Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಉರಿ ಮೂತ್ರದ ಸೋಂಕಿಗೆ ಮೊಸರೆಂಬ ಖರ್ಚಿಲ್ಲದ ಪರಿಹಾರ
ಸಾಮಾನ್ಯವಾಗಿ ನಡುವಯಸ್ಸು ದಾಟುತ್ತಿದ್ದಂತೆ ಉರಿಮೂತ್ರದ ಸಮಸ್ಯೆ ಆವರಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ಮೂತ್ರನಾಳದಲ್ಲಿ ಸೋಂಕು (urinary tract infection). ಮೂತ್ರ ಹೊರಹರಿಯುತ್ತಿರುವಾಗ ಒಳಗಿನಿಂದ ಉರಿ, ಪದೇ ಪದೇ ಕಡಿಮೆ ಪ್ರಮಾಣದಲ್ಲಿ ಮೂತ್ರವಾಗುತ್ತಿರುವುದು, ಅನೈಚ್ಛಿಕವಾಗಿ ಮೂತ್ರ ಹೊರಹೋಗುವುದು, ಮೂತ್ರಹೊರಹರಿಸಲು ಹೆಚ್ಚಿನ ಒತ್ತಡ ಬೇಕಾಗುವುದು ಮತ್ತು ನೋವು ಕಾಣಿಸಿಕೊಳ್ಳುವುದು ಈ ಸೋಂಕಿನ ಲಕ್ಷಣಗಳು.

ಈ ಸೋಂಕು ಉಂಟಾಗಲು ವಿವಿಧ ಕಾರಣಗಳಿವೆ. ಪ್ರಮುಖವಾಗಿ ರೋಗನಿರೋಧಕ ವ್ಯವಸ್ಥೆಯ ಮೂಲಕ ಮೂತ್ರದ ಮೂಲಕ ಹೊರದಬ್ಬಲ್ಪಟ್ಟ ಬ್ಯಾಕ್ಟೀರಿಯಾಗಳು ಮೂತ್ರದ ಕ್ಷಾರದಲ್ಲಿಯೂ ಸಾಯದೇ ಮೂತ್ರನಾಳದ ಒಳಭಾಗವನ್ನು ಅಂಟಿಕೊಂಡು ಸೋಂಕು ಉಂಟುಮಾಡುತ್ತವೆ. ಕೆಲವೊಮ್ಮೆ ಹಾರ್ಮೋನುಗಳ ಏರುಪೇರಿನ ವೈಪರೀತ್ಯದ ಕಾರಣದಿಂದಲೂ ಸೋಂಕು ಉಂಟಾಗಬಹುದು. ಇನ್ನುಳಿದಂತೆ ವಯೋಸಹಜವಾದ ಕ್ರಿಯೆಯಿಂದ ದೇಹ ಕೊಂಚ ದುರ್ಬಲವಾಗುವುದು ಸಹಾ ಕಾರಣವಾಗಬಹುದು.
ಇನ್ನೊಂದು ಪ್ರಮುಖ ಕಾರಣವೆಂದರೆ ಸಂಕೋಚದ ಕಾರಣ ಬಹುಕಾಲ ಮೂತ್ರ ವಿಸರ್ಜನೆ ಮಾಡದೇ ಇರುವುದು. ವಿಶೇಷವಾಗಿ ಮಹಿಳೆಯರು ಮನೆಯಿಂದ ಹೊರಗಿದ್ದಾಗ ಶೌಚಾಲಯದ ವ್ಯವಸ್ಥೆ ಇಲ್ಲದಿದ್ದರೆ ಸಕಾಲದಲ್ಲಿ ನಿಸರ್ಗದ ಕರೆಗೆ ಓಗೊಡದೇ ಸೂಕ್ತ ಅವಕಾಶ ಬರುವವರೆಗೆ ಕಾಯುತ್ತಾರೆ. ಪರಿಣಾಮವಾಗಿ ಮೂತ್ರಾಶಯದಲ್ಲಿ ಶೇಖರವಾದ ದ್ರವ ಹೆಚ್ಚು ಹೆಚ್ಚು ಕ್ಷಾರೀಯವಾಗಿ ಸೋಂಕು ತಗಲಲು ಪರೋಕ್ಷ ಕಾರಣವಾಗುತ್ತದೆ. ಹೆಚ್ಚು ನೀರು ಕುಡಿದರೆ ಬೇಗನೇ ಅವಸರವಾಗುವುದೆಂದು ನೀರನ್ನೂ ಕುಡಿಯದೇ ಇರುವುದೂ ಇನ್ನೊಂದು ಕಾರಣವಾಗಿದೆ.
