Just In
- 1 hr ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- 2 hrs ago ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- 3 hrs ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- 7 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- News Heavy Rain: ಮಳೆ.. ಮಳೆ.. ಭಾರಿ ಮಳೆಗೆ 100 ಜನ ಬಲಿ!
- Movies ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೆಂಗ್ಯೂ ಜ್ವರವನ್ನು ಹತೋಟಿಯಲ್ಲಿಡುವ ಟಾಪ್ ಫುಡ್
ಡೆಂಗ್ಯೂ ಜ್ವರ ಒಂದು ಮರುಕಳಿಸುವ ರೋಗವಾಗಿದ್ದು ಪ್ರಾರಂಭದಲ್ಲಿ ಗೊತ್ತೇ ಆಗದೇ ಉಲ್ಬಣವಾದ ಬಳಿಕವೇ ಪ್ರಕಟಗೊಳ್ಳುವ ಒಂದು ವ್ಯಾಧಿಯಾಗಿದೆ. ಮಲೇರಿಯಾದಂತೆಯೇ ಡೆಂಗ್ಯೂ ಸಹಾ ಸೊಳ್ಳೆಗಳ ಕಡಿತದಿಂದ ರಕ್ತಕ್ಕೆ ಒಂದು ವೈರಸ್ ಸೇರಿಕೊಂಡ ಮೂಲಕ ಪ್ರಾರಂಭವಾಗುತ್ತದೆ. ಮಲೇರಿಯಾವನ್ನು ಹತ್ತಿಕ್ಕಿದಂತೆಯೇ ಡೆಂಗ್ಯೂವನ್ನೂ ಹತ್ತಿಕ್ಕಲು ಈಗ ಪ್ರಯತ್ನಗಳು ವಿಶ್ವದಾದ್ಯಂತ ಜಾರಿಯಲ್ಲಿವೆ. ಡೆಂಗ್ಯೂವನ್ನು ನಿಯಂತ್ರಿಸುವುದು ಹೇಗೆ?
ಡೆಂಗ್ಯೂ ಜ್ವರದ ಲಕ್ಷಣಗಳೆಂದರೆ ಥಟ್ಟನೇ ಮೈಬಿಸಿಯಾಗಿ ತೀವ್ರ ತಾಪಮಾನವನ್ನು ಪಡೆಯುವುದು, ಕಣ್ಣುಗಳ ಹಿಂಭಾಗದಲ್ಲಿ ನೋವು, ತಲೆನೋವು, ವಾಕರಿಕೆ, ವಾಂತಿ ಮೊದಲಾದವು. ಇದುವರೆಗೆ ಡೆಂಗಿ ಜ್ವರಕ್ಕೆ ಸಿದ್ಧ ಔಷಧವನ್ನು ಕಂಡುಹಿಡಿಯಲಾಗಿಲ್ಲ, ಆದರೆ ಸಂಶೋಧನೆಗಳು ಮುಂದುವರೆಯುತ್ತಿವೆ. ಈ ಸಂದರ್ಭದಲ್ಲಿ ವೈದ್ಯರು ಲಭ್ಯವಿರುವ ಪ್ಯಾರಾಸೆಟಮಾಲ್, ಅನಾಲ್ಜೆಸಿಕ್ ಮೊದಲಾದ ಔಷಧಿಗಳಿಂದಲೇ ಜ್ವರ ಕಡಿಮೆಯಾಗಿಸಲು ಯತ್ನಿಸುತ್ತಾರೆ. ಮಳೆಗಾಲದಲ್ಲಿ ಕಾಡುವ ಡೆಂಗ್ಯೂ ಬಗ್ಗೆ ಎಚ್ಚರ
ಈ
ಜ್ವರವಿದ್ದವರು
ಹೆಚ್ಚಿನ
ದ್ರವಾಹಾರಗಳನ್ನು,
ಹಸಿರು
ತರಕಾರಿ,
ಸೊಪ್ಪು
ಮತ್ತು
ಪ್ರೋಟೀನ್
ಇರುವ
ಆಹಾರಗಳನ್ನು
ಸೇವಿಸುವುದರಿಂದ
ದೇಹ
ಕಳೆದುಕೊಂಡಿದ್ದ
ತ್ರಾಣವನ್ನು
ಬೇಗನೇ
ಪಡೆಯಬಹುದು.
