For Quick Alerts
ALLOW NOTIFICATIONS  
For Daily Alerts

ದಂಪತಿಗಳ ನಡುವೆ ಪ್ರೀತಿ ಹೆಚ್ಚಲು ಈ ಒಂಬತ್ತು ನಿಯಮಗಳನ್ನು ಪಾಲಿಸಬೇಕಂತೆ!

By Lekhaka
|

ಈ ಲೇಖನದ ಶೀರ್ಷಿಕೆಯನ್ನು ನೋಡಿದಾಕ್ಷಣ ದಂಪತಿಗಳ ಸಮಾಗಮಕ್ಕೂ ಮನಃಶಾಸ್ತ್ರಜ್ಞರ ಸಲಹೆಯ ಅಗತ್ಯವೇನಿದೆ ಎಂದು ಮೊದಲು ಚಿಂತನೆ ಮೂಡಬಹುದು. ಏಕೆಂದರೆ ಹೆಚ್ಚಿನ ದಂಪತಿಗಳು ಈ ವಿಷಯವನ್ನು ತಮ್ಮ ಅತ್ಯಂತ ಖಾಸಗಿ ವಿಷಯವನ್ನಾಗಿ ಪರಿಗಣಿಸುತ್ತಾರೆ. ವಿಶೇಷವಾಗಿ ಭಾರತದಂತಹ ಸಾಂಪ್ರಾದಾಯಿಕ ದೇಶದಲ್ಲಿ ಸೆಕ್ಸ್ ಹಾಗೂ ದಾಂಪತ್ಯದ ಬಗ್ಗೆ ಮುಕ್ತವಾದ ಚರ್ಚೆ ಅಷ್ಟು ಮುಕ್ತವಾಗಿ ನಡೆಯುವುದಿಲ್ಲ.

ಆಧುನೀಕತೆ ಅಲ್ಲ ರಂಗಗಳಲ್ಲಿ ಪ್ರವೇಶಿಸಿದ್ದರೂ ದಂಪತಿಗಳ ನಡುವಣ ಅನ್ಯೋನ್ಯತೆಗೆ ನಮ್ಮ ಸಂಸ್ಕೃತಿಯೇ ಇಂದಿಗೂ ಮೂಲವಾಗಿರುವುದು ಒಂದು ಕಡೆಯಿಂದ ನಮ್ಮ ಶಕ್ತಿಯಾದರೆ ಇನ್ನೊಂದು ಕಡೆಯಿಂದ ದಂಪತಿಗಳಿಗೆ ಅರಿವೇ ಇಲ್ಲದಂತೆ ಕೆಲವು ತೊಂದರೆಗಳನ್ನು ಅಥವಾ ಕೊರತೆಗಳನ್ನು ಇಬ್ಬರೂ ಅನುಭವಿಸುತ್ತಿದ್ದು ಸರಳವದ ಪರಿಹಾರದಿಂದ ಇದನ್ನು ಪರಿಹರಿಸಿಕೊಳ್ಳಬಹುದೆಂದೂ ಗೊತ್ತಿರುವುದಿಲ್ಲ. ಒಂದು ವೇಳೆ ತಮ್ಮಿಬ್ಬರ ನಡುವೆ ಯಾವುದೋ ತೊಂದರೆ ಇದೆ ಎಂದು ತಿಳಿದಿದ್ದರೂ ಪರಿಣಿತರ ಬಳಿ ಸಲಹೆ ಪಡೆಯಲೂ ಹೋಗುವುದಿಲ್ಲ ಹಾಗೂ ಚರ್ಚಿಸಲೂ ಮುಜುಗರ ಪಡುತ್ತಾರೆ.

