Latest Updates
-
ಡೇಟಿಂಗ್ ಆಪ್ಗಳಲ್ಲಿ ಎಐ ಚಾಟ್ಬಾಟ್ ವಂಚನೆ: ನಿಮ್ಮ ಪ್ರೀತಿಯೇ ಬಲೆ ಆಗಬಹುದು, ಎಚ್ಚರ! -
ಚೆನ್ನೈನಲ್ಲಿ ಭಾರಿ ಮಳೆ: ಅಪಾರ್ಟ್ಮೆಂಟ್ ನಿವಾಸಿಗಳು ಮರೆಯದೆ ಮಾಡಬೇಕಾದ 20 ನಿಮಿಷದ ಸೇಫ್ಟಿ ಚೆಕ್ಲಿಸ್ಟ್ -
ಗಣೇಶ ಹಬ್ಬದ ಪ್ರಸಾದ: ಕಲಬೆರಕೆ ಸಿಹಿತಿಂಡಿಗಳನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಎಫ್ಎಸ್ಎಸ್ಎಐ ಟಿಪ್ಸ್ -
ನಾಳೆ ಗಣೇಶ ವಿಸರ್ಜನೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ -
ಸೇವಾ ಪಖ್ವಾಡ: ರಕ್ತದಾನಕ್ಕೆ ಹೋಗುವ ಮುನ್ನ ಈ ಸಿಂಪಲ್ ಪ್ಲಾನ್ ಮಿಸ್ ಮಾಡ್ಬೇಡಿ! -
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್!
ತುಟಿ ಮತ್ತು ಗಲ್ಲದ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಮನೆಮದ್ದುಗಳು
ಮುಖದ ಸೌಂದರ್ಯವೆಂದರೆ ಪ್ರಮುಖವಾಗಿ ಕಾಣಿಸಿಕೊಳ್ಳುವುದು ತುಟಿಗಳು ಹಾಗೂ ಗಲ್ಲ. ಇವೆರಡು ಮಹಿಳೆಯ ಸೌಂದರ್ಯ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುವುದು. ಅದೇ ತುಟಿಗಳು ಮತ್ತು ಗಲ್ಲದ ಸುತ್ತಲು ಕಪ್ಪು ಕಲೆಗಳು ಇದ್ದರೆ ಆಗ ಚರ್ಮವು ತುಂಬಾ ಕಳೆಗುಂದಿದಂತೆ ಕಾಣುವುದು. ಇದು ಮಹಿಳೆಯರು ಮಾತ್ರವಲ್ಲದೆ ಪುರುಷರಲ್ಲೂ ಕಾಣಿಸಿಕೊಳ್ಳುವುದು.
ಕಲ್ಮಶ ಮತ್ತು ವಿಷಕಾರಿ ಅಂಶ, ವ್ಯಾಕ್ಸಿಂಗ್ ಮತ್ತು ಥ್ರೆಡಿಂಗ್ ತುಟಿ ಹಾಗೂ ಗಲ್ಲದ ಸುತ್ತಲಿನ ಭಾಗವನ್ನು ಕಪ್ಪಾಗಿಸುವುದು. ಈ ಕಲೆಗಳನ್ನು ನೀವು ಮೇಕಪ್ ಮೂಲಕ ಮರೆಮಾಚಬಹುದು. ಆದರೆ ಅದನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆಂದರೆ ಆಗ ನೀವು ಕೆಲವೊಂದು ಮನೆಮದ್ದನ್ನು ಬಳಸಿಕೊಳ್ಳಬೇಕು. ಯಾಕೆಂದರೆ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವುದಿಲ್ಲ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ಇಂತಹ ಕೆಲವು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ತಿಳಿಸಿಕೊಡಲಿದೆ. ಇದನ್ನು ಓದುತ್ತಾ ಸಾಗಿ....

