Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಜೀರ್ಣಕ್ರಿಯೆ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ?
ನಿಮ್ಮ ಮೂತ್ರ ಪಿಂಕ್/ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಲೋ ಸ್ಟಮಕ್ ಆಸಿಡ್ ಅಥವಾ ಹೊಟ್ಟೆಯ ಕಡಿಮೆ ಆಮ್ಲೀಯತೆ ಇದ್ದಂತೆ. ಜೀರ್ಣಕ್ರಿಯೆಯಲ್ಲಿ ಮುಖ್ಯವಾದ ಮೊದಲ ಹಂತ ಹೊಟ್ಟೆ ಆಮ್ಲೀಯತೆಯಾಗಿದೆ. ಇದು ಸಾಕಷ್ಟಿಲ್ಲದಿದ್ದರೆ ನಿಮಗೆ ಬಿ12 ಅನ್ನು ಹೀರಿಕೊಳ್ಳಲಾಗುವಿದಿಲ್ಲ, ಮತ್ತು ಝಿಂಕ್ ಮತ್ತು ಇತರ ಕೆಲವು ನ್ಯೂಟ್ರಿಯಂಟ್ಸ್‌ಗಳನ್ನು ಗ್ರಹಿಸುವಲ್ಲಿ ನಿಮಗೆ ಸಮಸ್ಯೆ ತಲೆದೋರುತ್ತದೆ.
ಹೊಟ್ಟೆಯಲ್ಲಿ ಕಡಿಮೆ ಆಮ್ಲೀಯತೆ ಉಂಟಾಗುವುದಕ್ಕೆ ಹಲವಾರು ಕಾರಣಗಳಿದ್ದು, ದೈಹಿಕ ಚಟುವಟಿಕೆಗೆ ಇದು ನಿರ್ಬಂಧವನ್ನು ಹೇರುತ್ತದೆ. ಪೋಷಕಾಂಶಗಳ ಅಭಾವ ನಿಮ್ಮನ್ನು ಕಾಡಬಹುದು.ಆಮ್ಲೀಯತೆಯ ಪ್ರಮಾಣ ಕಡಿಮೆಯಾದರೆ ಹಲವಾರು ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಉಂಟಾಗುತ್ತವೆ.

ಆಹಾರದಲ್ಲಿನ ಮೂಲ ಅಂಶಗಳನ್ನು ಗ್ರಹಿಸುವಲ್ಲಿ ಕಡಿಮೆ ಆಮ್ಲೀಯತೆ ವಿಫಲಗೊಳ್ಳುತ್ತದೆ. ಜೀರ್ಣಕ್ರಿಯೆ ನಿಧಾನಗೊಂಡು ಮಲಬದ್ಧತೆ, ವಾಯು, ಹೊಟ್ಟೆ ಊದುವಿಕೆ ಸಮಸ್ಯೆಗಳು ನಿಮ್ಮನ್ನುಕಾಡಬಹುದು. ಇಲ್ಲಿ ನಾವು ನೀಡಿರುವ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಆಮ್ಲೀಯತೆ ಸಮಸ್ಯೆಯನ್ನು ನಿಮಗೆ ನಿಯಂತ್ರಿಸಬಹುದಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೊಟ್ಟೆ ನೋವು, ಅಜೀರ್ಣಕ್ಕೆ ಇಲ್ಲಿದೆ ಮನೆಮದ್ದು
ನಿಮ್ಮ ಹೊಟ್ಡೆಯಲ್ಲಿ ಆಮ್ಲೀಯತೆ ಸಾಕಷ್ಟಿಲ್ಲದಿದ್ದರೆ, ಪ್ರೋಟೀನ್‌ಗಳು ಸೂಕ್ತವಾಗಿ ಕರಗುವುದಿಲ್ಲ, ಹಾಗೂ ಸಣ್ಣ ಕರುಳಲ್ಲಿ ಅವುಗಳು ತೊಂದರೆಯನ್ನುಂಟು ಮಾಡಿ ರಕ್ತಪ್ರವಾಹದಲ್ಲಿ ಪೂರ್ಣವಾಗಿ ಹೀರಲ್ಪಡುತ್ತವೆ. ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ಮಾಡುವ ಮಿನರಲ್ ಕೊರತೆಗೆ ಲೋ ಸ್ಟಮಕ್ ಆಸಿಟ್ ಹೊಟ್ಟೆಯ ಕಡಿಮೆ ಆಮ್ಲೀಯತೆ ಕಾರಣವಾಗುತ್ತದೆ. ನಿಮ್ಮ ದೇಹದ ಆರೋಗ್ಯಕ್ಕೆ ಬೇಕಾಗಿರುವುದು ಸೂಕ್ತ ಹಾಗೂ ಪ್ರಮಾಣಬದ್ಧವಾದ ಹೊಟ್ಟೆಯ ಆಮ್ಲೀಯ ಮಟ್ಟವಾಗಿದೆ.
