ದೀಪಾವಳಿಯಂದು ಕ್ಯಾಲೋರಿ ಗಮನಿಸುತ್ತೀರಾ?

By ಪೂರ್ಣಿ

ದೀಪಾವಳಿ ಬೆಳಕಿನ ಹಬ್ಬ. ಸಿಹಿ ತಿನಿಸುಗಳ ಹಬ್ಬ. ಪ್ರತಿಯೊಬ್ಬರೂ ಈ ದಿನ ಮೈಮರೆತು ಹಬ್ಬದ ಸಂಭ್ರಮದಲ್ಲಿ ಪಾಲ್ಗೋಳ್ಳುತ್ತಾರೆ. ನಾನಾ ವಿಧದ ಸಿಹಿ ಖಾದ್ಯಗಳು ಎಂಥವರ ಬಾಯಲ್ಲೂ ನೀರೂರಿಸದೇ ಬಿಡದು!

ಇಂತಹ ಸಿಹಿ ತಿನಿಸುಗಳನ್ನು ತಿನ್ನುತ್ತ ದೇಹದಲ್ಲಿ ಕ್ಯಾಲೋರಿಯ ಮಟ್ಟ ಹೆಚ್ಚಾಗುವುದರಲ್ಲೂ ಸಂಶಯವಿಲ್ಲ! ಆದರೆ ಚಿಂತೆ ಬೇಡ. ನೀವು ನಿಜವಾಗಿಯೂ ನಿಮ್ಮ ದೇಹದಲ್ಲಿ ಕ್ಯಾಲೋರಿಯನ್ನು ಹೆಚ್ಚಾಗಿಸಿಕೊಳ್ಳಲು ಇಷ್ಟಪಡದಿದ್ದಲ್ಲಿ ಇಲ್ಲಿದೇ ಕೆಲವು ಉಪಾಯ! ಈ ಕೆಳಗಿನ ಲೇಖನದಲ್ಲಿ ಹಬ್ಬದ ಸಂದರ್ಭದಲ್ಲೂ ಕ್ಯಾಲೋರಿಯನ್ನು ಹೆಚ್ಚಾಗದಂತೆ ನೋಡಿಕೊಳ್ಳುವ ಸಲಹೆಗಳನ್ನು ನೀಡಲಾಗಿದೆ.

Ways to Cut Down Calories During Diwali

ಹಬ್ಬದ ಸಂದರ್ಭದಲ್ಲಿ ಹೊಸ ಬಗೆಯ ತಿಂಡಿ ತಿನಿಸುಗಳು, ಆಹಾರದ ಮೇಲೆ ನಿಮ್ಮ ನಿತ್ಯದ ನಿಯಂತ್ರಣವನ್ನು ತಪ್ಪಿಸಬಹುದು. ಇದರಿಂದ ಉಂಟಾಗುವ ದೇಹ ತೂಕ ಹೆಚ್ಚಾಗುವ ಸಮಸ್ಯೆಯ ಕುರಿತು ಸಾಕಷ್ಟು ಗಮನವಹಿಸುವುದು ಅತ್ಯಗತ್ಯ.

ಆದರೆ, ನೀವು ಸ್ಪಲ್ಪ ಮಟ್ಟಿಗೆ ನಿಮ್ಮ ಆಹಾರಕ್ರಮದ ಬಗ್ಗೆ ಗಮನವಹಿಸಿದರೆ ಖಂಡಿತವಾಗಿಯೂ ನಿಮ್ಮ ಆರೋಗ್ಯದ ಮೇಲೂ ಯಾವುದೇ ಕೆಟ್ಟ ಪರಿಣಾಮಗಳಾಗದಂತೆ ಹಾಗೂ ದೇಹ ತೂಕ ಹೆಚ್ಚಾಗದಂತೆ ತಡೆಯಬಹುದು. ಹಬ್ಬದ ಯಾವುದೇ ಆಹಾರವನ್ನು, ಸಿಹಿಯನ್ನು ತಿನ್ನಬೇಕಾದರೂ ಅದು ಅಧಿಕ ಕ್ಯಾಲೋರಿಯನ್ನು ಹೊಂದಿದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ಆದರೆ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಕ್ಯಾಲೋರಿಯನ್ನು ನೀಡುವ ತಿನಿಸುಗಳನ್ನು ತಿನ್ನಬಹುದು. ಆದರೆ ಮಿತವಾಗಿ ಸೇವಿಸಿ.

ದೀಪಾವಳಿಯಲ್ಲಿ ಕ್ಯಾಲೋರಿ ಹೆಚ್ಚಾಗದಂತೆ ನೋಡಿಕೊಳ್ಳಲು 10 ಸುಲಭ ಸಲಹೆಗಳು.

ದೀಪಾವಳಿಗೆ ಸಿದ್ಧತೆ: ಅಂದರೆ ದೀಪಾವಳಿಯ ಆರಂಭಕ್ಕೆ ಮೊದಲು ನಿಮ್ಮ ಕ್ಯಾಲೋರಿಯನ್ನು ತಪಾಸಣೆ ಮಾಡಿಕೊಳ್ಳಿ. ಇದರಿಂದ ಹಬ್ಬದ ದಿನವು ಯಾವುದೇ ಸಮಸ್ಯೆಯಿಲ್ಲದೇ ಕ್ಯಾಲೋರಿಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ದೀಪಾವಳಿಯ ದಿನ ಬೆಳಿಗ್ಗೆ ಉಪಹಾರ ಮಾಡುವಾಗ ಕಡಿಮೆ ಕ್ಯಾಲೋರಿ ಹೊಂದಿರುವ ಅಥವಾ ಕ್ಯಾಲೋರಿಯೇ ಇಲ್ಲದ ಆಹಾರ ಸೇವಿಸುವುದು ಒಳ್ಳೆಯದು ಇದರಿಂದ ಸಂಜೆಯೂ ಸಹ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಲಘು ಸಿಹಿ ಅಥವಾ ಬೇರೆ ಆಹಾರವನ್ನು ಸೇವಿಸಬಹುದು.

ಕೆಲಸಮಾಡುವಾಗ ಕ್ಯಾಲೋರಿ ಪದಾರ್ಥ ಸೇವಿಸದಿರಿ: ಕೆಲಸಮಾಡುವಾಗ 4-5 ಕಪ್ ಕಾಫಿ ಅಥವಾ ಟೀಯನ್ನು ಕುಡಿಯಬೇಡಿ. ಇದು 200-250 ರಷ್ಟು ಕ್ಯಾಲೋರಿಯನ್ನು ಕಡಿಮೆಗೊಳಿಸುತ್ತದೆ.

ತಂಪಾದ ಪಾನೀಯಗಳಿಂದ ದೂರವಿರಿ: ಊಟದ ಜೊತೆಗೆ ಕೋಲಾ ಮೊದಲಾದ ತಂಪಾದ ಪಾನೀಯಗಳನ್ನು ಸೇವಿಸಿದರೆ 145 ಕ್ಯಾಲೋರಿ ಅಧಿಕವಾಗಬಹುದು. ಇದನ್ನು ತಪ್ಪಿಸಿದರೆ ಕ್ಯಾಲೋರಿಯಿಂದ ದೂರವುಳಿಯಬಹುದು.

ವ್ಯಾಯಾಮ: ದೀಪಾವಳಿಯ ಆರಂಭಕ್ಕೆ ಮೊದಲು ಮತ್ತು ನಂತರ ವ್ಯಾಯಾಮ ಮಾಡುವುದು ಅತ್ಯಂತ ಮುಖ್ಯ. ಇದು ತೂಕವನ್ನು ಹೆಚ್ಚಾಗದಂತೆ ತಡೆಯಲು ಮತ್ತು ಅಧಿಕ ಕ್ಯಾಲೋರಿ ದೇಹಕ್ಕೆ ಸೇರದಂತೆ ನೋಡಿಕೊಳ್ಳಲು ಸಹಾಯವಾಗಬಹುದು.

ಮದ್ಯಪಾನ ಸೇವನೆ: ದೀಪಾವಳಿಯ ಮೊದಲಿನ ಅಥವಾ ಆನಂತರದ ರಾತ್ರಿಯ ಸಮಯದಲ್ಲಿ ಮದ್ಯಪಾನದಿಂದ ದೂರವಿರಿ. ಇದು ಕ್ಯಾಲೋರಿ ಹೆಚ್ಚುವುದನ್ನು ತಡೆಯದಿದ್ದರೂ ಹಬ್ಬದ ಸಂದರ್ಭದಲ್ಲಿ ಸಂತೋಷದಿಂದಿರಲು ಸಹಾಯ ಮಾಡುತ್ತದೆ.