ಆಲೂಗಡ್ಡೆ
ನೈಸರ್ಗಿಕವಾಗಿ ಬ್ಲೀಚಿಂಗ್ ಗುಣ ಹೊಂದಿರುವ ಆಲೂಗಡ್ಡೆಯಲ್ಲಿ ತುಟಿ ಹಾಗೂ ಗಲ್ಲದ ಸುತ್ತಲು ಇರುವಂತಹ ಕಪ್ಪು ಕಲೆಗಳನ್ನು ನಿವಾರಣೆ ಮಾಡುವ ಸಾಮರ್ಥ್ಯವಿದೆ. ಹಸಿ ಆಲೂಗಡ್ಡೆ ಕತ್ತರಿಸಿಕೊಂಡು ಅದನ್ನು ಬಾಧಿತ ಜಾಗದಲ್ಲಿ ಇಟ್ಟುಬಿಡಿ. 15-20 ನಿಮಿಷ ಕಾಲ ಇದನ್ನು ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ಮುಖ ತೊಳೆಯಿದಿ. ಉತ್ತಮ ಫಲಿತಾಂಶಕ್ಕಾಗಿ ದಿನಲೂ ಇದನ್ನು ಬಳಸಿ.

ಲಿಂಬೆರಸ
ಸಿಟ್ರಿಕ್ ಆಮ್ಲವನ್ನು ಹೊಂದಿರುವ ಲಿಂಬೆರಸವು ತುಟಿ ಹಾಗೂ ಗಲ್ಲದ ಸುತ್ತಲು ಇರುವ ಕಪ್ಪು ಕಲೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಎರಡು ಚಮಚ ಲಿಂಬೆರಸ ಮತ್ತು ಒಂದು ಚಮಚ ರೋಸ್ ವಾಟರ್ ಮಿಶ್ರಣ ಮಾಡಿಕೊಳ್ಳಿ. ಇದರಲ್ಲಿ ಹತ್ತಿ ಉಂಡೆ ಅದ್ದಿಕೊಂಡು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 4-5 ಸಲ ಇದನ್ನು ಬಳಸಿ.

ಅಲೋವೆರಾ ಲೋಳೆ
ಅಲೋವೆರಾ ಲೋಳೆಯಲ್ಲಿ ಇರುವಂತಹ ಪೋಷಣೆ ನೀಡುವಂತಹ ಗುಣವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿ ಮನೆಮದ್ದು. ಬಾಧಿತ ಪ್ರದೇಶಕ್ಕೆ ಸಂಪೂರ್ಣವಾಗಿ ಅಲೋವೆರಾ ಜೆಲ್ ಹಚ್ಚಿಕೊಳ್ಳಿ ಮತ್ತು ಒಂದು ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ. ಫಲಿತಾಂಶ ಪರಿಣಾಮಕಾರಿಯಾಗಬೇಕಾದರೆ ಹಲವಾರು ಸಲ ಈ ಮನೆಮದ್ದನ್ನು ಬಳಸಿ.

ಶ್ರೀಗಂಧದ ಹುಡಿ
ಚರ್ಮ ಬಿಳಿಗೊಳಿಸುವ ಗುಣ ಹೊಂದಿರುವ ಶ್ರೀಗಂಧದ ಹುಡಿಯು ತುಟಿ ಮತ್ತು ಗಲ್ಲದ ಸುತ್ತಲಿನ ಕಪ್ಪು ಚರ್ಮವನ್ನು ತೆಗೆದುಹಾಕುವುದು. ಒಂದು ಚಮಚ ಶ್ರೀಗಂಧದ ಹುಡಿಗೆ ಎರಡು ಚಮಚ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ ಮತ್ತು ಈ ಪೇಸ್ಟ್ ಅನ್ನು ಬಾಧಿತ ಪ್ರದೇಶಕ್ಕೆ ಹಚ್ಚಿ. 30 ನಿಮಿಷ ಬಳಿಕ ಸ್ವಲ್ಪಬೆಚ್ಚಗಿನ ನೀರಿನಿಂದ ತೊಳೆಯಿರಿ. ವೇಗದ ಫಲಿತಾಂಶ ಬೇಕೆಂದರೆ ವಾರದಲ್ಲಿ 3-4 ಸಲ ಇದನ್ನು ಬಳಸಿ.

ಜೇನುತುಪ್ಪ
ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಜೇನುತುಪ್ಪವನ್ನು ಚರ್ಮ ಬಿಳಿಗೊಳಿಸುವ ಉದ್ದೇಶದಿಂದ ಬಳಸಲಾಗುತ್ತದೆ. ಇದನ್ನು ನಿಯಮಿತವಾಗಿ ಬಳಸಿಕೊಂಡರೆ ತುಟಿ ಹಾಗೂ ಗಲ್ಲದ ಸುತ್ತಲು ಇರುವ ಕಪ್ಪು ಚರ್ಮವನ್ನು ಹೋಗಲಾಡಿಸಬಹುದು. ಜೇನು ತುಪ್ಪವನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಫಲಿತಾಂಶಕ್ಕಾಗಿ ದಿನಕ್ಕೆ ಒಂದು ಸಲ ಹೀಗೆ ಮಾಡಿ.

