Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಐಟಿ ದಂಪತಿಗಳ ಮನೇಲಿ ತೂಗದ ತೊಟ್ಟಿಲು

ಡಾ. ನರ್ಮದಾ ದೇವಿ ಸದ್ಯ ಹೈದರಾಬಾದಿನಲ್ಲಿ ವೃತ್ತಿನಿರತ ಫರ್ಟಿಲಿಟಿ ಸ್ಪೆಷಲಿಸ್ಟ್. ಅವರ ಫರ್ಟಿಲಿಟಿ ಕ್ಲಿನಿಕ್ ಗೆ 2 ವರ್ಷ ತುಂಬಿದ ಸಂದರ್ಭದಲ್ಲಿ ದುಡಿಯುವ ದಂಪತಿಗಳಲ್ಲಿ ಸಂತಾನ ಶಕ್ತಿ ಕ್ಷೀಣಿಸುವ, ನಿರ್ವೀರ್ಯರಾಗುತ್ತಿರುವ, ಬಂಜೆತನಕ್ಕೆ ಪಕ್ಕಾಗುವ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಅವರು ನೀಡಿದ ಮಾಹಿತಿಯ ಸಾರ ಹೀಗಿದೆ: ಕೆಲಸದ ಒತ್ತಡ, ಡೆಡ್ ಲೈನ್, ಟಾರ್ಗೆಟ್, ಅಸಮರ್ಪಕ ಜೀವನಶೈಲಿ, ಒತ್ತಡದ ಬದುಕು, ಬೊಜ್ಜು, ನಗರೀಕರಣ, ವಿಳಂಬ ಮದುವೆ, ಕುಟುಂಬ ಯೋಜನೆಯನ್ನು ವಿಸ್ತರಿಸುವುದು ಇತ್ಯಾದಿಗಳು ಬಂಜೆತನ ಹೆಚ್ಚಳಕ್ಕೆ ಪ್ರಮುಖ ಕಾರಣ.
ನಗರಗಳಲ್ಲಿ ಶೇಕಡ 7ರಷ್ಟು ಮಂದಿ ದುಡಿಯುವ ದಂಪತಿಗಳು ಸಂತಾನಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಫರ್ಟಿಲಿಟಿ ಕೇಂದ್ರಗಳು ಹೆಚ್ಚಾಗಿವೆ. ಹೈದರಾಬಾದಿನಲ್ಲಿ ಈಗಾಗಲೇ 20 ಫರ್ಟಿಲಿಟಿ ಚಿಕಿತ್ಸಾ ಕೇಂದ್ರಗಳಿವೆ. ವರ್ಷದಿಂದ ವರ್ಷಕ್ಕೆ ದುಡಿಯುವ ದಂಪತಿಗಳಲ್ಲಿ ಸಂತಾನಶಕ್ತಿ ಕುಂಠಿತವಾಗುವುದು ನಿಜಕ್ಕೂ ಆತಂಕಕಾರಿ ಎಂದು ಡಾ. ನರ್ಮದಾ ದೇವಿ ಹೇಳುತ್ತಾರೆ.
ಸುಮಾರು 100 ದಂಪತಿಗಳಲ್ಲಿ ಶೇಕಡ 15ರಷ್ಟು ದಂಪತಿಗಳಿಗೆ ಫಲವತ್ತತೆಯ ಚಿಕಿತ್ಸೆ ಅಗತ್ಯವಿದೆ. ಇದರಲ್ಲಿ ಪುರುಷರ ಪಾಲು ಶೇಕಡ 40ರಷ್ಟಿದೆ. ಹಿಂದೆ ದಂಪತಿಗಳು ಕುಟುಂಬದೊಂದಿಗೆ ಒಟ್ಟಾಗಿರುತ್ತಿದ್ದರು. ಇದರಿಂದ ಲೈಂಗಿಕ ಸಮಸ್ಯೆಗಳನ್ನು ಕುಟುಂಬದ ಆಪ್ತರಲ್ಲಿ ಹೇಳಿಕೊಳ್ಳಬಹುದಿತ್ತು. ಪ್ರಸಕ್ತ ಜೀವನಶೈಲಿಯೂ ಸಂತಾನಶಕ್ತಿ ಕ್ಷೀಣಿಸಲು ಪ್ರಮುಖ ಕಾರಣ ಎಂದಿದ್ದಾರೆ.
ಯಾರು ಡಾ. ನರ್ಮದಾ? Dr. H. Narmada Devi is a member of I.S.A.R - Indian Society For Assisted Reproduction. Gynecologic Endoscopy Surgeries of India and Life member of Federation of Obstetric and Gynaecological Societies of India (FOGSI). ಅವರ ಮೊಬೈಲ್ ಸಂಖ್ಯೆ: 98481 14279
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications