ನಿತ್ಯಾನಂದ ಸ್ವಾಮಿ ಹೇಳಿದ ಹರ್ಪೀಸ್ ಮಾರಣಾಂತಿಕವೇ?

Herpes Disease
ಆರತಿ ರಾವ್ ಗೆ ಹರ್ಪೀಸ್ 2 ಎಂಬ ಮಾರಣಾಂತಿಕ ಕಾಯಿಲೆಯಿದೆ ಎಂದು ನಿತ್ಯಾನಂದ ಸ್ವಾಮಿ ಹೇಳಿದ್ದು, ಅದನ್ನು ಆರತಿ ರಾವ್ ಅಲ್ಲಗೆಳೆದದ್ದು ಗೊತ್ತೇ ಇದೆ. ಇಷ್ಟಕ್ಕೂ ಹರ್ಪೀಸ್ ಅಂದ್ರೆ ಮಾರಾಣಾಂತಿಕವೇ? ಭಯಾನಕ ಕಾಯಿಲೆಯೇ? ಗುಣಪಡಿಸಲು ಸಾಧ್ಯವಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಸಹಜ.

ಅಚ್ಚಕನ್ನಡದಲ್ಲಿ ಹರ್ಪೀಸ್ ಎಂದರೆ ಸರ್ಪಸುತ್ತು ಎಂದರ್ಥ. ಹರ್ಪೀಸ್‌ ಸಿಂಪ್ಲೆಕ್ಸ್‌ ವೈರಸ್‌ (Herpes simplex virus) ನಲ್ಲಿ ಎರಡು ವಿಧ. HSV-1 ಮತ್ತು HSV-2 ಹೆಸರನ್ನು ಸಂಕ್ಷಿಪ್ತವಾಗಿ ವೈರಸ್‌ 1 ಹಾಗೂ 2 ಎಂದು ಕರೆಯಲಾಗುತ್ತದೆ. ಈ ವೈರಸ್ ಅಪಾಯಕಾರಿ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.

ಹರ್ಪೀಸ್ ರೋಗದ ಲಕ್ಷಣಗಳು:

* ಚರ್ಮದಲ್ಲಿ ಅಥವಾ ಬಾಯಿ, ತುಟಿ ಅಥವಾ ಜನನಾಂಗಗಳ ಲೋಳೆಪೊರೆಗಳಲ್ಲಿ ನೀರು ಗುಳ್ಳೆಗಳುಂಟಾಗುವುದು ಇದರ ಪ್ರಮುಖ ಲಕ್ಷಣ. ಈ ಕಾಯಿಲೆ ಉಂಟಾದಾಗ ಚರ್ಮದಲ್ಲಿ ಬಿರುಕು (ಹಾವಿನ ಚರ್ಮದ ರೀತಿಯಲ್ಲಿ ತ್ವಚೆ ಉಂಟಾಗುವುದು) ಕಂಡು ಬರುತ್ತದೆ.

* ಜನನಾಂಗಗಳಲ್ಲಿ ತುಂಬಾ ನೋವು ಕಂಡುಬರುತ್ತದೆ. ಮೂತ್ರ ಮಾಡುವಾಗ ತುಂಬಾ ಉರಿ ಉಂಟಾಗುವುದು, ಚಳಿ ಜ್ವರ, ತಲೆಸುತ್ತು, ಸ್ನಾಯುಗಳ ಸೆಳೆತ ಈ ಲಕ್ಷಣಗಳು ಕೂಡ ಕಂಡು ಬರುತ್ತದೆ.

ರೋಗ ಹರಡುವುದು ಹೇಗೆ?

*ಲೈಂಗಿಕ ಕ್ರಿಯೆ: ಇದು ಮುಖ್ಯವಾಗಿ ಲೈಂಗಿಕ ಕ್ರಿಯೆ ಮೂಲಕ ಹರಡುತ್ತದೆ. ಹರ್ಪೀಸ್ ಹೊಂದಿರುವ ವ್ಯಕ್ತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಈ HSV ಸೋಂಕು ಹರಡುವುದು.

* ಹುಣ್ಣುಗಳನ್ನು ನೇರವಾಗಿ ಮುಟ್ಟಿದಾಗ ಈ ವೈರಸ್ ಮತ್ತೊಬ್ಬರಿಗೆ ಹರಡುತ್ತದೆ. ಕಣ್ಣಿಗೆ ಕಾಣಿಸದ ಹುಣ್ಣುಗಳಿಂದ ಕೂಡ ಇದರ ವೈರಸ್ ಹರಡಬಹುದು. ಈ ವೈರಸ್ ಗಳು ಒಮ್ಮೆ ಶರೀರವನ್ನು ಸೇರಿ ಕೊಂಡರೆ ನಂತರ ಅದು ದೇಹದಲ್ಲಿರುವ ಆರೋಗ್ಯಕರ ಕಣಗಳನ್ನು ನಾಶ ಪಡಿಸುತ್ತದೆ. ಚರ್ಮದಲ್ಲಿ ಹುಣ್ಣುಗಳು ಉಂಟಾಗುವುದು, ಮೈ ಊದಿಕೊಳ್ಳುವುದು, ಗುಳ್ಳೆಗಳು ಒಡೆದು ಚರ್ಮ ಹಾವಿನ ಪೊರೆಯಂತೆ ಕಂಡು ಬರುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ವೈರಸ್ ಶರೀರದಿಂದ ಹೊರಬಂದರೆ ಕೆಲವೇ ನಿಮಿಷಗಳವರೆಗೆ ಮಾತ್ರ ಜೀವಿತವಾಗಿರುತ್ತದೆ. ಆದರೆ ಈ ಕಾಯಿಲೆ ಇರುವವರು ಬಳಸಿದ ಟಾಯ್ಲೆಟ್, ಸ್ನಾನದ ಟಬ್ ಮುಂತಾದವುಗಳನ್ನು ಅವರು ಬಳಸಿದ ಕೂಡಲೇ ಬಳಸಿದರೆ ಆ ರೋಗ ಮತ್ತೊಬ್ಬರಿಗೂ ಹರಡಬಹುದು.

* ಈ ವೈರಸ್‌ಗಳು ತಾಯಿಯಿಂದ ಶಿಶುವಿಗೆ ಜನನಕ್ಕೆ ಮುಂಚೆ ಅಥವಾ ಜನನದ ಸಮಯದಲ್ಲಿ ರವಾನೆಯಾಗಬಹುದು. ಮಕ್ಕಳಲ್ಲಿ ರೋಗನಿರೋಧಕ ಸಾಮರ್ಥ್ಯ ಕಡಿಮೆ ಇರುವುದರಿಂದ ಈ ವೈರಸ್‌ ವಿರುದ್ಧ ರಕ್ಷಣೆ ಅಸಾಧ್ಯವಾಗಿ ಮಗುವಿನ ಪ್ರಾಣಕ್ಕೆ ಅಪಾಯ ಉಂಟಾಗುವುದು.

ಈ ವೈರಸ್ ಗಳು ನರಗಳಿಗೆ ಸೋಂಕುಂಟು ಮಾಡುವ ಅಪಾಯವಿದ್ದು, ವ್ಯಕ್ತಿ ಸಾಯುವವರೆಗೆ ಶರೀರದಲ್ಲಿ ಉಳಿದುಕೊಳ್ಳಬಹುದು. ಈ ವೈರಸ್ ತಗುಲಿದ ಆರಂಭಿಕ ಹಂತದಲ್ಲಿ ಅಷ್ಟಾಗಿ ಇದರ ಪ್ರಭಾವ ಕಂಡು ಬರದಿದ್ದರೂ ನಂತರ ಏಕಾಏಕಿ, ನರಜೀವಕೋಶದಲ್ಲಿ ವೈರಸ್‌ ಸಕ್ರಿಯಗೊಂಡು, ನರತಂತುವಿನ ಮೂಲಕ ಚರ್ಮದೆಡೆ ರವಾನೆಯಾಗಿ ಚರ್ಮದಲ್ಲಿ ಹುಣ್ಣುಗಳು ಕಂಡು ಬರುತ್ತದೆ.

ಚಿಕಿತ್ಸೆ:
* HSV ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವಂತಹ ನಿಖರವಾದ ಚಿಕಿತ್ಸೆ ಕಂಡು ಹಿಡಿದಿಲ್ಲ. ಆದರೆ ಚಿಕಿತ್ಸೆಗಳ ಮೂಲಕ ವೈರಸ್‌ ಪ್ರಸರಣ ಮತ್ತು ಹರಡುವಿಕೆಯ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು.
* ಲೋಳೆಸರ ಜನನಾಂಗ ಹರ್ಪೀಸ್‌ ವಿರುದ್ಧ ಬಹಳ ಪರಿಣಾಮಕಾರಿಯೆಂದು ಸಂಶೋಧನೆಯು ಸೂಚಿಸಿದೆ.
* ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.
* ಸ್ನಾನ ಮಾಡುವಾಗ ಹದ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಮಾಡಿದರೆ ಗಾಯ ಒಣಗುವುದು.
* ಟಾಯ್ಲೆಟ್ ಗೆ ಹೋದಾಗ ತುಂಬಾ ಉರಿ ಉಂಟಾಗುವುದಾದರೆ ಜನನಾಂಗಕ್ಕೆ ತುಂಬಾ ನೀರು ಸುರಿಯಿರಿ.
* ಬಿಸಿಲಿಗೆ ಹೆಚ್ಚಾಗಿ ಹೋಗಬಾರದು ಮತ್ತು ತುಂಬಾ ವಿಶ್ರಾಂತಿ ತೆಗೆದುಕೊಳ್ಳಬೇಕು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Herpes Disease And Symptoms | Tips For Health | ಹರ್ಫೀಸ್ ಕಾಯಿಲೆ ಮತ್ತು ಲಕ್ಷಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Herpes is caused by infection with herpes simplex virus (HSV). There are two types of HSV, HSV-1 and HSV-2 . I t is uncurable diseases. Moth men and women can affect by this.
Story first published: Monday, June 25, 2012, 17:19 [IST]
X
Desktop Bottom Promotion