Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶೇ.59 ರಷ್ಟು ಭಾರತೀಯರಲ್ಲಿ 6 ಗಂಟೆಗಿಂತ ಕಡಿಮೆ ನಿದ್ರೆ.! ಬೇಗ ನಿದ್ರಿಸಲು ಇಲ್ಲಿವೆ ಟಿಪ್ಸ್‌ಗಳು!
ನಿದ್ರೆ ನಮ್ಮ ಆರೋಗ್ಯದ ದೃಷ್ಟಿಯಿಂದ ಎಷ್ಟು ಉತ್ತಮ ಎಂಬುದನ್ನು ನೀವೆಲ್ಲಾ ತಿಳಿದಿರುತ್ತೀರಿ. ನಿದ್ರೆ ಇಲ್ಲದಿದ್ದರೆ ಇಡೀ ದಿನ ಹಾಳಾಗುತ್ತದೆ. ಒಂದೆರಡು ದಿನಗಳಾದರೆ ಸಮಸ್ಯೆ ಉಂಟಾಗುವುದಿಲ್ಲ, ಆದ್ರೆ ನೀವು ತಿಂಗಳ ಕಾಲ ವರ್ಷಗಳ ಕಾಲ ನಿದ್ರೆ ಇಲ್ಲದ ರಾತ್ರಿಗಳ ಕಳೆದರೆ ನಿಮ್ಮ ಆರೋಗ್ಯ ಹದ ಗೆಡುವುದು ಖಚಿತ. ಅದ್ರಲ್ಲೂ ನಿದ್ರಾಹೀನತೆ ಸುಲಭವಾಗಿ ಗುಣವಾಗುವ ಸಮಸ್ಯೆಯಲ್ಲ. ಈಗ ಇತ್ತೀಚಿನ ವರದಿಯೊಂದು ಭಾರತದಲ್ಲಿ ಯಾವ ಪ್ರಮಾಣದಲ್ಲಿ ನಿದ್ರಾಹೀನತೆ ಕಾಡುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದು ಎಲ್ಲರಲ್ಲೂ ಆಘಾತ ತಂದಿದೆ.
ಭಾರತದಲ್ಲಿ ಶೇ. 59ರಷ್ಟು ಮಂದಿ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲಿ ಅರ್ಧದಷ್ಟು ಮಂದಿ ವಾರಾಂತ್ಯದಲ್ಲಿ ಉಳಿದಿರುವ ನಿದ್ರೆಯ ಸಮಯವನ್ನು ಸಮತೋಲನ ಮಾಡಿಕೊಳ್ಳುತ್ತಾರೆ. ಉಳಿದವರು ಕಡಿಮೆ ನಿದ್ರೆಯಲ್ಲೇ ಕಳೆಯುತ್ತಾರೆ ಎಂದು ತಿಳಿದುಬಂದಿದೆ. ಈ ಅಧ್ಯಯನದ ಪ್ರಕಾರ ಶೇ. 61ರಷ್ಟು ಪುರುಷರು ಮತ್ತು ಶೇ. 39ರಷ್ಟು ಮಹಿಳೆಯರು ಸೇರಿದಂತೆ 40,000 ಕ್ಕೂ ಹೆಚ್ಚು ಜನರಿಂದ ಈ ಮಾಹಿತಿ ಸಂಗ್ರಹಿಸಲಾಗಿದೆ.

ಇವರಲ್ಲಿ ಕೇವಲ ಶೇ.39ರಷ್ಟು ಮಂದಿ ಮಾತ್ರ ಆರರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುತ್ತಾರೆ. ಹಾಗೆ ಶೇ.39ರಷ್ಟು ಮಂದಿ 4ರಿಂದ 6 ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಾರೆ. ಹಾಗೆ ಕೇವಲ ಶೇ.2ರಷ್ಟು ಮಂದಿ ಮಾತ್ರವೇ 8 ಗಂಟೆಗೂ ಹೆಚ್ಚು ಕಾಲ ಮಲಗುತ್ತಾರೆ ಎಂದು ತಿಳಿದುಬಂದಿದೆ. ಈ ಸಮೀಕ್ಷೆಯು ಭಾರತದ ಸುಮಾರು 348 ಜಿಲ್ಲೆಗಳಲ್ಲಿ ನಡೆಸಲಾಗಿದೆ.
