Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ರೋಗನಿರೋಧಕಗಳ ಬಗ್ಗೆ ಒಂದಿಷ್ಟು ತಿಳಿದಿರಲಿ

ರೋಗನಿರೋಧಕದ ನಿಮಗಿಷ್ಟು ತಿಳಿದಿರಲಿ:
ಹೇಳಿದ್ದನ್ನು ಅನುಸರಿಸಿ: ರೋಗನಿರೋಧಕ ಮಾತ್ರೆಯನ್ನು ಸರಿಯಾದ ಡೋಸ್ ನಲ್ಲಿ ಸೇವಿಸಿ. ವೈದ್ಯರು ಎಷ್ಟು ತೆಗೆದುಕೊಳ್ಳಲು ಹೇಳಿರುತ್ತಾರೊ ಅಷ್ಟನ್ನು ಮಾತ್ರ ಸೇವಿಸಿ. ಊಟದ ಮುನ್ನ ಅಥವಾ ನಂತರ ಸೇವಿಸಬೇಕಾದ್ದನ್ನು ಆಯಾ ಸಮಯಕ್ಕೇ ತೆಗೆದುಕೊಳ್ಳಬೇಕು. ಆಗ ಚಿಕಿತ್ಸೆ ಬೇಗ ಫಲಕಾರಿಯಾಗುತ್ತದೆ.
ಸೂಕ್ತ ಸಂರಕ್ಷಣೆಯಿರಲಿ: ರೋಗನಿರೋಧಕಗಳ ಮೇಲಿನ ಸೂಚನೆಯಂತೆ ಸರಿಯಾದ ವಾತಾವರಣದಲ್ಲಿ ಅವನ್ನು ಸಂರಕ್ಷಿಸಬೇಕು. ಇಲ್ಲವೆಂದರೆ ಅದರಲ್ಲಿ ಬಳಸಿರುವ ಅಂಶಗಳ ಮೇಲೆ ಪರಿಣಾಮ ಬೀರಬಹುದು.
ಸ್ವಯಂ ಚಿಕಿತ್ಸೆ ಬೇಡ: ಸುಖಾಸುಮ್ಮನೆ ಆಂಟಿಬಯೋಟಿಕ್ ಸೇವಿಸುವುದು ಬೇಡ. ಸಮಸ್ಯೆ ಕಂಡುಬಂದ ತಕ್ಷಣವೇ ಡಾಕ್ಟರನ್ನು ಸಂಪರ್ಕಿಸಿ ನಂತರ ಆ ಸಮಸ್ಯೆಗೆ ತಕ್ಕಂತೆ ರೋಗನಿರೋಧಕವನ್ನು ವೈದ್ಯರ ಸೂಚನೆ ಮೇರೆಗೆ ಸೇವಿಸಿ. ತಮ್ಮ ಸಮಸ್ಯೆಗೆ ತಾವೇ ಚಿಕಿತ್ಸೆ ಪಡೆದುಕೊಳ್ಳುವುದು ಅಷ್ಟು ಒಳ್ಳೆಯದಲ್ಲ.
ಅರಿವಿಲ್ಲದೇ ಸೇವನೆ ಬೇಡ: ಸೋಂಕಿಗೆ ಕಾರಣ, ಡೋಸ್, ಅಡ್ಡ ಪರಿಣಾಮ, ಅಲರ್ಜಿ ಮುಂತಾದ ಅರಿವಿಲ್ಲದೆಯೇ ಮಾತ್ರೆಗಳ ಸೇವನೆ ಒಳ್ಳೆಯದಲ್ಲ. ಮೊದಲು ವೈದ್ಯರನ್ನು ಸಂಪರ್ಕಿಸಿ ನಂತರವಷ್ಟೇ ಮಾತ್ರೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ತಪ್ಪಿಸಬೇಡಿ: ಸೋಂಕನ್ನು ತಡೆಯಲು ವೈದ್ಯರು ತಿಳಿಸಿದಷ್ಟು ಅವಧಿ ರೋಗನಿರೋಧಕಗಳನ್ನು ತೆಗೆದುಕೊಳ್ಳುವುದು ಉತ್ತಮ. ಮಧ್ಯದಲ್ಲಿಯೇ ನಿಲ್ಲಿಸಿದರೆ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾ ಮತ್ತೆ ಬೆಳವಣಿಗೆ ಹೊಂದಬಹುದು. ಇದು ಮುಂದೆ ಸಮಸ್ಯೆ ಹೋಗಲಾಡಿಸಲು ಕಷ್ಟವಾಗಬಹುದು.
ಅಡ್ಡಪರಿಣಾಮ: ಕೆಲವು ಮಾತ್ರೆ ಸೇವಿಸಿದ ನಂತರ ಹೊಟ್ಟೆ ನೋವು, ವಾಂತಿ, ನಾಲಿಗೆಯ ಮೇಲೆ ಬಿಳಿ ಗುರುತು, ಮುಖ, ನಾಲಗೆ ಅಥವಾ ತುಟಿ ಊದಿಕೊಳ್ಳುವುದು, ನೋವು, ಉಸಿರಾಟ ಕಷ್ಟವೆನಿಸುವುದು ಈ ರೀತಿ ಅಡ್ಡ ಪರಿಣಾಮ ಉಂಟು ಮಾಡಬಹುದು. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಪರ್ಯಾಯ ವಿಧಾನವನ್ನು ಅನುಸರಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications