Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಋತುಚಕ್ರದ ಅವಧಿಯಲ್ಲಿ ಸೇವನೆಗೆ ಯೋಗ್ಯವಾಗಿರುವ ಆಹಾರಗಳು
ಋತುಚಕ್ರ ಅಥವಾ ಅವಧಿ ನೀವು ತುಂಬಾ ಕೆರಳುವ, ದಣಿಯುವ ಮತ್ತು ಸಂಪೂರ್ಣವಾಗಿ ಹತಾಶೆಗೊಳಗಾಗುವ ತಿಂಗಳ ಅವಧಿ. ಕೆಲವು ಮಂದಿ ಅನುಭವಿಸುವ ಖಿನ್ನತೆ, ನೋವು, ಸಿಟ್ಟು ಹಾಗೂ ಆತಂಕಕ್ಕೆ ಕಾರಣವಾಗಬಹುದು.
ಕೆಲವರಿಗೆ ಮಾಂಸಖಂಡಗಳ ಸೆಳೆತ, ಕೆಟ್ಟ ಆರೋಗ್ಯ, ವಾಕರಿಕೆ ಇತ್ಯಾದಿ ಅನುಭವಿಸುತ್ತಾರೆ. ಋತುಚಕ್ರದ ಅವಧಿಯಲ್ಲಿ ಕೆಲವು ಮಂದಿಗೆ ಮೊದಲ ಎರಡು ದಿನ ತಮ್ಮ ದೈನಂದಿನ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ದೀರ್ಘಕಾಲಕ್ಕೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನೀವು ಋತುಚಕ್ರಕ್ಕಾಗಿ ಆರೋಗ್ಯಕರ ಆಹಾರ ತಿನ್ನುವುದು ತುಂಬಾ ಮುಖ್ಯ. ಋತುಚಕ್ರದ ಆಹಾರ ಕ್ರಮದಿಂದಾಗಿ ನಿಮ್ಮ ಶಕ್ತಿ ಹೆಚ್ಚಾಗಿ, ನಿಮ್ಮ ಅಂಗಾಂಗಗಳು ನಯವಾಗಿ ಕೆಲಸ ಮಾಡಲು ಮತ್ತು ನೀವು ಅನುಭವಿಸುವ ನೋವು ಕಡಿಮೆ ಮಾಡಲು ನೆರವಾಗಲಿದೆ.
ಈ ಆಹಾರಕ್ರಮದಲ್ಲಿರುವ ಕೆಲವೊಂದು ಆಹಾರಗಳು ಅಗತ್ಯವಿರುವ ಶಕ್ತಿ ಒದಗಿಸುತ್ತದೆ. ನಿಮ್ಮ ಋತುಚಕ್ರದ ವೇಳೆ ಶಕ್ತಿ ಪಡೆಯಲು ನೆರವಾಗುವಂತಹ ಋತುಚಕ್ರದ ಆಹಾರ ಕ್ರಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಕೆಫಿನ್ ಕಡೆಗಣಿಸಿ

ಋತುಚಕ್ರದ ಅವಧಿಯಲ್ಲಿ ನೀವು ಕೆಫಿನ್ ಯುಕ್ತ ಆಹಾರವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡೆಗಣಿಸಬೇಕು. ಕೆಫಿನ್ ಸೇವನೆ ಮಾಡಿದರೆ ಆಗ ಹೊಟ್ಟೆಯ ಆಮ್ಲಗಳು ಹೆಚ್ಚಾಗಿ ಅದು ನೋವು ಹೆಚ್ಚಿಸಬಹುದು. ಕೆಫಿನ್ ಸೇವಿಸಬೇಕೆಂದು ನಿಮಗೆ ಭಾವನೆಯಾಗುತ್ತಿದ್ದರೆ ಆಗ ನೀವು ಕಾಫಿ ಬದಲಿಗೆ ಚಹಾ ಸೇವನೆ ಮಾಡಿ. ಚಹಾ ಯಾವುದೇ ಸಮಯದಲ್ಲೂ ಒಳ್ಳೆಯದು ಮತ್ತು ಕೆಫಿನ್ ಸೇವನೆಯ ಕಡುಬಯಕೆಗೆ ಇದು ಬದಲಿಯಾಗಲಿದೆ.
ವಿಟಮಿನ್ ಇರುವ ಮೊಟ್ಟೆ
ಋತುಚಕ್ರದ ಆಹಾರಕ್ರಮದಲ್ಲಿ ವಿಟಮಿನ್ ಸೇರಿಸುವುದು ತುಂಬಾ ಮುಖ್ಯ. ವಿಟಮಿನ್ ಇ ನಿಮ್ಮ ಪಿಎಂಎಸ್ ಲಕ್ಷಣದಿಂದ ದೂರ ಮಾಡಲಿದೆ. ವಿಟಮಿನ್ ಇ ಪಡೆಯಲು ಬೆಣ್ಣೆಹಣ್ಣು ಮತ್ತು ಮೊಟ್ಟೆಯ ಹಳದಿ ಭಾಗ ತಿನ್ನಿ.