ಕಡಿಮೆ ಆಮ್ಲೀಯತೆಯ ಸಾಮಾನ್ಯ ರೋಗಲಕ್ಷಣಗಳೆಂದರೆ ವಿಪರೀತ ಬೆಲ್ಚಿಂಗ್ ಅಥವಾ ವಾಯು ನಿರ್ದಿಷ್ಟವಾಗಿ ಊಟದ ನಂತರ, ಮಲ ಅವ್ಯವಸ್ಥೆ, ಹೊಟ್ಟೆ ಊದುವುದು, ಎದೆಯುರಿ (ಹೆಚ್ಚು ಪ್ರಮಾಣದ ಹೊಟ್ಟೆ ಆಮ್ಲೀಯತೆಯಿಂದ ಉಂಟಾಗಬಹುದು), ಒಣ ತ್ವಚೆ, ಕಬ್ಬಿಣದ ಕೊರತೆ, ಮಲದಲ್ಲಿ ಕರಗದ ಆಹಾರಗಳು, ತೀವ್ರ ಬಳಲಿಕೆ ಇತ್ಯಾದಿ.
ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಯಾಗುವುದು ನೈಸರ್ಗಿಕವಾಗಿ ಹೊಟ್ಟೆಯ ಆಮ್ಲೀಯತೆಯನ್ನು ಸುಧಾರಿಸುವ ಉತ್ತಮ ವಿಧಾನವಾಗಿದೆ, ಹೆಚ್ಚು ಪ್ರಕ್ರಿಯಿಸಿದ ಆಹಾರಗಳು ಅಂದರೆ ಫಾಸ್ಟ್ ಫುಡ್‌ಗಳನ್ನು ನಿರ್ಲಕ್ಷಿಸಬೇಕು ಮತ್ತು ಪೋಷಕಾಂಶವುಳ್ಳ ಆಹಾರ ಹಾಗೂ ಪಾನೀಯವನ್ನು ನಿಮ್ಮ ಆಹಾರದಲ್ಲಿ ತೆಗೆದುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೊಟ್ಟೆ ಉಬ್ಬರಕ್ಕೆ ತಕ್ಷಣದ ಪರಿಹಾರ
ಈ ವಿಧಾನದಲ್ಲಿ ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವುದು ಮತ್ತು ಸುಧಾರಿಸುವುದು ಕ್ಲುಪ್ತತೆ ಹಾಗೂ ನಿಮ್ಮ ಹೊಟ್ಟೆಯನ್ನು ಬಲಪಡಿಸುತ್ತದೆ, ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೈಸರ್ಗಿಕ ಕ್ಷಾರೀಯ/ಇಲೆಕ್ಟ್ರೋಲೈಟ್ ಅಂಶವನ್ನು ದೇಹಕ್ಕೆ ತೆಗೆದುಕೊಳ್ಳುವುದು, ಅಂದರೆ ಕೋರಲ್ ಕ್ಯಾಲ್ಶಿಯಂ, ಹೊಟ್ಟೆ ಹಾಗೂ ದೇಹವನ್ನು ಬಲಯುತಗೊಳಿಸುವಲ್ಲಿ ಸಹಕಾರಿಯಾಗಿವೆ, ಕಡಿಮೆ ಆಮ್ಲೀಯತೆ ಸಮಸ್ಯೆ ಉಂಟಾದಾಗ ಸಂಭವಿಸುವ ಯಾವುದೇ ಸಮಸ್ಯೆಗಳನ್ನು ಸಹ ಸಂಪೂರ್ಣ ವ್ಯವಸ್ಥೆಯನ್ನು ನಿಯಂತ್ರಿಸುವ ಮೂಲಕ, ಈ ಆಹಾರ ಪದ್ಧತಿಯು ಕಾಪಾಡುತ್ತದೆ.
ನಿಮಗುಂಟಾಗಿರುವ ಸಮಸ್ಯೆ ಇದಾಗಿದ್ದರೆ ಅಥವಾ ಪದೇ ಪದೇ ದೀರ್ಘಕಾಲದ ಅನಾರೋಗ್ಯ ಮತ್ತು ಕಿರಿಕಿರಿ ನಿಮಗುಂಟಾದರೆ, ಸಮಸ್ಯೆಯು ಅಂತಿಮವಾಗಿ ನಿಮ್ಮ ಆರೋಗ್ಯ, ಅಥವಾ ನಿಮ್ಮ ಹೊಟ್ಟೆಯ ಅನಾರೋಗ್ಯ, ಮತ್ತು ನಿಮ್ಮ ಪ್ರಸ್ತುತ ಆರೋಗ್ಯವನ್ನು ಲೆಕ್ಕಿಸದೆ ಕಾಡುತ್ತದೆ ಈ ಆಹಾರ ಪದ್ಧತಿಗಳನ್ನು ಅನುಸರಿಸುವುದು ನಿಮ್ಮ ಆರೋಗ್ಯವನ್ನು ಸುಧಾರಿಸಿ ನಿಮ್ಮ ಭವಿಷ್ಯದ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications