ನೀವು ಊಹಿಸಿರದ ಧೂಮಪಾನದ 6 ಪರಿಣಾಮಗಳು

ಯಾವುದೇ ಧೂಮಪಾನ ವ್ಯಸನಿಗೆ ಧೂಮಪಾನ ಬಿಡು ಎಂದು ಸಲಹೆ ನೀಡಿದರೆ 'ಸಾಯೋದಕ್ಕೆ ಯಾರಿಗೆ ಅವಸರ ಇದೆ ಕಣೋ' ಎಂಬ ಸಿದ್ಧ ಉತ್ತರ ಇದ್ದೇ ಇರುತ್ತದೆ. ಶ್ವಾಸಕೋಶ ಸಂಬಂಧಿ ರೋಗಗಳು ಹಾಗೂ ಕ್ಯಾನ್ಸರ್ ನಿಂದಾಗಿ ಮುಂದೆಂದೋ ಸಾಯುವ ಭಯ ವ್ಯಸನಿಗೆ ಧೂಮಪಾನ ಬಿಡಲು ಸಾಕಷ್ಟು ಪ್ರೇರಣೆ ಒದಗಿಸುವುದಿಲ್ಲ ಅನ್ನಿಸುತ್ತದೆ. ಆದರೆ ಸ್ವಲ್ಪ ಗಂಭೀರವಾದ ತತ್ ಕ್ಷಣಕ್ಕೆ ಪ್ರಭಾವಿಸುವ ಕಾರಣ ನಿಮ್ಮಲ್ಲಿದ್ದರೆ ಹೇಗೆ?

ಧೂಮಪಾನದ ಪರಿಣಾಮಗಳು ಕೇವಲ ಅಸ್ತಮಾ ಮತ್ತು ಕ್ಯಾನ್ಸರ್ ಗಷ್ಟೇ ಸೀಮಿತವಾಗಿಲ್ಲ. ಅವು ಗಂಡಸರು ಬಹಳವಾಗಿಯೇ ಭಯಪಡುವ ಹೆಣ್ಣಿಗತನ (ಗಂಡಸುತನ ಕಳೆದುಕೊಳ್ಳುವಿಕೆ) ಕ್ಕಿಂತಲೂ ಬಹಳ ಹೆಚ್ಚಾಗಿವೆ. ಸಾಧಾರಣವಾಗಿ ಮುದ್ಯಪಾನ ಮತ್ತು ಧೂಮಪಾನದ ಪರಿಣಾಮಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗುತ್ತದೆ ಆದರೆ ವಾಸ್ತವದಲ್ಲಿ ಇವೆರಡರ ನಡುವೆ ಬಹಳ ವ್ಯತ್ಯಾಸಗಳಿವೆ. ಕುಡಿತ ಕೇವಲ ಪಿತ್ತಜನಕಾಂಗ ಮತ್ತು ಕೇಂದ್ರ ನರಮಂಡಲ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಧೂಮಪಾನ ನಿಮ್ಮ ದೇಹದ ಎಲ್ಲಾ ಭಾಗಗಳನ್ನೂ ಪ್ರಭಾವಿಸುತ್ತದೆ ಮತ್ತು ಇದರ ವಿಷ ದೇಹದಲ್ಲೇ ಉಳಿದುಬಿಡುತ್ತದೆ.

ಇಲ್ಲಿ ನಿಮಗೆ ಗೊತ್ತಿರುವ ಸಾಧ್ಯತೆ ಕಡಿಮೆ ಇರುವ, ಹೆಚ್ಚಾಗಿ ಪ್ರಚಲಿತದಲ್ಲಿರದ ಪರಿಣಾಮಗಳಿವೆ:

6 Effects Of Smoking You'd Never Guess

1. ಧೂಮಪಾನ ಕೂದಲು ಉದುರುವಿಕೆಗೆ ಕಾರಣ: ನೀವು ನಿಮ್ಮ ಕೂದಲು ಉದುರುವಿಕೆಗೆ ಕಾರಣ ಹುಡುಕುತ್ತಾ ಹುಡುಕುತ್ತಾ ಸುಸ್ತಾಗಿದ್ದೀರಾ? ನೀವು ಧೂಮಪಾನ ವ್ಯಸನಿಯಾಗಿದ್ದರೆ ಕಾರಣ ಬಹಳ ಸರಳವಾಗಿದೆ. ಅತಿಯಾದ ಧೂಮಪಾನ ಕೂದಲು ಉದುರುವಿಕೆ ಮತ್ತು ಅಕಾಲಿಕ ಬೊಕ್ಕ ತಲೆಗೆ ಕಾರಣವಾಗಬಹುದು. ಅದರಲ್ಲೂ ಗಂಡಸರ ವಿಷಯದಲ್ಲಿ ಈ ಮಾತು ಅಪ್ಪಟ ಸತ್ಯವಾಗಿದೆ.

2. ಜೀರ್ಣಾಂಗ ವ್ಯವಸ್ಥೆಯ ಮೇಲೆ ಧೂಮಪಾನದ ಪರಿಣಾಮ: ಜಠರ ಮತ್ತು ಕರುಳಿನ ಮೇಲೆ ಧೂಮಪಾನ ಸರಿಪಡಿಸಲು ಆಗದಂತಹ ಪರಿಣಾಮ ಬೀರುತ್ತದೆ. ಸಿಗರೇಟಿನಲ್ಲಿರುವ ದುಷ್ಪರಿಣಾಮ ಬೀರುವ ವಿಷದ ಅಂಶ ಜಠರದ ಒಳಪದರವನ್ನು ಸವೆಸುತ್ತದೆ ಮತ್ತು ಜೀರ್ಣಾಂಗದ ಕಿಣ್ವಗಳು ಸರಿಯಾಗಿ ಕೆಲಸ ಮಾಡಲು ಅಡ್ಡಿಪಡಿಸುತ್ತದೆ. ಇದೇ ಕಾರಣದಿಂದ ಧೂಮಪಾನ ವ್ಯಸನಿಗಳು ಆಹಾರ ಜೀರ್ಣವಾಗುವುದರಲ್ಲಿ ತೊಂದರೆ ಅನುಭವಿಸುತ್ತಾರೆ.

3. ಧೂಮಪಾನ ರುಚಿಯನ್ನು ಇಲ್ಲವಾಗಿಸುತ್ತದೆ: ನೀವು ಧೂಮಪಾನ ವ್ಯಸನಿಯಾಗಿದ್ದರೆ ನಿಮ್ಮ ನಾಲಗೆಯ ಮೇಲಿರುವ ರುಚಿ ಗ್ರಾಹಕ (ಟೇಸ್ಟ್ ಬಡ್) ಗಳು ಬೇಗನೆ ನಶಿಸಿ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿಯೇ ಧೂಮಪಾನ ವ್ಯಸನಿಗಳು ಖಾರ ಪದಾರ್ಥಗಳನ್ನು ಯಾವುದೇ ತೊಂದರೆಯಿಲ್ಲದೆ ಸೇವಿಸುತ್ತಾರೆ. ಅವರ ನಾಲಗೆಯ ಮೇಲಿನ ರುಚಿ ಗ್ರಾಹಕಗಳು ನಶಿಸಿ ಹೋಗಿರುವ ಕಾರಣ ಅವರಿಗೆ ರುಚಿ ತಿಳಿಯುದಿಲ್ಲ.

4. ಧೂಮಪಾನದಿಂದ ನಿರ್ಜಲೀಕರಣ: ಧೂಮಪಾನ ವ್ಯಸನಿಗಳು ಸಾಮಾನ್ಯ ಜನರು ಸೇವಿಸುವುದಕ್ಕಿಂತ ಕನಿಷ್ಟ ೨ ಲೀಟರ್ ಹೆಚ್ಚಿನ ನೀರನ್ನು ಸೇವಿಸಬೇಕು. ಇದಕ್ಕೆ ಕಾರಣ ಧೂಮಪಾನ ದೇಹದ ದ್ರವ ಸಮತೋಲನದ ಮೇಲೆ ಬೀರುವ ಪ್ರಭಾವ. ಇದಕ್ಕೆ ಕಾರಣ ಧೂಮಪಾನ ದೇಹವನ್ನು ಆಂತರಿಕವಾಗಿ ಒಣಗಿಸುತ್ತದೆ. ಇದು ಒಣಗಿದ ತುಟಿಗಳು, ಒಣ ಚರ್ಮ ಹಾಗೂ ಹಲವಾರು ಮೂತ್ರ ಸಂಬಂಧಿ ಸೋಂಕುಗಳ ಮೂಲಕ ಪ್ರಕಟವಾಗುತ್ತದೆ.

5. ಶಕ್ತಿ ಹೀನತೆಯ ಮೇಲೆ ಧೂಮಪಾನದ ಪ್ರಭಾವ: ಹೆಚ್ಚಿನ ಧೂಮಪಾನ ವ್ಯಸನಿಗಳು ಧೂಮಪಾನ ತಮಗೆ ರಾತ್ರಿ ಪಾಳಿಯ ಕೆಲಸಗಳನ್ನು ಮಾಡಲು ಹಾಗೂ ತಡರಾತ್ರಿಯ ತನಕ ಕೆಲಸಗಳನ್ನು ಮಾಡಲು ಶಕ್ತಿ ನೀಡುತ್ತದೆ ಎಂಬ ಸಬೂಬು ನೀಡುತ್ತಾರೆ. ಆದರೆ ಧೂಮಪಾನ ನಿಮ್ಮ ಶಕ್ತಿಯ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಇದೊಂದು ಕುಂಟು ನೆಪವಾಗಿದೆ. ಇದು ನಿಮ್ಮ ಶ್ವಾಸಕೋಶದ ಮೇಲೆ ಪ್ರಭಾವ ಬೀರುತ್ತದೆ. ಹಾಗೂ ನಿಮ್ಮ ಶ್ವಾಸಕೋಶಗಳು ಸಮರ್ಪಕವಾಗಿ ಗಾಳಿಯನ್ನು ಒದಗಿಸದಿದ್ದಲ್ಲಿ ನೀವು ಹೆಚ್ಚು ಶಕ್ತಿ ಪಡೆಯಲು ಹೇಗೆ ತಾನೇ ಸಾಧ್ಯ?

6.ಧೂಮಪಾನ ಡಿ.ಎನ್.ಎ (ಜೀವಧಾತು) ಯನ್ನು ಪ್ರಭಾವಿಸುತ್ತದೆ: ನೀವು ಸಿಗರೇಟಿನ ಕೇವಲ ಒಂದೇ ಒಂದು ದಮ್ಮನ್ನು ತೆಗೆದುಕೊಳ್ಳುತ್ತಿದ್ದಂತೆಯೆ ಟಾರ್ ರೀತಿಯ ಒಂದು ಅಂಶ ನಿಮ್ಮ ರಕ್ತದಲ್ಲಿ ರಚನೆಯಾಗುತ್ತದೆ ಹಾಗೂ ಇದು ಡಿ.ಎನ್.ಏ ಯನ್ನು ಘಾಸಿಗೊಳಿಸುವ ಎಲ್ಲಾ ಸಾಧ್ಯತೆಗಳಿವೆ. ಈ ದುಷ್ಪರಿಣಾಮದ ಸ್ವರೂಪ ಏನೆಂಬುದನ್ನು ಇಲ್ಲಿಯ ತನಕ ಪತ್ತೆಹಚ್ಚಲಾಗಲಿಲ್ಲ. ಅಂದರೆ, ಕೇವಲ ನೀವೊಬ್ಬರೆ ಧೂಮಪಾನದ ದುಷ್ಪರಿಣಾಮಕ್ಕೆ ಒಳಗಾಗುವುದಿಲ್ಲ ನೀವಿದನ್ನು ನಿಮ್ಮ ಮುಂದಿನ ಪೀಳಿಗೆಗೂ ವರ್ಗಾಯಿಸುತ್ತೀರಿ ಎಂದರ್ಥ.

ಅಷ್ಟಾಗಿ ಪ್ರಚಲಿತವಿರದ ಧೂಮಪಾನದ ದುಷ್ಪರಿಣಾಮಗಳು ನಿಮಗೆ ತಿಳಿದಿರದೇ ಇದ್ದಿರಬಹುದು. ಆದರೆ ಈಗ ನೀವು ಖಂಡಿತವಾಗಿ ಧೂಮಪಾನ ಬಿಡುವ ನಿರ್ಧಾರವನ್ನು ತೆಗೆದುಕೊಳ್ಳಬಹುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion