Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಧಿಕ ಯೂರಿಕ್ ಆಮ್ಲ ನಿಯಂತ್ರಿಸುವ ವಿಧಾನಗಳು
ಪ್ಯೂರಿನ್ ವಿಘಟನೆಯಿಂದ ಉತ್ಪತ್ತಿಯಾಗುವ ಯೂರಿಕ್ ಆಮ್ಲವು ನಿಮ್ಮ ರಕ್ತದ ಮೂಲಕ ಹೋಗಿ ಅದು ಕಿಡ್ನಿ ಮೂಲಕ ಹೊರಹಾಕಲ್ಪಡುತ್ತದೆ. ನೀವು ಮೂತ್ರ ವಿಸರ್ಜನೆ ಮಾಡಿದಾಗ ಯೂರಿಕ್ ಆಮ್ಲವು ದೇಹದಿಂದ ಹೊರಹೋಗುತ್ತದೆ. ಆದರೆ ಕೆಲವೊಂದು ಸಲ ಯೂರಿಕ್ ಆಮ್ಲವು ನಿಮ್ಮ ದೇಹದಲ್ಲಿ ಉಳಿದುಕೊಂಡು ಹೆಚ್ಚಾಗುತ್ತಾ ಹೋಗುತ್ತದೆ. ಇದು ನಿಮಗೆ ಮತ್ತು ದೇಹಕ್ಕೆ ತುಂಬಾ ಅಪಾಯಕಾರಿ. ಅಧಿಕ ಯೂರಿಕ್ ಆಮ್ಲವೆಂದರೆ ಅದು ಸಮಸ್ಯೆಗಳಿಗೆ ಕಾರಣ ಮತ್ತು ಇದು ಸಂಧಿವಾತಕ್ಕೆ ಕಾರಣವಾಗಬಹುದು.
ಅಧಿಕ ಯೂರಿಕ್ ಆಮ್ಲವನ್ನು ನಿಯಂತ್ರಿಸುವುದು ತುಂಬಾ ಮುಖ್ಯ. ಇದನ್ನು ನಿಯಂತ್ರಿಸುವುದನ್ನು ಕಲಿಯುವ ಮೊದಲು ಅದರ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅಧಿಕ ಯೂರಿಕ್ ಆಮ್ಲಕ್ಕೆ ಕಾರಣಗಳು ಏನೆಂದು ತಿಳಿದುಕೊಳ್ಳದೆ ಅದರ ವಿರುದ್ಧ ಹೋರಾಡುವುದು ಹೇಗೆ? ಯೂರಿಕ್ ಆಮ್ಲ ಅಧಿಕವಾಗಲು ಕೆಲವೊಂದು ಕಾರಣಗಳು ಮತ್ತು ಇದರಿಂದ ದೇಹದಲ್ಲಿ ಸಂಧಿವಾತ ಉಂಟಾಗಬಹುದು. ಆಲ್ಕೋಹಾಲ್ ನ್ನು ವಿಪರೀತವಾಗಿ ಸೇವಿಸಿದರೆ ಆಗ ಅಧಿಕ ಯೂರಿಕ್ ಆಮ್ಲದ ಸಾಧ್ಯತೆಯಿದೆ. ಕೆಲವೊಂದು ಸಲ ಇದು ಅನುವಂಶೀಯವಾಗಿರುವ ಕಾರಣ ಇದನ್ನು ತಡೆಯಲು ಸಾಧ್ಯವಿಲ್ಲ. ಬೊಜ್ಜು, ಪ್ಯೂರಿನ್ ಯುಕ್ತ ಆಹಾರಗಳು ಮತ್ತು ಕಿಡ್ನಿಯು ತ್ಯಾಜ್ಯವನ್ನು ಶೋಧಿಸಲು ವಿಫಲವಾದಾಗ ದೇಹದಲ್ಲಿ ಕಾರಣ ಅಧಿಕ ಯೂರಿಕ್ ಆಮ್ಲ ಉಂಟಾಗುತ್ತದೆ. ಮೂತ್ರವರ್ಧಕ ಔಷಧಿಗಳಿಂದಾಗಿ ಅಧಿಕ ಯೂರಿಕ್ ಆಮ್ಲವು ಉತ್ಪತ್ತಿಯಾಗುತ್ತದೆ. ಈಗ ನೀವು ಕಾರಣಗಳನ್ನು ತಿಳಿದುಕೊಂಡಿದ್ದೀರಿ. ಈಗ ಅದನ್ನು ನಿಯಂತ್ರಿಸುವ ವಿಧಾನ ತಿಳಿದುಕೊಳ್ಳಿ. ನಾರಿನಾಂಶ ಮತ್ತು ಪ್ರೋಟೀನ್ ಅಧಿಕವಾಗಿರುವ ಆಹಾರಗಳಿಂದ ನೀವು ಯೂರಿಕ್ ಆಮ್ಲವನ್ನು ನಿಯಂತ್ರಿಸಬಹುದು. ಅಧಿಕ ಯೂರಿಕ್ ಆಮ್ಲ ತಡೆಯಲು ಮಾಡುವ ಪಥ್ಯದಲ್ಲಿ ಪ್ಯೂರಿನ್ ಇರುವ ಆಹಾರಳು ಬರಲೇ ಬಾರದು. ಅಧಿಕ ಯೂರಿಕ್ ಆಮ್ಲ ತಡೆಗಟ್ಟಲು ಕೆಲವೊಂದು ವಿಧಾನಗಳು ಇಲ್ಲಿವೆ.

