Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕೆಂಪು ವೈನ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಂತೆ!

ವೈನ್ ಕುಡಿಯುವುದರಿಂದ ಆಗುವ ಅನುಕೂಲಗಳನ್ನು ಹೀಗೆ ಉದಾಹರಿಸಬಹುದು:
* ಕೊಲೆಸ್ಟ್ರಾಲ್ ನಿಯಂತ್ರಣ ಶಕ್ತಿ.
* ಹೃದಯ ಹಾಗೂ ಹಲ್ಲಿನ ಆರೋಗ್ಯ ಅನುಕೂಲ[ಇದು ಹೊಸ ಮದ್ಯಪಾನಿಗಳಿಗೆ ಅನ್ವಯವಾಗುವುದಿಲ್ಲ].
* ತ್ವಚೆ ಸಂರಕ್ಷಿಸಿ, ನಿಜ ವಯಸ್ಸನ್ನು ಮರೆ ಮಾಚುವಂತೆ ಮಾಡಬಹುದು.
* ಅಲ್ ಜೈಮೆರ್ ಕಾಯಿಲೆ ತೊಂದರೆ ಕಮ್ಮಿ ಮಾಡಬಹುದು.
* ಡಿಎನ್ಎ ತೊಂದರೆ ನಿಯಂತ್ರಣಕ್ಕೆ ಉಪಯೋಗ.
ಆದರೆ, ಹೆಚ್ಚಿನ ವೈನ್ ಸೇವನೆಯಿಂದ ಅಧಿಕ ರಕ್ತದೊತ್ತಡ, ಕರಳು ಬೇನೆ, ಕಿಡ್ನಿ ವೈಫಲ್ಯ, ನರ ದೌರ್ಬಲ್ಯ, ಕಾನ್ಸರ್ , ಹೃದಯಾಘಾತಕ್ಕೂ ಕಾರಣವಾಗುವುದುಂಟು.
ಟೈಪ್ 2 ಡಯಾಬಿಟಿಸ್ ರೋಗಿಗಳು ವೈನ್ ಸೇವಿಸುವುದು ಒಳ್ಳೆಯದು ಎಂದು ಇತ್ತೀಚೆಗೆ ತಜ್ಞ ವೈದ್ಯರು ಕಂಡುಕೊಂಡ ಸತ್ಯ. ವೈನ್ ಸೇವನೆ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸುತ್ತದೆ. ದೇಹಕ್ಕೆ ಅಗತ್ಯವಾದ ಗ್ಲುಕೋಸ್ ಒದಗಿಸಿ, ಇನ್ಸುಲಿನ್ ಚುಚ್ಚುಮದ್ದು ಮಾಡುವ ಕೆಲಸವನ್ನು ವೈನ್ ಮಾಡಿಬಿಡುತ್ತದೆ. ಆದರೆ, ಔಷಧಿ ರೂಪದಲ್ಲಿ ಸೇವಿಸಿದರೆ ಮಾತ್ರ ವೈನ್ ದೇಹಕ್ಕೂ ಮನಸಿಗೂ ಹಿತ ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡುತ್ತಾರೆ.
ಹೆಚ್ಚು ವಯಸ್ಸಾದ ನಂತರದಲ್ಲಿ ಆಲ್ಕೊಹಾಲ್ ಸೇವನೆಯಿಂದ ದೀರ್ಘಾಯುಷ್ಯದ ಪ್ರಮಾಣ ಹೆಚ್ಚಾಗುತ್ತದೆ, 55 ಅಥವಾ ಅದಕ್ಕಿಂತ ಹೆಚ್ಚಿಗೆ ವಯಸ್ಸಾದ ಜನರು ಪ್ರತಿನಿತ್ಯ ಕಡಿಮೆ ಪ್ರಮಾಣದಲ್ಲಿ ಹದವಾಗಿ ಆಲ್ಕೊಹಾಲ್ ತೆಗೆದುಕೊಂಡರೆ (ಒಂದು ಅಥವಾ ಮೂರು ಗ್ಲಾಸ್) 42%ರಷ್ಟು ಬುದ್ಧಿಮಾಂದ್ಯತೆ ಬೆಳೆಯುವುದು ಕಡಿಮೆಯಾಗುತ್ತದಂತೆ.
ವೈನ್‌ನ್ನು ದ್ರಾಕ್ಷಿಗಳಿಂದ ತಯಾರಿಸುತ್ತಾರೆ, ಮತ್ತು ಹಣ್ಣಿನ ವೈನ್‌ನ್ನು ಪ್ಲಮ್, ಚೆರ್ರಿ, ಮಾವು ಮತ್ತು ಸೇಬು ಹಣ್ಣುಗಳಿಂದ ತಯಾರಿಸುತ್ತಾರೆ. ವೈನ್ ಸುದೀರ್ಘವಾದ(ಪೂರ್ಣ) ಹುಳಿಯುವಿಕೆಯ ವಿಧಾನ ಮತ್ತು ಸುದೀರ್ಘ ಕೊಳೆಯುವಿಕೆಯನ್ನೊಳಗೊಳ್ಳುತ್ತದೆ. ತಿಂಗಳು ಅಥವಾ ವರ್ಷಗಳಾನುಗಟ್ಟಲೆ ವೈನ್ ಕೊಳೆಯಲು ಬಿಡಲಾಗುತ್ತದೆ, ಇದರಿಂದಾಗಿ ಅಲ್ಪ ಪ್ರಮಾಣದಲ್ಲಿ ಆಲ್ಕೊಹಾಲ್ ಅನ್ನು ವೈನ್ ಹೊಂದುತ್ತದೆ.
ಕೊನೆಯದಾಗಿ, ಹೆಂಗಳೆಯರು ದಿನಕ್ಕೊಂದು ಗ್ಲಾಸ್, ಪುರುಷರು 2 ಗ್ಲಾಸ್ ಕೆಂಪು ವೈನ್ ಸೇವಿಸಿದರೆ ಯಾವ ವೈದ್ಯರೂ ಬೇಡ ಎನ್ನುವುದಿಲ್ಲ. ಇಂದಿಗೂ ವೈನ್ ಸಂಸ್ಕೃತಿ ಉಳಿಸಿಕೊಂಡು ಬಂದಿರುವ ಕೊಡವರ ಆಣೆಯಾಗಿಯೂ ಇದು ಸತ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications