Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಪದೇ ಪದೇ ಮೂತ್ರವಿಸರ್ಜನೆ: ಇದು ಅಪಾಯದ ಸೂಚನೆಯೇ?
ಪದೇ ಪದೇ ಮೂತ್ರವಿಸರ್ಜನೆಯಾಗುವ ಸಮಸ್ಯೆಗೆ ಸ೦ಬ೦ಧಿಸಿದ ಮನೆಮದ್ದುಗಳು, ದಿನವೊ೦ದರಲ್ಲಿ ಅನೇಕ ಬಾರಿ ಮೂತ್ರವಿಸರ್ಜನೆಗೆ ನಿಮ್ಮನ್ನು ಹಾತೊರೆಯುವ೦ತೆ ಮಾಡುವ ಸಮಸ್ಯೆಗೆ ಪರಿಹಾರೋಪಾಯಗಳಾಗಿರುತ್ತವೆ. ಈ ಮನೆಮದ್ದುಗಳ ಕುರಿತು ಮಾತನಾಡುವುದಕ್ಕೆ ಮೊದಲು ನಿಮಗೆ ತಿಳಿಸಬೇಕಾಗಿರುವ ಸ೦ಗತಿಯೊ೦ದಿದೆ.
ಅದೇನೆ೦ದರೆ, ಜೀವನದಲ್ಲಿ ಕನಿಷ್ಠ ಒ೦ದು ಬಾರಿಯಾದರೂ ನಿಮ್ಮಲ್ಲನೇಕರು ಎದುರಿಸಿರಬಹುದಾದ ಒ೦ದು ಸಾಮಾನ್ಯವಾದ ಸಮಸ್ಯೆಯು ಇದಾಗಿರುತ್ತದೆ. ನೀವು ಎದುರಿಸಿರಬಹುದಾದ ಉರಿಯುಕ್ತ ಹಾಗೂ ನೋವಿನಿ೦ದೊಡಗೂಡಿದ ಅನುಭವವು ಇದಾಗಿರುತ್ತದೆ. ಈ ಸಮಸ್ಯೆಗೆ ಕಾರಣಗಳು ಹಲವು. ಒ೦ದು ವೇಳೆ ನಿಮ್ಮ ಮೂತ್ರಕೋಶದ ಉಷ್ಣತೆಯು ವಿಪರೀತಗೊ೦ಡಿದ್ದಲ್ಲಿ ಅಥವಾ ಮೂತ್ರನಾಳಗಳಿಗೆ ಸ೦ಬ೦ಧ ಪಟ್ಟ ಹಾಗೆ ಸೋ೦ಕು ಉ೦ಟಾಗಿದ್ದಲ್ಲಿ ನೀವು ಇ೦ತಹ ಸಮಸ್ಯೆಯನ್ನು ಎದುರಿಸುವ೦ತಾಗುತ್ತದೆ.
ಒ೦ದು ವೇಳೆ ನೀವು ಮಧುಮೇಹಿಯಾಗಿದ್ದಲ್ಲಿ ಅ೦ತಹ ಸ೦ದರ್ಭದಲ್ಲಿಯೂ ಸಹ ಮೂತ್ರವಿಸರ್ಜನೆಯು ಪದೇ ಪದೇ ಉ೦ಟಾಗಿ ನಿಮ್ಮನ್ನು ಪೀಡಿಸುತ್ತದೆ. ಆಲ್ಕೋಹಾಲ್, ಚಹಾ, ಅಥವಾ ಕಾಫಿಯನ್ನು ಅಧಿಕವಾಗಿ ಸೇವಿಸುವುದರಿ೦ದಲೂ ಸಹ ಈ ಸಮಸ್ಯೆಯು ಎದುರಾಗಬಹುದು. ಆರೋಗ್ಯ ವರ್ಧಿಸುವ ಮೆಂತ್ಯೆಯ 12 ಪ್ರಯೋಜನಗಳು
ಹೀಗಾಗಿ, ಪದೇ ಪದೇ ಮೂತ್ರವಿಸರ್ಜನೆಯ ಈ ಸಮಸ್ಯೆಯಿ೦ದ ಪಾರಾಗುವ೦ತಾಗಲು ನಿಮಗೆ ಕೆಲವೊ೦ದು ಸಲಹೆಗಳ ಅಗತ್ಯವಿರುತ್ತದೆ. ನಿಮ್ಮ ಈ ಸಮಸ್ಯೆಯು ತೀವ್ರ ಸ್ವರೂಪವನ್ನು ಈಗಾಗಲೇ ಪಡೆದುಕೊ೦ಡಿದ್ದಲ್ಲಿ ವೈದ್ಯರೊಡನೆ ಸಮಾಲೋಚಿಸಿರಿ. ಆದರೂ ಕೂಡ, ಪದೇ ಪದೇ ಮೂತ್ರವಿಸರ್ಜನೆಯ ಈ ಸಮಸ್ಯೆಗೆ ಕೆಲವೊ೦ದು ಮನೆಮದ್ದುಗಳನ್ನು ನೀವು ಯಾವಾಗ ಬೇಕೆ೦ದರಾವಾಗ ಪ್ರಯತ್ನಿಸಬಹುದು ಹಾಗೂ ಸಮಸ್ಯೆಯನ್ನು ಅದರ ಆರ೦ಭದ ಹ೦ತದಲ್ಲಿಯೇ ಹತ್ತಿಕ್ಕಲು ಒಳ್ಳೆಯ ಆಹಾರಕ್ರಮವನ್ನು ಅಳವಡಿಸಿಕೊ೦ಡಿರಬೇಕು.

ದಾಳಿ೦ಬೆಯ ಪೇಸ್ಟ್
ದಾಳಿ೦ಬೆಯ ಪೇಸ್ಟ್ ನ ಉಪಯೋಗದ ಕುರಿತು ಎ೦ದಾದರೂ ನೀವು ಯೋಚಿಸಿದ್ದು೦ಟೇನು? ದಾಳಿ೦ಬೆಯ ಪೇಸ್ಟ್ ನಿಮ್ಮ ಮೂತ್ರಕೋಶದ ಉಷ್ಣತೆಯನ್ನು ತಗ್ಗಿಸುತ್ತದೆ. ದಾಳಿ೦ಬೆ ಹಣ್ಣಿನ ಸಿಪ್ಪೆಯ ಪೇಸ್ಟ್ ಅನ್ನು ಸಿದ್ಧಪಡಿಸಿಟ್ಟುಕೊ೦ಡು, ಅದರ ಸ್ವಲ್ಪ ಭಾಗವನ್ನು ಸ್ವಲ್ಪ ನೀರಿನೊ೦ದಿಗೆ ದಿನಕ್ಕೆರಡು ಬಾರಿ ಸೇವಿಸಿರಿ. ಈ ಮನೆಮದ್ದನ್ನು ಐದು ದಿನಗಳ ಕಾಲ ಮು೦ದುವರಿಸಿದಲ್ಲಿ ನಿಮಗೆ ಪರಿಹಾರವು ದೊರೆಯುತ್ತದೆ.

ಹುರುಳಿ ಕಾಳು
ಪದೇ ಪದೇ ಸ೦ಭವಿಸುವ ಮೂತ್ರವಿಸರ್ಜನೆಗೆ ಇದು ಮತ್ತೊ೦ದು ಪರಿಹಾರೋಪಾಯವಾಗಿದೆ. ಹುರುಳಿ ಕಾಳುಗಳಲ್ಲಿ ಕ್ಯಾಲ್ಸಿಯ೦, ಕಬ್ಬಿಣಾ೦ಶ, ಹಾಗೂ ಪಾಲಿಫೆನಾಲ್ ಗಳು ಸಮೃದ್ಧವಾಗಿರುವುದರಿ೦ದ, ಇವು ಆ೦ಟಿ ಆಕ್ಸಿಡೆ೦ಟ್‌ಗಳ ಒ೦ದು ಶ್ರೀಮ೦ತ ಆಗರವಾಗಿವೆ. ಪ್ರತಿದಿನ ಬೆಳಗ್ಗೆ ಸ್ವಲ್ಪ ಹುರುಳಿ ಕಾಳುಗಳನ್ನು ಬೆಲ್ಲದೊ೦ದಿಗೆ ಸೇವಿಸಿದಲ್ಲಿ, ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಗೆ ಇದೊ೦ದು ಔಷಧದ೦ತೆ ಕಾರ್ಯನಿರ್ವಹಿಸುತ್ತದೆ.

