Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಮೂತ್ರನಾಳದ ಇನ್‌ಫೆಕ್ಷನ್‌ಗೆ ಫಲಪ್ರದ ಮನೆ ಮದ್ದುಗಳು
ಮೂತ್ರನಾಳದ ಇನ್‌ಫೆಕ್ಷನ್ ಬಂದರೆ ಹೇಗಿರುತ್ತದೆ ಎಂಬುದನ್ನು ಅನುಭವಿಸಿದವರನ್ನು ಕೇಳಿದರೆ ಅಷ್ಟೇ ಅಲ್ಲ, ನೋಡಿದವರಿಗೂ ಸಹ ಗೊತ್ತಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಈ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಗ ಅವರು ಅನುಭವಿಸುವ ಪಾಡು ಯಾರಿಗೂ ಬೇಡ. ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಪ್ರೇರೇಪಿಸುವ ಈ ಸಮಸ್ಯೆಯು ಯಾರನ್ನೇ ಆಗಲಿ ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆಯೇ?
ಆಹಾರಗಳು ಮತ್ತು ಹಣ್ಣಿನ ರಸಗಳಲ್ಲಿ ಔಷಧೀಯ ಗುಣಗಳು ಇರುತ್ತವೆ. ಆದ್ದರಿಂದ ಇವುಗಳನ್ನು ಮೂತ್ರನಾಳದ ಇನ್‌ಫೆಕ್ಷನ್ ಅಥವಾ ಸಿಸ್ಟಿಸಿಸ್‌ಗೆ ಸಹ ಬಳಸಲಾಗುತ್ತದೆ. ಇವುಗಳು ಮೂತ್ರನಾಳ ಇನ್‌ಫೆಕ್ಷನ್‌ಗೆ ಮಾತ್ರವಲ್ಲದೆ, ಮೂತ್ರಕೋಶದ ಇನ್‌ಫೆಕ್ಷನ್‌ಗೂ ಸಹ ಪರಿಹಾರವನ್ನು ಒದಗಿಸುತ್ತದೆ. ಕನ್ನಡದಲ್ಲಿ ಬೆರಿಹಣ್ಣು ಎಂದು ಕರೆಯಲ್ಪಡುವ, ಕ್ರಾನ್ ಬೆರ್ರಿ ಅಥವಾ ಬ್ಲೂಬೆರ್ರಿಯ ರಸ್ವು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಪ್ರೊಅಂಥೋಸೈಯನೈಡ್‌ಗಳು ಇರುತ್ತವೆ. ಇವು ಮೂತ್ರಕೋಶ ಗೋಡೆಗಳಿಗೆ ಬ್ಯಾಕ್ಟೀರಿಯಾ ಅಂಟಿಕೊಳ್ಳದಂತೆ ತಡೆಯುತ್ತದೆ.
ರಾಸ್ಪ್‌ಬೆರ್ರಿ, ಸ್ಟ್ರಾಬೆರ್ರಿ, ಬ್ಲೂಬೆರ್ರಿ ಮತ್ತು ಇನ್ನಿತರ ಹಣ್ಣಿನ ರಸಗಳಾದ ಸೆಲೆರಿ ಮತ್ತು ಸೌತೆಕಾಯಿ ರಸಗಳಲ್ಲಿ ಸಿಸ್ಟಿಸ್ ಅಥವಾ ಮೂತ್ರನಾಳದ ಇನ್‌ಫೆಕ್ಷನ್ ನಿವಾರಿಸುವ ಗುಣಗಳು ಯಥೇಚ್ಛವಾಗಿ ಇರುತ್ತವೆ.ಇದನ್ನು ನಿವಾರಿಸಿಕೊಳ್ಳಲು ಬೆಳಗ್ಗೆ ಎದ್ದ ಕೂಡಲೆ ಸ್ವಲ್ಪ ಬಿಸಿ ನೀರಿಗೆ ಸ್ವಲ್ಪ ನಿಂಬೆರಸವನ್ನು ಹಿಂಡಿಕೊಂಡು ಸೇವಿಸಿ. ನಿಂಬೆರಸವು ರಕ್ತದಲ್ಲಿರುವ ಪಿಎಚ್ ಪ್ರಮಾಣವನ್ನು ಬದಲಿಸುತ್ತದೆ ಮತ್ತು ಮೂತ್ರನಾಳಗಳಲ್ಲಿರುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ ಹಾಗು ಅದು ಹೆಚ್ಚಾಗಿ ಇತರೆಡೆ ಪಸರಿಸದಂತೆ ಕಾಪಾಡುತ್ತದೆ. ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!
ಮೂತ್ರನಾಳದ ಇನ್‌ಫೆಕ್ಷನ್ ಇರುವವರು ಶಿಸ್ತಾದ ಡಯಟ್ ಪಾಲಿಸುವುದರಿಂದಾಗಿ ಅದನ್ನು ಹತೋಟಿಗೆ ತರಬಹುದು. ಅಪಥ್ಯವಾದ ಆಹಾರವನ್ನು ಮತ್ತು ಹಣ್ಣಿನ ರಸವನ್ನು ಸೇವಿಸುವುದನ್ನು ಬಿಟ್ಟು, ಪರಿಹಾರವನ್ನು ನೀಡುವಂತಹ ಆಹಾರ ಮತ್ತು ಹಣ್ಣಿನ ರಸಗಳನ್ನು ಸೇವಿಸಿದರೆ ಸಮಸ್ಯೆ ನಿವಾರಣೆ ಖಂಡಿತ.ಕೆಲವೊಂದು ಆಹಾರಗಳು ನಿಮ್ಮ ಸಮಸ್ಯೆಯನ್ನು ನಿವಾರಿಸಿದರೆ, ಇನ್ನೂ ಕೆಲವು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಮೂತ್ರನಾಳದ ಇನ್‌ಫೆಕ್ಷನ್ ಇರುವವರು ನಿಮ್ಮ ಮನೆಯಲ್ಲಿ ಸಿಕ್ಕುವ ಆಹಾರ ಪದಾರ್ಥಗಳನ್ನು ಮೊದಲು ಪರಿಹಾರವಾಗಿ ಬಳಸುವುದು ಒಳ್ಳೆಯದು. ಇದರಿಂದ ನಿಮಗೆ ಅಲರ್ಜಿ ಉಂಟಾಗುವ ಸಮಸ್ಯೆ ಕಡಿಮೆ ಇರುತ್ತದೆ.ಬನ್ನಿ ಆ ಆಹಾರ ಪದಾರ್ಥಗಳು ಯಾವುವು ಎಂದು ನಾವು ಸಹ ನೋಡಿಕೊಂಡು ಬರೋಣ...

ಪಾಲಕ್ ರಸ + ಎಳೆನೀರು
ಪಾಲಕ್ ಅನ್ನು ಸಲಾಡ್‌ಗಳ ಜೊತೆಗೆ ಸೇವಿಸಬಹುದು ಅಥವಾ ರಸವನ್ನು ಮಾಡಿಕೊಂಡು ಸೇವಿಸಬಹುದು, ಇಲ್ಲವೇ ಕ್ಯಾಪ್ಸೂಲ್ ಆಗಿ ಸಹ ಸೇವಿಸಬಹುದು. ಎಳೆ ನೀರು ಮತ್ತು ಪಾಲಕ್ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿಕೊಳ್ಳಿ. ಇದನ್ನು ದಿನಕ್ಕೆ ಮೂರು ಬಾರಿ ಸೇವಿಸಿ.

ಸೌತೆಕಾಯಿ ರಸ + ನಿಂಬೆ ರಸ + ಜೇನು ತುಪ್ಪ
ಸೌತೆಕಾಯಿ ರಸವನ್ನಾದರು ಸೇವಿಸಿ ಅಥವಾ ಸೌತೆಕಾಯಿಯನ್ನಾದರು ಸೇವಿಸಿ. ಇದು ನಿಮಗೆ ಸಿಸ್ಟಿಸ್ ಮತ್ತು ಮೂತ್ರನಾಳದ ಇನ್‌ಫೆಕ್ಷನ್‌ನಿಂದ ಪರಿಹಾರವನ್ನು ತಂದು ಕೊಡುತ್ತದೆ. ಇದರ ರಸ ಮಾಡಿಕೊಂಡು ಒಂದು ಟೇಬಲ್ ಸ್ಪೂನ್ ಲಿಂಬೆರಸ ಮತ್ತು ಸ್ವಲ್ಪ ಜೇನು ತುಪ್ಪವನ್ನು ಬೆರೆಸಿಕೊಂಡು ದಿನಕ್ಕೆ ಮೂರು ಬಾರಿ ಸೇವಿಸಿ, ಇದರಿಂದ ಸಮಸ್ಯೆ ದೂರವಾಗುತ್ತದೆ.

ಹಣ್ಣುಗಳು ಮತ್ತು ಹಸಿ ತರಕಾರಿಗಳು
ಹಣ್ಣುಗಳು ಮತ್ತು ಹಸಿ ತರಕಾರಿಗಳಾಗ ಕ್ಯಾರೆಟ್, ಸೆಲೆರಿ, ಸೌತೆಕಾಯಿ ಇತ್ಯಾದಿಗಳನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ. ಈ ಹಣ್ಣುಗಳು ಮತ್ತು ಹಸಿ ತರಕಾರಿಗಳು ಸಿಸ್ಟಿಸ್ ಮತ್ತು ಮೂತ್ರನಾಳದ ಇನ್‌ಫೆಕ್ಷನ್ ನಿವಾರಿಸುವ ಗುಣಗಳನ್ನು ತಮ್ಮಲ್ಲಿ ಒಳಗೊಂಡಿರುತ್ತವೆ. ಇವು ನಿಮ್ಮ ದೇಹದಲ್ಲಿರುವ ಇತರೆ ಇನ್‌ಫೆಕ್ಷನ್ ಮತ್ತು ಬ್ಯಾಕ್ಟೀರಿಯಾಗಳನ್ನು ಸಹ ನಿವಾರಿಸುವ ಗುಣಗಳನ್ನು ಪಡೆದಿರುತ್ತವೆ.

ವಿಟಮಿನ್ ಸಿ ಇರುವ ಆಹಾರ ಸೇವಿಸಿ
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನೈಸರ್ಗಿಕವಾಗಿ ದೇಹ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಲು ವಿಟಮಿನ್ ಸಿ ನೆರವಾಗುತ್ತದೆ. ವಿಟಮಿನ್ ಸಿ ಸೇವನೆಯಿಂದ ಮೂತ್ರ ಇನ್ನಷ್ಟು ಆಮ್ಲೀಯವಾಗುವುದರಿಂದ ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಹಾಗೂ ತನ್ಮೂಲಕ ಉರಿಮೂತ್ರ ನಿವಾರಣೆಯಾಗುತ್ತದೆ. ಇದಕ್ಕಾಗಿ ವಿಟಮಿನ್ ಸಿ ಹೆಚ್ಚಿರುವ ಚೀಪುವ ಚಾಕಲೇಟುಗಳನ್ನು ಸೇವಿಸಬಹುದು. ಇಲ್ಲದಿದ್ದರೆ ವಿಟಮಿನ್ ಸಿ ಹೆಚ್ಚಿರುವ (ಕಿತ್ತಳೆ, ಮೂಸಂಬಿ, ಲಿಂಬೆ, ಅನಾನಾಸು, ಸ್ಟ್ರಾಬೆರಿ, ಟೊಮೇಟೊ ಮೊದಲಾದ ಹಣ್ಣುಗಳು) ಆಹಾರಗಳನ್ನು ಸೇವಿಸಿ.

ಶುಂಠಿ ಬೆರೆಸಿದ ಚಹಾ
ಶುಂಠಿ ನೈಸರ್ಗಿಕವಾದ ನಂಜುನಿವಾರಕವಾಗಿದ್ದು (antibacterial) ಮೂತ್ರದಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳನ್ನು ನಿಗ್ರಹಿಸುವ ಶಕ್ತಿ ಹೊಂದಿದೆ. ಜೊತೆಗೇ ಮೂತ್ರಕೋಶದಲ್ಲಿ ಸೋಂಕು ಉಂಟಾಗಿದ್ದರೆ ನಿವಾರಿಸಲೂ ನೆರವಾಗುತ್ತದೆ.ಇದಕ್ಕಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮುನ್ನ ಒಂದು ದೊಡ್ಡ ಲೋಟ ಹಾಲಿಲ್ಲದ ಚಹಾದಲ್ಲಿ ಶುಂಠಿ ಸೇರಿಸಿ (ಒಂದು ಲೋಟಕ್ಕೆ ಸುಮಾರು ಅರ್ಧ ಇಂಚಿನ ಪ್ರಮಾಣದಲ್ಲಿ) ಕುದಿಸಿ ಸೋಸಿ ಬಿಸಿಯಿರುವಾಗಲೇ ಕುಡಿಯಿರಿ.



Click it and Unblock the Notifications











