Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸೌಂದರ್ಯದ ಕಳೆ ಹೆಚ್ಚಿಸಲು ನಮ್ಮ ಕೆಲ ಸಲಹೆಗಳು
ಕೆಲವೊಮ್ಮೆ ನಾವು ಕೇವಲ ಮುಖದ ಚರ್ಮಕ್ಕೆ ಮಾತ್ರ ಪ್ರಾಮುಖ್ಯತೆಯನ್ನು ನೀಡುತ್ತೇವೆ ದೇಹದ ಆರೈಕೆ ಬಗ್ಗೆ ಗಮನ ಹರಿಸುವುದಿಲ್ಲ. ಕೇವಲ ಮುಖದ ಕಾಂತಿ ಮಾತ್ರವಲ್ಲ ದೇಹವನ್ನು ಸುಂದರವಾಗಿ ಇಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ನುಣುಪಾದ ದೇಹ ನಿಮ್ಮದಾಗಿಸಿಕೊಳ್ಳಲು ಸಾಕಷ್ಟು ನಿಗಾವಹಿಸಬೇಕಾಗುತ್ತದೆ. ದೇಹ ಆರೋಗ್ಯಯುತವಾಗಿರಲು ಕೂಡ ಇದು ಮುಖ್ಯ.
ಸೂರ್ಯನ ಬಿಸಿಲಿಗೆ ಕೇವಲ ಮುಖ ಮಾತ್ರವಲ್ಲ ಇಡೀ ದೇಹ ಟ್ಯಾನ್ ಆಗುತ್ತದೆ, ತನ್ನ ಬಣ್ಣ ಕಳೆದುಕೊಂಡು ಕಳೆಗುಂದುತ್ತದೆ. ವರ್ಷದ ಎಲ್ಲಾ ಕಾಲಗಳಲ್ಲಿ ಬೇಸಿಗೆ ಕಾಲಕ್ಕೆ ನಮ್ಮ ಚರ್ಮ ಹೆಚ್ಚು ಕಳೆಗುಂದುತ್ತದೆ. ನಿಮ್ಮ ಮುಖದ ಚರ್ಮವನ್ನು ಸುಂದರವಾಗಿ ಕಾಪಾಡುವುದು ನಿಮ್ಮ ಮೊದಲ ಪ್ರಾಮುಖ್ಯತೆ ಆಗಿರಬೇಕು ಮತ್ತು ಮುಖದ ಚರ್ಮ ಮೃದುವಾಗಿ ನುಣುಪಾಗಿ ಇರಬೇಕೆಂದು ಬಯಸುವುದಾದರೆ ಈ ಟಿಪ್ಸ್ ಪಾಲಿಸಬಹುದು.

ಪ್ರತಿದಿನ ಬ್ರೆಷ್ ನಲ್ಲಿ ಚರ್ಮವನ್ನು ಸ್ವಚ್ಚಗೊಳಿಸಿ
ಪ್ರತಿದಿನ ನೈಸರ್ಗಿಕ ಬಿರುಸಾದ ಕುಂಚ ಬಳಸಿ ಅದರಿಂದ ವೃತ್ತಾಕಾರವಾಗಿ ಉಜ್ಜಿ ನಿಮ್ಮ ಚರ್ಮದ ಕೊಳೆಯನ್ನು ಹೋಗಲಾಡಿಸಿ, ನಿಮ್ಮ ಮುಖದಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸಿ ಸತ್ತ ಚರ್ಮವನ್ನು ಹೋಗಲಾಡಿಸುವಲ್ಲಿ ಸಹಾಯಕವಾಗುತ್ತದೆ.

ಮೃದುವಾದ ಕ್ಯಾನ್ವಾಸ್ ನಿಮ್ಮದಾಗಿರಲಿ
ದೇಹವನ್ನು ಬ್ರಶ್ ನಿಂದ ಸ್ವಚ್ಚಗೊಲಿಸಿದ ನಂತರ ಮನೆಯಲ್ಲಿ ಸ್ನಾನ ಮಾಡಿ ನಂತರ ಕೊಬ್ಬರಿ ಎಣ್ಣೆ ಮತ್ತು ಸಕ್ಕರೆ ಮಿಶ್ರಣ ಮಾಡಿ ಮಸಾಜ್ ಮಾಡಿಕೊಳ್ಳಿ. ಇದು ನಿಮಗೆ ಐಷಾರಾಮಿ ಅನುಭವವನ್ನು ನೀಡುತ್ತದೆ.

ಮಾಯಿಶ್ಚರೈಸರ್
ಇತ್ತೀಚಿಗೆ ಸಾಕಷ್ಟು ಮಾಯಿಶ್ಚರೈಸರ್ ಲಭ್ಯವಿದೆ.ಅವುಗಳಲ್ಲಿ ರೋಗನಿರೋಧಕ ಮತ್ತು ದೇಹವನ್ನು ಫ಼ರ್ಮ್ ಮಾಡುವ ಗುಣಗಳನ್ನು ಹೊಂದಿರುತ್ತವೆ. ನಿಮ್ಮ ದೇಹಕ್ಕೆ ಸೂಕ್ತವಾಗುವ ಎಕ್ಸ್ಫಾಲಿಯೇಶನ್ ಹೆಚ್ಚಿಸುವ ಅಥವಾ ನೀರಿನ ಅಂಶ ಹೆಚ್ಚಿರುವ ಬಾಡಿ ವಾಶ್ ಗಳನ್ನು ಬಳಸಿ.ಕೆಲವು ಬಾಡಿ ವಾಶ್ ಗಳು ಆಲ್ಫಾ ಹೈಡ್ರೋಜನ್ ಆಮ್ಲಗಳು ಅಥವಾ ಎಕ್ಸ್ಫಾಲಿಯೇಶನ್ ನೆರವಾಗಲು ಗ್ಲೈಕೊಲಿಕ್ ಆಮ್ಲಗಳನ್ನು ಒಳಗೊಂಡಿರುತ್ತವೆ.

ಸ್ನಾನ ಮಾಡುವ ಮೊದಲು ಎಣ್ಣೆಯನ್ನು ಬಳಸಿ
ನಿಮ್ಮ ದೇಹದಲ್ಲಿ ತೇವಾಂಶವನ್ನು ಕಾಪಾಡಲು ಇದು ಉತ್ತಮ ವಿಧಾನ.ಸ್ನಾನ ಮಾಡುವ ಮೊದಲು ನಿಮ್ಮ ಇಷ್ಟದ ಎಣ್ಣೆಯನ್ನು ಬಳಸಿ (ಉದಾಹರಣೆಗೆ ಮೊನೈ ತೈಲ ಅಥವಾ ಬಯೋ ತೈಲ). ಸ್ಪ್ರೇ ಇದ್ದರೆ ನೀರನ್ನು ಒರೆಸಿಕೊಂಡು ನಂತರ ಸ್ಪ್ರೇ ಬಳಸಿ.

ಬ್ಲೋಟ್ ಆಗುವುದನ್ನು ತಪ್ಪಿಸಿ
ದೇಹದ ಕಲ್ಮಶವನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಜ್ಯೂಸ್ ಗಳು ಲಭ್ಯವಿದೆ ಅಥವಾ ಮನೆಯಲ್ಲಿಯೇ ಕಾಫಿ, ಅಲ್ಕೋಹಾಲ್, ಸಕ್ಕರೆ, ಅಧಿಕ ಉಪ್ಪು ಇವುಗಳನ್ನು ತ್ಯಜಿಸುವುದರ ಮೂಲಕ ದೇಹದ ಕಲ್ಮಶವನ್ನು ಹೊರಹಾಕಿ. ಇದರಿಂದ ನಿಮ್ಮ ಹೊಟ್ಟೆ ಆರಾಮವಾಗುತ್ತದೆ.

ಸ್ಟ್ರೆಚ್ ಮಾರ್ಕ್ ಗಳನ್ನು ಗಮನಿಸಿ
ಸ್ಟ್ರೆಚ್ ಮಾರ್ಕ್ ಹೋಗಲಾಡಿಸಲು ಸಾಕಷ್ಟು ನೀರು ಕುಡಿಯಿರಿ ಮತ್ತು ಪ್ರತೀದಿನ ತೇವಾಂಶ ಕಾಪಾಡಿಕೊಳ್ಳಿ. ಮೊದಲೇ ಇರುವ ಸ್ಟ್ರೆಚ್ ಮಾರ್ಕ್ ಗಳನ್ನು ಹೋಗಲಾಡಿಸಲು ಸೆಲ್ ಮತ್ತು ಕೊಲೆಜಿನ್ ಪ್ರಮನಾ ಇರುವ ರೆಟನಲ್ ಉತ್ಪನವನ್ನು ಬಳಸಿ. ನಿಮಗೆ ಸ್ಟ್ರೆಚ್ ಮಾರ್ಕ್ ಅಧಿಕವಿದ್ದರೆ ಸನ್ ಸ್ಕ್ರೀನ್ ಲೋಶನ್ ಬಳಸಬೇಕು ಇಲ್ಲದಿದ್ದಲ್ಲಿ ಅದು ಇನ್ನಷ್ಟು ಅಧಿಕವಾಗುತ್ತದೆ.

ಸೆಲ್ಯುಲೈಟ್ ಹೋಗಲಾಡಿಸಿ
ಸೆಲ್ಯುಲೈಟ್ ಹೋಗಲಾಡಿಸಲು ಪ್ರತಿದಿನ ಸೆರಮ್ ಇರುವ ಕ್ರೀಮ್ ಬಳಸಿ.ತೊಡೆ ಮತ್ತು ಹೊಟ್ಟೆ ಇನ್ನಿತರ ಸಂಧಿಗಳಲ್ಲಿ ಆಗುವ ಸೆಲ್ಯೂಲೈಟ್ ಹೋಗಲಾಡಿಸಿ.

ಬಹು ಕಾರ್ಯಕ ಮೊಶ್ಚರೈಸರ್ ಬಳಸಿ
ಕೊಲೆಜಿನ್ ಮತ್ತು ಎಲಾಸ್ಟಿನ್ ಇರುವ ಮೊಶ್ಚರೈಸರ್ ಬಳಸಿ. ನೈಸರ್ಗಿಕ ಕಾಂತಿಯಂತ ಕ್ರೀಮ್ ಗಳು ಟ್ಯಾನ್ ಆಗುವುದನ್ನು ತಪ್ಪಿಸಿ ಮುಖದಲ್ಲಿ ಕಾಂತಿಯನ್ನು ತರುತ್ತವೆ.

ಪ್ರತಿದಿನ ಸನ್ ಸ್ಕ್ರೀನ್ ಲೋಶನ್ ಬಳಸಿ
ಇದು ಬಹಳ ಮುಖ್ಯವಾದುದು.ಹೆಚ್ಚಿನ ಮಹಿಳೆಯರು ತಮ್ಮ ಮುಖಕ್ಕೆ ಸ್ಯಾನ್ ಸ್ಕ್ರೀನ್ ಲೋಶನ್ ಹಚ್ಚುತ್ತಾರೆ ಆದರೆ ದೇಹಕ್ಕೆ ಹಚ್ಚುವುದನ್ನು ಮರೆಯುತ್ತಾರೆ.SPF 15 ಅಂಶವಿರುವ ಕ್ರೀಮ್ ಅನ್ನು ಪ್ರತಿದಿನ ದೇಹಕ್ಕೆ ಹಚ್ಚುವುದನ್ನು ಮರೆಯಬೇಡಿ.ಇದು ನಿಮಗೆ ಉತ್ತಮ ಕಾಂತಿ ಕಾಪಾಡಲು ಸಹಾಯಕವಾಗುತ್ತದೆ ಅದರಲ್ಲೂ ನೀವು ಸದಾ ಬಿಸಿಲಿನಲ್ಲಿ ಇರುವವರಾದರೆ ಸನ್ ಸ್ಕ್ರೀನ್ ಬಳಸುವುದು ಅತ್ಯಗತ್ಯ.

ಫೈನಲ್ ಟಚ್
ನಿಮ್ಮ ದೇಹ ಸದಾ ಕಾಂತಿಯುತವಾಗಿ ಹೊಳೆಯುತ್ತಿರುವಂತೆ ನೋಡಿಕೊಳ್ಳಿ.ನಿಮ್ಮ ಚರ್ಮಕ್ಕೆ ಸ್ವಲ್ಪ ಬಣ್ಣವನ್ನು (ಮೇಕಪ್)ಬಳಸುವುದರಿಂದ ನಿಮ್ಮ ಕಾಂತಿ ಹೆಚ್ಚಿಸಿಕೊಳ್ಳಿ.ಇದರಿಂದ ನಿಮ್ಮ ಚರ್ಮ ಹೊಳೆಯುತ್ತಿರುವ ಭ್ರಮೆ ಮೂಡಿಸಬಹುದು.



Click it and Unblock the Notifications
