ಪೊಟಾಶಿಯಂನಿಂದ ಆರೋಗ್ಯಕ್ಕೆ ಆಗುವ ಹತ್ತು ಲಾಭಗಳು

Posted By: Hemanth Amin
Subscribe to Boldsky

ನಾವು ಸೇವಿಸುವಂತಹ ಆಹಾರದಲ್ಲಿ ಒಂದಲ್ಲಾ ಒಂದು ರೀತಿಯ ವಿಟಮಿನ್‌ಗಳು ಹಾಗೂ ಖನಿಜಾಂಶಗಳು ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಒಂದೇ ರೀತಿಯ ಆಹಾರ ಸೇವನೆ ಮಾಡುವವರಲ್ಲಿ ಯಾವುದಾದರೂ ವಿಟಮಿನ್ ಅಥವಾ ಖನಿಜಾಂಶದ ಕೊರತೆ ಕಾಣಿಸಿಕೊಳ್ಳುವುದು ಖಚಿತ. ನಮ್ಮ ದೇಹದಲ್ಲಿ ದ್ರವ ಹಾಗೂ ವಿದ್ಯುದ್ವಿಚ್ಛೇದದ ಸಮತೋಲವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಪೊಟಾಶಿಯಂ. ದೇಹದ ಅಂಗಾಂಗಳಾದ ಕಿಡ್ನಿ, ಮೆದುಳು, ಹೃದಯ ಮತ್ತು ಸ್ನಾಯುಗಳ ಕೋಶಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಮುಖ್ಯವಾಗಿ ಬೇಕಾಗಿರುವ ಖನಿಜಾಂಶಗಳಲ್ಲಿ ಪೊಟಾಶಿಯಂ ಮೂರನೇ ಸ್ಥಾನದಲ್ಲಿದೆ.

ಪೊಟಾಶಿಯಂ ದೇಹದಲ್ಲಿ ನೀರಿನಾಂಶ ಕಾಪಾಡಲು ನೆರವಾಗುವುದು ಮತ್ತು ಸೋಡಿಯಂ ಜತೆಗೆ ಸೇರಿಕೊಂಡು ಕೋಶಗಳ ಕಾರ್ಯನಿರ್ವಹಣೆಗೆ ನೆರವಾಗುವುದು. ಹಲವಾರು ರೀತಿಯ ಹಣ್ಣುಗಳು ಹಾಗೂ ತರಕಾರಿಗಳಲ್ಲಿ ಪೊಟಾಶಿಯಂ ಲಭ್ಯವಿದೆ. ಸಾಲ್ಮನ್, ಹಾಲು, ಕೋಳಿ, ಬಾಳೆಹಣ್ಣು. ಬಾದಾಮಿ, ಆಲೂಗಡ್ಡೆ, ಅವಕಾಡೋ ಮತ್ತು ಎಳೆ ನೀರಿನಲ್ಲಿ ಪೊಟಾಶಿಯಂ ಇದೆ. ರಕ್ತದೊತ್ತಡ, ಹೃದಯ ಮತ್ತು ಕಿಡ್ನಿಯ ಸಮಸ್ಯೆಯನ್ನು ಪೊಟಾಶಿಯಂ ನಿವಾರಣೆ ಮಾಡುವುದು. ಇದು ಸ್ನಾಯುಗಳನ್ನು ಬಲಗೊಳಿಸುವುದು ಮತ್ತು ನರ ವ್ಯವಸ್ಥೆ ಹಾಗೂ ವಿದ್ಯುದ್ವಿಚ್ಛೇದ ಸುಧಾರಿಸುವುದು.

ನೀವು ಪೊಟಾಶಿಯಂ ಇಲ್ಲದೆ ಇರುವ ಆಹಾರ ಸೇವನೆ ಮಾಡಿದರೆ ಅದರಿಂದ ನಿಮ್ಮಲ್ಲಿ ಪೊಟಾಶಿಯಂ ಕೊರತೆ ಕಂಡುಬರುವುದು. ಪೊಟಾಶಿಯಂ ಕೊರತೆಯಿಂದಾಗಿ ಹೈಪೊಕಲೇಮಿಯಾ ಉಂಟಾಗಬಹುದು. ಇದರಿಂದ ತಲೆನೋವು, ನಿರ್ಜಲೀಕರಣ, ಹೃದಯ ಬಡಿತ ಹೆಚ್ಚಾಗುವುದು ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಪೊಟಾಶಿಯಂ ನಿಮ್ಮ ದೇಹಕ್ಕೆ ಹಲವಾರು ಲಾಭಗಳನ್ನು ಉಂಟು ಮಾಡುವುದು. ಈ ಲೇಖನದಲ್ಲಿ ಪೊಟಾಶಿಯಂನಿಂದ ಆಗುವಂತಹ ಆರೋಗ್ಯ ಲಾಭದ ಬಗ್ಗೆ ತಿಳಿಯಿರಿ..... 

ಹೃದಯದ ಆರೋಗ್ಯವೃದ್ಧಿ

ಹೃದಯದ ಆರೋಗ್ಯವೃದ್ಧಿ

ಪೊಟಾಶಿಯಂ ನಿಮ್ಮ ಹೃದಯಬಡಿತದ ಮೇಲೆ ನೇರ ಪಾತ್ರ ವಹಿಸಿದೆ. ಇದು ನಿಮ್ಮ ಹೃದಯದ ಆರೋಗ್ಯ ಮತ್ತು ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ಪೊಟಾಶಿಯಂ ಕಡಿಮೆ ಇದ್ದರೆ ಅದರಿಂದ ಹೃದಯಬಡಿತ ಕಡಿಮೆಯಾಗಬಹುದು. ಇದರಿಂದಾಗಿ ಹೃದಯಾಘಾತ ಅಥವಾ ಪಾರ್ಶ್ವವಾಯು ಸಂಭವಿಸಬಹುದು.

ಸ್ನಾಯು ಸೆಳೆತ ಕುಗ್ಗಿಸುವುದು

ಸ್ನಾಯು ಸೆಳೆತ ಕುಗ್ಗಿಸುವುದು

ಪೊಟಾಶಿಯಂ ಸೇವನೆಯಿಂದಾಗಿ ಸ್ನಾಯುಗಳಲ್ಲಿ ಕಾಣಿಸುವ ಸೆಳೆತ ಕಡಿಮೆಯಾಗುವುದು ಮತ್ತು ಸ್ನಾಯುಗಳು ಬಲಗೊಳ್ಳುವುದು. ಪೊಟಾಶಿಯಂ ಕಡಿಮೆ ಇದ್ದರೆ ಅದರಿಂದ ಸ್ನಾಯುಗಳು ದುರ್ಬಲವಾಗುವುದು. ಇದರಿಂದ ಸ್ನಾಯು ಸೆಳೆತ ಮತ್ತು ನೋವು ಕಾಣಿಸಬಹುದು. ದಿನಕ್ಕೊಂದು ಬಾಳೆಹಣ್ಣು ಸೇವಿಸಿದರೆ ಸ್ನಾಯು ಸೆಳೆತ ಕಡಿಮೆ ಮಾಡಬಹುದು. ಬಾಳೆಹಣ್ಣಿನಲ್ಲಿ ಅತ್ಯಧಿಕ ಪೊಟಾಶಿಯಂ ಇದೆ.

ಅಧಿಕ ರಕ್ತದೊತ್ತಡ ನಿವಾರಣೆ

ಅಧಿಕ ರಕ್ತದೊತ್ತಡ ನಿವಾರಣೆ

ಪೊಟಾಶಿಯಂ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಪೊಟಾಶಿಯಂ ದೇಹದಲ್ಲಿ ಸೋಡಿಯಂನ ಕಾರ್ಯ ವಿಮುಖಗೊಳಿಸಿ ರಕ್ತದೊತ್ತಡ ಕಡಿಮೆ ಮಾಡುವುದು. ಇದರಿಂದ ರಕ್ತದೊತ್ತಡ ಮತ್ತು ಹೃದಯದ ಕಾಯಿಲೆ ಕಡಿಮೆಯಾಗುವುದು.

