ಮಹಿಳೆಯರ ದೇಹದಲ್ಲಿ ಬೀಳುವ ಬಿಳಿ ಕಲೆಗಳಿಗೆ ಮನೆಮದ್ದುಗಳು

By Hemanth

ವಯಸ್ಸಾಗುತ್ತಾ ಹೋದಂತೆ ಮಹಿಳೆಯರ ದೇಹದಲ್ಲಿ ಬಿಳಿ ಕಲೆಗಳು ಮೂಡುವುದು ಒಂದು ರೀತಿಯ ಸಮಸ್ಯೆಯೆನ್ನಬಹುದು. ದೇಹದಲ್ಲಿ ವಯಸ್ಸಾಗುತ್ತಾ ಹೋದಂತೆ ವರ್ಣದ್ರವ್ಯವು ಕಡಿಮೆಯಾಗುತ್ತಾ ಹೋಗುವುದು ಇದಕ್ಕೆ ಕಾರಣವೆನ್ನಬಹುದು. ಇದು ಅಪಾಯಕಾರಿಯಲ್ಲ ಮತ್ತು ಮನೆಯಲ್ಲೇ ಇದಕ್ಕೆ ಪರಿಹಾರ ನೀಡಬಹುದು. ಆದರೆ ಬಿಳಿ ಕಲೆಯು ಆಕಾರ, ಬಣ್ಣ ಮತ್ತು ಗಾತ್ರದಲ್ಲಿ ದಿನೇ ದಿನೇ ಬದಲಾಗುತ್ತಲಿದ್ದರೆ ಆಗ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಕೋಶಗಳಿಗೆ ಬಣ್ಣ ಬರುವುದು ಎಲ್ಲಿಂದ?

ನೈಸರ್ಗಿಕವಾಗಿ ರೂಪುಗೊಳ್ಳುವ ವರ್ಣದ್ರವ್ಯ, ಮೆಲನಿನ್ ಎಂದು ಕರೆಯಲ್ಪಡುವ ಇದು ಮೆಲನೊಸೈಟ್ಸ್ ನ್ನು ಉತ್ಪಾದಿಸುವುದು. ಮೆಲನಿನ್ ನ್ನು ಒಂದು ರೀತಿಯ ಅಮಿನೋ ಆಮ್ಲವಾಗಿರುವ ಥೈರೊಸಿನ್ ಉತ್ಕರ್ಷಣವು ನಿರ್ಮಿಸುವುದು ಮತ್ತು ಇದರ ಬಳಿಕ ಪಾಲಿಮರೀಕರಣ ಮಾಡುವುದು. ಈ ಪ್ರಕ್ರಿಯೆಯನ್ನು ಮೆಲನೊಜೆನೆಸಿಸ್ ಎಂದು ಕರೆಯಲಾಗುತ್ತದೆ.

skin fungus

ಮೆಲನಿನ್ ಯುವಿ ವಿಕಿರಣಗಳನ್ನು ಹೀರಿಕೊಳ್ಳುವುದು. ಇದು ಶೇ.99ರಷ್ಟು ವಿಕಿರಣಗಳನ್ನು ಹೀರಿಕೊಳ್ಳಬಹುದು. ಯುವಿ ವಿಕಿರಣವು ಮನುಷ್ಯರಲದ್ಲಿ ಮೆಲೊಜೆನಿಸ್ ನ್ನು ಉಂಟು ಮಾಡುವುದು. ಇದರಿಂದ ಬಣ್ಣವು ಕಪ್ಪಾಗುವುದು. ಯಾಕೆಂದರೆ ಈ ಗುಣದಿಂದಾಗಿ ಮೆಲನಿನ್ ದೇದಲ್ಲಿ ಯುವಿ ಹಾನಿಯಿಂದ ಕೋಶಗಳನ್ನು ರಕ್ಷಿಸುವುದು ಮತ್ತು ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು.

