ಪ್ರತಿದಿನ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯಿರಿ, ಆರೋಗ್ಯವಾಗಿರಿ

Posted By: Arshad Hussain
Subscribe to Boldsky

ಆರೋಗ್ಯಕರ ಆಹಾರಕ್ರಮದಲ್ಲಿ ಹಣ್ಣಿನ ರಸದ ಪಾತ್ರ ಮಹತ್ತರದ್ದಾಗಿದೆ. ಹಸಿರು ಹಣ್ಣುಗಳ ರಸ ಹೆಚ್ಚು ಆರೋಗ್ಯಕರ ಎಂದು ಹೆಚ್ಚಿನವರ ಅಭಿಪ್ರಾಯವಾಗಿದ್ದರೂ ಇದೊಂದು ಹಣ್ಣಿನ ರಸ ಉಳಿದೆಲ್ಲಾ ಹಣ್ಣುಗಳ ರಸಕ್ಕಿಂತ ಹೆಚ್ಚು ಆರೋಗ್ಯಕರ ಎಂದು ಪರಿಗಣಿಸಲ್ಪಟ್ಟಿದೆ. ಹೌದು, ಇದೇ ನಸುಗೆಂಪು ಬಣ್ಣದ ದಾಳಿಂಬೆ ಹಣ್ಣಿನ ರಸ. ದಾಳಿಂಬೆ (Punica granatum) ಒಂದು ಸುಲಭವಾಗಿ, ಬಹುತೇಕ ವರ್ಷವಿಡೀ ಲಭ್ಯವಿರುವ ಹಣ್ಣಾಗಿದ್ದು ಹೆಚ್ಚು ಕಾಲ ಕೆಡದಂತೆ ರಕ್ಷಿಸಿಡಬಹುದಾದ ಆರೋಗ್ಯಕರ ಫಲವಾಗಿದೆ. ಇದರ ಸೇವನೆಯಿಂದ ಹಲವಾರು ಕಾಯಿಲೆಗಳು ಆವರಿಸದಂತೆ ತಡೆಯಬಹುದು.

'ದಾಳಿಂಬೆ ಸಿಪ್ಪೆಯ' ಗುಣ ಗೊತ್ತಾದರೆ, ಬಿಸಾಡಲು ಮನಸ್ಸು ಬರಲ್ಲ!

ಇತ್ತೀಚೆಗೆ ನಡೆಸಲಾದ ಕೆಲವು ಸಂಶೋಧನೆಗಳಿಂದ ಈ ರಸದಲ್ಲಿರುವ ಹಲವಾರು ಅವಶ್ಯಕ ಪೋಷಕಾಂಶಗಳು ಹಸಿರು ಟೀ ಗಿಂತಲೂ ಆರೋಗ್ಯಕರ ಪೇಯವಾಗಿರುವುದನ್ನು ಕಂಡುಕೊಳ್ಳಲಾಗಿದೆ. ಅದರಲ್ಲೂ ದಾಳಿಂಬೆ ರಸದಿಂದ ತಯಾರಿಸಲಾದ ಕೆಂಪು ವೈನ್ ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಹಲವಾರು ಮಾರಕ ರೋಗಗಳಿಂದ ರಕ್ಷಿಸುತ್ತದೆ. ನಿತ್ಯವೂ ಈಗತಾನೇ ಹಿಂಡಿ ತೆಗೆದ ತಾಜಾ ದಾಳಿಂಬೆಯ ರಸವನ್ನು ಸೇವಿಸುವ ಮೂಲಕ ಹಲವು ವಿಧದಲ್ಲಿ ಆರೋಗ್ಯವನ್ನು ವೃದ್ಧಿಸಬಹುದು. ಬನ್ನಿ, ದಾಳಿಂಬೆ ರಸದ ಸೇವನೆಯಿಂದ ಯಾವ ಬಗೆಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....  