ವಾಸ್ತವವಾಗಿ ಆರೋಗ್ಯಕರ ದಾಂಪತ್ಯಕ್ಕೆ ಆರೋಗ್ಯಕರ ಲೈಂಗಿಕ ಜೀವನವೂ ಅತಿ ಮುಖ್ಯವಾಗಿದ್ದು ಇದರಲ್ಲಿ ದೈಹಿಕ ಹಾಗೂ ಮಾನಸಿಕ ಅಂಶಗಳು ಒಳಗೊಂಡಿರುತ್ತವೆ. ಆದ್ದರಿಂದ ದಂಪತಿಗಳ ನಡುವೆ ಲೈಂಗಿಕ ಜೀವನವೂ ತೃಪ್ತಿಕರವಾಗಿರುವುದು ಅಗತ್ಯವಾಗಿದ್ದು ಇದರಲ್ಲಿ ದೈಹಿಕ ಅಥವಾ ಮಾನಸಿಕವಾಗಿ ಯಾವುದೊಂದೂ ವಿಷಯದಲ್ಲಿ ಕೊರತೆಯುಂಟಾದರೆ ಇದು ಲೈಂಗಿಕ ಜೀವನದಲ್ಲಿ ವೈಫಲ್ಯವನ್ನುಂಟುಮಾಡಬಹುದು. ಇದಕ್ಕೆ ನಿಜಕ್ಕೂ ವೈದ್ಯಕೀಯ ತಪಾಸಣೆಯ ಅಗತ್ಯವಿದೆ. ಒಂದು ವೇಳೆ ದಂಪತಿಗಳ ನಡುವಣ ಲೈಂಗಿಕ ಜೀವನದಲ್ಲಿ ಇಬ್ಬರಲ್ಲೊಬ್ಬರಲ್ಲಿ ಯಾವುದೋ ಕೊರತೆ ಇದ್ದರೂ, ಇದರಿಂದ ಇಬ್ಬರೂ ಕೆಲವಾರು ತೊಂದರೆ ಹಾಗೂ ಕ್ಲೇಶಗಳನ್ನು ಅನುಭವಿಸಬೇಕಾಗಿ ಬರಬಹುದು.

ನಿಸರ್ಗ ಪ್ರತಿ ಜೀವಿಗೂ ಕೆಲವಾರು ಅಗತ್ಯತೆಗಳನ್ನು ಒದಗಿಸಿದ್ದು ಇದನ್ನು ಪೂರೈಸುವ ಮೂಲಕ ಜೀವನವನ್ನು ಸಾರ್ಥಕಗೊಳಿಸುವಂತೆ ಹಾಗೂ ಸಂತತಿಯನ್ನು ಮುಂದುವರೆಸುವಂತೆ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಅಗತ್ಯತೆಗಳಲ್ಲಿ ಯಾವುದೊಂದು ಪೂರ್ಣವಾಗದಿದ್ದರೂ ಇದು ಹತಾಶೆಗೆ ಕಾರಣವಾಗಬಹುದು. ದಂಪತಿಗಳ ನಡುವೆ ವಿರಸ ಮೂಡಿ ಬಿರುಕಿಗೂ ಕಾರಣವಾಗಹುದು. ಇದರೊಂದಿಗೆ ಒಂದು ವೇಳೆ ಲೈಂಗಿಕ ದೌರ್ಬಲ್ಯ ಕೇವಲ ದಂಪತಿಗಳ ಲೈಂಗಿಕ ಜೀವನವನ್ನು ಬಾಧಿಸುವುದು ಮಾತ್ರವಲ್ಲ, ವ್ಯಕ್ತಿಯ ಆತ್ಮವಿಶ್ವಾಸವನ್ನೇ ಕುಂದಿಸುತ್ತದೆ. ಇದೇ ರೀತಿಯಾಗಿ ಮಹಿಳೆಯರಲ್ಲಿ ಸಂವೇದನೆಗೆ ಒಳಗಾಗುವ ಶಕ್ತಿಯನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾರೆ ಹಾಗೂ ಸಮಾಗಮದಲ್ಲಿ ಯಾವುದೇ ಸಂತೋಷವನ್ನೂ ಪಡೆಯದೇ ಇದನ್ನೊಂದು ಯಾಂತ್ರಿಕ ಕ್ರಿಯೆಯಂತೆ ಅನುಭವಿಸುತ್ತಾರೆ.