ಅಸ್ಥಿರಂಧ್ರತೆ ತಡೆಯುವುದು

ಅಸ್ಥಿರಂಧ್ರತೆ ತಡೆಯುವುದು

ಪೊಟಾಶಿಯಂ ಅಧಿಕವಾಗಿರುವಂತಹ ತರಕಾರಿಗಳು ಹಾಗೂ ಹಣ್ಣುಗಳಲ್ಲಿ ಸಿಟ್ರೇಟ್ ಮತ್ತು ಬೈಕಾರ್ಬನೇಟ್ ಎನ್ನುವ ಎರಡು ಪೊಟಾಶಿಯಂ ಉಪ್ಪುಗಳಿವೆ ಎಂದು ನಿಮಗೆ ತಿಳಿದಿದೆಯಾ? ಇದು ಮೂಳೆಗಳ ಆರೋಗ್ಯ ಕಾಪಾಡಿ ಅಸ್ಥಿರಂಧ್ರತೆ ತಡೆಯುವುದು. ಪೊಟಾಶಿಯಂ ದೇಹದಲ್ಲಿರುವ ವಿವಿಧ ರೀತಿಯ ಆಮ್ಲೀಯಗಳನ್ನು ತಟಸ್ಥಗೊಳಿಸುವುದು. ಇದರಿಂದ ಕ್ಯಾಲ್ಸಿಯಂ ಉಳಿದು ಮೂಳೆಗಳು ಬಲಗೊಳ್ಳುವುದು.

 ತಟಸ್ಥ ಕಾರ್ಯವನ್ನು ಉತ್ತೇಜಿಸುವುದು

ತಟಸ್ಥ ಕಾರ್ಯವನ್ನು ಉತ್ತೇಜಿಸುವುದು

ನಿಮ್ಮ ದೇಹದಲ್ಲಿ ಪೊಟಾಶಿಯಂ ಸರಿಯಾದ ಪ್ರಮಾಣದಲ್ಲಿ ಇದ್ದರೆ ಆಗ ಅದು ಮೆದುಳಿಗೆ ಹೆಚ್ಚಿನ ಆಮ್ಲಜನಕ ಸರಬರಾಜು ಮಾಡುವುದು. ಇದರಿಂದ ತಟಸ್ಥ ಕ್ರಿಯೆಯು ಉತ್ತೇಜಿಸಲ್ಪಡುವುದು ಮತ್ತು ಅರಿವಿನ ಕಾರ್ಯಗಳು ಹೆಚ್ಚಾಗುವುದು. ಇದರಿಂದ ಮೆದುಳು ಚುರುಕಾಗುವುದು ಮತ್ತು ಇದರಿಂದಾಗಿ ಬಾಳೆಹಣ್ಣನ್ನು ಮೆದುಳಿನ ಆಹಾರ ಎನ್ನಲಾಗುತ್ತದೆ.

ಚಯಾಪಚಯ ಕ್ರಿಯೆ ಹೆಚ್ಚಿಸುವುದು

ಚಯಾಪಚಯ ಕ್ರಿಯೆ ಹೆಚ್ಚಿಸುವುದು

ಕೊಬ್ಬು ಮತ್ತು ಕಾರ್ಬ್ರೋಹೈಡ್ರೇಟ್ಸ್ ನಂತಹ ಪ್ರಮುಖ ಪೋಷಕಾಂಶಗಳ ಚಯಾಪಚಯ ಕ್ರಿಯೆಗೆ ಪೊಟಾಶಿಯಂ ನೆರವಾಗುವುದು. ನೀವು ತಿನ್ನುವಂತಹ ಆಹಾರದಲ್ಲಿರುವ ಪೋಷಕಾಂಶಗಳ ಶಕ್ತಿ ದೇಹಕ್ಕೆ ಸಿಗುವಂತೆ ಮಾಡುವುದು. ಕೋಶಗಳ ಬೆಳವಣಿಗೆ, ಅಂಗಾಂಶ ಪುನರುತ್ಪಾದನೆ ಮತ್ತು ಚಯಾಪಚಯ ಸಮತೋಲನ ಮಾಡಲು ಪೊಟಾಶಿಯಂ ನೆರವಾಗುವುದು.

