Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿರಿಯಡ್ಸ್ ಸಮಸ್ಯೆನಾ? ಈ ನೀರು ಕುಡಿದ್ರೆ ಸಾಕು.. ಮುಟ್ಟು, ಗರ್ಭಧಾರಣೆ ಸಮಸ್ಯೆ ಮಾಯ ಆಗುತ್ತೆ!
ಪ್ರಸ್ತುತ ದಿನಗಳಲ್ಲಿ ಬಹುತೇಕ ಮಹಿಳೆಯರು ಅನಿಯಮಿತ ಪೀರಿಯಡ್ಸ್ (periods), ಪಿಸಿಓಎಸ್ (PCOS), ಹಾರ್ಮೋನಲ್ ಅಸಮತೋಲನ ಮತ್ತು ಸಂತಾನೋತ್ಪತ್ತಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಔಷಧಿ, ಡಯಟ್, ವ್ಯಾಯಾಮ ಎಲ್ಲವನ್ನೂ ಪ್ರಯತ್ನಿಸಿದರೂ ಸಹಜ ಪರಿಹಾರ ಸಿಗದೇ ಅನೇಕರು ನಿರಾಶರಾಗುತ್ತಾರೆ. ಆದರೆ, ಆಯುರ್ವೇದದಲ್ಲಿ ಶತಮಾನಗಳಿಂದಲೂ ಬಳಸಲಾಗುತ್ತಿರುವ ಸರಳ 'ವಾಟರ್ ಥೆರಪಿ' (Water Therapy) ಮಹಿಳೆಯರ ಆರೋಗ್ಯಕ್ಕೆ ಸುಲಭ ಪರಿಹಾರ ನೀಡುತ್ತದೆ.
ಈ ವಿಧಾನವು ಮಾಸಿಕ ಚಕ್ರದ ಹಂತಗಳನ್ನು ಅನುಸರಿಸಿ ವಿಭಿನ್ನ ರೀತಿಯಲ್ಲಿ ನೀರನ್ನು ಬಳಸುವ ಕ್ರಮವಾಗಿದೆ. ಇದು ದೇಹವನ್ನು ಶುದ್ಧಗೊಳಿಸುವುದು ಮಾತ್ರವಲ್ಲದೆ, ಹಾರ್ಮೋನ್‌ಗಳನ್ನು ಸಮತೋಲನಗೊಳಿಸಿ ಗರ್ಭಾಶಯದ ಆರೋಗ್ಯವನ್ನು ಕಾಪಾಡುತ್ತದೆ. ಈ ಲೇಖನದಲ್ಲಿ ನಿಮ್ಮ ಪಿರಿಯಡ್ಸ್ ಹಂತಗಳಿಗೆ ಅನುಗುಣವಾಗಿ, ಆಯುರ್ವೇದದ ಈ ನೀರಿನ ಚಿಕಿತ್ಸೆಯನ್ನು ಹೇಗೆ ಮಾಡಬಹುದು (Water Therapy for Irregular periods & Fertility) ಅನ್ನೋದನ್ನು ವಿವರಿಸಲಾಗಿದೆ. ಈ ಚಿಕಿತ್ಸೆಯು ಕೇವಲ ರೋಗಲಕ್ಷಣಗಳನ್ನು ನಿವಾರಿಸದೆ, ಸಮಸ್ಯೆಯನ್ನು ಮೂಲದಿಂದಲೇ ಸರಿಪಡಿಸಲು ಸಹಾಯ ಮಾಡುತ್ತದೆ.

ಪಿರಿಯಡ್ಸ್ ಹಂತಗಳು ಮತ್ತು ವಾಟರ್ ಥೆರಪಿ ಚಿಕಿತ್ಸೆ
ಪಿರಿಯಡ್ಸ್ ಅಥವಾ ಋತುಚಕ್ರವು ದೇಹದ ಶುದ್ಧೀಕರಣ ಮತ್ತು ನವಶಕ್ತಿಯ ಹಂತ. ಸರಿಯಾದ ಆರೈಕೆಯ ಮೂಲಕ ನಾವು ಇದನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾಡಬಹುದು.
ಹಂತ 1: ಮಾಸಿಕ ದಿನಗಳು (ದಿನ 1 ರಿಂದ 5)
ಈ ಅವಧಿಯಲ್ಲಿ ದೇಹವು ಶುದ್ಧೀಕರಣದ ಪ್ರಕ್ರಿಯೆಯಲ್ಲಿರುತ್ತದೆ. ಈ ಹಂತದಲ್ಲಿ ಗರ್ಭಾಶಯವನ್ನು ಸ್ವಚ್ಛಗೊಳಿಸುವುದು ಮತ್ತು ನೋವನ್ನು ಕಡಿಮೆ ಮಾಡುವುದು ಮುಖ್ಯ. ಹಾಗಿದ್ರೆ, ಏನು ಮಾಡಬೇಕು?
• ಜೀರಿಗೆ - ½ ಸ್ಪೂನ್
• ಓಮ (ಓಂಕಾಳು) - ½ ಸ್ಪೂನ್
• ಸೊಂಪು - ½ ಟೀ ಸ್ಪೂನ್
ಜೀರಿಗೆ, ಸೋಂಪು ಮತ್ತು ಓಂಕಾಳನ್ನು 2 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ, ಬಿಸಿ ಬಿಸಿ ಅಥವಾ ಬೆಚ್ಚಗಿದ್ದಾಗಲೇ ನಿಧಾನವಾಗಿ ಕುಡಿಯಿರಿ.
ಪ್ರಯೋಜನ ಏನು?
• ಇದು ಗರ್ಭಾಶಯದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ.
• ಹೊಟ್ಟೆ ಉಬ್ಬರ, ಸೆಳೆತದ ನೋವು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
• ಪೀರಿಯಡ್ಸ್ ವೇಳೆ ಉಂಟಾಗುವ ತೀವ್ರ ಕ್ರಾಂಪ್‌ಗಳನ್ನು ಶಮನಗೊಳಿಸುತ್ತದೆ
• ಮುಂದಿನ ಆರೋಗ್ಯಕರ ಋತುಚಕ್ರಕ್ಕೆ ದೇಹವನ್ನು ಸಿದ್ಧಗೊಳಿಸುತ್ತದೆ.
ಹಂತ 2: ಫಲಿಕ್ಯುಲರ್ ಹಂತ (ದಿನ 6 ರಿಂದ 15)
ಇದು ಪಿರಿಯಡ್ಸ್ ನಂತರದ ಹಂತ. ದೇಹವು ಅಂಡೋತ್ಪತ್ತಿಗೆ (Ovulation) ಸಿದ್ಧವಾಗುತ್ತದೆ. ಈ ಹಂತದಲ್ಲಿ ಫಲವತ್ತತೆಯನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶ.
• 1 ಲವಂಗವನ್ನು ಬಿಸಿ ನೀರಿನಲ್ಲಿ ರಾತ್ರಿ ನೆನೆಸಿ
• ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ
ಒಂದು ಲವಂಗವನ್ನು ರಾತ್ರಿ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ.
ಪ್ರಯೋಜನ ಏನು?
• ಇದು ಅಂಡೋತ್ಪತ್ತಿ (Ovulation) ಉತ್ತೇಜಿಸುತ್ತದೆ
• ಸಂತಾನೋತ್ಪತ್ತಿ ಅಥವಾ ಗರ್ಭಾಶಯಕ್ಕೆ ರಕ್ತ ಸಂಚಲನ ಹೆಚ್ಚಿಸುತ್ತದೆ
• ಬ್ಯಾಕ್ಟೀರಿಯಾ ಸೋಂಕುಗಳನ್ನು ತಡೆಯುತ್ತದೆ
• ಹಾರ್ಮೋನಲ್ ಸಮತೋಲನಕ್ಕೆ ಬೆಂಬಲ ನೀಡುತ್ತದೆ.
ಹಂತ 3: ಅಂಡೋತ್ಪತ್ತಿ ನಂತರ (ದಿನ 16 ರಿಂದ 28)
ಇದು ಮುಂದಿನ ಪಿರಿಯಡ್ಸ್‌ಗೆ ದೇಹವನ್ನು ಸಿದ್ಧಪಡಿಸುವ ಹಂತ. ಈ ಅವಧಿಯಲ್ಲಿ ದೇಹದಲ್ಲಿ ಉಷ್ಣತೆ (ಪಿತ್ತ ದೋಷ) ಹೆಚ್ಚಾಗಬಹುದು. ಇದನ್ನು ತಂಪಾಗಿರಿಸುವುದು ಮುಖ್ಯ. ಅದಕ್ಕೆ ಹೀಗೆ ಮಾಡಿ.
• 1 ಸ್ಪೂನ್ ಸೊಂಪು ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ
• ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ
ಒಂದು ಚಮಚ ಸೋಂಪನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ.
ಪ್ರಯೋಜನ ಏನು?
• ಹಾರ್ಮೋನ್‌ಗಳನ್ನು ಸಮತೋಲನಗೊಳಿಸುತ್ತದೆ
• ಪಿಎಂಎಸ್ (PMS) ಲಕ್ಷಣಗಳನ್ನು (cramps, mood swings) ಕಡಿಮೆ ಮಾಡುತ್ತದೆ
• ದೇಹದಲ್ಲಿ ಉಂಟಾಗುವ ಉರಿಯೂತವನ್ನು ಶಮನಗೊಳಿಸುತ್ತದೆ
• ದೇಹದ ಉಷ್ಣತೆಯನ್ನು ತಣ್ಣಗಾಗಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ.

ಎಲ್ಲಾ ದಿನಗಳಿಗೆ - ಅಂಜೂರದ ಹಣ್ಣಿನ ಶಕ್ತಿ
ಈ ಮೇಲೆ ತಿಳಿಸಿದ ಚಿಕಿತ್ಸೆಯ ಜೊತೆಗೆ, ಈ ಕೆಳಗಿನ ಅಭ್ಯಾಸವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳುವುದು ಅತ್ಯಂತ ಪ್ರಯೋಜನಕಾರಿ.
ಪ್ರತಿದಿನ ರಾತ್ರಿ ಎರಡು ಅಂಜೂರದ ಹಣ್ಣುಗಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೊದಲು ಅಂಜೂರದ ಹಣ್ಣುಗಳನ್ನು ತಿಂದು ನಂತರ ಉಳಿದ ನೀರನ್ನು ಕುಡಿಯಿರಿ.
ಪ್ರಯೋಜನ ಏನು?
ಅಂಜೂರದ ಹಣ್ಣುಗಳಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಗರ್ಭಾಶಯವನ್ನು ಪೋಷಿಸಿ, ಅಂಡಾಣುಗಳ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಇದನ್ನು ನಿಜವಾದ 'ಫಲವತ್ತತೆಯ ಬಾಂಬ್' ಎಂದೇ ಕರೆಯಲಾಗುತ್ತದೆ.
ಈ ವಾಟರ್ ಥೆರಪಿ ಹೇಗೆ ಸಹಾಯ ಮಾಡುತ್ತದೆ?
• ಹಾರ್ಮೋನಲ್ ಸಮತೋಲನ: ಆಯಾ ಹಂತದಲ್ಲಿ ನೀಡುವ ನೀರಿನ ಚಿಕಿತ್ಸೆಯಿಂದ ಹಾರ್ಮೋನ್‌ಗಳ ಅಸಮತೋಲನ ಸರಿಯಾಗಿ ನಿಯಂತ್ರಣವಾಗುತ್ತದೆ.
• ಗರ್ಭಾಶಯ ಶುದ್ಧೀಕರಣ: ಗರ್ಭಾಶಯವನ್ನು ಸ್ವಚ್ಛಗೊಳಿಸಿ (uterus clean) ಆಗಿ ಮುಂದಿನ ಚಕ್ರಕ್ಕೆ ಸಿದ್ಧಗೊಳ್ಳುತ್ತದೆ.
• ಪಿಸಿಓಎಸ್ ನಿರ್ವಹಣೆ: ಉಬ್ಬುವುದು (bloating), ಮುಟ್ಟಿನ ವಿಳಂಬ (period delay) ಮತ್ತು ಅನಿಯಮಿತ ಹರಿವು (irregular flow) ಸಮಸ್ಯೆಗಳ ಶಮನ.
• ಫಲವತ್ತತೆ ಸುಧಾರಣೆ: ರಕ್ತ ಸಂಚಲನ ಹೆಚ್ಚಳದಿಂದ ಅಂಡಾಣು ಗುಣಮಟ್ಟ ಸುಧಾರಿಸುತ್ತದೆ.
• ಒತ್ತಡ ನಿಯಂತ್ರಣ: ಹಾರ್ಮೋನ್ ಸಮತೋಲನದಿಂದ ಮಾನಸಿಕ ಶಾಂತಿ ದೊರಕುತ್ತದೆ.
ಒಟ್ಟಾರೆಯಾಗಿ, ಈ ವಾಟರ್ ಥೆರಪಿ ಕೇವಲ ಸರಳ ಮನೆ ಮದ್ದಲ್ಲ. ಇದು ಮಹಿಳೆಯ ದೇಹವನ್ನು ಚಕ್ರದ ಹಂತಕ್ಕೆ ಹೊಂದಿಕೊಂಡು ಸಮತೋಲನಗೊಳಿಸುವ ಪ್ರಾಕೃತಿಕ ವಿಧಾನ. ಇದು ಯಾವುದೇ ಸೈಡ್ ಎಫೆಕ್ಟ್‌ಗಳನ್ನು ನೀಡದೇ, ಹಂತ ಹಂತವಾಗಿ ಪಿಸಿಓಎಸ್ (PCOS), ಹಾರ್ಮೋನಲ್ ಅಸಮತೋಲನ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಈ ವಾಟರ್ ಥೆರಪಿಯು ಸಮತೋಲನ ಆಹಾರ, ಯೋಗ ಮತ್ತು ಒತ್ತಡ ನಿಯಂತ್ರಣದೊಂದಿಗೆ ಸೇರಿ ಮಹಿಳೆಯರಿಗೆ ನೈಸರ್ಗಿಕ ಆರೋಗ್ಯದ ದಾರಿ ತೋರಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