ಹಲವು ದಂಪತಿಗಳ ನಡುವೆ ಈ ಕೊರತೆಗಳಿದ್ದರೂ ಕೇವಲ ಮುಜುಗರದಿಂದ ಯಾರಲ್ಲೂ ಹೇಳಿಕೊಳ್ಳದೇ, ಸಮಸ್ಯೆಗೆ ಪರಿಹಾರವನ್ನೂ ಪಡೆಯದೇ ಹೀಗೇ ಒಳಗೇ ಕೊರಗುತ್ತಾ ಇರುತ್ತಾರೆ. ಒಮ್ಮೆ ಈ ಮುಜುಗರದ ಕೋಟೆಯಿಂದ ಹೊರಬಂದು ಪರಿಣಿತರ ಅಥವಾ ಮನಃಶಾಸ್ತ್ರಜ್ಞರ ಸಲಹೆ ಪಡೆಯುವ ಮೂಲಕ ನಿಜವಾದ ದಾಂಪತ್ಯ ಹಾಗೂ ಸಾರ್ಥಕ, ಸಂತೋಷದ ಜೀವನವನ್ನು ಅನುಭವಿಸಬಹುದು. ಬನ್ನಿ, ಮನಃಶಾಸ್ತ್ರಜ್ಞರು ಈ ಬಗ್ಗೆ ಏನು ಸಲಹೆಗಳನ್ನು ನೀಡುತ್ತಾರೆ ನೋಡೋಣ...

ಆಪ್ತಸಲಹೆ #1

ಆಪ್ತಸಲಹೆ #1

ನಿಮ್ಮ ಸಂಗಾತಿಯೊಂದಿಗೆ ಮುನ್ನಲಿವು ಅಥವಾ ಸಮಾಗಮದಲ್ಲಿ ಪಾಲ್ಗೊಳ್ಳುವ ಮೊದಲು ಯಾವುದೇ ರೀತಿಯ ಚಿಂತಗಳನ್ನು ಮಾಡದಿರಿ. ಈ ಕ್ರಿಯೆಯಲ್ಲಿ ಹೇಗೆ ಕಾರ್ಯನಿರ್ವಹಿವೆ, ಸರಿಯಾಗಿ ಕಾರ್ಯನಿರ್ವಹಿಸಬಲ್ಲೆನೇ, ನನ್ನಿಂದ ಸಾಧ್ಯವಾಗಬಲ್ಲುದೇ ಮೊದಲಾದ ಚಿಂತನೆಗಳಿಂದ ನಿಮ್ಮ ನಿಜವಾದ ಸಾಮರ್ಥ್ಯವೂ ಕುಂದುತ್ತದೆ ಹಾಗೂ ಇದರಿಂದ ನಿಮಿರುವಿಕೆಯೂ ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ನಿಮ್ಮ ಎಲ್ಲ ಇಂದ್ರಿಯಗಳನ್ನು ನಿಮ್ಮ ಸಂಗಾತಿಯೊಂದಿಗಿನ ಕ್ಷಣಗಳನ್ನು ಪೂರ್ಣವಾಗಿ ಅನುಭವಿಸುವತ್ತ ಕೇಂದ್ರೀಕರಿಸಿ ಹಾಗೂ ಪ್ರತಿ ಕ್ಷಣವನ್ನೂ ಸಂತೋಷದಿಂದ ಅನುಭವಿಸಿ.

ಆಪ್ತಸಲಹೆ #2

ಆಪ್ತಸಲಹೆ #2

ಮುನ್ನಲಿವು ಅತಿ ಅಗತ್ಯ. ಹೆಚ್ಚಿನ ದಂಪತಿಗಳಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಅಥವಾ ಕೆಲವು ದಂಪತಿಗಳ ಬಳಿ ಅಷ್ಟು ಸಮಯಾವಕಾಶ ಅಥವಾ ಸೂಕ್ತ ಪರಿಸರವೂ ಇರುವುದಿಲ್ಲ. ಇವರು ನೇರವಾಗಿ ಸಂಭೋಗದತ್ತ ಮುಂದುವರೆತ್ತಾರೆ ಹಾಗೂ ಮುನ್ನಲಿವು ಎಂಬ ಒಂದು ವಿಷಯವಿದೆ ಎಂದೇ ಮರೆತಿರುತ್ತಾರೆ ಅಥವಾ ಈ ಬಗ್ಗೆ ಇವರಿಗೆ ಅರಿವೇ ಇರಲಾರದು. ಇದರಿಂದ ಸಮಾಗಮಕ್ಕೆ ದೇಹ ಹಾಗೂ ಮನಸ್ಸನ್ನು ಪೂರ್ಣಪ್ರಮಾಣದಲ್ಲಿ ಸಿದ್ಧಗೊಳಿಸಲು ಸಾಧ್ಯವಾಗದೇ ನಿಮಿರುದೌರ್ಬಲ್ಯ, ಹಾಗೂ ವಿಶೇಷವಾಗಿ ಮಹಿಳೆಯರಲ್ಲಿ ದ್ರವಿಸಲು ಸಾಧ್ಯವಾಗದೇ ಹೋಗಬಹುದು. ಮುನ್ನಲಿವಿನಲ್ಲಿ ಚುಂಬನ, ಆತ್ಮೀಯ ಅಪ್ಪುಗೆ, ಪರಸ್ಪರರ ಸೂಕ್ಷ್ಮಭಾಗಗಳನ್ನು ನೇವರಿಸುವುದು ಹಿತವಾದ ಸ್ಪರ್ಶ, ಒಟ್ಟಾರೆ ಇಬ್ಬರಿಗೂ ಯಾವುದು ಇಷ್ಟವಾಗುತ್ತದೋ ಅದನ್ನು ಎಷ್ಟು ಹೊತ್ತು ಸಾಧ್ಯವೋ ಅಷ್ಟೂ ಹೊತ್ತು ಅನುಭವಿಸುವುದೇ ಮುನ್ನಲಿವು.

ಆಪ್ತಸಲಹೆ #3

ಆಪ್ತಸಲಹೆ #3

ನಿಮ್ಮ ಸಂಗಾತಿಗೆ ಏನು ಇಷ್ಟ, ಏನು ಇಷ್ಟವಿಲ್ಲ ಎಂಬುದನ್ನು ಮುಕ್ತವಾಗಿ ಚರ್ಚಿಸಿ. ವಿಶೇಷವಾಗಿ ಇತರ ಸಮಯದಲ್ಲಿ ಚರ್ಚಿಸಲಾಗದೇ ಇರುವ ಅತ್ಯಂತ ಆಪ್ತ ಹಾಗೂ ಖಾಸಗಿ ವಿಷಯಗಳನ್ನು ಚರ್ಚಿಸಿ ಸ್ಪಷ್ಟವಾದ ಉತ್ತರಗಳನ್ನು ಪಡೆಯಿರಿ. ಯಾವ ಕ್ರಿಯೆ ಇಷ್ಟವಾಗುತ್ತದೆ ಅಥವಾ ಇಷ್ಟವಾಗುವುದಿಲ್ಲ ಎಂಬುದನ್ನು ಇದಕ್ಕೂ ಮುನ್ನ ಪ್ರಯತ್ನಿಸದೇ ಇದ್ದರೆ ಈಗ ಪ್ರಯತ್ನಿಸಿ. ಯಾವ ಲೈಂಗಿಕ ಚರ್ಚೆ, ಕ್ರಿಯೆ ಅಥವಾ ವಿಷಯಗಳು ಇಷ್ಟವಾಗುತ್ತವೆ ಅಥವಾ ಇಷ್ಟವಾಗುವುದಿಲ್ಲ ಎಂದು ಅರಿತುಕೊಂಡು ಆ ಪ್ರಕಾರ ಮುನ್ನಡೆಯಿರಿ. ಇಷ್ಟವಿಲ್ಲದ ಕ್ರಿಯೆಗಳನ್ನು ಬಿಟ್ಟು ಕೇವಲ ಇಷ್ಟವಾಗುವ ಕ್ರಿಯೆಗಳನ್ನೇ ಹೆಚ್ಚು ಹೆಚ್ಚಾಗಿ ಅನುಸರಿಸಿ. ಇದರಿಂದ ಇಬ್ಬರಲ್ಲಿಯೂ ಪರಸ್ಪರರ ಮೇಲೆ ಹೆಚ್ಚಿನ ನಂಬಿಕ, ವಿಶ್ವಾಸ ಹಾಗೂ ಅನ್ಯೋನ್ಯತೆ ಹೆಚ್ಚುತ್ತಾ ಹೋಗುತ್ತದೆ ಹಾಗೂ ಪರಿಪೂರ್ಣವಾದ ಲೈಂಗಿಕ ಜೀವನವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಆಪ್ತಸಲಹೆ #4

ಆಪ್ತಸಲಹೆ #4

ದಿನದ ಒಂದು ಸಮಯವನ್ನು ಪರಸ್ಪರರಿಗಾಗಿ ಮೀಸಲಿಡಿ. ಒಂದು ವೇಳೆ ನಿಮಗೆ ಸಮಾಗಮಕ್ಕೆ ಸಮಯಾವಕಾಶವಿಲ್ಲದೇ ಹೋದರೆ ಅಥವಾ ಇಬ್ಬರೂ ದೂರದ ಸ್ಥಳಗಳಲ್ಲಿ ಉದ್ಯೋಗದಲ್ಲಿದ್ದರೆ ಪ್ರತಿವಾರವೂ ಪರಸ್ಪರರಿಗಾಗಿ ಕೊಂಚ ಸಮಯವನ್ನು ಮೀಸಲಿಡಿ. ಏಕೆಂದರೆ ಮನಃಶಾಸ್ತ್ರಜ್ಞರ ಪ್ರಕಾರ ದಂಪತಿಗಳ ನಡುವೆ ಬಹುಕಾಲ ಸಮಾಗಮ ನಡೆಯದೇ ಹೋದರೆ ಇದು ಸಹಾ ಲೈಂಗಿಕ ದೌರ್ಬಲ್ಯಕ್ಕೆ ಕಾರಣವಾಗಬಹುದು.

ಆಪ್ತಸಲಹೆ #5

ಆಪ್ತಸಲಹೆ #5

ನೈಸರ್ಗಿಕ ಕಾಮೋತ್ತೇಜಕಗಳನ್ನು ಸೇವಿಸಿ. ನಿಮ್ಮ ನಿತ್ಯದ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೈಸರ್ಗಿಕ ಕಾಮೋತ್ತೇಜಕಗಳಿರುವಂತೆ ನೋಡಿಕೊಳ್ಳಿ. ಇದರಲ್ಲಿ ಸ್ಟ್ರಾಬೆರಿ, ಕಪ್ಪು ಚಾಕಲೇಟು, ಬೆಳ್ಳುಳ್ಳಿ, ಹಾಲು, ಜೇನು, ಸೋರೆಕಾಯಿ ಮೊದಲಾದವುಗಳಿರಲಿ. ಇದರಿಂದ ದಂಪತಿಗಳ ಜನನಾಂಗಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕಯುಕ್ತ ರಕ್ತ ಸರಬರಾಜು ಹೆಚ್ಚಲು ನೆರವಾಗುತ್ತದೆ ಹಾಗೂ ಸಮಾಗಮದ ಅನುಭವವನ್ನು ಆರೋಗ್ಯಕರ ಹಾಗೂ ಸಂತೋಷಕರವಾಗಿ ಅನುಭವಿಸಲು ಸಾಧ್ಯವಾಗುತ್ತದೆ.

ಆಪ್ತಸಲಹೆ #6

ಆಪ್ತಸಲಹೆ #6

ಈ ಸಮಯದಲ್ಲಿ ಎಲ್ಲಾ ಗ್ಯಾಜೆಟ್ಟುಗಳನ್ನು ಬದಿಗಿಡಿ. ಇಂದು ಮೊಬೈಲ್ ಫೋನ್, ಲ್ಯಾಪ್ ಟಾಪ್ ಮೊದಲಾದವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು ನಾವೆಲ್ಲರೂ ಇದರ ಪರದೆ ನೋಡಿಯೇ ಏಳುತ್ತೇವೆ ಹಾಗೂ ಮಲಗುವ ಮುನ್ನ ಪರದೆ ನೋಡಿಯೇ ಮಲಗುತ್ತೇವೆ. ಆದರೆ ಈ ಅಭ್ಯಾಸ ಸಮಾಗಮದ ಸಮಯದಲ್ಲಿ ಸಲ್ಲದು. ಸಮಾಗಮಕ್ಕೂ ಮುನ್ನ ನಿಮ್ಮ ಎಲ್ಲಾ ಅಗತ್ಯ ಗ್ಯಾಜೆಟ್ಟುಗಳನ್ನು ಸ್ವಿಚ್ ಆಫ್ ಮಾಡುವುದೇ ಉತ್ತಮ. ಏಕೆಂದರೆ ಯಾವುದೋ ಸಂದೇಶವನ್ನು ನಿರೀಕ್ಷಿಸುತ್ತಿದ್ದರೆ ಸಮಾಗಮದ ಸಮಯದಲ್ಲಿ ಪೂರ್ಣವಾಗಿ ಗಮನ ನೀಡಲು ಸಾಧ್ಯವಾಗುವುದಿಲ್ಲ. ಹಾಗೂ ನಿಮ್ಮ ಗ್ಯಾಜೆಟ್ಟುಗಳು ಬಂದ್ ಆಗಿವೆ ಎಂದು ಇಬ್ಬರೂ ಪರಸ್ಪರರಿಗೆ ತೋರಿಸಿಕೊಳ್ಳುವ ಮೂಲಕ ಈ ಸಮಯವನ್ನು ಇಬ್ಬರೂ ಪರಸ್ಪರರಿಗಾಗಿ ಪರಿಪೂರ್ಣವಾಗಿ ವಿನಿಯೋಗಿಸಿಕೊಳ್ಳುತ್ತಿದ್ದೇವೆ ಎಂದು ಖಚಿತಪಡಿಸಬೇಕು. ಇದರಿಂದ ಅನ್ಯೋನ್ಯತೆ ಹೆಚ್ಚುತ್ತದೆ ಹಾಗೂ ಯಾವುದೇ ಬಾಹ್ಯ ಆಕರ್ಷಣೆಯಿಂದ ಗಮನ ಅತ್ತ ಹರಿಯುವುದು ತಪ್ಪುತ್ತದೆ.

ಆಪ್ತಸಲಹೆ #7

ಆಪ್ತಸಲಹೆ #7

ವ್ಯಾಯಾಮ ನಿತ್ಯದ ಚಟುವಟಿಕೆಯಾಗಿರಲಿ. ದಂಪತಿಗಳಿಬ್ಬರೂ ಉತ್ತಮ ದೇಹದಾರ್ಢ್ಯತೆಯನ್ನು ಹೊಂದಿರುವುದು ಅಗತ್ಯವಾಗಿದ್ದು ನಿತ್ಯವೂ ಕೊಂಚ ಸಮಯವನ್ನು ವ್ಯಾಯಾಮಕ್ಕಾಗಿ ಮೀಸಲಿಡಬೇಕು. ವ್ಯಾಯಾಮದಿಂದ ದೇಹ ಹಾಗೂ ಮನಸ್ಸು ಆರೋಗ್ಯಕರವಾಗಿರುತ್ತವೆ ಹಾಗೂ ಮೆದುಳಿನಲ್ಲಿ ರಕ್ತಪರಿಚಲನೆ ಹೆಚ್ಚುವ ಮೂಲಕ ಎಂಡಾರ್ಫಿನ್ ಎಂಬ ರಸದೂತಗಳು ಹೆಚ್ಚು ಬಿಡುಗಡೆಯಾಗುವ ಮೂಲಕ ಜನನಾಂಗಗಳ ನಿಮಿರುವಿಕೆಯೂ ಉತ್ತಮಗೊಳ್ಳುತ್ತದೆ.

ಆಪ್ತಸಲಹೆ #8

ಆಪ್ತಸಲಹೆ #8

ಸಮಾಗಮಕ್ಕೂ ಮುನ್ನ ಹಸ್ತಮೈಥುನ ಬೇಡ. ಹೀಗೆ ಮಾಡುವುದರಿಂದ ಸಮಾಗಮಕ್ಕೂ ಮುನ್ನ ಈ ಕ್ರಿಯೆಯ ಮೂಲಕ ಈಗಾಗಲೇ ಕಾಮೋತ್ತುಂಗವನ್ನು ಪಡೆದಿರುವ ಕಾರಣ ಮತ್ತೊಮ್ಮೆ ಸಮಾಗಮದ ಸಮಯದಲ್ಲಿ ಕಾಮೋತ್ತುಂಗ ಪಡೆಯಲು ಸಾಧ್ಯವಾಗದೇ ಹೋಗಬಹುದು.

ಆಪ್ತಸಲಹೆ #9

ಆಪ್ತಸಲಹೆ #9

ನಿಮಗೆ ಇಷ್ಟವಾಗದ ಯಾವುದೇ ಕ್ರಿಯೆಯಲ್ಲಿ ತೊಡಗದಿರಿ. ಸಮಾಗಮದ ಸಮಯದಲ್ಲಿ ನಿಮಗೆ ಇಷ್ಟವಾಗದ ಅಥವಾ ನಿಮ್ಮ ಸಂಗಾತಿಯೂ ಇಷ್ಟಪಡದ ಯಾವುದೇ ಕ್ರಿಯೆಯಲ್ಲಿ ತೊಡಗದಿರಿ. ನಿಮ್ಮ ಸಂಗಾತಿಯನ್ನು ತೃಪ್ತಿಪಡಿಸಲು ಇದುವರೆಗೆ ಪ್ರಯತ್ನಿಸದ ಯಾವುದೇ ಕ್ರಮ ಅಥವಾ ಕ್ರಿಯೆ ಒಂದು ವೇಳೆ ನಿಮ್ಮ ಸಂಗಾತಿಗೆ ಇಷ್ಟವಾಗದೇ ಇದ್ದರೆ ತಕ್ಷಣ ನಿಲ್ಲಿಸಿ ಹಾಗೂ ನಿಮ್ಮ ಮಿತಿಗಳನ್ನು ಅರಿತುಕೊಳ್ಳಿ. ಎಲ್ಲೋ ನೋಡಿದ ಅಸಂಭವ ಸಾಧ್ಯತೆಗಳನ್ನು ಪ್ರಯೋಗಿಸಿ ಅನಾವಶ್ಯಕ ಎಡವಟ್ಟಿಗೆ ಕಾರಣವಾಗಬಹುದು. ಒಟ್ಟಾರೆ, ದಂಪತಿಗಳಿಬ್ಬರಿಗೂ ಇಷ್ಟವಾಗದ ಯಾವುದೇ ಕ್ರಿಯೆ ಬೇಡ.

English summary

Tips About Lovemaking Given By Psychologists That Can Help You!

The minute you read the title of this article, you would have slightly been surprised because not many us think that psychologists can advice us about sexual health, right? Especially in conservative societies such as India, the topic of sex is still a hush-hush thing, even with all the modern chances and advancements! So, even if people are having troubles in the bedroom department, most of them would never go out and seek help from professionals, as they may feel too embarrassed to do so. So, here are a few tips given by sexual health therapists, which can benefit you. Take a look.
Story first published: Monday, December 11, 2017, 19:50 [IST]
X
Desktop Bottom Promotion