Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಸರ್ವತೋಮುಖ ಆರೋಗ್ಯಕ್ಕಾಗಿ ದಾಳಿಂಬೆ ಸೇವಿಸಿ

ಹೃದಯಬೇನೆಯಿಂದ ಬಳಲುವ ರೋಗಿಗಳು ದಾಳಿಂಬೆಯಿಂದ ತಯಾರಿಸಿದ ರಸವನ್ನು ಅಥವಾ ಕಾಳುಗಳನ್ನು ತಪ್ಪದೆ ಸೇವಿಸಬೇಕು. ರಕ್ತದೊತ್ತಡವನ್ನು ಕೂಡ ಈ ಹಣ್ಣು ನಿಯಂತ್ರಣಕ್ಕೆ ತರುತ್ತದೆ ಎನ್ನುತ್ತದೆ ವೈದ್ಯಕೀಯ ಅಧ್ಯಯನ. ತಾಯಿಯಾಗುವ ಹಂತದಲ್ಲಿ ಕೂಡ ಮಹಿಳೆಯರಿಗೆ ದಾಳಿಂಬೆ ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ದಾಳಿಂಬೆ ಹಣ್ಣು ಎಂತೆಂಥ ರೋಗಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ನೋಡೋಣ.
ಸ್ತನ ಕ್ಯಾನ್ಸರ್ : ದಾಳಿಂಬೆ ಹಣ್ಣುಗಳು ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಿ ಆರೋಗ್ಯಕರ ಕೋಶಗಳನ್ನು ಮಾತ್ರ ಉಳಿಸುತ್ತದೆ ಎಂದು ಇಸ್ರೇಲ್ ವೈದ್ಯರು ಕಂಡುಹಿಡಿದಿದ್ದಾರೆ. ಸ್ತನ ಕ್ಯಾನ್ಸರ್ ಆಗುವುದನ್ನು ಕೂಡ ದಾಳಿಂಬೆ ತಪ್ಪಿಸುತ್ತದೆ.
ದಂತಕ್ಷಯ : ದಾಳಿಂಬೆ ಹಣ್ಣಿನ ರಸ ಹಲ್ಲು ಮತ್ತು ವಸಡುಗಳನ್ನು ಆರೋಗ್ಯಕರವಾಗಿ ಇಡಲು ಬಲು ಸಹಕಾರಿ.
ರಕ್ತದೊತ್ತಡ : ಎರಡು ವಾರಗಳ ಕಾಲ ದಾಳಿಂಬೆ ಜ್ಯೂಸನ್ನು ಪ್ರತಿದಿನ ಹೀರಿದರೆ ರಕ್ತದೊತ್ತಡ ತಾನಾಗೇ ನಿಯಂತ್ರಣಕ್ಕೆ ಬರುತ್ತದೆ.
ಕೊಬ್ಬು : ದಾಳಿಂಬೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುವ ಗುಣ ಹೊಂದಿದೆ. ಆದ್ದರಿಂದ, ನಿಯಮಿತವಾಗಿ ಸೇವಿಸಿದರೆ ಹೃದಯಾಘಾತ ಸಂಭವಿಸುವ ಅಪಾಯ ಕಡಿಮೆ. ಜೊತೆಗೆ ರಕ್ತನಾಳಗಳಲ್ಲಿ ಆಗುವ ಅಡೆತಡೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತ ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ.
ಮೆದುಳು : ದಾಳಿಂಬೆ ಹಣ್ಣು ನರದೌರ್ಬಲ್ಯದಿಂದ ರಕ್ಷಣೆ ನೀಡುತ್ತದೆ. ನಿಯಮಿತವಾಗಿ ಸೇವಿಸಿದರೆ ನರಮಂಡಲವನ್ನು ಸದೃಢವಾಗಿ ಇಡುತ್ತದೆ.
ಇಷ್ಟು ಮಾತ್ರವಲ್ಲ ಪುಪ್ಪುಸ ಕ್ಯಾನ್ಸರ್, ವೃಷಣ ಕ್ಯಾನ್ಸರ್ ಗಳಿಗೆ ತಡೆಗೋಡೆ ಒಡ್ಡಲು ದಾಳಿಂಬೆ ಸಹಕಾರಿ. ಒಟ್ಟಾರೆ ಸರ್ವತೋಮುಖ ಆರೋಗ್ಯಕ್ಕಾಗಿ ಸೇವಿಸಿ ದಾಳಿಂಬೆ ಹಣ್ಣು ಅಥವಾ ದಾಳಿಂಬೆ ಜ್ಯೂಸ್.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