ಆತಂಕ ಮತ್ತು ಒತ್ತಡ ಕಡಿಮೆಗೊಳಿಸುವುದು

ಆತಂಕ ಮತ್ತು ಒತ್ತಡ ಕಡಿಮೆಗೊಳಿಸುವುದು

ನೀವು ಒತ್ತಡ ಹಾಗೂ ಆತಂಕದಿಂದ ಬಳಲುತ್ತಾ ಇದ್ದರೆ ಪೊಟಾಶಿಯಂ ಅಧಿಕವಾಗಿರುವಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಯಾಕೆಂದರೆ ಪೊಟಾಶಿಯಂ ಒತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಮಾನಸಿಕ ಪ್ರದರ್ಶನ ಹೆಚ್ಚಿಸುವುದು. ದೇಹದಲ್ಲಿರುವ ಹಲವಾರು ಹಾರ್ಮೋನುಗಳನ್ನು ಇದು ನಿಯಂತ್ರಣದಲ್ಲಿಡುವುದು.

ನೀರಿನಾಂಶ ಕಾಪಾಡುವುದು

ನೀರಿನಾಂಶ ಕಾಪಾಡುವುದು

ದೇಹದಲ್ಲಿ ನೀರಿನಾಂಶ ಉಳಿದುಕೊಳ್ಳಲು ಪೊಟಾಶಿಯಂ ಪ್ರಮುಖ ಪಾತ್ರ ವಹಿಸುವುದು. ದೇಹದಲ್ಲಿ ವಿವಿಧ ಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ಸರಿಯಾದ ಪ್ರಮಾಣದ ನೀರು ಬೇಕಾಗುತ್ತದೆ. ಈ ಕೋಶಗಳು ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳಲು ಮತ್ತು ಸಮತೋಲನದಲ್ಲಿಡಲು ಪೊಟಾಶಿಯಂ ನೆರವಾಗುವುದು.

ನರವ್ಯವಸ್ಥೆ ಸುಧಾರಣೆ

ನರವ್ಯವಸ್ಥೆ ಸುಧಾರಣೆ

ದೇಹದ ಇತರ ಭಾಗಗಳಿಗೆ ಸಂದೇಶವನ್ನು ಪ್ರಸಾರ ಮಾಡುವ ನರ ದಕ್ಷತೆ ಉತ್ತೇಜಿಸುವಲ್ಲಿ ಪೊಟಾಶಿಯಂ ಪ್ರಮುಖ ಖನಿಜಾಂಶವಾಗಿದೆ. ದಿನವಿಡಿ ಹೆಚ್ಚು ಆಯಾಸವಿಲ್ಲದೆ ಸ್ನಾಯುಗಳು ವಿವಿಧ ರೀತಿಯ ಚಟುವಟಿಕೆ ಮಾಡಲು ಇದು ನೆರವಾಗುವುದು.

ಪಾರ್ಶ್ವವಾಯು ಅಪಾಯ ತಗ್ಗಿಸುವುದು

ಪಾರ್ಶ್ವವಾಯು ಅಪಾಯ ತಗ್ಗಿಸುವುದು

ಪೊಟಾಶಿಯಂ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡುವ ಜನರಲ್ಲಿ ಪಾರ್ಶ್ವವಾಯುವಿನ ಅಪಾಯವು ಕಡಿಮೆಯಾಗುವುದು. ರಕ್ತದೊತ್ತಡ ಹೆಚ್ಚಾದಾಗ ಪಾರ್ಶ್ವವಾಯು ಕಾಣಿಸುವುದು. ಪಾರ್ಶ್ವವಾಯು ಅಪಾಯ ತಪ್ಪಿಸಲು ಪೊಟಾಶಿಯಂ ಹೆಚ್ಚಿರುವ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವಿಸಿ. ಈ ಲೇಖನ ನಿಮಗೆ ಇಷ್ಟವಾಗಿದ್ದರೆ ಇದನ್ನು ಶೇರ್ ಮಾಡಿ. ನಿಮ್ಮ ಆತ್ಮೀಯರಿಗೂ ತಮ್ಮ ಆರೋಗ್ಯ ಕಾಪಾಡಲು ಇದು ನೆರವಾಗುವುದು.

English summary

10 Health Benefits Of Potassium

On this Valentine day if you are married or in a committed relationship, then this article is just perfect for you to start your day with. All that you need to do is read this article and reach until the end as this will help you judge on how your day is going to be! As we preset you the list of zodiac signs which are ranked from the best to the worst husbands. This list is listed according to the predictions of astrologers as the reveal the best and worst traits of each zodiac sign men. Check out the list...
Story first published: Thursday, February 15, 2018, 23:31 [IST]