ಕ್ಯಾನ್ಸರ್ ನಿರೋಧಕ ಗುಣ

ಕ್ಯಾನ್ಸರ್ ನಿರೋಧಕ ಗುಣ

ದಾಳಿಂಬೆ ರಸದ ಸೇವನೆಯಿಂದ ಹಲವಾರು ಬಗೆಯ ಕ್ಯಾನ್ಸರ್ ಹಾಗೂ ಗಡ್ಡೆಗಳ ವಿರುದ್ದ ರಕ್ಷಣೆ ದೊರಕುತ್ತದೆ. ಪ್ರಮುಖವಾಗಿ ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ನಿಂದ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಒಂದು ವೇಳೆ ದೇಹದಲ್ಲಿ ಈಗಾಗಲೇ ಕ್ಯಾನ್ಸರ್ ಪೀಡಿದ ಜೋವಕೋಶಗಳು ಬೆಳವಣಿಗೆಯ ಹಂತದಲ್ಲಿದ್ದರೆ ಇವು ಇನ್ನಷ್ಟು ಬೆಳೆಯದಂತೆ ತಡೆಯುತ್ತದೆ ಹಾಗೂ ಸಂಪೂರ್ಣವಾಗಿ ನಿವಾರಿಸಲೂ ನೆರವಾಗುತ್ತದೆ. ಹಲವಾರು ಸಂಶೋಧನೆಗಳ ಮೂಲಕ ಈ ಹಣ್ಣಿನ ರಸದ ಸೇವನೆಯಿಂದ ಕ್ಯಾನ್ಸರ್ ತಡೆಗಟ್ಟುವುದನ್ನೂ, ಕ್ಯಾನ್ಸರ್ ಆವರಿಸಿದ್ದರೆ ಇದನ್ನು ಗುಣಪಡಿಸುವುದನ್ನೂ ಕಂಡುಕೊಳ್ಳಲಾಗಿದೆ.

ಆರೋಗ್ಯಕರ ಹೃದಯಕ್ಕಾಗಿ

ಆರೋಗ್ಯಕರ ಹೃದಯಕ್ಕಾಗಿ

ದಾಳಿಂಬೆ ರಸದ ಸೇವನೆಯಿಂದ ಹೃದಯ ಮತ್ತು ರಕ್ತನಾಳಗಳ ಆರೋಗ್ಯ ಉತ್ತಮಗೊಳ್ಳುತ್ತದೆ. ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನೂ ಕಡಿಮೆಗೊಳಿಸುತ್ತದೆ. ಅಲ್ಲದೇ ರಕ್ತನಾಳಗಳ ಒಳಗಿನ ಜಿಡ್ಡನ್ನು ನಿವಾರಿಸುವ ಮೂಲಕ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಹಾಗೂ ರಕ್ತನಾಳಗಳ ಒಳಗೆ ಎದುರಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸುತ್ತದೆ.

ಮಧುಮೇಹ ನಿರೋಧಕ ಗುಣ

ಮಧುಮೇಹ ನಿರೋಧಕ ಗುಣ

ಹೃದಯ ತೊಂದರೆಗೂ ಮಧುಮೇಹಕ್ಕೂ ನೇರವಾದ ಸಂಬಂಧವಿದೆ. ನಿತ್ಯವೂ ಒಂದು ಲೋಟ ದಾಳಿಂಬೆ ರಸ ಸೇವಿಸುವ ಮೂಲಕ ಹೃದಯದ ಕ್ಷಮತೆ ಹೆಚ್ಚುತ್ತಿದ್ದ ಹಾಗೆಯೇ ಮಧುಮೇಹವನ್ನೂ ನಿಯಂತ್ರಿಸಲು ನೆರವಾಗುತ್ತದೆ. ದಾಳಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೃದಯವನ್ನು ತೊಂದರೆಗಳಿಂದ ಕಾಪಾಡುವ ಜೊತೆಗೇ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಸಕ್ಕರೆ ಅತಿ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಈ ರಸ ಹೇಳಿ ಮಾಡಿಸಿದಂತಿದ್ದು ದೇಹದ ಆರ್ದ್ರತೆಯನ್ನು ಉಳಿಸಿಕೊಳ್ಳುವ ಮೂಲಕ ದೇಹ ಒಣಗುವುದನ್ನು ತಡೆಯುತ್ತದೆ.

ರಕ್ತಹೀನತೆಯನ್ನು ಗುಣಪಡಿಸುತ್ತದೆ

ರಕ್ತಹೀನತೆಯನ್ನು ಗುಣಪಡಿಸುತ್ತದೆ

ಈ ಹಣ್ಣಿನಲ್ಲಿ ಫೋಲೇಟ್ ಅಂಶ ಹೆಚ್ಚಾಗಿದ್ದು ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹೆಚ್ಚಿನ ಪ್ರಯೋಜನ ಒದಗಿಸುತ್ತದೆ. ಈ ಹಣ್ಣಿನ ರಸದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ರಕ್ತಹೀನತೆಯನ್ನು ಸರಿಪಡಿಸಲು ನೆರವಾಗುತ್ತದೆ. ಈ ರಸದಲ್ಲಿ ವಿಟಮಿನ್ ಕೆ ಹೆಚ್ಚಿನ ಪ್ರಮಾಣದಲ್ಲಿದ್ದು ರಕ್ತ ಹೆಪ್ಪುಗಟ್ಟಿಸುವ ಗುಣವನ್ನು ಉತ್ತಮಗೊಳಿಸುತ್ತದೆ ಹಾಗೂ ಫೋಲೇಟ್ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಆರೋಗ್ಯಕರ ತ್ವಚೆಗಾಗಿ

ಆರೋಗ್ಯಕರ ತ್ವಚೆಗಾಗಿ

ದಾಳಿಂಬೆ ರಸದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ಇದು ತ್ವಚೆಯ ಆರೋಗ್ಯ ಹೆಚ್ಚಿಸುವ ಮೂಲಕ ನವತಾರುಣ್ಯವನ್ನು ನೀಡುತ್ತದೆ. ಈ ರಸದಲ್ಲಿ ವೃದ್ದಾಪ್ಯವನ್ನು ತಡೆಯುವ ಗುಣವಿದೆ ಹಾಗೂ ತ್ವಚೆ ಸಡಿಲಗೊಂಡು ನೆರಿಗೆಗಳಾಗುವುದನ್ನು ತಡವಾಗಿಸುತ್ತದೆ. ಸವೆದ ಚರ್ಮ ಮತ್ತೆ ಬೆಳೆಯುವಂತೆ ಹಾಗೂ ಸೆಳೆತವನ್ನು ಹೆಚ್ಚಿಸುವ ಮೂಲಕ ತ್ವಚೆಯ ಕಾಂತಿ ಹೆಚ್ಚಿಸುತ್ತದೆ ಹಾಗೂ ತ್ವಚೆಗೆ ಸಂಬಂಧಿಸಿದ ಹಲವಾರು ಸೋಂಕು ಮತ್ತು ಕಾಯಿಲೆಗಳಿಂದ ರಕ್ಷಿಸುತ್ತದೆ. ಮುಖ್ಯವಾಗಿ ಯುವಜನತೆಯನ್ನು ಕಾಡುವ ಮೊಡವೆಗಳಾಗದಂತೆ ಕಾಪಾಡುತ್ತದೆ ಹಾಗೂ ಸಾಕಷ್ಟು ಆರ್ದ್ರತೆ ಒದಗಿಸುವ ಮೂಲಕ ತ್ವಚೆ ಒಣಗುವುದರಿಂದ ರಕ್ಷಿಸುತ್ತದೆ.

