Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗೋರಂಟಿಯಿಂದ ನಿಮ್ಮ ಆರೋಗ್ಯ ಗ್ಯಾರಂಟಿ...

ಬೇಸಿಗೆಯಲ್ಲಿ ಕೂದಲನ್ನು ಮತ್ತು ದೇಹವನ್ನು ತಂಪಾಗಿಸುವಲ್ಲಿ ಹೆಚ್ಚು ಬಳಕೆಯಲ್ಲಿರೋ ಮೆಹಂದಿಯನ್ನು ಉಪಯೋಗಿಸಿಕೊಂಡು ಹೇಗೆ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು ಎಂದು ತಿಳಿಯೋಣ...
;* ಮೆಹಂದಿಯಲ್ಲಿನ ಔಷಧೀಯ ಗುಣ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಮೆಹಂದಿ ಎಲೆಯನ್ನು ಸಾಸಿವೆ ಎಣ್ಣೆಯೊಂದಿಗೆ 10 ನಿಮಿಷ ಕುದಿಸಿ ಅದನ್ನು ಕೂದಲಿಗೆ ಹಚ್ಚಿಕೊಂಡರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
;* ಆಮಶಂಕೆಯಿಂದ ಬಳಲುತ್ತಿರುವವರಿಗೆ ಇದು ಪರಿಣಾಮಕಾರಿ ಪ್ರಭಾವ ಬೀರುತ್ತದೆ. ಮೆಹಂದಿ ಬೀಜಗಳನ್ನು ಪುಡಿ ಮಾಡಿ ತುಪ್ಪದೊಂದಿಗೆ ಬೆರೆಸಿ ಸಣ್ಣ ಉಂಡೆ ಮಾಡಿಕೊಂಡು ನೀರಿನೊಂದಿಗೆ ಸೇವಿಸಬೇಕು.
;* ಜಾಂಡೀಸ್ ಮತ್ತು ಲಿವರ್ ತೊಂದರೆಯಿಂದ ಬಳಲುತ್ತಿರುವವರು ಮೆಹಂದಿ ಗಿಡದ ಬೇರಿನ ತುಂಡನ್ನು ನೀರಿನಲ್ಲಿ ಬೇಯಿಸಿ ಡಿಕಾಕ್ಷನ್ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಪರಿಣಾಮಕಾರಿಯಾಗಿರುತ್ತದೆ.
;*ಗಂಟಲು ಬೇನೆಗೆ ಒಳಗಾದವರು ಮೆಹಂದಿ ಎಲೆಯ ಡಿಕಾಕ್ಷನ್ ಅನ್ನು ಗಂಟಲಿಗೆ ಹಾಕಿಕೊಂಡು ಮುಕ್ಕಳಿಸಿದರೆ ಆದಷ್ಟು ಬೇಗ ಗುಣಹೊಂದುತ್ತಾರೆ.
;* ಅತಿ ಉಷ್ಣದಿಂದ ಗುಳ್ಳೆಗಳು ಎದ್ದಿದ್ದರೆ, ಆ ಜಾಗಕ್ಕೆ ನೀರಿನೊಂದಿಗೆ ರುಬ್ಬಿದ ಮೆಹಂದಿ ಎಲೆಯನ್ನು ಹಚ್ಚಿ 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಶುದ್ಧಪಡಿಸಿದರೆ ಉತ್ತಮ ಫಲಿತಾಂಶ ನೀಡುತ್ತದೆ.
;* ಮೆಹಂದಿ ಎಲೆಗಳನ್ನು ಹುಣ್ಣು, ಕಜ್ಜಿ ಹಾಗೂ ಸುಟ್ಟ ಗಾಯಗಳನ್ನು ಗುಣಪಡಿಸಲೂ ಬಳಸುತ್ತಾರೆ.
;* ಮೆಹಂದಿ ಹೂವನ್ನು ವೆನಿಗರ್ ನೊಂದಿಗೆ ಬೆರೆಸಿ ಮುಲಾಮು ತಯಾರಿಸಿಕೊಂಡು ಹಣೆಗೆ ಹಚ್ಚಿದರೆ ಅತಿಯಾಗಿ ಕಾಡುವ ತಲೆ ನೋವು ಮಾಯವಾಗುತ್ತದೆ.
ನಿಮ್ಮ ಮನೆಯ ಮುಂದೆಯೋ, ಹಿಂಭಾಗದಲ್ಲೋ ಸ್ವಲ್ಪ ಜಾಗ ಇದ್ದರೆ ಸಾಕು, ಅಲ್ಲಿ ಮೆಹಂದಿ ಗಿಡವನ್ನು ನೆಡಿ. ಬಹುಪಯೋಗಿ ಮೆಹಂದಿ ಯಾವ ಕಾಲಕ್ಕೆ ಬೇಕಾದ್ರೂ ಸಹಾಯಕ್ಕೆ ಬರುತ್ತೆ.
;Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
