Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಯುಕೆಯಲ್ಲಿ ಹೆಚ್ಚಾಗುತ್ತಿದೆ ಕೊರೊನಾ AY4.2 : ಲಕ್ಷಣಗಳೇನು, ಲಸಿಕೆ ಪರಿಣಾಮಕಾರಿಯೇ?
ಯುಕೆಯಲ್ಲಿ ಇದೀಗ ಹೊಸ ಕೊರೊನಾವೈರಸ್ ರೂಪಾಂತರ ಕಂಡು ಬಂದಿದೆ. ಇದನ್ನು ಡೆಲ್ಟಾ ಪ್ಲಸ್ AY4.2 ಕೋವಿಡ್ 19 ರೂಪಾಂತರ ಎಂದು ಗುರುತಿಸಲಾಗಿದೆ. ಯುಕೆಯಲ್ಲಿ ಆಲ್ಪಾ ಬಳಿಕ ಈ ರೂಪಾಂತರ ಹೆಚ್ಚು ಆತಂಕ ಸೃಸ್ಟಿಸಿದೆ.

ಮೇ 2021ರಲ್ಲಿ ಡೆಲ್ಟಾ ವೈರಸ್ ಹೆಚ್ಚಿನ ಸಾವು-ನೋವಿಗೆ ಕಾರಣವಾಗಿತ್ತು. ಜುಲೈ 2021ರಲ್ಲಿ ತಜ್ಞರು AY4.2 ರೂಪಾಂತರ ಪತ್ತೆ ಹಚ್ಚಿದರು. ಅಲ್ಲಿಂತ ಈ ರೂಪಾಂತರ ಕೇಸ್‌ಗಳು ನಿಧಾನಕ್ಕೆ ಹೆಚ್ಚಾಗಲಾರಂಭಿಸಿವೆ. ಆದರೆ ಇದು ವೇಗವಾಗಿ ಹರಡುವುದಿಲ್ಲ ಎಂದು ಹೇಳಲಾಗುತ್ತಿದೆ, ಆದರೆ ಯುಕೆ ಇದರ ಬಗ್ಗೆ ಕೂಲಂಕಷವಾಗಿ ಗಮನಿಸುತ್ತಿದ್ದು ಇದರ ನಿಯಂತ್ರಣಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದೆ.
ಈ ರೂಪಾಂತರ ವೈರಸ್ ಅನ್ನು ಲಸಿಕೆ ಪಡೆಯುವ ಮೂಲಕ ಮಣಿಸಬಹುದೇ, ಈ ವೈರಸ್ ತಗುಲಿದರೆ ಕಂಡು ಬರುವ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

AY4.2 ರೂಪಾಂತರ ಲಕ್ಷಣಗಳು
ಇತರ ಕೊರೊನಾವೈರಸ್ ಲಕ್ಷಣಗಳಿಗಿಂತ AY4.2 ರೂಪಾಂತರ ವೈರಸ್ ಮನುಷ್ಯರಿಗೆ ತಗುಲಿದರೆ ಪ್ರತ್ಯೇಕ ಲಕ್ಷಣಗಳೇನು ಕಂಡು ಬರುತ್ತಿಲ್ಲ...ಕೊರೊನಾ ವೈರಸ್ ತಗುಲಿದರೆ ಕಂಡು ಬರುವ ಪ್ರಮುಖ ಲಕ್ಷಣಗಳೆಂದರೆ:
* ತುಂಬಾ ಜ್ವರ (ಬೆನ್ನು, ಎದೆ ಭಾಗ ಮುಟ್ಟಿದಾಗ ತುಂಬಾ ಬಿಸಿಯಿರುತ್ತದೆ, ಮೈಯೆಲ್ಲಾ ಸುಡುವಷ್ಟು ಬಿಸಿಯಿರುತ್ತದೆ)
* ನಿರಂತರ ಕೆಮ್ಮು.... ಗಂಟೆಗಟ್ಟಲೆ ಕೆಮ್ಮುತ್ತಲೇ ಇರುವುದು. ಇನ್ನು ಕೆಮ್ಮು, ಅಸ್ತಮಾ ಸಮಸ್ಯೆ ಇರುವವರಿಗೆ ತಗುಲಿದರೆ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗುವುದು.
* ರುಚಿ ಹಾಗೂ ವಾಸನೆ ಇಲ್ಲವಾಗುವುದು.

