Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ!
ಸೌಂದರ್ಯವರ್ಧಕಗಳು ತರಬಹುದು ಮಧುಮೇಹ!

ಈ ಅಧ್ಯಯನದಲ್ಲಿ ಅಧಿಕ ರಾಸಾಯನಿಕವಿರುವ ಸೌಂದರ್ಯ ವರ್ಧಕಗಳನ್ನು ಬಳಸುವ ಮಹಿಳೆಯರನ್ನು ಮತ್ತು ಕಡಿಮೆ ರಾಸಾಯನಿಕವಿರುವ ಸೌಂದರ್ಯ ವರ್ಧಕಗಳನ್ನು ( ನೈಸರ್ಗಿಕ ಸೌಂದರ್ಯ ವರ್ಧಕ) ಬಳಸುವ ಮಹಿಳೆಯರನ್ನು ಪರೀಕ್ಷಿಸಿದಾಗ ಅಧಿಕ ಕೆಮಿಕಲ್ ಬಳಸುವ ಮಹಿಳೆಯರಲ್ಲಿ ಟೈಪ್ 2 ಮಧುಮೇಹ ಸಮಸ್ಯೆ ಹೆಚ್ಚಾಗಿ ಕಂಡು ಬಂತು.
ಸೌಂದರ್ಯ ವರ್ಧಕ ಕ್ರೀಮ್ ಗಳಲ್ಲಿ ಮೋನೊ ಬೆಂಜೈಲ್ ಮತ್ತು ಮೋನೊ ಐಸೊಬ್ಯೂಟಿ ಎಂಬ ರಾಸಾಯನಿಕಗಳನ್ನು ಸಾಮಾನ್ಯವಾಗಿ ಸೇರಿಸಲಾಗುವುದು. ಈ ರಾಸಾಯನಿಕಗಳು ಮಧುಮೇಹ ಸಮಸ್ಯೆ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಈ ರಾಸಾಯನಿಕಗಳು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಕಡಿಮೆ ಮಾಡಿ ಮಧುಮೇಹವನ್ನು ಹೆಚ್ಚು ಮಾಡುವುದು.
ಇಷ್ಟೇ ಅಲ್ಲ, ತ್ವಚೆ ಸೌಂದರ್ಯ ಹೆಚ್ಚು ಮಾಡಲು ನಾವು ಬಳಸುವ ಕ್ರೀಮ್ ಗಳು ಕ್ರಮೇಣ ನಮ್ಮ ತ್ವಚೆ ಸೌಂದರ್ಯವನ್ನು ಹಾಳು ಮಾಡಿ ನೆರಿಗೆ ಬರುವಂತೆ ಮಾಡುತ್ತದೆ. ಆದ್ದರಿಂದ ಕೆಮಿಕಲ್ ಇರುವ ಕ್ರೀಮ್ ಬದಲು ನೈಸರ್ಗಿಕವಾದ ವಸ್ತುಗಳನ್ನು ಬಳಸಿದರೆ ಸೌಂದರ್ಯಕ್ಕೆ ಮತ್ತು ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಲಿಪ್ ಸ್ಟಿಕ್, ಲಿಪ್ ಕೇರ್, ನೇಲ್ ಪಾಲೀಷ್, ಕ್ರೀಮ್, ಬಾಡಿ ಸ್ಪ್ರೇ, ಹೇರ್ ಸ್ಪ್ರೇ ಇವುಗಳನ್ನು ಕೊಳ್ಳುವಾಗ ಉತ್ತಮ ಕಂಪನಿಯ ವಸ್ತುಗಳನ್ನು ನೋಡಿ ಕೊಂಡು ಕೊಳ್ಳಬೇಕು, ಅದರಲ್ಲೂ ಹೆಚ್ಚಾಗಿ ಆರ್ಯವೇದ ಸಾಧನಗಳನ್ನು ಬಳಸುವುದು ಒಳ್ಳೆಯದು. ಕಡಿಮೆ ಕೆಮಿಕಲ್ ಇರುವ ಸಾಧನಗಳನ್ನು ಬಳಸಿ ಸೌಂದರ್ಯ ಮತ್ತು ಆರೋಗ್ಯದ ರಕ್ಷಣೆ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