ಇಂತಹ
ಆಹಾರಗಳ
ಬಗ್ಗೆ
ಕೆಳಗಿನ
ಸ್ಲೈಡ್
ಶೋ
ಮೂಲಕ
ಮಹತ್ವದ
ಮಾಹಿತಿಗಳನ್ನು
ನೀಡಲಾಗಿದೆ..
ಹೆಚ್ಚಿನ ದ್ರವಾಹಾರಗಳನ್ನು ಸೇವಿಸಿ
ಡೆಂಗಿ ಜ್ವರ ಎಂದು ಗೊತ್ತಾದ ಕ್ಷಣದಿಂದ ನಿಮ್ಮ ಆಹಾರದಲ್ಲಿ ದ್ರವಗಳು ಹೆಚ್ಚಿರುವಂತೆ ನೋಡಿಕೊಳ್ಳಿ. ಔಷಧಿ ಅಂಗಡಿಯಲ್ಲಿ ದೊರಕುವ ಓಆರ್ ಎಸ್ (ORS), ಕಬ್ಬಿನ ಹಾಲು, ಎಳನೀರು, ಲಿಂಬೆಹಣ್ಣಿನ ಶರಬತ್ತು, ಈಗತಾನೇ ಹಿಂಡಿದ ಕಿತ್ತಳೆಯ ರಸ, ವಿವಿಧ ತಾಜಾ ಹಣ್ಣುಗಳ ರಸಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನಿಯಮಿತವಾಗಿ ಅಂದರೆ ಗಂಟೆಗೊಂದು ಲೋಟ ಕುಡಿಯುತ್ತಲೇ ಇರುವುದರಿಂದ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ವಿವಿಧ ಹಣ್ಣುಗಳ ರಸದ ಮೂಲಕ ಲಭ್ಯವಾದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಡೆಂಗಿ ವೈರಸ್ಸುಗಳನ್ನು ಸದೆಬಡಿಯಲು ಸಕ್ಷಮವಾಗುತ್ತದೆ.
ಪ್ರೋಟೀನ್ ಹೆಚ್ಚಿರುವ ಆಹಾರಗಳನ್ನು ಸೇವಿಸಿ
ಹಾಲಿನ ಉತ್ಪನ್ನಗಳು, ಮೊಟ್ಟೆ, ಕೋಳಿಮಾಂಸ ಮತ್ತು ಮೀನುಗಳಲ್ಲಿ ಪ್ರೋಟೀನುಗಳು ಯಥೇಚ್ಛವಾಗಿದ್ದು ಡೆಂಗ್ಯೂ ಜ್ವರ ಪೀಡಿತರಿಗೆ ಉತ್ತಮ ನೆರವು ನೀಡಬಲ್ಲುದು. ಜ್ವರ ನಿಧಾನವಾಗಿ ಇಳಿಯುತ್ತಾ ಬಂದ ಬಳಿಕವೂ ಪ್ರೋಟೀನುಗಳ ಸೇವನೆಯನ್ನು ಮುಂದುವರೆಸುವುದು ಅಗತ್ಯ. ಏಕೆಂದರ್ ಜ್ವರವಿದ್ದಾಗ ದೇಹ ಕಳೆದುಕೊಂಡ ಪೋಷಕಾಂಶ ಮತ್ತು ತ್ರಾಣವನ್ನು ಮರುತುಂಬಿಸಲು ಈ ಪ್ರೋಟೀನುಗಳು ನೆರವಾಗುತ್ತವೆ.