AY4.2 ರೂಪಾಂತರ ವೈರಸ್ ತಡೆಗಟ್ಟಲು ಲಸಿಕೆ ಪರಿಣಾಮಕಾರಿಯೇ?
* ಲಸಿಕೆ ಪಡೆದವರಲ್ಲಿ ಈ ಸೋಂಕು ಹರಡಿರುವ ಪ್ರಮಾಣ ಕಡಿಮೆಯೇ ಅಥವಾ ಲಸಿಕೆ ಪಡೆದವರಲ್ಲೂ ಈ ವೈರಸ್ ಹರಡುತ್ತಿದೆಯೇ ಎಂಬುವುದನ್ನು ಇನ್ನೂ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಇದರ ಕುರಿತು ಅಧ್ಯಯನಗಳು ನಡೆಯುತ್ತಾ ಇವೆ.
ಈ ವೈರಸ್ ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಿದೆ ಎಂಬುವುದರ ಕುರಿತು ಪರೀಕ್ಷೆಗಳು ನಡೆಯುತ್ತಿವೆ. ಆದ್ದರಿಂದ ಲಸಿಕೆ ಈ ವೈರಸ್ ಮೇಲೆ ಪರಿಣಾಮ ಬೀರುತ್ತಿದೆಯೇ ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ.

ಯುಕೆಯಲ್ಲಿ ಡೆಲ್ಟಾ ಪ್ಲಸ್ ಕೇಸ್‌ಗಳು ಎಷ್ಟಿವೆ?
ಯುಕೆಯಲ್ಲಿ AY4.2 ರೂಪಾಂತರ ಜುಲೈನಿಂದಲೇ ಹೆಚ್ಚಾಗುತ್ತಿದೆ. ಯುಕೆಯಲ್ಲಿ ಶೇ. 8ರಷ್ಟು ಜನರಲ್ಲಿ ಈ ವೈರಸ್ ಪತ್ತೆಯಾಗಿದ್ದು, ಈಗೀನ ಅಂಕಿ ಅಂಶದ ಪ್ರಕಾರ 14,385 ಜನರಲ್ಲಿ ಈ ರೂಪಾಂತರ ವೈರಸ್ ಪತ್ತೆಯಾಗಿದೆ.

ಕೊರೊನಾ ಸಾಂಕ್ರಾಮಿಕ ಮುಕ್ತಾಯವಾಗಿಲ್ಲವೇ?
ಜಗತ್ತಿನಲ್ಲಿ ಕೊರೊನಾ ಪ್ರಮಾಣಗಳು ಇಳಿಕೆಯಾದಾಗ ಈ ಸಾಂಕ್ರಾಮಿಕ ಕೊನೆಯಾಯ್ತು ಎಂದು ಭಾವಿಸಲಾಗಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕ ಕೊನೆಯಾಗಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಯುಕೆಯಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಲೇ ಇವೆ.
ಭಾರತದಲ್ಲಿ ಈ ರೂಪಾಂತರ ಪತ್ತೆಯಾಗಿದೆಯೇ?
AY4.2 ರೂಪಾಂತರ ಇದುವರೆಗೆ ಭಾರತದಲ್ಲಿ ಪತ್ತೆಯಾಗಿಲ್ಲ. ಕೋವಿಡ್ 19 ಪತ್ತೆಯಾದವರಲ್ಲಿ ಈ ವೈರಸ್ ಇದೆಯೇ ಎಂಬ ಕುರಿತು ಪರೀಕ್ಷೆಯೂ ನಡೆಯುತ್ತಿದೆ.

ಡೆಲ್ಟಾ ರೂಪಾಂತರಕ್ಕಿಂತ ತುಂಬಾ ಅಪಾಯಕಾರಿಯೇ?
ಇದರ ಕುರಿತು ಅನೇಕ ಅಧ್ಯಯನಗಳು ನಡೆಯುತ್ತಿವೆ. ಇದುವರೆಗೆ AY4.2 ವೈರಸ್ ಡೆಲ್ಟಾ ರೂಪಾಂತರಕ್ಕಿಂತ ತುಂಬಾ ಅಪಾಯಕಾರಿ ಎಂಬುವುದು ತಿಳಿದು ಬಂದಿಲ್ಲ. ಕೆಲ ಅಧ್ಯಯನಗಳು ಡೆಲ್ಟಾ ಪ್ಲಸ್‌ಗಿಂತ ಈ ವೈರಸ್ ಶೇ.15ರಷ್ಟು ಅಪಾಯಕಾರಿ ಎಂದು ಹೇಳಿದೆ.



Click it and Unblock the Notifications