ಆರೋಗ್ಯವಂತ ಕೂದಲು

ಆರೋಗ್ಯವಂತ ಕೂದಲು

ದಾಳಿಂಬೆ ರಸದ ಸೇವನೆಯಿಂದ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುತ್ತದೆ. ಅಲ್ಲದೇ ಕೂದಲು ಉದುರುವುದನ್ನು ತಡೆದು ಕೂದಲ ಬುಡವನ್ನು ದೃಢಗೊಳಿಸಿ ಸಮೃದ್ದವಾದ ಕೂದಲು ಬೆಳೆಯಲು ನೆರವಾಗುತ್ತದೆ. ತಲೆಯ ಚರ್ಮದಲ್ಲಿ ರಕ್ತದ ಪರಿಚಲನೆ ಹೆಚ್ಚಿಸಿ ಕೂದಲ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ.

ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ

ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ

ದಾಳಿಂಬೆ ರಸದಲ್ಲಿರುವ ಕೆಲವು ಪೋಷಕಾಂಶಗಳು ಹಲ್ಲುಗಳಲ್ಲಿ ಪಿಟ್ಟು ಅಥವಾ ಬಿಳಿಯ ಪದರ ಉತ್ಪಾದನೆಯಾಗದಂತೆ ತಡೆಯುತ್ತವೆ. ಈ ಮೂಲಕ ಪ್ರಬಲ ರಾಸಾಯನಿಕಗಳಿಂದ ತಯಾರಿಸಿದ ಹಲ್ಲುಗಳನ್ನು ಸ್ವಚ್ಛಗೊಳಿಸುವ ದ್ರವಗಳಿಗಿಂತಲೂ ಉತ್ತಮವಾದ ಪರಿಣಾಮವನ್ನು ನೀಡುತ್ತದೆ. ಅಲ್ಲದೇ ಹಲ್ಲುಗಳನ್ನು ಗಟ್ಟಿಗೊಳಿಸುವ ಮೂಲಕ ಹಲ್ಲುಗಳ ಸವೆತದಿಂದಲೂ ತಡೆಯುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ನಿತ್ಯವೂ ದಾಳಿಂಬೆ ರಸದ ಸೇವನೆಯಿಂದ ರೋಗ ನಿರೋಧಕ ಶಕ್ತಿಯ ಮಟ್ಟ ಹೆಚ್ಚುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಸಂಯುಕ್ತಗಳು ರೋಗ ನಿರೋಧಕ ಶಕ್ತಿಯ ಕುಂದುವ ಮೂಲಕ ಎದುರಾಗುವ ಹಲವಾರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಈ ರಸದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ದಾಳಿಂಬೆ ರಸದಲ್ಲಿ ಕರಗುವ ನಾರು ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ದೇಹಕ್ಕೆ ಅಗತ್ಯವಿರುವ ಕರಗುವ ನಾರಿನ ಪ್ರಮಾಣವನ್ನು ಪೂರೈಸಲು ದಾಳಿಂಬೆ ರಸದ ಸೇವನೆಗಿಂತ ಸುಲಭವಾದ ಇನ್ನೊಂದು ಕ್ರಮ ಇರಲಿಕ್ಕಿಲ್ಲ. ಹಾಗಾಗಿ, ದಾಳಿಂಬೆ ರಸ ಕೇವಲ ರುಚಿಕರ ಪೇಯ ಮಾತ್ರವಲ್ಲ, ಒಂದು ಆರೋಗ್ಯಕರ ಆಹಾರವೂ ಹೌದು.

English summary

did-you-know-these-amazing-benefits-of-pomegranate-juice

One of the healthiest fruit juices suggested by doctors and nutritionists is pomegranate juice. This fruit juice has innumerable health benefits, as it is loaded with a lot of essential nutrients that can repair and boost the body. Many studies reveal that the medicinal properties of pomegranate juice are beneficial for overall health, including the skin and hair.