ಈ ರೀತಿ ನಿದ್ರೆ ಕಡಿಮೆಯಾಗಲು ಹಲವು ಕಾರಣಗಳನ್ನು ನೀಡಲಾಗಿದೆ. ಏಕೆಂದರೆ ಕೆಲವರು ನಿದ್ರೆಯ ನಡುವೆ ಶೌಚಾಲಯ ಬಳಸಲು ಏಳುವುದು ನಿದ್ರೆಯ ಭಂಗಕ್ಕೆ ಕಾರಣವಾಗುತ್ತಿದೆಯಂತೆ. ಸೊಳ್ಳೆಗಳು, ಬಾಹ್ಯ ಶಬ್ದಗಳ ಕಾರಣದಿಂದಾಗಿಯೂ ಹಲವು ನಿದ್ರೆ ಇಲ್ಲದ ರಾತ್ರಿಗಳ ಕಳೆಯುತ್ತಾರೆ ಎಂದು ಹೇಳಿದ್ದಾರೆ. ಹಾಗೆ ಮಹಿಳೆಯರು ಹೆಚ್ಚಾಗಿ ಬೆಳಗ್ಗೆ ಬೇಗ ಏಳಬೇಕು ಎಂಬ ಕಾರಣದಿಂದಾಗಿ ನಿದ್ರೆ ಕಡಿಮೆ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಸುಮಾರು ಶೇ. 6ರಷ್ಟು ಮಂದಿ 8 ಗಂಟೆಗಳ ಕಾಲ ನಿದ್ರೆ ಮಾಡದಿರಲು ಮೊಬೈಲ್ ಕರೆಗಳು ಮತ್ತು ಸಂದೇಶಗಳು ಬರುವುದು ಕೂಡ ಒಂದು ಕಾರಣ ಎಂದು ಹೇಳುತ್ತಿದ್ದಾರೆ. ಭಾರತದಲ್ಲಿ ನಿದ್ರಾಹೀನತೆಯು ವಿಶ್ವದಲ್ಲೇ ಅತಿ ಹೆಚ್ಚು ಮತ್ತು ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ, ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವುದು ನೋಡಬಹುದಾಗಿದೆ.
ಮಕ್ಕಳಿಂದ ನಿದ್ರಾಹೀನತೆ
ಈ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.9ರಷ್ಟು ಮಂದಿ ನಿದ್ರಾಹೀನತೆಗೆ ಮಕ್ಕಳು ಕಾರಣ ಎಂದಿದ್ದಾರೆ. ಹಾಗೆ ಶೇ.6ರಷ್ಟು ಮಂದಿ ಮೊಬೈಲ್ ಬಳಕೆ ಕಾರಣ ಎಂದು ಹೇಳಿದ್ದಾರೆ. ಮಕ್ಕಳಿಂದ ರಾತ್ರಿ ಸಮಯದಲ್ಲಿ ಉಂಟಾಗುವ ಅಡೆತಡೆಗಳು ನಿದ್ರೆಯಿಂದ ಎಚ್ಚರಗೊಳ್ಳುವಂತೆ ಮಾಡುತ್ತಿದೆಯಂತೆ. ಹಾಗೆ ರಾತ್ರಿ ಸಮಯದಲ್ಲಿ ಮೊಬೈಲ್ ರಿಂಗ್ ಆಗುವುದು, ಬಳಕೆ ಮಾಡುವುದು ನಿದ್ರೆ ಮಾಡದೆ ಇರಲು ಕಾರಣಾಗುತ್ತಿದೆ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.
ಆದ್ರೆ ಭಾರತೀಯರು ಈ ರೀತಿ ನಿದ್ರಾಹೀನತೆಯಿಂದ ಬಳಲುತ್ತಿರುವುದು ಒಟ್ಟಾರೆ ಉತ್ಪಾದನಾ ಸಾಮರ್ಥ್ಯದ ಮೇಲೆ ಪ್ರಭಾವ ಉಂಟು ಮಾಡಲಿದೆ. ಹಾಗೆ ಅವರ ವೈಯಕ್ತಿಕ ಜೀವನದಲ್ಲೂ ಸಮಸ್ಯೆಗಳು ಉಂಟಾಗಲಿದೆ, ಹಾಗಾದ್ರೆ ಬಹುಬೇಗ ಮಲಗಲು ಏನೆಲ್ಲಾ ಮಾಡಬೇಕು ಎನ್ನುವ ಸುಲಭದ ಕೆಲವೊಂದು ಟಿಪ್ಸ್ ನಾವಿಂದು ಹೇಳಿದ್ದಾರೆ ನೋಡಿ.
