಿಕಿತ್ಸೆ ಪಡೆದವರಲ್ಲಿಈ ಸಮಸ್ಯೆ ಕಂಡು ಬರುತ್ತಿದೆ. ಕೆನ್ನೆಯಲ್ಲಿ ಊತ, ವಿಪರೀತ ತಲೆನೋವು, ಕಣ್ಣಿನ ಸುತ್ತ ಊತ, ಮೂಗಿನ ತುದಿಯಲ್ಲಿ ಕಪ್ಪು ಬಣ್ಣದ ವೇಸ್ಟ್, ಮೂಗು ಕಟ್ಟುವುದು, ಹಲ್ಲುಗಳು ಸಡಿಲವಾಗುವುದು ಇವೆಲ್ಲಾ ಇದರ ಲಕ್ಷಣಗಳಾಗಿವೆ.
* ಮೂಗು ಕಟ್ಟು ವುದು
* ರಕ್ತಸ್ರಾವ
* ಮೂಗಿನಿಂದ ಕಪ್ಪು ಬಣ್ಣದ ಗೊಣ್ಣೆ ಬರುವುದು
* ಮುಖದಲ್ಲಿ ನೋವು
* ಊತ
* ಮರಗಟ್ಟುವುದು
* ಕಣ್ಣುಗಳು ಮಂಜಾಗುವುದು
* ಕಣ್ಣುಗಳಲ್ಲಿ ನೀರು ತುಂಬುವುದು
ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ, ಇದು ಬ್ಲ್ಯಾಕ್ ಫಂಗಸ್‌ನ ಲಕ್ಷಣವಾಗಿದೆ.

ವೈಟ್ ಫಂಗಸ್
ಇದು ಕ್ಯಾಂಡಿಡಾ ಗುಂಪಿಗೆ ಸೇರಿದ ಫಂಗಸ್ ಆಗಿದೆ, ಇದು ಬಿಳಿ ಕೊಳಕಾಗಿದೆ, ಇದು ಕೂಡ ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಿಗೆ, ಹೆಚ್‌ಐವಿ, ಕ್ಯಾನ್ಸರ್, ಟ್ರಾನ್ಸ್‌ಪ್ಲ್ಯಾಂಟ್ ಸರ್ಜರಿಗೆ ಒಳಗಾದವರಿಗೆ, ಮದುಮೇಹಿಗಳಿಗೆ ತಗುಲುವ ಸಾಧ್ಯತೆ ಹೆಚ್ಚು. ಇದು ಅಂಟು ಕಾಯಿಲೆ ಅಲ್ಲ, ಆದರೆ ವೈಟ್ ಫಂಗಸ್ ರೋಗಿ ಉಸಿರಾಡಿದಾಗ ಅದು ಅಂಗಾಂಗಗಳಿಗೆ ತಲುಪಿ ಹಾನಿಯುಂಟು ಮಾಡುವುದು. ಇದರ ಲಕ್ಷಣಗಳು
ವೈಟ್ ಫಂಗಸ್ ಲಕ್ಷಣಗಳು
* ಕೆಮ್ಮು
* ಜ್ವರ
* ಬೇಧಿ
*ಕುತ್ತಿಗೆ ಕಪ್ಪಾಗುವುದು, ಆಮ್ಲಜನಕದ ಕೊರತೆ
* ಊತ
* ಸೋಂಕು
* ವಿಪರೀತ ತಲೆನೋವು
* ನೋವು

ಯೆಲ್ಲೋ ಫಂಗಸ್
ಯೆಲ್ಲೋ ಫಂಗಸ್ ಎನ್ನುವುದು ಫಂಗಲ್ ಸೋಂಕಾಗಿದೆ, ಇತರ ಫಂಗಸ್‌ನಲ್ಲಿ ಲಕ್ಷಣಗಳು ಹೊರಗಡೆ ಕಂಡು ಬಂದರೆ ಇದರಲ್ಲಿ ಪತ್ತೆಯಾಗುವುದು ನಿಧಾನಕ್ಕೆ, ಆದರೆ ಇದನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚದಿದ್ದರೆ ತುಂಬಾ ಅಪಾಯಕಾರಿಯಾಗಿದೆ. ಇದು ಪ್ಯಾರಾನ್ಯಾಸಲ್ ಸೈನಸಸ್, ಕಾಲುಗಳಿಗೆ ಹಾಗೂ ದೇಹದ ಇತರ ಅಂಗಗಳಿಗೆ ಬೇಗನೆ ಹಾನಿಯುಂಟು ಮಾಡುವುದು.
* ಶ್ವಾಸಕೋಶದಲ್ಲಿ ಉರಿಯೂತ
* ನ್ಯೂಮೋನಿಯಾ ಹಾಗೂ ಹಲ್ಲುಗಳು ಸಡಿಲವಾಗುವುದು
* ನ್ಯೂಮೋನಿಯಾ ವಿಥ್ ಫಂಗಲ್ ವಾಲ್
* ಆಲಸ್ಯ
* ಹೊಟ್ಟೆ ಹಸಿವು ಇಲ್ಲದಿರುವುದು
* ತೂಕ ಇಳಿಕೆ, ದುರ್ಬಲ ಚಯಾಪಚಯ ಕ್ರಿಯೆ
* ಕೆಂಪಾದ ಕಣ್ಣುಗಳು

ಚಿಕಿತ್ಸೆ:
ಬ್ಲ್ಯಾಕ್ ಫಂಗಸ್: ಬ್ಲ್ಯಾಕ್ ಫಂಗಸ್ ರೋಗಿಗಳು ENTತಜ್ಞರನ್ನು ಭೇಟಿ ಮಾಡಿ ಮೆದುಳಿನ MRI ಮಾಡಬೇಕು. ರಕ್ತ ಪರೀಕ್ಷೆ ಅಥವಾ ಸಿಟಿ ಸ್ಕ್ಯಾನ್ ಮಾಡಿದರೆ ತಿಳಿಯಲು ಸಾಧ್ಯವಿಲ್ಲ. ಇದಕ್ಕೆ Amphotericin ಮತ್ತು Bisavaconazole ಎಂಬ ಔಷಧ ನೀಡಲಾಗುವುದು. ಸೋಂಕಿನ ತೀವ್ರತೆ ಅಧಿಕವಿದ್ದರೆ ಸರ್ಜರಿ ಕೂಡ ಮಾಡಬೇಕಾಗುವುದು.
ವೈಟ್ ಫಂಗಸ್: ಇದನ್ನು ಗುಣ ಪಡಿಸುವುದು ಸುಲಭ, ಯಾವುದೇ ದುಬಾರಿ ಚಿಕಿತ್ಸೆ ಅಗ್ಯತವಿಲ್ಲ, ಅಲ್ಲದೆ ಮಧುಮೇಹಿಗಳಿಗೆ ಇದಕ್ಕೆ ನೇರ ಸಂಬಂಧವಿಲ್ಲ, ಆದರೆ ಸಕ್ಕರೆಯಂಶ ಅಧಿಕವಾದರೆ ಇದು ಬರುವ ಸಾಧ್ಯತೆ ಇದೆ.
ಯೆಲ್ಲೋ ಫಂಗಸ್: ಯೆಲ್ಲೋ ಫಂಗಸ್‌ಗೆ ಇರುವ ಒಂದೇ ಒಂದು ಚಿಕಿತ್ಸೆ ಎಂದರೆ Amphotericin B injection ನೀಡಲಾಗುವುದು. ಲಕ್ಷಣಗಳನ್ನು ಗಮನಿಸುತ್ತಲೇ ಇರಬೇಕು, ಏನಾದರೂ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಹೋಗಬೇಕು.

ಈ ಫಂಗಸ್‌ಗಳು ಕೋವಿಡ್ 19 ಸೋಂಕಿತರಲ್ಲಿ ಕಾಣಿಸುತ್ತಿರುವುದು ಏಕೆ?
ಕೊರೊನಾ 2ನೇ ಅಲೆಯಲ್ಲಿ ಮಿತಿ ಮೀರಿದ ಸ್ಟಿರಾಯ್ಡ್ ಬಳಕೆ ಹಾಗೂ ನಿಯಂತ್ರಣಕ್ಕೆ ಬಾರದ ಮಧುಮೇಹ ಫಂಗಲ್ ಸೋಂಕಿಗೆ ಕಾರಣವಾಗಿದೆ. ಈ ರೀತಿಯ ಸೋಂಕು ಕ್ಯಾನ್ಸರ್, ಲುಕೆಮಿಯಾ, HIV ಹೀಗೆ ದುರ್ಬಲ ರೋಗ ನಿರೋಧಕ ಇರುವವರಿಗೆ ಬರುವುದು. ಯಾರು ತುಂಬಾ ಸಮಯ ವೆಂಟಿಲೇಟರ್ ಚಿಕಿತ್ಸೆ ಪಡೆಯುತ್ತಾರೋ ಅವರಲ್ಲಿ ಈ ರೀತಿಯ ಸೋಂಕು ಕಂಡು ಬರುವುದು.

3 ಫಂಗಸ್ ತಡೆಗಟ್ಟುವುದು ಹೇಗೆ?
* ಶುಚಿತ್ವ ಕಡೆ ತುಂಬಾನೇ ಗಮನ ನೀಡಬೇಕು. ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛವಾಗಿಡಿ.
* ,ಮನೆಯಲ್ಲಿ ಹಳೆಯ ಆಹಾರ ಇಡಬೇಡಿ.
* ತುಂಬಾ ತೇವ-ತೇವ ಇಡಬೇಡಿ, ಅಲ್ಲದೆ ಒಣ ಮಾಸ್ಕ್ ಬಳಸಿ.
* ಆಕ್ಸಿಜನ್ ಸಿಲಿಂಡರ್‌ಗಳನ್ನು ಸೂಕ್ತ ರೀತಿಯಲ್ಲಿ ಸ್ಯಾನಿಟೈಸ್ ಮಾಡಿ.



Click it and Unblock the Notifications
