Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಹ್ಯಾದ್ರಿ ಬೆಟ್ಟದ ಒಡೆಯ 'ಏಲಕ್ಕಿಯ' ಅದ್ಭುತ ಪವರ್!
ಸುಮಾರು ನಾಲ್ಕು ಸಾವಿರ ವರ್ಷಗಳಿಂದ ಭಾರತದ ಮುಖ್ಯ ಸಾಂಬಾರು ವಸ್ತುವಾದ ಏಲಕ್ಕಿ ತನ್ನ ಘಮಘಮ ಪರಿಮಳದ ಮೂಲಕ ಬ್ರಿಟಿಷರನ್ನೂ ಆಕರ್ಷಿಸಿತು. ನಮ್ಮ ಸಹ್ಯಾದ್ರಿ ಬೆಟ್ಟಗಳ ದಕ್ಷಿಣ ಭಾಗ (ಕೇರಳ ಮತ್ತು ತಮಿಳುನಾಡು ಗಡಿಯ ಭಾಗ) ಇದಕ್ಕೆ ಮೂಲ. ಆದ್ದರಿಂದಲೇ ಈ ಬೆಟ್ಟಗಳಿಗೆ ಏಲಕ್ಕಿ ಬೆಟ್ಟಗಳೆಂಬ ಹೆಸರಿದೆ. ಏಲಕ್ಕಿಯನ್ನು ಮಸಾಲೆ ಪದಾರ್ಥಗಳ ರಾಣಿ ಎಂದೂ ಕರೆಯಲಾಗುತ್ತದೆ.
ಕೇಸರಿ ಮತ್ತು ವನಿಲ್ಲಾ ಬಿಟ್ಟರೆ ಏಲಕ್ಕಿಯೇ ಅತಿ ಹೆಚ್ಚು ಬೆಲೆಬಾಳುವ ಸಾಂಬಾರ ಪದಾರ್ಥ. ಇದರ ಪರಿಮಳಕ್ಕೆ ಮನಸೋಲದವರಿಲ್ಲ. ಯಾವುದೇ ಅಡುಗೆ, ಅಷ್ಟೇ ಏಕೆ ಕೇವಲ ಒಂದು ಏಲಕ್ಕಿಯನ್ನು ನೀವು ಕುಡಿಯುವ ಟೀಯಲ್ಲಿ ಅಥವಾ ತಿನಿಸಿನಲ್ಲಿ ಬೆರೆಸಿದರೂ ಅದರ ರುಚಿ ಮತ್ತು ಪರಿಮಳ ಆ ಪೇಯ ಅಥವಾ ಖಾದ್ಯದ ರುಚಿಯನ್ನು ಹೆಚ್ಚಿಸುತ್ತದೆ. ತಲೆ ನೋವೆ? ಹಾಗಿದ್ದರೆ ಏಲಕ್ಕಿ ಜಗಿಯಿರಿ!
ಏಲಕ್ಕಿಯಲ್ಲಿ ಹಸಿರು ಮತ್ತು ಕಂದು ಎಂಬ ಎರಡು ಬಗೆಗಳಿವೆ. ಹಸಿರು ಏಲಕ್ಕಿ ಕೊಂಚ ದುಬಾರಿಯಾಗಿದ್ದರೂ ಪರಿಮಳ ಹೆಚ್ಚು. ಇದರಲ್ಲಿರುವ ಪೋಷಕಾಂಶಗಳ ಪಟ್ಟಿ ನೋಡಿದರೆ ತಬ್ಬಿಬ್ಬಾಗುತ್ತದೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ವಿವಿಧ ಖನಿಜಗಳು, ಕ್ಯಾಲ್ಸಿಯಂ, ಗಂಧಕ, ವಿಟಮಿನ್‌ಗಳು ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳಿವೆ. ಆರೋಗ್ಯದ ದೃಷ್ಟಿಯಿಂದಲೂ ಏಲಕ್ಕಿ ಬಹಳ ಮಹತ್ವದ್ದಾಗಿದೆ.
ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ಕ್ಯಾನ್ಸರ್ ಬರದಂತೆ ತಡೆಗಟ್ಟುವುದು, ಮುಪ್ಪು ಬೇಗನೇ ಆವರಿಸುವುದನ್ನು ತಡೆಗಟ್ಟುವುದು, ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವುದು, ಹಲ್ಲಿನ ತೊಂದರೆಗಳನ್ನು ಕಡಿಮೆ ಮಾಡುವುದು ಮೊದಲಾದ ಗುಣಗಳಿವೆ. ಪರಿಮಳದ ಮೂಲಕ ರೋಗವನ್ನು ನಿವಾರಿಸುವ ವಿಧಾನವಾದ ಆರೋಮಾಪಥಿಯಲ್ಲಿ ಏಲಕ್ಕಿಗೆ ಪ್ರಮುಖ ಸ್ಥಾನವಿದೆ. ಇದರ ಪರಿಮಳವನ್ನು ಹೀರುವುದರಿಂದ ಮನಸ್ಸು ನಿರಾಳ ಮತ್ತು ನಿರುದ್ವಿಗ್ನವಾಗುವುದನ್ನೂ ಕಂಡುಕೊಳ್ಳಲಾಗಿದೆ. ಕಪ್ಪು ಏಲಕ್ಕಿಯಲ್ಲಿರುವ ವಿಶೇಷತೆ ಏನೆಂದು ಗೊತ್ತಿದೆಯೇ?
ಹೆಚ್ಚಿನವರಿಗೆ ಏಲಕ್ಕಿ ಎಂದರೆ ಕೇವಲ ಅಡುಗೆಗೆ ರುಚಿ ಮತ್ತು ಪರಿಮಳ ಹೆಚ್ಚಿಸುವ ಒಂದು ಸಾಂಬಾರ ಪದಾರ್ಥ ಮಾತ್ರ. ಇನ್ನೂ ಹೆಚ್ಚೆಂದರೆ ಅಪರಿಚಿತ ಸ್ಥಳದಲ್ಲಿ ಊಟ ಮಾಡಿದ ಬಳಿಕ ಊಟದಲ್ಲಿ ಔಷಧಿ (ಓರ್ವರನ್ನು ವಶಪಡಿಸಿಕೊಳ್ಳಲು ಉಪಯೋಗಿಸುವ ಮಾಟದ ವಸ್ತು) ಹಾಕಿರುವ ಅನುಮಾನವಿದ್ದರೆ ಬಳಿಕ ಕಡ್ಡಾಯವಾಗಿ ತಿನ್ನುವ ವಸ್ತುವಾಗಿದೆ. ಆದರೆ ವಾಸ್ತವವಾಗಿ ಏಲಕ್ಕಿ ಇದಕ್ಕೂ ಹೆಚ್ಚಿನ ಆರೋಗ್ಯಕರ ಆಹಾರವಾಗಿದೆ. ಇದರ ಸದ್ಗುಣಗಳಲ್ಲಿ ಪ್ರಮುಖವಾದ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಬಾಯಿಯ ದುರ್ವಾಸನೆ ಹೋಗಲಾಡಿಸಲು
ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದಿನಿಂದಲೂ ಈಜಿಪ್ಟ್‌ನಲ್ಲಿ ಏಲಕ್ಕಿಯನ್ನು ಬಾಯಿಯ ದುರ್ವಾಸನೆ ನಿವಾರಿಸಲು ಉಪಯೋಗಿಸಲಾಗುತ್ತಿತ್ತು ಎಂದು ಇತಿಹಾಸ ತಿಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಾಯಿಯ ದುರ್ವಾಸನೆ ಹೋಗಲಾಡಿಸಲು
ಕೇವಲ ಒಂದು ಏಲಕ್ಕಿಯನ್ನು ಊಟದ ಬಳಿಕ ಜಗಿದು ನುಂಗುವುದರಿಂದ ಬಾಯಿಯ ದುರ್ವಾಸನೆ ಇಲ್ಲವಾಗುತ್ತದೆ ಹಾಗೂ ಬಹಳ ಹೊತ್ತಿನವರೆಗೆ ಬಾಯಿ ಸುವಾಸನೆಯಿಂದ ಕೂಡಿರುತ್ತದೆ.