ರಾತ್ರಿ ಬೇಗ ಮಲಗುವುದರಿಂದ ಹಲವು ರೀತಿಯ ಪ್ರಯೋಜನಗಳಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಂದಿ ರಾತ್ರಿ ತಡವಾಗಿ ಮಲಗುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಮಧ್ಯರಾತ್ರಿಯವರೆಗೂ ಎಚ್ಚರವಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಈ ಪ್ರಮಾಣ ಕಡಿಮೆ ಇರಬಹುದು. ಆದ್ರೆ ನಗರ ಪ್ರದೇಶದಲ್ಲಿ ತಡವಾಗಿ ಮಲಗುವವರ ಸಂಖ್ಯೆ ಬಹುತೇಕ ಅರ್ಧಕ್ಕಿಂತ ಹೆಚ್ಚಾಗಿದೆ.
ನೀವು ಬೇಗನೆ ಮಲಗಿದಾಗ ನಿಮ್ಮ ದೇಹವು ಸಾಕಷ್ಟು ಆಳವಾದ ನಿದ್ರೆ ಪಡೆಯಲಿದೆ. ಇದು ನಿಮ್ಮ ಮೆಮೊರಿ ಕ್ರೋಢೀಕರಣ, ಕಲಿಕೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳ ವೃದ್ಧಿಗೆ ಕಾರಣವಾಗುತ್ತದೆ. ಹೀಗಾಗಿ ಮಕ್ಕಳು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಲಗಬೇಕು. ಮಕ್ಕಳು ಮಲಗಿದ ಸಂದರ್ಭದಲ್ಲೇ ಅವರ ಮೆದುಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯಾಗಲಿದೆ.
ನೀವು ತಡವಾಗಿ ಮಲಗಿದಷ್ಟು ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿಯಾಗುತ್ತೆ ಹಾಗೆ ನೀವು ತೂಕ ಹೆಚ್ಚಳವಾಗುವುದು, ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಒತ್ತಡ, ಖಿನ್ನತೆ ಕೂಡ ಕಾಡಬಹುದು. ಹಾಗಾದ್ರೆ ಬೇಗ ಮಲಗಲು ಏನು ಮಾಡಬೇಕು? ಇಲ್ಲಿದೆ ಕೆಲವೊಂದು ಟಿಪ್ಸ್‌ಗಳು.
ರಾತ್ರಿ ಮಲಗುವ ಸಮಯವನ್ನು ನೀವೇ ನಿರ್ಧರಿಸಿ
ರಾತ್ರಿ ಎಷ್ಟು ಸಮಯಕ್ಕೆ ಮಲಗಬೇಕು ಎಂಬುದನ್ನು ನೀವೆ ನಿರ್ಧರಿಸಿರಬೇಕು. ಅಂದರೆ ದಿನಕ್ಕೊಂದು ಸಮಯದಲ್ಲಿ ಮಲಗುವ ಬದಲು ಒಂದೇ ಸಮಯಕ್ಕೆ ನಿತ್ಯವೂ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಒಂದೇ ಸಮಯಕ್ಕೂ ಮಲಗುವುದರಿಂದ ಮತ್ತೆ ಅದೇ ಸಮಯದಲ್ಲಿ ನಿದ್ರೆ ಬರುವುದು ಅಭ್ಯಾಸವಾಗಲಿದೆ. ಇದೇ ರೀತಿ ನೀವು ಮುಂದುವರೆಸಿದ್ದರೆ ಯಾವುದೇ ಸಂದರ್ಭದಲ್ಲಿಯೂ ಈ ನಿದ್ರಾಹೀನತೆ ಕಾಡುವುದಿಲ್ಲ.
ಮಲಗುವ ಮುನ್ನ ತಂಪು ಪಾನಿಯ, ಟೀ ಕುಡಿಯುವುದನ್ನು ತಪ್ಪಿಸಿ
ರಾತ್ರಿ ಊಟದ ಬಳಿಕ ಹಲವರು ತಂಪು ಪಾನಿಯ, ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಆದ್ರೆ ಈ ರೀತಿ ಮಾಡುವುದರಿಂದಾಗಿ ನಿಮ್ಮಲ್ಲಿ ನಿದ್ರಾಹೀನತೆ ಕಾಡಬಹುದು. ಏಕೆಂದರೆ ತಂಪು ಪಾನಿಯಗಳಲ್ಲೂ ಕೆಫಿನ್ ಅಂಶ ಹಾಗೆ ಟೀ ಯಲ್ಲಿ ಕೆಫಿನ್ ಅಂಶ ಹೆಚ್ಚಾಗಿರುತ್ತದೆ. ಇದು ನಿಮ್ಮನ್ನು ಸದಾ ಎಚ್ಚರವಾಗಿರುವಂತೆ ನೋಡಿಕೊಳ್ಳಲಿದೆ. ಹೀಗಾಗಿ ಮಲಗುವ ಕನಿಷ್ಠ 5ರಿಂದ 6 ಗಂಟೆಗಳ ಮುನ್ನ ಈ ರೀತಿಯ ಪಾನಿಯ ಸೇವನೆ ತಪ್ಪಿಸಬೇಕು.