ಆದರೆ, ನೀವು ಇನ್ನು ಇಂತಹ ಚಿಂತಿಸಬೇಕಾಗಿಲ್ಲ... ಮನೆಯಲ್ಲೇ ದೊರೆಯುವ ಅತ್ಯಂತ ಸರಳ ಪರಿಹಾರಗಳ ಮೂಲಕ ಮೂತ್ರದ ಸೋಂಕನ್ನು ನಿಮಗೆ ತಡೆಗಟ್ಟಬಹುದಾಗಿದೆ. ಇದಕ್ಕಿರುವ ಒಂದೇ ಪರಿಹಾರವೆಂದರೆ ಮೊಸರಿನ ಸೇವನೆಯಾಗಿದೆ. ನಿಮ್ಮ ಊಟದಲ್ಲಿ ಒಂದು ಬೌಲ್‌ನಷ್ಟು ಮೊಸರನ್ನು ಸೇರಿಸುವುದು ಮೂತ್ರಕೋಶದ ಸೋಂಕು ಮತ್ತು ಅದರ ವೇದನೆಯಿಂದ ನಿಮಗೆ ಪರಿಹಾರವನ್ನು ನೀಡುತ್ತದೆ. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಡಿವಾಣವನ್ನು ಹಾಕಲು ಮೊಸರು ಅತ್ಯುತ್ತಮವಾಗಿದ್ದು ಇದು ನೈಸರ್ಗಿಕ ಪ್ರತಿಜೀವಕ ಎಂದೆನಿಸಿದೆ ಅಂತೆಯೇ ನೈಸರ್ಗಿಕ ಪ್ರೊಬಯಾಟಿಕ್ ಕೂಡ ಹೌದು.
ಲ್ಯಾಕ್ಟೊಬೆಸಿಲ್ ಪ್ರಸ್ತುತಿ ಮೊಸರಿನಲ್ಲಿರುವುದರಿಂದ ಒಳ್ಳೆಯ ಬ್ಯಾಕ್ಟೀರಿಯಾವು ಕೆಟ್ಟ ಬ್ಯಾಕ್ಟೀರಿಯಾವನ್ನು ತಟೆಗಟ್ಟುವ ಯುದ್ಧದಲ್ಲಿ ಸಹಾಯಕವಾಗಲಿದೆ. ಮೊಸರು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಸಾಯಿಸುವುದರೊಂದಿಗೆ ಕರುಳಿನ ಫ್ಲೋರಾದ ನಿರ್ವಹಣೆಗೆ ಸಹಕಾರಿಯಾಗಲಿದೆ.
ಮೊಸರನ್ನು ಆಗಾಗ್ಗೆ ಹೇಗೆ ಸೇವಿಸಬೇಕು?
ಹೆಚ್ಚಿನ ಪರಿಣಿತರು ಹೇಳುವಂತೆ ಒಂದು ಬೌಲ್‌ನಷ್ಟು ಮೊಸರನ್ನು ಸೇವಿಸುವುದರಿಂದ ಮೂತ್ರ ಕೋಶದ ಸೋಂಕು ನಿವಾರಣೆಯಾಗುತ್ತದೆ ಎಂದಾಗಿದೆ. ಮನೆಯಲ್ಲೇ ಹುದುಗು ಬರಿಸಿದ ಹಾಲಿನ ಉತ್ಪನ್ನಗಳನ್ನು ವಾರದಲ್ಲಿ ಮೂರು ಬಾರಿ ಸೇವಿಸುವುದು ಮೂತ್ರ ಸೋಂಕಿನ ಲಕ್ಷಣಗಳನ್ನು ನಿವಾರಿಸುವಲ್ಲಿ ಸಹಾಯ ಮಾಡಲಿದೆ ಎಂದಾಗಿದೆ. ಇದಲ್ಲದೆ, ನಿತ್ಯವೂ ಎಂಟು ಲೋಟಗಳಷ್ಟು ನೀರನ್ನು ನೀವು ಸೇವಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಅಂತೆಯೇ ನೀರು ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುತ್ತದೆ ಎಂದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