ಪಪ್ಪಾಯಿ ಎಲೆಯ ರಸ ಉಪಯುಕ್ತವಾಗಬಲ್ಲುದು
ಗ್ರಾಮೀಣ ಜನತೆ ವೈದ್ಯರ ಬಳಿ ಬರುವ ಮುನ್ನ ತಮ್ಮ ಮನೆಮದ್ದುಗಳನ್ನು ಮೊದಲು ಪ್ರಯೋಗಿಸುತ್ತಾರೆ. ಡೆಂಗ್ಯೂ ಜ್ವರ ಎಂದು ಹೆಸರಿನಿಂದ ಅರಿವಿರದಿದ್ದರೂ ಈ ರೋಗದ ಲಕ್ಷಣ ಅರಿತವರು ಪಪ್ಪಾಯಿ ಮರದ ಎಲೆಗಳನ್ನು ಅರೆದು ಅದರ ರಸವನ್ನು ಹಿಂಡಿ ರೋಗಿಗೆ ಕುಡಿಸುವ ಮೂಲಕ ಹಲವಾರು ವರ್ಷಗಳಿಂದ ಈ ಜ್ವರದ ಮೇಲೆ ಹತೋಟಿ ಸಾಧಿಸುತ್ತಾ ಬಂದಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಪಪ್ಪಾಯಿ ಎಲೆಯ ರಸ ಉಪಯುಕ್ತವಾಗಬಲ್ಲುದು
ಇದೊಂದು ನಿರೂಪಿತ ವಿಧಾನವಾದುದರಿಂದ ಪಪ್ಪಾಯಿ ಎಲೆಗಳ ರಸವನ್ನು ಕುಡಿಯುವುದು ಉತ್ತಮ. ಪ್ರತಿ ಬಾರಿ ಒಂದರಿಂದ ಎರಡು ಚಮಚದಷ್ಟು ಪ್ರಮಾಣದಲ್ಲಿ ದಿನಕ್ಕೆ ಮೂರು ಬಾರಿ ರಸವನ್ನು ಸೇವಿಸಬಹುದು.
ಹಸಿರು ತರಕಾರಿ ಮತ್ತು ಸೊಪ್ಪುಗಳನ್ನು ಸೇವಿಸಿ
ಬಸಲೆ, ಪಾಲಕ್ ಮೊದಲಾದ ದಪ್ಪ ಎಲೆಯ ಸೊಪ್ಪು ಮತ್ತು ಇತರ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೂಲಕವೂ ಡೆಂಗಿಜ್ವರವನ್ನು ಕಡಿಮೆಗೊಳಿಸಲು ಸಾಧ್ಯ. ಆದರೆ ಸೊಪ್ಪನ್ನೇ ಆಗಲಿ ತರಕಾರಿಗಳನ್ನೇ ಆಗಲಿ ಪೂರ್ಣವಾಗಿ ಬೇಯಿಸಬೇಡಿ, ಇದರಿಂದ ಆ ತರಕಾರಿಗಳ ಅಗತ್ಯ ಪೋಷಕಾಂಶಗಳು ಪೋಲಾಗಿ ಹೋಗುತ್ತವೆ. ಆದ್ದರಿಂದ ರುಚಿಯಲ್ಲಿ ಮತ್ತು ಪೂರ್ಣವಾಗಿ ಮೆದುವಾಗದಿದ್ದರೂ ಜ್ವರ ಬಿಡುವವರೆಗೆ ಈ ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ.
ಮಸಾಲೆ ಮತ್ತು ಎಣ್ಣೆಯ ತಿಂಡಿಗಳನ್ನು ತ್ಯಜಿಸಿ
ಈ ಜ್ವರವಿದ್ದಾಗ ಮತ್ತು ಜ್ವರ ಬಿಟ್ಟ ಕೆಲವು ದಿನಗಳವರೆಗೆ ಮಸಾಲೆಯುಕ್ತ ಮತ್ತು ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿಗಳಿಗೆ ವಿದಾಯ ಹೇಳಿ.ಇವುಗಳನ್ನು ಜೀರ್ಣಿಸಿಕೊಳ್ಳುವುದು ರೋಗಿಗಳಿಗೆ ಕಷ್ಟ. ಅಲ್ಲದೇ ಇವುಗಳನ್ನು ಜೀರ್ಣಿಸಿಕೊಳ್ಳಲು ದೇಹ ಅಧಿಕ ಶಕ್ತಿಯನ್ನು ಬಳಸಬೇಕಾದುದರಿಂದ ಅತ್ತ ದೇಹದ ರೋಗ ನಿರೋಧಕ ಶಕ್ತಿಯ ಹಿಡಿತ ತಪ್ಪಿದ ವೈರಸ್ಸುಗಳು ಮತ್ತೆ ತಮ್ಮ ಬಲವೃದ್ಧಿಸಿಕೊಂಡು ಜ್ವರವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.