Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಎಲೆಕ್ಟ್ರಾನಿಕ್ಸ್ ಸಿಗರೇಟ್ ಎಳೆದರೆ ಅಪಾಯವಿಲ್ಲವೇ?
ಧೂಮಪಾನ ಅಭ್ಯಾಸ ಬಿಡಬೇಕೆಂದು ಬಯಸಿ, ಅದನ್ನು ಬಿಡಲು ಸಾಧ್ಯವಾಗದೆ ಒದ್ದಾಡುತ್ತಿರುವವರಿಗೆ ಎಲೆಕ್ಟ್ರಾನಿಕ್ಸ್ ಸಿಗರೇಟ್ ಎಳೆಯುವುದು ಒಳ್ಳೆಯದು, ಇದರಿಂದ ಯಾವುದೇ ಅಪಾಯವಿಲ್ಲ ಎಂದು ಸಲಹೆ ನೀಡುತ್ತಿದ್ದೇವೆ ಅಲ್ಲವೇ? ಇನ್ನು ಮೇಲೆ ಏಕೆಂದರೆ ಎಲೆಕ್ಟ್ರಾನಿಕ್ಸ್ ಸಿಗರೇಟ್ ನಲ್ಲಿ ಎಳೆಯುವುದರಿಂದಲೂ ಆರೋಗ್ಯಕ್ಕೆ ಅಪಾಯವಿದೆ!
ಈ ಸಿಗರೇಟ್ ಅನ್ನು ಮಾಮೂಲಿ ಸಿಗರೇಟ್ ಗೆ ಹೋಲಿಸಿದರೆ, ಶ್ವಾಸಕೋಶದ ಸ್ವಾಸ್ಥ್ಯವನ್ನು ಹಾಳು ಮಾಡುವ ಅಂಶ ಈ ಸಿಗರೇಟ್ ನಲ್ಲಿದೆ. ಆದ್ದರಿಂದ ಈ ಸಿಗರೇಟ್ ಗೆ ಕಡಿಮೆ ಬೆಲೆಯ , ಈ ಎಳೆದರೆ ಕೆಟ್ಟ ವಾಸನೆ ಬೀರುವುದಿಲ್ಲ, ಕ್ಯಾನ್ಸರ್ ತರುವ ಯಾವುದೇ ರಾಸಾಯನಿಕಗಳಿಲ್ಲ ಎಂದು ಹೇಳುವಂತಿಲ್ಲ.
ಈ ಎಲೆಕ್ಟ್ರಾನಿಕ್ಸ್ ಸಿಗರೇಟ್ ನಲ್ಲಿರುವ ಅಂಶಗಳೇನು, ಇದು ನಮ್ಮ ದೇಹದ ಮೇಲೆ ಯಾವ ರೀತಿ ಅಡ್ಡ ಪರಿಣಾಮ ಬೀರುತ್ತದೆ ಎಂದು ನೋಡೋಣವೇ?

ಎಲೆಕ್ಟ್ರಾನಿಕ್ಸ್ ಸಿಗರೇಟ್
ಎಲೆಕ್ಟ್ರಾನಿಕ್ಸ್ ಸಿಗರೇಟ್ ಅನ್ನುವುದು ತಂಬಾಕು ಹಾಕಿ ತಯಾರಿಸುವ ಸಿಗರೇಟ್ ಗೆ ಬದಲಿಗಿ ತಯಾರಿಸಿದ ಸಿಗರೇಟ್ ಆಗಿದೆ. ಈ ಸಿಗರೇಟ್ ಅನ್ನು ಹೀಟರ್, ಬ್ಯಾಟರಿ, ಕಾರ್ಟ್ ರಿಡ್ಜ್ ಬಳಸಿ ತಯಾರಿಸಲಾಗುವುದು. ಈ ಸಿಗರೇಟ್ ಎಳೆಯುವುದರಿಂದ ನಿಕೋಟಿನ್ ಅಂಶ ಧೂಮಪಾನಿಯ ಶರೀರವನ್ನು ಸೇರುವುದಿಲ್ಲ, ಆದರೆ ತಂಬಾಕು ಸಿಗರೇಟ್ ಎಳೆದಾಗ ಸಿಗುವಂತಹ ಕಿಕ್ ಧೂಮಪಾನಿಗೆ ದೊರೆಯುವುದು. ಆದ್ದರಿಂದ ಈ ಸಿಗರೇಟ್ ಎಳೆಯುವುದು ಒಳ್ಳೆಯದು ಎಂಬ ನಂಬಿಕೆ ಧೂಮಪಾನ ಮಾಡುವವರಲ್ಲಿದೆ. ಆದರೆ ಈ ನಂಬಿಕೆ ಸರಿಯೇ ಎಂದು ನೋಡೋಣವೇ?

ಮೊದಲಿಗೆ ಇದರ ಪ್ಲಸ್ ಪಾಯಿಂಟ್ (!)ಬಗ್ಗೆ ನೋಡೋಣ
* ಎಲೆಕ್ಟ್ರಾನಿಕ್ಸ್ ಸಿಗರೇಟ್ ಎಳೆಯುವುದರಿಂದ ನಿಕೋಟಿನ್ ಅಂಶ ದೇಹವನ್ನು ಸೇರುವುದಿಲ್ಲ.

ಪ್ಲಸ್ ಪಾಯಿಂಟ್ (!)
* ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ ಹಾಗೂ ಬಾಯಿ ದುರ್ಗಂಧ ಬೀರುವುದಿಲ್ಲ.

ನೆಗೆಟಿವ್ ಅಂಶಗಳು-ಶ್ವಾಸಕೋಶಕ್ಕೆ ಹಾನಿ
ಆದರೆ ಈ ಸಿಗರೇಟ್ ನಲ್ಲಿ ಈ ನೆಗೆಟಿವ್ ಗುಣಗಳು ಕೂಡ ಇವೆ ಅನ್ನುವುದನ್ನು ಮರೆಯದಿರಿ.
* ಎಲೆಕ್ಟ್ರಾನಿಕ್ಸ್ ಸಿಗರೇಟ್ ಎಳೆಯುವುದರಿಂದ ಶ್ವಾಸಕೋಶ ಹಾನಿಗೊಳಗಾಗುತ್ತದೆ. ಇದಕ್ಕೆ ಕಾರಣವೆಂದರೆ ಮಾಮೂಲಿ ಸಿಗರೇಟ್ ಎಳೆದಾಗ ಹೊಗೆಯನ್ನು ನುಂಗುತ್ತೇವೆ, ಆದರೆ ಎಲೆಕ್ಟ್ರಾನಿಕ್ಸ್ ಸಿಗರೇಟ್ ಎಳೆದರೆ ಹಬೆಯನ್ನು ನುಂಗುತ್ತೇವೆ. ಇದರಿಂದ ಈ ಸಿಗರೇಟ್ ಎಳೆಯುವವರಿಗೆ ಶ್ವಾಸಕೋಶದಲ್ಲಿ ಸೋಂಕು ಕಂಡು ಬರುವ ಸಾಧ್ಯತೆ ಹೆಚ್ಚು.

ನೆಗೆಟಿವ್ ಅಂಶಗಳು-ಹಾನಿಕಾರಕ ಅಂಶ
* ಅದಲ್ಲದೆ ಈ ಸಿಗರೇಟ್ ನಲ್ಲಿ ಎಷ್ಟು ಹಾನಿಕಾರಕ ಅಂಶಗಳಿವೆ ಎಂದು ಯಾರಿಗೂ ಗೊತ್ತಿಲ್ಲ, ತಂಬಾಕು ಸಿಗರೇಟ್ ನಲ್ಲಿ ಇಂತಿಷ್ಟು ಇವೆ ಎಂದು ಹೇಳಬಹುದು, ಆದರೆ ಎಲೆಕ್ಟ್ರಾನಿಕ್ಸ್ ಸಿಗರೇಟ್ ನಲ್ಲಿ ಎಷ್ಟು ಹಾನಿಕಾರಕ ಅಂಶವಿದೆಯೆಂದು ಗೊತ್ತಿಲ್ಲದೆಯೇ ಅದನ್ನು ಹೇಗೆ ಹಾನಿಕಾರವಲ್ಲವೆಂದು ಹೇಳುವಿರಿ?

ನೆಗೆಟಿವ್ ಅಂಶಗಳು-ಹೃದಯಾಘಾತ ಬರುವುದು
* ಈ ಸಿಗರೇಟ್ ಎಳೆದರೆ ಕ್ಯಾನ್ಸರ್ ಬರುವುದಿಲ್ಲ ಅನ್ನುವುದು ನಿಜ, ಆದರೆ ಹೃದಯಾಘಾತ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುವುದು. ಕ್ಯಾನ್ಸರ್ ಆದರೆ ಏನು, ಹೃದಯಾಘಾತವಾದರೇನು, ಒಟ್ಟಿನಲ್ಲಿ ಸಿಗರೇಟ್ ನಿಂದ ಹಾನಿ ತಪ್ಪಿದ್ದಲ್ಲ.

ನೆಗೆಟಿವ್ ಅಂಶಗಳು-ಕಾಯಿಲೆ
* ಎಲೆಕ್ಟ್ರಾನಿಕ್ಸ್ ಸಿಗರೇಟ್ ನಲ್ಲಿ diethylene glycol ಇದೆ. ಈ ಅಂಶ ನಮ್ಮ ದೇಹ ಸೇರಿದಾಗ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುವುದು.

ನೆಗೆಟಿವ್ ಅಂಶಗಳು-ಕಾಯಿಲೆ
* ಇದರಲ್ಲಿರುವ ಮತ್ತೊಂದು ರಾಸಾಯನಿಕವೆಂದರೆ Tetramethylpyrazine.ಎಲೆಕ್ಟ್ರಾನಿಕ್ಸ್ ಸಿಗರೇಟ್ ಎಳೆಯುವ ಚಟ ಬೆಳೆಸಿಕೊಂಡರೆ Tetramethylpyrazine ಮಿದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ.



Click it and Unblock the Notifications
