Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಾಸ್ಕ್ ಹೀಗೆ ಬಳಸಿದರೆ ಬ್ಲ್ಯಾಕ್ ಫಂಗಸ್ ಅಪಾಯ ಅಧಿಕ
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಭಯ ಶುರುವಾಗಿದೆ. ಬ್ಲ್ಯಾಕ್ ಫಂಗಸ್ ಭಾರತದಲ್ಲಿ ಇದುವರೆಗೆ 9000 ಜನರಿಗೆ ತಗುಲಿದ್ದು 219ಕ್ಕೂ ಅಧಿಕ ಜನ ಜನರು ಸಾವನ್ನಪ್ಪಿದ್ದಾರೆ.
ತಜ್ಞರ ಪ್ರಕಾರ ಕೋವಿಡ್ 19 ಸೋಂಕಿತರಲ್ಲಿ ನಿಯಂತ್ರಣಕ್ಕೆ ಬಾರದ ಮಧುಮೇಹ ಸಮಸ್ಯೆಯಿದ್ದು ಅಂಥವರಿಗೆ ಸ್ಟಿರಾಯ್ಡ್, ಟೊಸಿಲಿಜುಮಾಬ್ ಹಾಗೂ ವೆಂಟಿಲೇಟರ್ ಚಿಕಿತ್ಸೆ ನೀಡಿದಾಗ ಈ ರೀತಿಯ ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ಏಮ್ಸ್‌ನ ಸೀನಿಯರ್ ನ್ಯೂರೋಸರ್ಜನ್ ಆಗಿರುವ ಡಾ. ಪಿ ಸರತ್ ಚಂದ್ರ ಅವರು ' ಕೋವಿಡ್ 19ಗೆ 6 ವಾರಗಳಿಗಿಂತ ಅಧಿಕ ಚಿಕಿತ್ಸೆ ಪಡೆದವರಲ್ಲಿ ಬ್ಲ್ಯಾಕ್ ಫಂಗಸ್ ಬರುವ ಅಪಾಯ ಅಧಿಕ' ಎಂದು ಹೇಳಿದ್ದಾರೆ.

ಬ್ಲ್ಯಾಕ್ ಫಂಗಸ್‌ಗೆ ಪ್ರಮುಖ ಕಾರಣವೇನು?
ಬ್ಲ್ಯಾಕ್ ಫಂಗಸ್‌ಗೆ ಒಂದು ಪ್ರಮುಖ ಕಾರಣವೆಂದರೆ ನಿಯಂತ್ರಣಕ್ಕೆ ಬಾರದ ಮಧುಮೇಹ, ಅಲ್ಲದೆ ವೆಂಟಿಲೇಟರ್‌ನಲ್ಲಿರುವ ರೋಗಿಯ ಚೇತರಿಕೆಗೆ ಬಳಸುತ್ತಿರುವ ಸ್ಟಿರಾಯ್ಡ್ ಹಾಗೂ ಟೊಸಿಲಿಜುಮಾ, ಆಕ್ಸಿಜನ್ ಸಪ್ಲಿಮೆಂಟ್ ಇವೆಲ್ಲಾ ಬ್ಲ್ಯಾಕ್ ಫಂಗಸ್‌ಗೆ ಪ್ರಮುಖ ಕಾರಣಗಳಾಗಿವೆ.

ಕೋಲ್ಡ್ ಆಕ್ಸಿಜನ್‌ನಿಂದ ಕೂಡ ಬ್ಲ್ಯಾಕ್ ಫಂಗಸ್ ಬರುವುದು
ರೋಗಿಗೆ ಕೋಲ್ಡ್ ಆಕ್ಸಿಜನ್ ನೀಡುವುದು ಮತ್ತು ಆ್ಯಂಟಿ ಫಂಗಲ್ ಡ್ರಗ್ Posaconazole ನೀಡುವುದರಿಂದಲೂ ಬ್ಲ್ಯಕ್ ಫಂಗಸ್ ಉಂಟಾಗುತ್ತಿದೆ. ಕೋಲ್ಡ್ ಆಕ್ಸಿಜನ್ ಅನ್ನು ಸಿಲಿಂಡರ್‌ನಿಂದ ನೇರವಾಗಿ ತುಂಬಾ ಅಪಾಯಕಾರಿ ಎಂದು ಡಾ. ಚಂದ್ರ ಹೇಳಿದ್ದಾರೆ.

ಮಾಸ್ಕ್ ತುಂಬಾ ಸಮಯ ಬಳಸುವುದರಿಂದಲೂ ಬ್ಲ್ಯಾಕ್ ಫಂಗಸ್ ಬರುವುದು
ಮಾಸ್ಕ್ ಅನ್ನು ತುಂಬಾ ಸಮಯ ಬಳಕೆ ಮಾಡುವುದು ಕೂಡ ಬ್ಲ್ಯಾಕ್ ಫಂಗಸ್‌ಗೆ ಒಂದು ಕಾರಣವಾಗಿದೆ. ಬಟ್ಟೆ ಮಾಸ್ಕ್ ಧರಿಸುವವರು ಪ್ರತಿದಿನ ತೊಳೆಯಬೇಕು, ಹಾಗೂ ಒಣಗಿದ ಮಾಸ್ಕ್ ಧರಿಸಿಬೇಕು. ಬಟ್ಟೆ ಮಾಸ್ಕ್‌ಗೆ ಇಸ್ತ್ರಿ ಹಾಕಿ ಬಳಸುವುದು ಮತ್ತಷ್ಟು ಸುರಕ್ಷಿತ.
N95 ಮಾಸ್ಕ್ ಬಳಸುವವರು 5 ಬಾರಿ ಬಳಕೆ ಮಾಡಿದ ಬಳಿಕ ಅದನ್ನು ಡಿಸ್ಪೋಸ್ (ಕಸದ ಬುಟ್ಟಿಗೆ ಹಾಕಿ).
ಒಂದೇ ಮಾಸ್ಕ್ ಅನ್ನು ವಾರ ಪೂರ್ತಿ ಬಳಸುವುದು, ಒದ್ದೆ ಮಾಸ್ಕ್ ಬಳಸುವುದು ಇವು ಬ್ಲ್ಯಾಕ್ ಫಂಗಸ್ ಅಪಾಯ ಹೆಚ್ಚಿಸುವುದು.

ಗಾಳಿ ಚೆನ್ನಾಗಿ ಓಡಾಡುವ ರೂಮಿನಲ್ಲಿರಿ
ಕೋವಿಡ್ ಸೋಂಕಿನಿಂದ ಚೇತರಿಸಿದವರನ್ನು ಗಾಳಿ ಚೆನ್ನಾಗಿ ಓಡಾಡುವ ರೂಮಿನಲ್ಲಿ ಇರಿಸಿ. ಗಾಳಿ ಕಡಿಮೆ ಇರುವ ಕೋಣೆ, ವಾಶ್ ಮಾಡದೇ ಬಳಸುವ ಮಾಸ್ಕ್ ಬ್ಲ್ಯಾಕ್ ಫಂಗಸ್ ಬರಲು ಕಾರಣವಾಗುವುದು.

ಸ್ವಯಂ ಚಿಕಿತ್ಸೆ ಬೇಡ
ಕೆಲ ಸೋಂಕಿತರು ಸ್ಟಿರಾಯ್ಡ್ ಚಿಕಿತ್ಸೆಯನ್ನು ಸ್ವಯಂ ತೆಗೆದುಕೊಳ್ಳುತ್ತಾರೆ, ಅಂಥವರಲ್ಲಿ ಕೂಡ ಈ ಬ್ಲ್ಯಾಕ್ ಫಂಗಸ್ ಕಂಡು ಬರುತ್ತಿದೆ.



Click it and Unblock the Notifications
