Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪಿರಿಯೆಡ್ಸ್ ಸಂದರ್ಭ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಸರಿಯೋ ತಪ್ಪೋ?
ಮುಟ್ಟಾದ ಸಂದರ್ಭ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ವಿಷ್ಯದ ಬಗ್ಗೆ ಯಾರೂ ಮಾತಾಡಲು ಬಯಸೋದಿಲ್ಲ. ಆ ಬಗ್ಗೆ ಮಾತಾಡಿದರೂ ತಪ್ಪು ಎಂದು ತಿಳಿಯಲಾಗಿದೆ. ಮುಟ್ಟಿನ ಸಂದರ್ಭದಲ್ಲಿ ನೀವು ಅಸುರಕ್ಷಿತ ಲೈಂಗಿಕತೆಯನ್ನು ಹೊಂದಿದ್ದರೆ ಲೈಂಗಿಕ ರೋಗಗಳು ಉಂಟಾಗುವ ಸಾಧ್ಯತೆಗಳಿವೆ.
ಪಿರಿಯೆಡ್ಸ್ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸೋದರಿಂದ ನಿಮಗೆ ಕಂಫರ್ಟೇಬಲ್ ಅನಿಸದೇ ಇರಬಹುದು. ಜೊತೆಗೆ ನಿಮ್ಮ ಬೆಡ್‌ಶೀಟ್‌ನಲ್ಲಿ ರಕ್ತದ ಕಲೆಗಳಾಗುತ್ತವೆ. ಪಿರಿಯೆಡ್ಸ್ ಸಂದರ್ಭ ಲೈಂಗಿಕ ಕ್ರಿಯೆ ನಡೆಸಬಹುದೋ ಇಲ್ಲವೋ, ಗರ್ಭ ಧರಿಸ್ತಾರೋ ಇಲ್ಲವೋ ಎನ್ನುವ ಬಗ್ಗೆ ಬಹಳಷ್ಟು ಜನರಲ್ಲಿ ಪ್ರಶ್ನೆಗಳಿವೆ, ಈ ಲೇಖನದಲ್ಲಿ ನಾವು ಸಾಮಾನ್ಯ ಜನರಿಗೆ ಪಿರಿಯೆಡ್ಸ್ ಹಾಗೂ ಸೆಕ್ಸ್ ಬಗೆಗಿರುವ ಕೆಲವು ಸಂದೇಹಗಳನ್ನು ನಿವಾರಿಸಲು ಪ್ರಯತ್ನಿಸಿದ್ದೇವೆ.

ಸಂಭೋಗೋದ್ರೇಕದ ಪರಾಕಷ್ಠೆಯು ಮುಟ್ಟಿನ ವೇಳೆಯ ಸೆಳೆತವನ್ನು ನಿವಾರಿಸುತ್ತದೆ.
ಸಂಭೋಗೋದ್ರೇಕದ ಪರಾಕಷ್ಠೆಯ ಸಂದರ್ಭ ಎಂಡಾರ್ಫಿನ್‌ಗಳು ಬಿಡುಗಡೆಯಾಗುತ್ತದೆ. ಇದು ಪಿಎಮ್‌ಎಸ್‌ನ ರೋಗಲಕ್ಷಣಗಳನ್ನು ಹಾಗೂ ನಿಯಮಿತ ಮುಟ್ಟಿನ ವೇಳೆ ಉಂಟಾಗುವ ಸೆಳೆತವನ್ನು ನಿವಾರಿಸುತ್ತದೆ. ಇವು ಪರಾಕಷ್ಠೆಯ ಶಕ್ತಿ ಹಾಗೂ ತೀವೃತೆಯನ್ನು ಅವಲಂಭಿಸಿರುತ್ತದೆ. ಸಂಭೋಗದ ವೇಳೆಯ ನೋವನ್ನು ನಿವಾರಿಸಲು ಇವು ಸಹಾಯ ಮಾಡುತ್ತದೆ.
ಮುಟ್ಟಿನ ರಕ್ತವು ಪುರುಷರ ಶಿಶ್ನಕ್ಕೆ ಹಾನಿಕಾರವಲ್ಲ
ಬಹಳಷ್ಟು ಮಂದಿಗೆ ಮುಟ್ಟಿನ ರಕ್ತದ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅದು ಕೆಟ್ಟ ರಕ್ತ. ಅದರಿಂದ ಸೋಂಕು ಹರಡುತ್ತದೆ ಎನ್ನುವ ಭಾವನೆ ಅವರಲ್ಲಿದೆ. ಮುಟ್ಟಿನ ರಕ್ತವು ದೇಹಕ್ಕೆ ಅಗತ್ಯವಿಲ್ಲದ ಆರೋಗ್ಯಕರ ರಕ್ತ ಹಾಗೂ ಅಂಗಾಂಶಗಳ ಸಂಯೋಜನೆಯಾಗಿದೆ. ಇದರಿಂದ ಯಾವುದೇ ರೀತಿಯ ಹಾನಿಯಿಲ್ಲ.
ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು
ಸಂಭೋಗೋದ್ರೇಕದಿಂದ ಮುಟ್ಟಿನ ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು. ಎಂಡೊಮೆಟ್ರಿಯಲ್ ಭಾಗದಲ್ಲಿನ ತ್ಯಾಜ್ಯವನ್ನು ದೇಹದಿಂದ ಹೊರಹಾಕುವ ದರವನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ಪಿರಿಯೆಡ್ಸ್ ಅವಧಿಯ ಕಡಿಮೆಯಾಗುವ ಸಾಧ್ಯತೆ ಇದೆ.
ನೈಸರ್ಗಿಕ ಲ್ಯುಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ
ನೀವು ಪಿರಿಯೆಡ್ಸ್ ಸಂದರ್ಭ ಸೆಕ್ಸ್ ಮಾಡುವುದಾದರೆ ನಿಮಗೆ ಯಾವುದೇ ರೀತಿಯ ಲ್ಯುಬ್ರಿಕೆಂಟ್‌ನ ಅಗತ್ಯವಿಲ್ಲ. ಯಾಕೆಂದರೆ ಮಹಿಳೆಯರ ಮುಟ್ಟಿನ ರಕ್ತವೇ ನೈಸರ್ಗಿಕ ಲ್ಯುಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ,
ಲೈಂಗಿಕ ರೋಗಗಳು ಹರಡುವ ಸಾಧ್ಯತೆ
ಪಿರಿಯೆಡ್ಸ್ ಸಂದರ್ಭದಲ್ಲಿ ಸೆಕ್ಸ್ ಮಾಡೋದರಿಂದ ಲೈಂಗಿಕವಾಗಿ ಹರಡುವ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಈ ಸಂದರ್ಭದಲ್ಲಿ ಗರ್ಭ ಕೋಶ ಹೆಚ್ಚು ತೆರೆದಿರುವುದರಿಂದ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚು ಇರುತ್ತದೆ.
ಗರ್ಭಧರಿಸುವ ಸಾಧ್ಯತೆ ಇದೆ
ಮುಟ್ಟಿನ ಸಂದರ್ಭದಲ್ಲಿ ಸೆಕ್ಸ್ ಮಾಡಿದ್ರೆ ಗರ್ಭಿಣಿ ಆಗುತ್ತಾರಾ ಎನ್ನುವ ಪ್ರಶ್ನೆ ಹಲವರಲ್ಲಿದೆ. ಹೌದು. ಈ ಸಂದರ್ಭ ಸೆಕ್ಸ್ ಮಾಡಿದ್ರೆ ಗರ್ಭಧರಿಸೋ ಸಾಧ್ಯತೆ ಇದೆ. ಯಾಕೆಂದರೆ ಈ ಸಂದರ್ಭದಲ್ಲೂ ಅಂಡೋತ್ಪತ್ತಿಯಾಗುತ್ತದೆ. ಹಾಗೂ ವೀರ್ಯಾಣು ಸುಮಾರು 7 ದಿನಗಳವರೆಗೆ ಜೀವಂತವಾಗಿರುತ್ತದೆ.
ಕೆಲವರಿಗೆ ನೋವುಂಟಾಗುತ್ತದೆ
ಈ ಸಂದರ್ಭದಲ್ಲಿ ಸೆಕ್ಸ್ ಮಾಡೋದರಿಂದ ಕೆಲವರಿಗೆ ನೋವು ಉಂಟಾಗುತ್ತದೆ. ಯಾಕೆಂದರೆ ಇದು ಗರ್ಭಕೋಶಕ್ಕೆ ಒತ್ತಡವನ್ನು ಉಂಟುಮಾಡುತ್ತದೆ. ಜೊತೆಗೆ ಕಂಫರ್ಟೇಬಲ್ ಅನಿಸೋದಿಲ್ಲ.
ಪಿರಿಯೆಡ್ಸ್ ಸಂದರ್ಭ ಸೆಕ್ಸ್ ಮಾಡ್ತಾರೆ
ನಿಮಗೆ ಪಿರಿಯೆಡ್ಸ್ ವೇಳೆ ಸೆಕ್ಸ್ ಮಾಡಬೇಕೆಂದಿದ್ದರೆ ನೀವೇನೂ ಯಾರೂ ಮಾಡದ್ದನ್ನು ಮಾಡುತ್ತಿಲ್ಲ. ಯಾಕೆಂದರೆ ಸುಮಾರು 30% ಜನರು ಪಿರಿಯೆಡ್ಸ್ ಸಂದರ್ಭ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