ಮೊಬೈಲ್, ಟಿವಿ ನೋಡುವುದನ್ನು ನಿಲ್ಲಿಸಿ
ಕೆಲವರು ನಿದ್ರೆ ಬರುವವರೆಗೂ ಟಿವಿ, ಮೊಬೈಲ್ ನೋಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅವರ ಪ್ರಕಾರ ಮೊಬೈಲ್ ಹಾಗೂ ಟಿವಿ ನೋಡುವುದರಿಂದಲೇ ನಿದ್ರೆ ಬರುತ್ತಿದೆ ಎಂದು ಭಾವಿಸಿರುತ್ತಾರೆ, ಆದ್ರೆ ಇದು ತಪ್ಪು ಕಲ್ಪನೆಯಾಗಿದೆ. ಅತೀ ಹೆಚ್ಚು ಬೆಳಕಿನ ಕಿರಣಗಳು ಕಣ್ಣ ಮೇಲೆ ಬೀಳುವುದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಆದ್ರೆ ಟಿವಿ, ಮೊಬೈಲ್ ನೋಡುವುದರಿಂದ ನಿಮಗೆ ನಿದ್ರೆ ಬರುವುದು ಆಯಾಸ ಹಾಗೂ ಅನಿವಾರ್ಯವಾಗಿ ಮೆದುಳು ವಿಶ್ರಾಂತಿಗೆ ಜಾರುವ ಪ್ರಕಾರವಾಗಿದೆ.
ಭಾರೀ ಪ್ರಮಾಣದ ಊಟ ತ್ಯಜಿಸಿ
ಮಲಗುವ ಮುನ್ನ ಭಾರೀ ಪ್ರಮಾಣದ ಊಟ ಮಾಡುವುದು ಕೂಡ ನಿದ್ರಾಹೀನತೆ ಅಥವಾ ತಡವಾಗಿ ನಿದ್ರೆ ಬರುವಂತೆ ಮಾಡಲಿದೆ. ಹೀಗಾಗಿ ಮಲಗುವ ಕನಿಷ್ಠ 5ರಿಂದ 6 ಗಂಟೆಯ ಮೊದಲು ಕಡಿಮೆ ಪ್ರಮಾಣದ ಊಟ ಮಾಡಬೇಕು. ಆದಷ್ಟು ರಾತ್ರಿ 8 ಗಂಟೆ ಒಳಗಾದರು ಊಟ ಮಾಡುವ ಅಭ್ಯಾಸ ಮಾಡಿಕೊಳ್ಳಿ. ನಂತರ ಈ 8 ಗಂಟೆಯ ಊಟದ ಬಳಿಕ 7 ಗಂಟೆಗೆ ಇಳಿಸಿಕೊಳ್ಳಿ.
ಹಗಲು ನಿದ್ರೆ ತಪ್ಪಿಸಿ
ಮಧ್ಯಾಹ್ನ ಊಟದ ಬಳಿಕ ಹಲವರು ನಿದ್ರೆಗೆ ಜಾರುತ್ತಾರೆ. ಅವರು ನಿತ್ಯವು ಈ ಕೆಲಸ ಮಾಡಿಕೊಂಡು ಬಂದಿರುವುದರಿಂದ ಆ ಸಮಯದಲ್ಲಿ ನಿದ್ರೆ ತಡೆಯಲು ಆಗುವುದಿಲ್ಲ. ಆದ್ರೆ ಮಧ್ಯಾಹ್ನದ ಈ ನಿದ್ರೆ ರಾತ್ರಿ ಸಮಯದ ನಿದ್ರೆಯ ಮೇಲೆ ಹಾನಿ ಮಾಡಲಿದೆ. ಮಧ್ಯಾಹ್ನ 20 ನಿಮಿಷಕ್ಕಿಂತ ಹೆಚ್ಚು ಸಮಯ ನಿದ್ರೆ ಮಾಡಬಾರದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











