Latest Updates
-
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್
ನ್ಯಾಪ್‌ಕಿನ್ ಚರ್ಮ ತೊಂದರೆಗಳು: ಪರಿಹಾರ
ಹೆಂಗಳೆಯರನ್ನು ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಒಳಉಡುಪುಗಳ ಸಮಸ್ಯೆಯಾಗಿದೆ. ಅದರ ಬಿಗಿತ ತುರಿತದಿಂದಾಗಿ ಕೆಲವೊಮ್ಮೆ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ಈ ಸಮಸ್ಯೆಯು ಹೆಚ್ಚಾಗಿ ಕಾಡುವುದು ಬೇಸಿಗೆಯಲ್ಲಿ ಏಕೆಂದರೆ ಅತಿಯಾದ ಬೆವರುವಿಕೆಯು ಆ ಜಾಗಗಳಲ್ಲಿ ಹೆಚ್ಚಾಗಿರುವುದರಿಂದ ತ್ವಚೆಯು ಒಡೆದು ಈ ಸಮಸ್ಯೆಯು ಹೆಚ್ಚಾಗುತ್ತದೆ.
ತೊಡೆ ಸಂದುಗಳಲ್ಲಿ ಅತಿಯಾದ ಬೆವರುವಿಕೆಯು ಒಳುಡುಪುಗಳನ್ನು ಒದ್ದೆಯಾಗಿಸುತ್ತದೆ, ಇದರಿಂದ ನವೆ ಕೆರೆತ ಉರಿತ ಉಂಟಾಗಿ ಅದನ್ನು ಧರಿಸಲಾರದ ಸಮಸ್ಯೆ ಹೆಚ್ಚುತ್ತದೆ. ಆದ್ದರಿಂದ ಬಿಗಿಯಾದ ಒಳಉಡುಪು ಮತ್ತು ಕಾಟನ್ ಅಲ್ಲದ ಒಳಉಡುಪನ್ನು ಧರಿಸಲೇ ಬಾರದು.

ಈ ಸಮಸ್ಯೆಯ ಮೂಲ ಕಾರಣ ಸ್ಯಾನಿಟರಿ ನ್ಯಾಪ್‌ಕಿನ್ ಆಗಿದೆ. ಸ್ಯಾನಿಟರಿ ನ್ಯಾಪ್‌ಕಿನ್ ಅಥವಾ ಪ್ಯಾಡ್‌ಗಳು ಒಳಗೊಂಡಿರುವ ಪ್ಲಾಸ್ಟಿಕ್ ಅಥವಾ ಸುಗಂಧ ದ್ರವ್ಯವು ಸೂಕ್ಷ್ಮ ಚರ್ಮವನ್ನು ಘಾಸಿಗೊಳಿಸುತ್ತದೆ. ಈ ಬಗೆಯ ತೊಂದರೆಗಳನ್ನು ನಿವಾರಿಸಲು ಇಲ್ಲಿದೆ ಕೆಲವು ಸುಲಭ ಪರಿಹಾರಗಳು:
ಹಗುರ ಉಡುಪುಗಳು:
ಹಗುರವಾದ ಒಳುಡುಪುಗಳನ್ನು ಧರಿಸುವುದು ಚರ್ಮದ ಈ ಬಗೆಯ ತೊಂದರೆಯನ್ನು ನಿವಾರಿಸುತ್ತದೆ. ಹಗುರವಾದ ಬಟ್ಟೆಗಳು ಸುಲಭವಾಗಿ ಗಾಳಿಯಾಡುವುದಕ್ಕೆ ಒಳಿತಾಗಿರುತ್ತದೆ. ಮತ್ತು ಧರಿಸಲು ಉತ್ತಮವಾಗಿರುತ್ತದೆ.
ಎಣ್ಣೆ ಹಚ್ಚುವುದು:
ಒಳಉಡುಪಿನ ತೊಂದರೆಗಳು ಹೆಚ್ಚಾದಾಗ ಎಣ್ಣೆ ಹಚ್ಚುವುದು ಒಳಿತು. ತುರಿಕೆ ನವೆ ಉಂಟಾದಾಗ ತೆಂಗಿನ ಎಣ್ಣೆಯನ್ನು ಹಚ್ಚಿ. ಸ್ವಲ್ಪ ಸಮಯ ಆ ಜಾಗಕ್ಕೆ ಗಾಳಿಯಾಡಲಿ. ಇದು ತ್ವಚೆಗುಂಟಾದ ಉರಿತವನ್ನು ಕಡಿಮೆಗೊಳಿಸಿ ಸಮಾಧಾನವನ್ನುಂಟು ಮಾಡುತ್ತದೆ.
ಟಾಲ್ಕಂ ಪೌಡರ್:
ನ್ಯಾಪ್‌ಕಿನ್ ತೊಂದರೆಯುಂಟಾದ ಜಾಗದಲ್ಲಿ ಟಾಲ್ಕಂ ಪೌಡರ್ ಅನ್ನು ಹಚ್ಚುವುದು ಕೂಡ ಉತ್ತಮ ಪರಿಹಾರವಾಗಿದೆ. ಇದು ಮಾಯಿಶ್ಚರೈಸರ್ ಅನ್ನು ಹೀರಿ ತೇವವನ್ನು ಕಡಿಮೆಗೊಳಿಸುತ್ತದೆ. ಟಾಲ್ಕಂ ಪೌಡರ್‌ನ ಬಳಕೆ ಸ್ನಾನದ ನಂತರವಾದರೆ ಒಳ್ಳೆಯದು.
ನ್ಯಾಪ್‌ಕಿನ್‌ಗಳನ್ನು ಧರಿಸದಿರುವುದು:
ನ್ಯಾಪ್‌ಕಿನ್ ಅಥವಾ ಒಳಉಡುಪಿನ ತೊಂದರೆ ನಿಮಗುಂಟಾದಾಗ ಸ್ವಲ್ಪ ಹೊತ್ತಿನವರೆಗೆ ಅದನ್ನು ತೆಗೆದಿರಿಸಿ. ಒಳಉಡುಪಿನ ತೊಂದರೆ ಕಡಿಮೆಯಾಗುವವರೆಗೆ ಮೆನ್‌ಸ್ಟ್ರಲ್ ಕಪ್ಸ್, ಟ್ಯಾಂಪೋನ್ಸ್ ಅಥವಾ ಬಟ್ಟೆಯ ಪ್ಯಾಡ್‌ಗಳನ್ನು ಬಳಸಿ.
ಹೀಗೆ ನಿಮ್ಮ ತುರಿತ ನವೆಯನ್ನು ಕಡಿಮೆ ಮಾಡುವ ಹಲವಾರು ಮನೆಮದ್ದುಗಳಿದ್ದು, ಅದರಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಈ ತೊಂದರೆ ಹೆಚ್ಚಾದಾಗ ನೀವು ವೈದ್ಯರನ್ನು ಸಂಪರ್ಕಿಸಲೇಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