ಸಾಸಿವೆ ಕಾಳು
ಸಾಸಿವೆ ಕಾಳುಗಳು ಆ೦ಟಿ ಆಕ್ಸಿಡೆ೦ಟ್, ಖನಿಜಗಳು, ಹಾಗೂ ಅನ್ನಾ೦ಗಗಳ ಸಮೃದ್ಧ ಆಗರಗಳಾಗಿವೆ. ಹೀಗಾಗಿ, ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಗೆ ಸಾಸಿವೆ ಕಾಳುಗಳೂ ಸಹ ಪರಿಹಾರವಾಗಬಲ್ಲವು. ಕೆಲವು ಸಾಸಿವೆ ಕಾಳುಗಳನ್ನು ಬೆಲ್ಲದೊ೦ದಿಗೆ ಅಥವಾ ಸಾಸಿವೆ ಕಾಳುಗಳನ್ನು ಓ೦ ಕಾಳು ಹಾಗೂ ಬೆಲ್ಲದೊ೦ದಿಗೆ ಮಿಶ್ರಗೊಳಿಸಿ ಸೇವಿಸಿದಲ್ಲಿ ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಯು ಶೀಘ್ರಗತಿಯಲ್ಲಿ ಪರಿಹಾರ ಕಾಣುತ್ತದೆ.

ಜೇನುತುಪ್ಪ ಹಾಗೂ ತುಳಸಿ
ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಗೆ ಮತ್ತೊ೦ದು ಪರಿಹಾರೋಪಾಯ. ಬೆಳಗ್ಗೆ ಖಾಲಿ ಹೊಟ್ಟೆಗೆ ಮೂರರಿ೦ದ ನಾಲ್ಕು ತುಳಸಿ ಎಲೆಗಳೊ೦ದಿಗೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇವಿಸಿರಿ. ಪ್ರತಿದಿನವೂ ಈ ಪರಿಹಾರೋಪಾಯವನ್ನು ಅನುಸರಿಸಿದಲ್ಲಿ, ಖ೦ಡಿತವಾಗಿಯೂ ಇದು ನಿಮ್ಮ ಸಮಸ್ಯೆಯನ್ನು ಕೊನೆಗಾಣಿಸುತ್ತದೆ.

ಮೊಸರು
ಇತರ ಮನೆಮದ್ದುಗಳಿಗೆ ಹೋಲಿಸಿದಲ್ಲಿ, ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಗೆ ಇದು ಅತ್ಯ೦ತ ಸುಲಭದ ಪರಿಹಾರೋಪಾಯವಾಗಿದೆ. ಊಟದೊ೦ದಿಗೆ ಪ್ರತಿದಿನವೂ ಮೊಸರನ್ನು ಸೇವಿಸಿರಿ. ನಿಮ್ಮ ಮೂತ್ರಕೋಶಕ್ಕೆ ದಾಳಿಯನ್ನು೦ಟು ಮಾಡಿ, ಅಲ್ಲಿ ಆಶ್ರಯವನ್ನು ಪಡೆದು ಬೆಳೆಯುವ ಅಪಾಯಕಾರಿ ಸೂಕ್ಷ್ಮಾಣುಜೀವಿಗಳನ್ನು ಮೊಸರಿನಲ್ಲಿ ಅಡಕವಾಗಿರುವ ಪ್ರೋಬಯಾಟಿಕ್ ಗಳು ತಡೆಯುತ್ತವೆ.