ವಿಟಮಿನ್ ಬಿ6 ಹೊಟ್ಟೆ ಉಬ್ಬರ ನಿವಾರಿಸಲು ನೆರವಾಗುತ್ತದೆ. ವಿಟಮಿನ್ ಸಿ ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ವಿಟಮಿನ್ ಸಿ ಪಡೆಯಲು ದ್ರಾಕ್ಷಿ ಮತ್ತು ನಿಂಬೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ವಿಟಮಿನ್ ಬಿ6 ಪಡೆಯಲು ಆಹಾರಕ್ರಮದಲ್ಲಿ ಬಟಾಟೆಗಳನ್ನು ಆಹಾರಕ್ರಮದಲ್ಲಿ ಸೇರಿಸಿ. ಮುಟ್ಟಿನ ನೋವನ್ನು ತಡೆಯಲು ಪರಿಣಾಮಕಾರಿ ಸಲಹೆಗಳು
ಡಾರ್ಕ್ ಚಾಕಲೇಟ್
ನಿಮ್ಮ ಆಹಾರ ಕ್ರಮದಲ್ಲಿ ಡಾರ್ಕ್ ಚಾಕಲೇಟ್ ಸೇರಿಸಲು ಇದು ಒಳ್ಳೆಯ ಸಮಯ. ಆ್ಯಂಟಿಆಕ್ಸಿಡೆಂಟ್ ಗಳನ್ನು ಹೊಂದಿರುವ ಡಾರ್ಕ್ ಚಾಕಲೇಟ್ ಸೆರೊಟೋನಿನ್ ಹೆಚ್ಚಿಸಿ ನಿಮ್ಮ ಮನಸ್ಥಿತಿ ಉತ್ತಮಪಡಿಸುತ್ತದೆ. ಋತುಚಕ್ರದ ಆಹಾರಕ್ರಮದಲ್ಲಿ ಡಾರ್ಕ್ ಚಾಕಲೇಟ್‌ನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಿ.
ಕಬ್ಬಿನಾಂಶವಿರುವ ಹಸಿರು ಎಲೆ ತರಕಾರಿಗಳು
ಋತುಚಕ್ರದ ಸಮಯದಲ್ಲಿ ನೀವು ಹೆಚ್ಚಾಗಿ ರಕ್ತ ಕಳಕೊಳ್ಳುತ್ತೀರಿ. ಇದನ್ನು ನಿಮ್ಮ ದೇಹದಲ್ಲಿ ಮರಳಿ ಪಡೆಯಲು ಕಬ್ಬಿನಾಂಶದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಕಬ್ಬಿನಾಂಶದಿಂದ ಸಮೃದ್ಧವಾಗಿರುವ ಆಹಾರದಿಂದ ನೀವು ರಕ್ತಹೀನತೆ ವಿರುದ್ಧ ಹೋರಾಡಬಹುದು ಮತ್ತು ನಷ್ಟವಾದ ಹಿಮೋಗ್ಲೊಬಿನ್ ಸರಿದೂಗಿಸಬಹುದು. ಇದರಿಂದ ನೀವು ನಿತ್ರಾಣ ಮತ್ತು ಖಿನ್ನತೆಗೊಳಗಾಗುವುದು ತಪ್ಪುತ್ತದೆ.
ಹಣ್ಣು, ತರಕಾರಿಗಳನ್ನು ಸೇವಿಸಿ
ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ನಿಮ್ಮ ಋತುಚಕ್ರದ ಆಹಾರ ಕ್ರಮದಲ್ಲಿ ಸೇರಿಸಿ. ಕ್ಯಾರೆಟ್, ಏಪ್ರಿಕಾಟ್, ಕಿತ್ತಳೆ, ಪ್ಲಮ್ಸ್ ಇತ್ಯಾದಿಗಳನ್ನು ತಿನ್ನಬಹುದು. ಋತುಚಕ್ರದ ಸಮಯದಲ್ಲಿ ಉಂಟಾಗುವ ಸಕ್ಕರೆ ಕಡುಬಯಕೆಯನ್ನು ಇದು ಕಡಿಮೆ ಮಾಡುತ್ತದೆ. ಮುಟ್ಟಿನ ನೋವಿಗೆ ಇಲ್ಲಿದೆ ಸುಲಭ ಪರಿಹಾರ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications















