Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಕೆನೆರಹಿತ ಹಾಲು ಆರೋಗ್ಯಕ್ಕೆ ಎಷ್ಟು ಪೂರಕ?

ಕೆನೆರಹಿತ ಹಾಲಿನಲ್ಲಿ ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಅದು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದ್ದರೂ ಕೆಲವು ಸಂಶೋಧನೆಗಳು ಕೆನೆರಹಿತ ಹಾಲು ಆರೋಗ್ಯಕ್ಕೆ ಅಷ್ಟು ಪೂರಕವಾಗಿಲ್ಲ ಎಂದಿವೆ.
ಕೆನೆರಹಿತ ಹಾಲಿನಲ್ಲಿರುವ ಕೆಲವು ಅಂಶಗಳ ಬಗ್ಗೆ ತಿಳಿದುಕೊಳ್ಳೋಣ:
1. ಹಾಲಿನಲ್ಲಿರುವ ಪೂರ್ತಿ ಕೊಬ್ಬಿನಂಶವನ್ನು ತೆಗೆದು ಕೆನೆರಹಿತ ಹಾಲು ಮಾಡಿರುವುದರಿಂದ, ಕೊಬ್ಬಿನಾಂಶದಲ್ಲಿದ್ದ ವಿಟಮಿನ್ ಎ ಮತ್ತು ಡಿ ಕೆನೆರಹಿತ ಹಾಲಿನಲ್ಲಿ ಸಿಗುವುದಿಲ್ಲ. ಇದರಿಂದ ದೇಹದಲ್ಲಿ ಶೇಖರಿಸಲಾಗಿದ್ದ ಪೌಷ್ಟಿಕಾಂಶದ ಮೇಲೇ ಅವಲಂಬಿತವಾಗಬೇಕಾಗುತ್ತದೆ. ಈ ಕಾರಣದಿಂದ ದೇಹದಲ್ಲಿದ್ದ ಪೌಷ್ಟಿಕಾಂಶ ಕ್ಷೀಣಿಸುತ್ತದೆ.
2. ಕೆನೆರಹಿತ ಹಾಲು ಪಾಶ್ಚರೀಕರಣಕ್ಕೆ ಒಳಗಾಗಿರುತ್ತದೆ. ಪಾಶ್ಚರೀಕರಣದ ಸಂದರ್ಭದಲ್ಲಿ, ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಅಂಶ ಕಳೆದುಹೋಗುತ್ತದೆ. ಆದ್ದರಿಂದ ಆದಷ್ಟು ಕೆನೆಸಹಿತ ಹಾಲಿನ ಬಳಕೆಯೇ ಉತ್ತಮ. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಮತ್ತು ಲ್ಯಾಕ್ಟೋಸ್ ಅಜೀರ್ಣತೆಯಿಂದ ಬಳಲುತ್ತಿದ್ದವರಿಗೆ ಕೆನೆರಹಿತ ಹಾಲು ಉತ್ತಮವಲ್ಲ.
3. ಪಾಶ್ಷರೀಕರಣಗೊಳಿಸುವಾಗ ಹಾಲಿನಲ್ಲಿನ ಎಲ್ಲ ಕೊಬ್ಬಿನಾಂಶ ತೆಗೆದುಬಿಡುವುದರಿಂದ ಹಾಲು ನೀರಿನಂತಾಗುತ್ತದೆ. ನೀರಿನಂತೆ ಕಾಣುವುದನ್ನು ಮರೆಮಾಚಲು ಅದಕ್ಕೆ ಒಣಗಿದ ಹಾಲಿನ ಪ್ರೊಟೀನ್ ಮಿಶ್ರಣ ಮಾಡಲಾಗುತ್ತದೆ. ಇದನ್ನು ದೇಹ ಸುಲಭವಾಗಿ ಜೀರ್ಣಿಸಿಕೊಳ್ಳುವುದಿಲ್ಲ.
4. ಕೆನೆರಹಿತ ಹಾಲನ್ನು ಮಾರಾಟಮಾಡುವವರು ಈ ಹಾಲಿನಲ್ಲಿ ಹೆಚ್ಚು ಪೌಷ್ಟಿಕಾಂಶವಿರುವುದಾಗಿ ಹೇಳುತ್ತಾರೆ. ಆದರೆ ಇದು ನಿಜವಾಗಿರುವುದಿಲ್ಲ, ಈ ಹಾಲಿನಲ್ಲಿ ನೈಸರ್ಗಿಕ ಪೋಷಕಾಂಶ ಗೌಣವಾಗಿರುತ್ತದೆ ಮತ್ತು ಇದು ಜೀರ್ಣಿಸಿಕೊಳ್ಳಲು ಕಷ್ಟವಾಗಿರುತ್ತದೆ.
ಆದ್ದರಿಂದ ಬರೀ ಕೆನೆರಹಿತ ಹಾಲು ಅಥವಾ ಕೆನೆಸಹಿತ ಹಾಲು ಕುಡಿಯುವುದಕ್ಕಿಂತ ಎರಡನ್ನೂ ಸಮಪ್ರಮಾಣದಲ್ಲಿ ಸೇವನೆ ಮಾಡುವುದು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
