Latest Updates
-
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ?
ಸೀಗಡಿಯಲ್ಲಿದೆ ಉತ್ತಮ ಆರೋಗ್ಯದ ಸೀಕ್ರೆಟ್

ಸೀಗಡಿ ಸೇವನೆಯಿಂದ ಆರೋಗ್ಯಕ್ಕೆ ಆಗುವ ಉಪಯೋಗಗಳನ್ನು ತಿಳಿದುಕೊಳ್ಳೋಣ:
;1. ಸೀಗಡಿಯಲ್ಲಿ ಕೊಬ್ಬಿನಂಶ 1.75 ಗ್ರಾಂ ಇದೆ. ಸೀಗಡಿಯಲ್ಲಿ ದೇಹಕ್ಕೆ ಸೇರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ತುಂಬಾ ಕಡಿಮೆ ಇರುವುದರಿಂದ ಚಿಂತೆ ಇಲ್ಲದೆ ಇದರ ಸೇವನೆ ಮಾಡಬಹುದು. ಹಾಗೆಯೇ ಇದರಲ್ಲಿರುವ 20-24 ಗ್ರಾಂ ಪ್ರೊಟೀನ್ ಮತ್ತು 100 ಗ್ರಾಂ ಮಿನರಲ್ ದೇಹಕ್ಕೆ ಇನ್ನಷ್ಟು ಪೌಷ್ಟಿಕಾಂಶವನ್ನು ತುಂಬುತ್ತದೆ.
;2. ಸೀಗಡಿಯಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರೋಗಗಳಿಂದ ಹೃದಯವನ್ನು ದೂರವಿಟ್ಟು ರಕ್ತ ಸಂಚಲನ ಸಮತೋಲನವಾಗಿರುವಂತೆ ಮಾಡುತ್ತದೆ.
;3. ಇದರಲ್ಲಿರುವ ಅಧಿಕವಾದ ಸೆಲೆನಿಯಂ ಅಂಶ ಕ್ಯಾನ್ಸರ್ ತರುವ ಜೀವಕಣಗಳನ್ನು ತಡೆದು ದೇಹವನ್ನು ಕ್ಯಾನ್ಸರ್ ನಿಂದ ದೂರವಿರಿಸುತ್ತದೆ.
;4. ಸೀಗಡಿಯಲ್ಲಿ ಫ್ಯಾಟಿ ಆಸಿಡ್ ಬುದ್ಧಿ ಮಾಂದ್ಯತೆ ಮತ್ತು ಮೆದುಳು ಸಂಬಂಧಿ ರೋಗಗಳು ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
;5. ಅಧಿಕವಿರುವ ವಿಟಮಿನ್ ಬಿ 12 ಮತ್ತು ಕಡಿಮೆ ಕೊಬ್ಬಿನ ಅಂಶ ದೇಹಕ್ಕೆ ಉತ್ತಮ ಆರೋಗ್ಯ ನೀಡುವುದರಲ್ಲಿ ಸಹಾಯ ಮಾಡುತ್ತದೆ.
;6. ಸೀಗಡಿಯಲ್ಲಿನ ಕ್ಯಾಲ್ಸಿಯಂ, ವಿಟಮಿನ್ ಇ ಆರೋಗ್ಯಕರ ಚರ್ಮ, ಗಟ್ಟಿಮುಟ್ಟಾದ ಹಲ್ಲು ಮತ್ತು ಬಲವಾದ ಮೂಳೆಗಳನ್ನು ಹೊಂದಲು ಸಹಕಾರಿಯಾಗಿದೆ.
;7. ಸೀಗಡಿಯಲ್ಲಿನ ಅಧಿಕವಾದ ಪ್ರೊಟೀನ್ ದೇಹದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಹಕಾರ ಮಾಡುತ್ತದೆ.
ಇನ್ನಿತರ ಮಾಂಸಾಹಾರಗಳಿಗೆ ಹೋಲಿಸಿದರೆ ಇದರಲ್ಲಿ ಕಡಿಮೆ ಕ್ಯಾಲೊರಿ ಮತ್ತು ಕಡಿಮೆ ಕೊಬ್ಬಿನಂಶವಿದೆ. ಸೀಗಡಿ ಆಹಾರದ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಹೆಚ್ಚು ಅವಶ್ಯಕ. ಇನ್ನು ಸೀಗಡಿ ತಿನ್ನಲು ಹಿಂದೆ ಮುಂದೆ ನೋಡಬೇಕಾದ ಅವಶ್ಯಕತೆಯೇ ಇಲ್ಲ.
;Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
