Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೀನಿದಾಗ ಕೀಟಾಣು ಹರಡಲು ಬಿಡದಿರಿ
ದಿನದಿಂದ ದಿನಕ್ಕೆ ಹವಮಾನದಲ್ಲಿ ಬದಲಾವಣೆ, ಒಮ್ಮೆ ಬಿಸಲಿದ್ದರೆ ಸ್ವಲ್ಪ ಹೊತ್ತಿಗೆ ಮಳೆ ಬರುತ್ತಿರುತ್ತದೆ. ಈ ರೀತಿಯ ವಾತಾವರಣವಿದ್ದರೆ ಕಾಯಿಲೆಗಳು ಬೇಗನೆ ಬರುತ್ತದೆ. ಅದರಲ್ಲೂ ಶೀತ ಹೊಡಿದರೆ ಮೂಗು ಸೋರುವುದರ ಜೊತೆಗೆ ಸೀನು ಬಂದು ಬಿಡುತ್ತದೆ. ಜೋರಾಗಿ ಸೀನಿ ಬಿಟ್ಟರೆ ಪಕ್ಕದಲ್ಲಿರುವವರು ಒಂಥರಾ ಮುಖ ಮಾಡುತ್ತಾರೆ. ಕಾರಣವಿಷ್ಟೆ ಎಲ್ಲಿ ನಮಗೂ ಬಂದು ಬಿಡುತ್ತದೆಯೊ ಎಂಬ ಭಯ. ಏಕೆಂದರೆ ಸೀನಿದಾಗ ಕೀಟಾಣುಗಳು ಬೇಗನೆ ಇನ್ನೊಬ್ಬರಿಗೆ ಹರಡುತ್ತದೆ.
ಆದ್ದರಿಂದ ಸೀನಿದಾಗ ನಮ್ಮ ಮುಖಾಂತರ ಇತರರಿಗೆ ರೋಗ ಹರಡದಂತೆ ತಡೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬೇಕು.

* ಕೆಮ್ಮುವಾಗ ಅಥವಾ ಸೀನುವಾಗ ಬಾಯಿಗೆ ಕರ್ಚೀಪ್ ಹಿಡಿಯಬೇಕು. ಇದರಿಂದ ನಾವು ಮತ್ತೊಬ್ಬರಿಗೆ ರೋಗಾಣುಗಳು ಹರಡದಂತೆ ತಡೆಯಬಹುದು.
* ಪೋನಿನಲ್ಲಿರುವಾಗ ಅಥವಾ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿರುವಾಗ ಸೀನು ಬಂದರೆ ತಕ್ಷಣವೇ ಕಂಪ್ಯೂಟರ್ ಮತ್ತು ಫೋನು ಒರೆಸಬೇಕು. ಏಕೆಂದರೆ ಆ ರೋಗಾಣುಗಳು ಪುನಃ ಕಾಯಿಲೆ ಹೆಚ್ಚು ಮಾಡುತ್ತದೆ.
* ಸೀನುವಾಗ ಹಿಡಿದ ಕರ್ಚೀಪ್ ಅನ್ನು ಚೆನ್ನಾಗಿ ಬಿಸಿ ನೀರಿನಲ್ಲಿ ಹಾಕಿ ತೊಳೆದ ಬಳಿಕ ಉಪಯೋಗಿಸಬೇಕು. ಶೀತವಾದಾಗ ಆದಷ್ಟು ಟಿಶ್ಯೂ ಪೇಪರ್ ಬಳಸುವುದು ಒಳ್ಳೆಯದು.
* ವಿಪರೀತ ಸೀನು ಇದ್ದರೆ ಮನೆಯಲ್ಲಿಯೆ ಇರುವುದು ಒಳ್ಳೆಯದು. ಇದರಿಂದ ನಿಮ್ಮ ಕಾಯಿಲೆ ಬೇಗನೆ ಗುಣ ಮುಖವಾಗುವುದಲ್ಲದೆ ಇತರರಿಗೆ ರೋಗಾಣು ಹರಡಂತೆ ತಡೆಯಬಹುದು.
* ಸೀನು ಬಂದಾಗ ಶುಂಠಿ ಕಷಾಯ ಮಾಡಿ ಕುಡಿದರೆ ಗುಣಮುಖವಾಗುವುದು. ಮನೆ ಮದ್ದು ಮಾಡಲು ಇಷ್ಟವಿಲ್ಲದಿದ್ದರೆ ವೈದ್ಯರನ್ನು ಕಂಡು ಔಷಧಿಯನ್ನು ಪಡೆಯಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