ಫೈಬರ್ ಮತ್ತು ನೀರು:ನಾರಿನ ಆಹಾರವನ್ನು ಹೆಚ್ಚಾಗಿ ಸೇವಿಸದಿರಿ. ಕ್ಯಾಲೋರಿ ಕಡಿಮೆಯುಳ್ಳ ಆಹಾರವನ್ನೇ ಹೆಚ್ಚಾಗಿ ಸೇವಿಸಿ.

ಕಡಿಮೆ ಆಹಾರ ಸೇವಿಸಿ: ದೀಪಾವಳಿ ಸಮಯದಲ್ಲಿ ಸಾಕಷ್ಟು ಸ್ನೇಹಿತರ, ಸಂಬಂಧಿಕರ ಮನೆಗಳಿಗೆ ಹೋಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರ ಮನೆಗಳಲ್ಲಿ ನೀಡುವ ಸಿಹಿ ತಿಂಡಿಗಳನ್ನು ಹೆಚ್ಚಾಗಿ ತಿನ್ನದೇ ಎಲ್ಲರ ಮನೆಗಳನ್ನೂ ಕೊಂಚವೇ ಸೇವಿಸಿ. ಆಗ ಎಲ್ಲರ ಮನೆಯಲ್ಲಿಯೂ ತಿನಿಸುಗಳನ್ನು ಸೇವಿಸಬಹುದು ಜೊತೆಗೆ ಕ್ಯಾಲೋರಿ ಹೆಚ್ಚುವ ಸಮಸ್ಯೆಯಿಂದಲೂ ದೂರವುಳಿಯಬಹುದು.

ಕಡಿಮೆ ಕ್ಯಾಲೋರಿ ಸಿಹಿ ತಿನಿಸುಗಳನ್ನು ಆಯ್ದುಕೊಳ್ಳಿ: ಸಿಹಿ ತಿನಿಸುಗಳಲ್ಲಿ ಅತೀ ಹೆಚ್ಚು ಕ್ಯಾಲೋರಿಗಳಿರುವ ಸಿಹಿ ತಿನಿಸು ಮತ್ತು ಅಧಿಕ ಕ್ಯಾಲೋರಿಯುಳ್ಳ ಸಿಹಿ ತಿನಿಸು ಎಂದು ಎರಡು ವಿಧದಲ್ಲಿದ್ದು, ಕಡಿಮೆ ಕ್ಯಾಲೋರಿಯುಳ್ಳ ಸಿಹಿ ತಿನಿಸನ್ನೇ ಸೇವಿಸಿ.

ರಾತ್ರಿ ಊಟ: ರಾತ್ರಿ ಊಟಕ್ಕೆ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ವಿಷಯದ ಬಗ್ಗೆ ಹೆಚ್ಚು ಗಮನವಹಿಸಿ. ಅಧಿಕ ಕ್ಯಾಲೋರಿ ಇರುವ ಆಹಾರವನ್ನು ಮಿತಿಯಲ್ಲಿ ತಿನ್ನಿ.

ಸ್ನೇಹಿತರ ಭೇಟಿ: ಸ್ನೆಹಿತರು ಅಥವಾ ಸಂಬಂಧಿಗಳ ಮನೆಗಳಿಗೆ ಹಬ್ಬದ ಸಮಯದಲ್ಲಿ ಭೇಟಿ ನೀಡಿದಾಗ, ಸಿಹಿಯನ್ನು ಸೇವಿಸುವುದರ ಬದಲು ನಟ್ಸ್ ಗಳನ್ನು ಸೇವಿಸಿ. ನಟ್ಸ್ ಗಳು ಕಡಿಮೆ ಕ್ಯಾಲೋರಿಯನ್ನು ನಿಮ್ಮ ದೇಹಕ್ಕೆ ಸೇರುವುದನ್ನು ತಪ್ಪಿಸಬಹುದು.

ಈ ರೀತಿ ಕಡಿಮೆ ಕ್ಯಾಲೋರಿಯ ಜೊತೆಗೆ ಸುಂದರ ದೀಪಾವಳಿಯನ್ನು ಆಚರಿಸಿ!

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Thursday, October 31, 2013, 10:28 [IST]
X
Desktop Bottom Promotion