ಅರಿಶಿನ
ಚರ್ಮಕ್ಕೆ ನೆರವಾಗುವಂತಹ ಆ್ಯಂಟಿಆಕ್ಸಿಡೆಂಟ್ ಗಳನ್ನು ಹೊಂದಿರುವ ಅರಶಿನವನ್ನು ಹಿಂದಿನಿಂದಲೂ ಚರ್ಮದ ಆರೈಕೆಯಲ್ಲಿ ಬಳಸಿಕೊಂಡು ಬರಲಾಗುತ್ತಾ ಇದೆ. ಇದು ತುಟಿ ಮತ್ತು ಗಲ್ಲದ ಸುತ್ತಲಿನ ಕಪ್ಪು ಚರ್ಮವನ್ನು ಬಿಳಿಯಾಗಿಸುವುದು.ಒಂದು ಚಮಚ ಮೊಸರಿನೊಂದಿಗೆ ಒಂದು ಚಿಟಿಕೆ ಅರಿಶಿನ ಹಾಕಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಬಾಧಿತ ಪ್ರದೇಶಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. 10-15 ನಿಮಿ ಕಾಲ ಹಾಗೆ ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಬಳಸಿದರೆ ಫಲಿತಾಂಶ ಸಿಗುವುದು.

ಓಟ್ ಮೀಲ್
ಓಟ್ ಮೀಲ್ ನಲ್ಲಿ ಇರುವಂತಹ ಕಿತ್ತುಹಾಕುವಂತಹ ಗುಣವು ಚರ್ಮದಲ್ಲಿರುವ ಕಲ್ಮಷವನ್ನು ತೆಗೆದುಹಾಕುವುದು. ಇದರಿಂದ ಚರ್ಮವು ಬಿಳಿಯಾಗುವುದು. ಒಂದು ಚಮಚ ಓಟ್ ಮೀಲ್ ಗೆ ಅರ್ಧ ಚಮಚ ರೋಸ್ ವಾಟರ್ ಮತ್ತು ಅರ್ಧ ಚಮಚ ತೆಂಗಿನ ಎಣ್ಣೆ ಹಾಕಿ ಮಿಶ್ರಣ ಮಾಡಿ. ಬಾಧಿತ ಚರ್ಮಕ್ಕೆ ಇದನ್ನು ಸರಿಯಾಗಿ ಉಜ್ಜಿಕೊಳ್ಳಿ. ಬಳಿಕ ಸ್ವಲ್ಪ ಬಿಸಿನೀರಿನಿಂದ ತೊಳೆಯಿರಿ. ವಾರದಲ್ಲಿ 2-3 ಸಲ ಇದನ್ನು ಬಳಸಿಕೊಂಡರೆ ನಿಮಗೆ ಫಲಿತಾಂಶ ಸಿಗುವುದು.

ಆಲಿವ್ ತೈಲ
ಎಲ್ಲಾ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಪರಿಣಾಮಕಾರಿ ಮನೆಮದ್ದಾಗಿರುವ ಆಲಿವ್ ತೈಲದಲ್ಲಿ ಚರ್ಮವನ್ನು ಬಿಳಿಯಾಗಿಸುವ ಗುಣವಿರುವುದು. ಇದು ತುಟಿ ಹಾಗೂ ಗಲ್ಲದ ಸುತ್ತಲಿನ ಚರ್ಮವನ್ನು ಬಿಳಿಗೊಳಿಸುವುದು. ಬಾಧಿತ ಜಾಗಕ್ಕೆ ಆಲಿವ್ ತೈಲ ಹಚ್ಚಿಬಿಡಿ ಮತ್ತು ರಾತ್ರಿಯಿಡಿ ಇದನ್ನು ಹಾಗೆ ಬಿಡಿ. ಬೆಳಗ್ಗೆ ತಣ್ಣೀರಿನಿಂದ ತೊಳೆಯಿರಿ. ತುಟಿ ಮತ್ತು ಗಲ್ಲದ ಸುತ್ತಲಿನ ಕಪ್ಪು ಕಲೆ ಮಾಯವಾಗುವ ತನಕ ಪ್ರತಿನಿತ್ಯ ಇದನ್ನು ಬಳಸಿ.



Click it and Unblock the Notifications