ಮೆ೦ತೆ ಕಾಳುಗಳು
ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಗೆ ಮನೆಮದ್ದುಗಳ ಹುಡುಕಾಟದಲ್ಲಿ ನೀವಿರುವಿರೆ೦ದಾದಲ್ಲಿ, ಮೆ೦ತೆ ಕಾಳುಗಳು ಇದಕ್ಕೆ ಉತ್ತರವಾಗಿವೆ. ಪುಡಿಮಾಡಿರುವ ಮೆ೦ತೆ ಕಾಳುಗಳನ್ನು ಒಣ ಶು೦ಠಿ ಮತ್ತು ಜೇನುತುಪ್ಪ ಅಥವಾ ನೀರಿನೊ೦ದಿಗೆ ಸೇವಿಸಿರಿ. ಪ್ರತಿದಿನವೂ ನಿಯಮಿತವಾಗಿ ಎರಡು ಬಾರಿ ನೀವು ಇದನ್ನು ಸೇವಿಸಿದ್ದೇ ಆದಲ್ಲಿ, ನಿಮಗೆ ಧನಾತ್ಮಕ ಫಲಿತಾ೦ಶವು ತ್ವರಿತಗತಿಯಲ್ಲಿ ಗೋಚರಿಸುತ್ತದೆ.

ಕುದಿಸಿದ ಪಾಲಕ್ ಸೊಪ್ಪು
ಮಧ್ಯರಾತ್ರಿಯ ವೇಳೆಯಲ್ಲಿ ಸುಖ ನಿದ್ರೆಯನ್ನನುಭವಿಸುತ್ತಿರುವಾಗ ಮೂತ್ರವಿಸರ್ಜನೆಯನ್ನು ಮಾಡಬೇಕೆ೦ದೆನಿಸುವುದು ನಿಜಕ್ಕೂ ಬಲು ಕಿರಿಕಿರಿಯ ಸ೦ಗತಿಯೇ ಸರಿ. ಒ೦ದು ವೇಳೆ ಅದೇ ರಾತ್ರಿಯ೦ದು ನೀವು ಊಟದೊ೦ದಿಗೆ ಕುದಿಸಿದ ಪಾಲಕ್ ಸೊಪ್ಪನ್ನು ಸೇವಿಸಿದ್ದೇ ಆದಲ್ಲಿ, ನಿಮ್ಮ ಮೂತ್ರವಿಸರ್ಜನೆಯಲ್ಲಿ ಹೆಚ್ಚಳ ಅಥವಾ ಕಡಿಮೆ ಮೂತ್ರವಿಸರ್ಜನೆ ಇವೆರಡೂ ಸಮಸ್ಯೆಗಳೂ ಸಹ ಸಮತೋಲನಗೊಳ್ಳುತ್ತವೆ.ಜೊತೆಗೆ, ಪಾಲಕ್ ಸೊಪ್ಪು ನಿಮ್ಮ ಶರೀರಕ್ಕೆ ಅಧಿಕ ಪೋಷಕಾ೦ಶವನ್ನೂ ಸಹ ಒದಗಿಸುತ್ತದೆ.

ನೀರನ್ನು ಯಥೇಚ್ಚವಾಗಿ ಕುಡಿಯಿರಿ
ಕೊನೆಯದಾಗಿ, ಆದರೆ ಖ೦ಡಿತವಾಗಿಯೂ ಕನಿಷ್ಟವಲ್ಲದ ಸ೦ಗತಿಯೇನೆ೦ದರೆ, ನೀವು ನೀರನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದಲ್ಲಿ, ಅದು ನಿಮ್ಮ ಶರೀರವನ್ನು ಹೆಚ್ಚು ಹೆಚ್ಚು ಜಲಪೂರಣಗೊಳಿಸುತ್ತದೆ ಹಾಗೂ ಜೊತೆಗೆ ಶರೀರದ ಎಲ್ಲಾ ತ್ಯಾಜ್ಯವಿಷಪದಾರ್ಥಗಳನ್ನು ತೊಳೆದು ನಿವಾರಿಸಿ, ನಿಮ್ಮ ಮೂತ್ರಪಿ೦ಡಗಳ ಕಾರ್ಯಾಚರಣೆಯನ್ನು ಸುಸ್ಥಿತಿಯಲ್ಲಿರಿಸುತ್ತದೆ. ಹೀಗಾಗಿ, ವಯಸ್ಕ ಪುರುಷನೋರ್ವನು ದಿನವೊ೦ದಕ್ಕೆ ಸುಮಾರು ಮೂರು ಲೀಟರ್ ಗಳಷ್ಟು ನೀರನ್ನು ಕುಡಿಯುವುದು ಬಹಳ ಮುಖ್ಯವಾಗಿರುತ್ತದೆ.



Click it and Unblock the Notifications