ಮೆಲನಿನ್ ಹೆಚ್ಚಾಗಿದ್ದರೆ ಆಗ ಚರ್ಮದ ಬಣ್ಣವು ಕಪ್ಪಾಗುವುದು. ಅದೇ ರೀತಿಯಲ್ಲಿ ಮೆಲನಿನ್ ಕಡಿಮೆಯಿದ್ದರೆ ಆಗ ಚರ್ಮದ ಕ್ಯಾನ್ಸರ್ ಬರುವಂತಹ ಸಾಧ್ಯತೆಯು ಹೆಚ್ಚಾಗಿರುವುದು ಎಂದು ಇತ್ತೀಚಿನ ವರದಿಗಳು ಹೇಳಿವೆ.
ಮೆಲನಿನ್ ಚರ್ಮ, ಮೆದುಳಿನ ಕೋಶಗಳು, ಕಿವಿಯ ಒಳಭಾಗ, ಕಣ್ಣಿನ ರೆಟಿನಾ, ಕೂದಲು ಮತ್ತು ಮೂತ್ರಜನನಾಂಗದ ಗ್ರಂಥಿಯಲ್ಲಿರುವುದು. ಮೆಲನೋಸೈಟ್ ಚರ್ಮದ ಹೊರಚರ್ಮದ ತಳ ಪದರದಲ್ಲಿ ಕಂಡುಬರುತ್ತವೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇದರ ಪ್ರಮಾಣವು ಸಾಮಾನ್ಯವಾಗಿ ಒಂದೇ ರೀತಿಯಾಗಿರುವುದು. ಆದರೆ ಮೆಲನಿನ್ ಸಂಶ್ಲೇಷಣೆ ಮಾತ್ರ ಭಿನ್ನವಾಗಿರುವುದು.

ಮೆಲನಿನ್ ಸಂಶ್ಲೇಷಣೆಯಿಂದಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಮೈಯ ಬಣ್ಣವು ಭಿನ್ನವಾಗಿರುವುದು. ಕೆಲವು ವ್ಯಕ್ತಿಗಳಲ್ಲಿ ಮೆಲನಿನ್ ಸಂಶ್ಲೆಷಣೆಯು ಇರುವುದೇ ಇಲ್ಲ. ಇದನ್ನು ಅಲ್ಬಿನಿಸಂ ಎಂದು ಕರೆಯಲಾಗುವುದು. ಇಂತಹ ವ್ಯಕ್ತಿಗಳ ಚರ್ಮವು ಕಾಗದದಂತೆ ಬಿಳಿಯಾಗಿರುವುದು ಮತ್ತು ಕಣ್ಣಿನ ರೆಪ್ಪೆಗಳು, ಹುಬ್ಬು ಮತ್ತು ಕಣ್ಣುಗಳು ಮತ್ತು ತಲೆಕೂದಲಿಗೆ ಬಣ್ಣವಿರಲ್ಲ.

ಮೆಲನೊಸೈಟ್ಸ್ ನ ಗುಂಪು ಮಚ್ಚೆಗಳು, ವಯಸ್ಸಾದ ಕಲೆಗಳು ಮತ್ತು ಇತರ ಚರ್ಮದ ಕಲೆಗಳಣ್ನು ಹೆಚ್ಚಿಸುವುದು. ಮೆಲನಿನ್ ಉತ್ಪತ್ತಿಯಲ್ಲಿ ಕಡಿಮೆಯಾದರೆ ಆಗ ಬಿಳಿ ಕಲೆಗಳೂ ಮೂಡುವುದು ಇದನ್ನು ಹೈಪೋಪಿಂಗ್ಮೆಂಟೇಷನ್ ಎಂದು ಕರೆಯಲಾಗುತ್ತದೆ. ವಯಸ್ಸು ಮತ್ತು ಇತರ ಕೆಲವು ಕಾರಣಗಳಿಂದಾಗಿ ಮೆಲನೊಸೈಟ್ಸ್ ಹಾನಿಯಾಗುವುದು ಮತ್ತು ಇದು ವಿಭಜನೆಗೊಳ್ಳುವುದು. ಇದು ಎಲ್ಲಾ ವಯಸ್ಸಿನವರಲ್ಲೂ ಕಂಡುಬರುವುದು. ವಯಸ್ಸಾದ ಮಹಿಳೆಯರ ಚರ್ಮದಲ್ಲಿ ಮೂಡುವ ಬಿಳಿ ಕಲೆಗಳನ್ನು ಇಡಿಯೋಪಥಿಕ್ ಗುಟ್ಟೇಟ್ ಹೈಪೋಮೆಲೆನೋಸಿಸ್ ಎನ್ನಲಾಗುತ್ತದೆ.

ಇಡಿಯೋಪಥಿಕ್ ಗುಟ್ಟೇಟ್ ಹೈಪೋಮೆಲೆನೋಸಿಸ್ ಎಂದರೇನು?

ಇಡಿಯೋಪಥಿಕ್ ಗುಟ್ಟೇಟ್ ಹೈಪೋಮೆಲೆನೋಸಿಸ್ ನಿಂದ ಸುಮಾರು 2-3ಮಿ.ಮೀ.ನಿಂದ 10 ಮಿ.ಮೀ.ತನಕದ ಬಿಳಿ ಕಲೆಗಳು ಮೂಡುವುದು. ಇದು ವಯಸ್ಸಾದಂತೆ ದೇಹದಲ್ಲಿ ಮೂಡುವುದು. ಇಡಿಯೋಪಥಿಕ್ ಎಂದರೆ ಕಾರಣವಿಲ್ಲದ ಗುಟ್ಟೇಟ್ ಎಂದರೆ ಕಣ್ಣೀರಿನ ಹಾಗೆ ಮತ್ತು ಹೈಪೋಮೆಲೆನೋಸಿಸ್ ಎಂದು ವರ್ಣದ್ರವ್ಯ ಕಳೆದುಕೊಳ್ಳುವುದು ಅಥವಾ ಚರ್ಮದಲ್ಲಿ ಬಿಳಿ ಕಲೆಗಳು ಮೂಡುವುದು. ಮೆಲನಿನ್ ಕಡಿಮೆ ಇರುವಂತಹ ಜನರ ಮೇಲೆ ಇದು ಪರಿಣಾಮ ಬೀರುವುದು. ಈ ಕಲೆಗಳು ಸೂರ್ಯನ ಬಿಸಿಲಿಗೆ ಒಡ್ಡುವಂತಹ ದೇಹದ ಯಾವುದೇ ಭಾಗದಲ್ಲೂ ಮೂಡಬಹುದು.

ಇಡಿಯೋಪಥಿಕ್ ಗುಟ್ಟೇಟ್ ಹೈಪೋಮೆಲೆನೋಸಿಸ್ ಗೆ ಕಾರಣವೇನು?

ಇಡಿಯೋಪಥಿಕ್ ಗುಟ್ಟೇಟ್ ಹೈಪೋಮೆಲೆನೋಸಿಸ್ ಬರಲು ಮೂರು ಪ್ರಮುಖ ಕಾರಣಗಳನ್ನು ನೀಡಲಾಗಿದೆ.

1. ವಯಸ್ಸು

ಇಡಿಯೋಪಥಿಕ್ ಗುಟ್ಟೇಟ್ ಹೈಪೋಮೆಲೆನೋಸಿಸ್ ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡುಬರುವುದು. ಇದು ಕೂದಲು ಬಿಳಿಯಾಗುವುದಕ್ಕೆ ಸಮಾನವಾಗಿದೆ. ಹೆಚ್ಚಿನವರಲ್ಲಿ ಇದನ್ನು ತಡೆಯಲು ಸಾದ್ಯವಿಲ್ಲ. ವಯಸ್ಸಾದಂತೆ ಮೆಲನೊಸೆಟ್ ಗಳು ಚರ್ಮದ ಹೊರಪದರದಲ್ಲಿ ಕಡಿಮೆಯಾಗುವ ಕಾರಣದಿಂದ ಈ ಪರಿಸ್ಥಿತಿ ಬರುವುದು. ಇದು ಮೊದಲು ಕಾಲುಗಳಲ್ಲಿ ಕಂಡುಬರುವುದು. ಇದರ ಬಳಿಕ ದೇಹದ ಇತರ ಭಾಗದಲ್ಲಿ ಗೋಚರಿಸುವುದು.

2. ಬಿಸಿಲಿಗೆ ಮೈಯೊಡ್ಡುವುದು

ಬಿಸಿಲಿನಿಂದ ಆಗುವ ಹಾನಿಯಿಂದ ಇದು ಸಂಭವಿಸಬಹುದು ಎಂದು ಹೇಳಲಾಗುತ್ತದೆ. ಅತಿಯಾಗಿ ಬಿಸಿಲಿಗೆ ಮೈಯೊಡ್ಡುವ ಕಾರಣದಿಂದ ಚರ್ಮವು ಕಪ್ಪಾಗುವುದು ಮತ್ತು ಕೆಲವು ವರ್ಷಗಳ ಬಳಿಕ ಇದು ಬಿಳಿ ಕಲೆಗಳ ರೂಪದಲ್ಲಿ ಕಾಣಿಸುವುದು.

3. ಸೂರ್ಯನ ಬಿಸಿಲಿಗೆ ಸಂಬಂಧಿಸದೆ ಇಲ್ಲದಿರುವುದು

ಸೆಬೊರ್ಹೆರಿಕ್ ಕೆರಟೋಸಿಸ್ ಇದು ಕ್ಯಾನ್ಸರ್ ಅಲ್ಲದೆ ಇರುವಂತಹ ಚರ್ಮದ ಗಡ್ಡೆಯಾಗಿದ್ದು, ಚರ್ಮದ ಮೇಲ್ಪದರಲ್ಲಿರುವ ಕೆರಟಿನೋಸೈಟ್ ಗಳಿಂದ ಉಂಟಾಗುವುದು. ಇದರಿಂದಾಗಿ ಇಡಿಯೋಪಥಿಕ್ ಗುಟ್ಟೇಟ್ ಹೈಪೋಮೆಲೆನೋಸಿಸ್ ಉಂಟಾಗುವುದು.

ಇಡಿಯೋಪಥಿಕ್ ಗುಟ್ಟೇಟ್ ಹೈಪೋಮೆಲೆನೋಸಿಸ್ ಗೆ ಚಿಕಿತ್ಸೆ ಹೇಗೆ?

ಒಂದು ರೀತಿಯಲ್ಲಿ ಹೇಳುವುದಾದರೆ ವಯಸ್ಸಾಗುವಾಗ ಕಾಣಿಸಿಕೊಳ್ಳುವ ಈ ಸಮಸ್ಯೆಗೆ ಯಾವುದೇ ಚಿಕಿತ್ಸೆಯಿಲ್ಲ. ವಯಸ್ಸಾದಂತೆ ಕೂದಲು ಬಿಳಿಯಾಗುವಂತೆ ಇದು ಕೂಡ. ಇದರಿಂದ ಯಾವುದೇ ಅಪಾಯವಿಲ್ಲದೆ ಇರುವ ಕಾರಣ ಇದಕ್ಕೆ ಚಿಕಿತ್ಸೆ ಅಗತ್ಯವಿಲ್ಲ.

ಮೇಕಪ್: ಬಿಳಿ ಕಲೆಗಳ ಬಗ್ಗೆ ನಿಮಗೆ ತುಂಬಾ ಮುಜುಗರವಾಗುತ್ತಿದ್ದರೆ ಮತ್ತು ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆ ಮಾಡಲು ಬಯಸದೇ ಇದ್ದರೆ ಮೇಕಪ್ ಇದಕ್ಕೆ ಪರಿಹಾರ. ಇದು ಮುಖದ ಮೇಲಿರುವ ಕಲೆಗಳನ್ನು ಮಾತ್ರ ಮರೆಮಾಚುವುದು. ದೇಹದಲ್ಲಿರುವ ಸಂಪೂರ್ಣ ಕಲೆಗಳನ್ನು ಮರೆಮಾಚಲು ನಿಮಗೆ ತಾಳ್ಮೆ ಮುಖ್ಯ.

ಲೇಸರ್ ಚಿಕಿತ್ಸೆ: ಚರ್ಮದ ಮೇಲಿನ ಬಿಳಿ ಕಲೆಗಳ ನಿವಾರಣೆಗೆ ಲೇಸರ್ ಚಿಕಿತ್ಸೆಯು ಶಾಶ್ವತ ಪರಿಹಾರ. ಆದರೆ ಇದನ್ನು ಆಯ್ಕೆ ಮಾಡುವ ಮೊದಲು ಇದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕು.

ಕ್ರೈಯೋಥೆರಪಿ: ಜೀವಕೋಶದ ಮಟ್ಟದಲ್ಲಿ ಅಂಗಾಂಶಗಳನ್ನು ಫ್ರೀಜ್ ಮಾಡಲು ದ್ರವ ಸಾರಜನಕವನ್ನು ಬಳಸಲಾಗುವುದು.

ಮೈಕ್ರೊಡರ್ಮಾಬ್ರೇಶನ್: ನಿಮ್ಮ ಚರ್ಮಕ್ಕೆ ಕನಿಷ್ಠ ಸವೆತ ಸಾಧನ ಬಳಸಲಾಗುತ್ತದೆ.

ಫೋಟೋಥೆರಪಿ: ಬೆಳಕಿನ ಮೂಲಕ ಚಿಕಿತ್ಸೆ

ರಾಸಾಯನಿಕ ಸಿಪ್ಪೆ: ಫಿನಾಲ್ ಮತ್ತು ಟ್ರೈಕ್ಲೋರೋಆಟಿಕ್ ಆಸಿಡ್ ಪೀಲ್ ಗಳಂತೆ.

ರೆಟಿನೊಯಿಡ್ಸ್: ಟ್ರಿಟಿನೋನ್ ಕ್ರೀಮ್ ನಂತೆ ಕೆಲವೊಂದು ಮನೆಮದ್ದುಗಳನ್ನು ಇದಕ್ಕೆ ನೀವು ಪ್ರಯತ್ನಿಸಬಹುದು. ಆದರೆ ಫಲಿತಾಂಶಕ್ಕೆ ಸಮಯ ಬೇಕಾಗಬಹುದು.

ಎಲೆಕೋಸು: ನಿಮ್ಮ ಆಹಾರ ಕ್ರಮದಲ್ಲಿ ಎಲೆಕೋಸು ಬಳಸಿ. ಎಲೆಕೋಸು ಜ್ಯೂಸ್ ಕುಡಿಯಿರಿ ಅಥವಾ ಚರ್ಮಕ್ಕೆ ಹಚ್ಚಿ. ಇದು ಪರಿಸ್ಥೀತಿ ಸುಧಾರಿಸುವುದು.

ವಾಲ್ ನಟ್ಸ್ ಮತ್ತು ಅಂಜೂರ: ಬಿಸಿಲಿನಿಂದ ಆಗಿರುವ ಹಾನಿ ವಿರುದ್ಧ ಹೋರಾಡಲು ಇದರಲ್ಲಿರುವಂತಹ ಆ್ಯಂಟಿಆಕ್ಸಿಡೆಂಟ್ ನೆರವಾಗುವುದು.

ಶುಂಠಿ ಜ್ಯೂಸ್: ಶುಂಠಿ ಜ್ಯೂಸ್ ಕುಡಿಯಿರಿ ಮತ್ತು ಲಿಂಬೆಜತೆ ಸೇರಿಸಿಕೊಂಡು ಇದನ್ನು ಚರ್ಮಕ್ಕೆ ಹಚ್ಚಿರಿ.

ಈ ಕಲೆಗಳ ಬಗ್ಗೆ ನೀವು ಚಿಂತಿಸಬೇಕಾದ ಅಗತ್ಯವೇ ಇಲ್ಲ. ಯಾಕೆಂದರೆ ಇಡಿಯೋಪಥಿಕ್ ಗುಟ್ಟೇಟ್ ಹೈಪೋಮೆಲೆನೋಸಿಸ್ ಯಾವುದೇ ಹಾನಿ ಉಂಟು ಮಾಡಲ್ಲ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲ್ಲ. ವಯಸ್ಸಿನಿಂದಾಗಿ ಬರುವುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What are the reasons for white patches on skin in older women

White spots on the skin can occur for a variety of reasons. Most of them occur due to loss of pigmentation as you age. A lot of these are not harmful and can be treated at home. But if you do have a mole that changes shape, colour, texture or size every day or every once in a while, you should definitely consider getting it checked.
X
Desktop Bottom Promotion