ಶೀತ, ಗಂಟಲ ಬೇನೆ, ಕೆಮ್ಮನ್ನು ಕಡಿಮೆಗೊಳಿಸುತ್ತದೆ
ಏಲಕ್ಕಿಯನ್ನು ಬಿಸಿನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಗಂಟಲ ಬೇನೆ ಮತ್ತು ಕೆಮ್ಮು ಕಡಿಮೆಯಾಗುತ್ತದೆಇದರಿಂದ ಶ್ವಾಸವ್ಯವಸ್ಥೆಗೆ ಹೆಚ್ಚಿನ ರಕ್ತಸಂಚಾರ ಲಭ್ಯವಾಗಿ ಶೀತ, ಕೆಮ್ಮು ಮತ್ತು ಗಂಟಲಬೇನೆಗೆ ಕಾರಣವಾದ ಕ್ರಿಮಿಗಳನ್ನು ದೇಹ ಹೊರದೂಡಲು ನೆರವಾಗುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಏಲಕ್ಕಿಯಲ್ಲಿ ಅಲ್ಪ ಪ್ರಮಾಣದ ಎಣ್ಣೆ ಇದೆ. ಊಟವಾದ ಬಳಿಕ ಒಂದೆರಡು ಏಲಕ್ಕಿಗಳನ್ನು ಜಗಿದು ನುಂಗುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಜಠರದ ಉರಿಯನ್ನು ಕಡಿಮೆಗೊಳಿಸುತ್ತದೆ. ಊಟದಲ್ಲಿ ಆಮ್ಲೀಯತೆ ಹೆಚ್ಚಿದ್ದರೆ ಉಂಟಾಗುವ ಉರಿಯಿಂದಲೂ ಈ ಎಣ್ಣೆ ರಕ್ಷಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಅಜೀರ್ಣ, ಮಲಬದ್ಧತೆಗೂ ಏಲಕ್ಕಿಯ ಸೇವನೆ ಉತ್ತಮವಾಗಿದೆ. ಒಂದು ವೇಳೆ ಹೊಟ್ಟೆ ಕೆಟ್ಟಿದ್ದರೆ ಹಾಲಿಲ್ಲದ ಒಂದು ಲೋಟ ಚಹಾದಲ್ಲಿ ಒಂದೆರಡು ಏಲಕ್ಕಿಗಳನ್ನು ಕುದಿಸಿ ಕುಡಿಯುವ ಮೂಲಕ ತಕ್ಷಣ ಪರಿಹಾರ ಪಡೆಯಬಹುದು.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ
ಏಲಕ್ಕಿಯಲ್ಲಿ ವಿಷಕಾರಿ ವಸ್ತುಗಳನ್ನು ನಿವಾರಿಸುವ ಗುಣವಿದೆ. ಏಲಕ್ಕಿಯ ಎಣ್ಣೆಯಲ್ಲಿ ಈ ವಿಷಗಳನ್ನು ದೇಹದಿಂದ ಹೊರಹಾಕುವ ಗುಣವಿದೆ.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ
ಈ ಗುಣವೇ ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸಿ ಮೂತ್ರಪಿಂಡಗಳಲ್ಲಿ ಈಗಾಗಲೇ ಶೇಖರವಾಗಿರಬಹುದಾದ ಕಲ್ಮಶಗಳನ್ನು ಹೊರಹಾಕಿ ಕಲ್ಲುಗಳಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಏಲಕ್ಕಿಯಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (low density lipoproteins) ಅಥವಾ ಲಿಪಿಡ್ಸ್ ಎನ್ನುವ ಜಿಡ್ಡುಪದಾರ್ಥವನ್ನು ತೊಲಗಿಸಲು ನೆರವಾಗುತ್ತವೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಈ ಲಿಪಿಡ್ಸ್‌ಗಳನ್ನು ಆಕರ್ಷಿಸಿ ತಮ್ಮೊಂದಿಗೆ ದೇಹದಿಂದ ಹೊರಹೋಗುವಂತೆ ಮಾಡುತ್ತವೆ.

ಕ್ಯಾನ್ಸರ್ ಬರದಂತೆ ರಕ್ಷಿಸುತ್ತದೆ
ಏಲಕ್ಕಿಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಫೋಟೋ ಕೆಮಿಕಲ್ಸ್ ಎಂಬ ಕಣಗಳು ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸುವ ಮೂಲಕ ಕ್ಯಾನ್ಸರ್ ಬರದಂತೆ ರಕ್ಷಿಸುತ್ತದೆ.

ಕ್ಯಾನ್ಸರ್ ಬರದಂತೆ ರಕ್ಷಿಸುತ್ತದೆ
ಕ್ಯಾನ್ಸರ್‌ಗೆ ಪ್ರೇರಣೆ ನೀಡುವ ಅನುವಂಶಿಕ ಕಾರಣವನ್ನು ಏಲಕ್ಕಿ ತಡೆಯುವ ಮೂಲಕ ಕ್ಯಾನ್ಸರ್‌ನ ಸಾಧ್ಯತೆಯನ್ನು ದೂರವಾಗಿಸುತ್ತದೆ.

ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ
ಏಲಕ್ಕಿಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ಒಂದು ಉತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು ರಕ್ತಸಂಚಾರವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ.



Click it and Unblock the Notifications