ನಾರಿನಾಂಶ ಅಧಿಕವಾಗಿರುವ ಆಹಾರ ಸೇವಿಸಿ
ಸಂಶೋಧನೆಗಳ ಪ್ರಕಾರ ನಾರಿನಾಂಶ ಅಧಿಕವಾಗಿರುವ ಆಹಾರಗಳು ಯೂರಿಕ್ ಆಮ್ಲ ನಿಯಂತ್ರಿಸಲು ನೆರವಾಗುತ್ತದೆ. ಅಧಿಕ ಯೂರಿಕ್ ಆಮ್ಲ ನಿಯಂತ್ರಿಸಲು ನಿರ್ಧರಿಸಿದ್ದರೆ ನಿಮ್ಮ ಆಹಾರ ಕ್ರಮದಲ್ಲಿ ಅಧಿಕ ನಾರಿನಾಂಶವಿರುವ ಆಹಾರಗಳನ್ನು ಹೆಚ್ಚಾಗಿ ಉಪಯೋಗಿಸಿ. ಓಟ್ಸ್, ಪಾಲಕ, ಕೋಸುಗಡ್ಡೆ ಇತ್ಯಾದಿಗಳನ್ನು ಸೇವಿಸಬೇಕು. ಇದರಿಂದ ನಿಮ್ಮ ದೇಹದಲ್ಲಿ ನಾರಿನಾಂಶ ಹೆಚ್ಚಾಗುತ್ತದೆ.

ಅಡುಗೆಗೆ ಆಲಿವ್ ಎಣ್ಣೆ ಬಳಸಿ
ಆಸಕ್ತಿದಾಯಕವಲ್ಲವೇ! ಆದರೆ ಇಲ್ಲಿ ಸಲಹೆ ಮಾಡಲಾಗಿರುವ ಆಲಿವ್ ಎಣ್ಣೆ ಸಾಮಾನ್ಯವಾಗಿ ಬಳಸುವ ಆಲಿವ್ ಎಣ್ಣೆಯಲ್ಲ. ನೀವು ಬೆಣ್ಣೆ ಅಥವಾ ತರಕಾರಿ ಎಣ್ಣೆಯನ್ನು ಬಳಸುವ ಬದಲು ಕೋಲ್ಡ್ ಪ್ರೆಸ್ಡ್ ಆಲಿವ್ ಎಣ್ಣೆಯನ್ನು ಅಡುಗೆಗೆ ಬಳಸಬೇಕು. ಸಾಮಾನ್ಯ ಎಣ್ಣೆಗಳು ಕೊಬ್ಬನ್ನು ಉಂಟುಮಾಡಿ ನೀವು ಸೇವಿಸಿದ ಆಹಾರದಲ್ಲಿರುವ ವಿಟಮಿನ್ ಇ ಯನ್ನು ಕೊಲ್ಲುತ್ತದೆ. ಇದರಿಂದ ಯೂರಿಕ್ ಆಮ್ಲವು ಉತ್ಪತ್ತಿಯಾಗುತ್ತದೆ. ಆಲಿವ್ ಎಣ್ಣೆಯಿಂದ ಇದನ್ನು ತಡೆಯಬಹುದು.

ಬೇಕರಿ ಆಹಾರಗಳನ್ನು ತ್ಯಜಿಸಿ
ಸಕ್ಕರೆಯುಕ್ತ ಆಹಾರಗಳು ಯಾವಾಗಲು ನಿಮ್ಮ ಫೇವರಿಟ್ ಅಲ್ಲವೇ? ಆದರೆ ಇದನ್ನು ತ್ಯಜಿಸಬೇಕು. ಇದು ಯಾಕೆಂದು ನಿಮಗೆ ತಿಳಿದಿದೆಯಾ? ಇಂತಹ ಆಹಾರಗಳು ದೇಹದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಅಧಿಕ ಯೂರಿಕ್ ಆಮ್ಲ ನಿಯಂತ್ರಿಸಲು ಕೇಕ್ ಇತ್ಯಾದಿ ತಿನ್ನುವುದನ್ನು ಕಡೆಗಣಿಸಬೇಕು.

ನೀರು ಕುಡಿಯಿರಿ
ನಿಮ್ಮ ಎಲ್ಲಾ ಕ್ರಿಯಾ ಸಮಸ್ಯೆಗಳಿಗೆ ನೀರು ಒಳ್ಳೆಯ ಪರಿಹಾರ. ನಿಮ್ಮ ದೇಹದಲ್ಲಿ ಅಧಿಕ ಯೂರಿಕ್ ಆಮ್ಲ ಉತ್ಪತ್ತಿಯಾಗುವುದನ್ನು ತಡೆಯಲು ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ನೀರು ಯಾಕೆಂದರೆ ನೀರು ಸೇವಿಸಿದಾಗ ಯೂರಿಕ್ ಆಮ್ಲವು ಮೂತ್ರದ ರೂಪದಲ್ಲಿ ಕಿಡ್ನಿಯಿಂದ ಹೊರಹಾಕಲ್ಪಡುತ್ತದೆ. ಯೂರಿಕ್ ಆಮ್ಲವನ್ನು ನಿಯಂತ್ರಿಸಲು ನಿಯಮಿತವಾಗಿ ಸಣ್ಣ ಪ್ರಮಾಣದಲ್ಲಿ ನೀರು ಸೇವಿಸಿ.

ಚೆರ್ರಿಗಳನ್ನು ಸೇವಿಸಿ
ಚೆರ್ರಿಗಳಲ್ಲಿ ಉರಿಯೂತ ವಿರೋಧಕ ಗುಣಗಳಿರುವ ಕಾರಣ ಇದು ಸಂಧಿವಾತಕ್ಕೆ ಒಳ್ಳೆಯ ಪರಿಹಾರ. ಇದರಿಂದ ಅಧಿಕ ಯೂರಿಕ್ ಆಮ್ಲ ನಿಯಂತ್ರಿಸಲು ನೀವು ಚೆರ್ರಿಗಳನ್ನು ಸೇವಿಸಿ. ದಿನದಲ್ಲಿ ನೀವು ನಿಯಮಿತವಾಗಿ ಸುಮಾರು 10-40 ಚೆರ್ರಿಗಳನ್ನು ಸೇವಿಸಿ. ಎಲ್ಲಾ ಚೆರ್ರಿಗಳನ್ನು ಒಮ್ಮೆಲೇ ಸೇವಿಸಬೇಡಿ. ಇದರಿಂದ ಬೇರೆ ಸಮಸ್ಯೆ ಉಂಟಾಗಬಹುದು.

ಆಹಾರ ಕ್ರಮದಲ್ಲಿ ವಿಟಮಿನ್ ಸಿ ಹೆಚ್ಚಿಸಿ
ಅಧಿಕ ಯೂರಿಕ್ ಆಮ್ಲ ನಿಯಂತ್ರಿಸಲು ನೀವು ಆಹಾರ ಕ್ರಮದಲ್ಲಿ ಸುಮಾರು 500 ಮಿಲಿ ಗ್ರಾಂ ನಷ್ಟು ವಿಟಮಿನ್ ಸಿ ಸೇರಿಸಿ. ವಿಟಮಿನ್ ಸಿ ದೇಹದಲ್ಲಿರುವ ಯೂರಿಕ್ ಆಮ್ಲವು ಮೂತ್ರದ ಮೂಲಕ ಹೊರಹಾಕುತ್ತದೆ. ಇದರಿಂದ ನಿಮ್ಮ ದೇಹದಲ್ಲಿರುವ ಅಧಿಕ ಯೂರಿಕ್ ಆಮ್ಲವನ್ನು ಹೊರತೆಗೆಯಲು ವಿಟಮಿನ್ ಸಿ ಒಳ್ಳೆಯ ಪರಿಹಾರ.
ಇದೆಲ್ಲವನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಿ ಅಥವಾ ದೇಹದಲ್ಲಿರುವ ಅಧಿಕ ಯೂರಿಕ್ ಆಮ್ಲ ನಿಯಂತ್ರಿಸಲು ಯೋಜನೆ ಹಾಕಿದ್ದರೆ ಇದು ಒಳ್ಳೆಯ ಟಿಪ್ಸ್.



Click it and Unblock the Notifications









