Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಪಾನ್‌ನಲ್ಲಿ ತೀವ್ರಗೊಂಡ ವೈರಲ್ ಫೀವರ್: ಶಾಲೆ, ಅಂಗನವಾಡಿ ಬಂದ್! ಆಸ್ಪತ್ರೆಗಳು ಹೌಸ್‌ಫುಲ್!
ಕಾಲೋಚಿತವಾಗಿ ಜಗತ್ತಿನ ಹಲವು ದೇಶಗಳಲ್ಲಿ ವೈರಸ್‌ನಿಂದ ಉಂಟಾಗುವ ಹಲವು ರೀತಿಯ ಸಮಸ್ಯೆಗಳ ನೋಡಬಹುದು. ಕೆಲವೊಂದು ಜೀವಕ್ಕೆ ಅಪಾಯ ತಂದೊಡ್ಡುವಂತಹ ರೀತಿಯಲ್ಲಿ ಹರಡುವುದು ಸಹ ಇದೆ. ಹಾಗೆ ಈಗ ಜಪಾನ್‌ನಲ್ಲಿ ಇಂತಹದ್ದೆ ಜ್ವರ ಹರಡುತ್ತಿದೆ. ಜಪಾನ್‌ನಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಹೊಸ ರೀತಿಯ ಆತಂಕ ಎದುರಾಗಿದೆ.
ಪ್ರತಿ ವರ್ಷ ಈ ವೈರಲ್ ಫೀವರ್ ಕಾಣಿಸಿಕೊಳ್ಳುತ್ತಿತ್ತು. ಆದ್ರೆ ಈ ವರ್ಷ ಅವಧಿಗೂ ಮುನ್ನವೇ ಕಾಣಿಸಿಕೊಂಡಿದೆ. ಅಲ್ಲದೆ ಅಂದುಕೊಂಡಿದ್ದಕ್ಕಿಂತ ವೇಗವಾಗಿ ಹರಡುತ್ತಿರುವ ಕಾರಣದಿಂದ ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿ ಜಪಾನ್ ಸರ್ಕಾರವು ಇದನ್ನು ಸಾಂಕ್ರಾಮಿಕ ಎಂದು ಘೋಷಿಸಿದೆ.

ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುವ ವಾರದಲ್ಲಿ ದೇಶಾದ್ಯಂತ ಸುಮಾರು 3,000 ಆಸ್ಪತ್ರೆಗಳು ಒಟ್ಟು 4,030 ಜ್ವರ ಪ್ರಕರಣಗಳನ್ನು ವರದಿ ಮಾಡಿವೆ ಎಂದು ಜಪಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಜಪಾನ್‌ನ ಪ್ರಮುಖ ನಗರಗಳಲ್ಲಿ ಹರಡುವಿಕೆ ವೇಗ ಹೆಚ್ಚಾಗಿದೆ. ಹಾಗೆ ಮಕ್ಕಳಲ್ಲಿ ಈ ಪ್ರಮಾಣ ಹೆಚ್ಛಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 100ಕ್ಕೂ ಹೆಚ್ಚು ಶಾಲೆಗಳು, ಅಂಗನವಾಡಿ ಕೇಂದ್ರಗಳ ಮುಚ್ಚಲಾಗಿದೆ.
ಕಳೆದ ವರ್ಷಕ್ಕಿಂತ 1 ತಿಂಗಳ ಮೊದಲೇ ಈ ಜ್ವರ ಕಾಣಿಸಿಕೊಂಡಿದೆ. ಹಾಗೆ ವೇಗವಾಗಿ ಹರಡುತ್ತಿದೆ. ಇದು ಕೊರೊನಾ ಬಳಿಕ ಜಗತ್ತಿನಲ್ಲಿ ಉಳಿದ ಸಾಂಕ್ರಾಮಿಕಗಳ ಹರಡುವಿಕೆಯಲ್ಲಿನ ಬದಲಾವಣೆಗಳ ಕುರಿತಾದ ಕಳವಳ ಹೆಚ್ಚಾಗುವಂತೆ ಮಾಡಿದೆ. ಅಕ್ಟೋಬರ್ 3ರ ವರದಿ ಪ್ರಕಾರ ಕಳೆದ ಬಾರಿಗೆ ಹೋಲಿಸಿದರೆ ಈ ವೈರಸ್‌ಗೆ ತುತ್ತಾಗಿರುವ ಪ್ರಮಾಣ 4 ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ವಾತಾವರಣದಲ್ಲಿನ ಬದಲಾವಣೆಗಳು, ವೈರಸ್ ನಡುವಳಿಕೆಯಲ್ಲಿನ ಬದಲಾವಣೆ, ಹಾಗೆ ಕಡಿಮೆ ವ್ಯಾಕ್ಸಿನೇಷನ್ ಪ್ರಮಾಣವೂ ಈ ಜ್ವರದ ಪ್ರಮಾಣ ಏರಿಕೆಯಾಗಲು ಕಾರಣವಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಜಪಾನ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ಆಸ್ಪತ್ರೆಗಳಲ್ಲಿ ಲಸಿಕೆಗಳ ಸಂಗ್ರಹಕ್ಕೆ ಸೂಚಿಸಲಾಗಿದೆ.
ಸಾಮಾನ್ಯವಾಗಿ ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳು, ಹಿರಿಯರು, ಮಕ್ಕಳಲ್ಲಿ ಈ ಜ್ವರದ ಪ್ರಮಾಣ ಏರಿಕೆಯಾಗಿದೆ. ಇದು ಸಹ ಕೊರೊನಾ ಸಮಯದಲ್ಲಿ ಅನುಸರಿಸಿದ್ದ ಸುರಕ್ಷಿತಾ ಮಾನದಂಡಗಳನ್ನೇ ಅನುಸರಿಸಲು ಸೂಚಿಸಲಾಗಿದೆ. ಅದ್ರಲ್ಲೂ ಎಲ್ಲರಿಗೂ ಮಾಸ್ಕ್ ಧರಿಸಲು ಕೂಡ ಸೂಚಿಸಲಾಗಿದೆ. ಕೈ ತೊಳೆಯುವುದು, ಸಾಬೂನು ಬಳಸುವುದು ಸೇರಿ ಇನ್ನಿತರೆ ಸುರಕ್ಷತೆಗಳ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಹಾಗೆ ಸಾವರ್ಜನಿಕ ಸ್ಥಳಗಳಲ್ಲಿ ಸೇರುವುದು, ಜನಸಂದಣಿ ಆಗದಂತೆ ನೋಡಿಕೊಳ್ಳುವುದು, ಅನಗತ್ಯ ಸಮಯದಲ್ಲಿ ಹೊರಗೆ ಬರುವುದಂತಹ ವಿಚಾರದಲ್ಲಿ ಕಡಿವಾಣ ಹಾಕಲು ಸೂಚಿಸಲಾಗಿದೆ. ಜ್ವರ, ಕೆಮ್ಮು ಅಥವಾ ದೇಹದ ನೋವಿನಂತಹ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರೆ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಹೇಳಲಾಗಿದೆ.
ಹಾಗೆ ಜ್ವರ ಕಾಣಿಸಿಕೊಂಡ ವ್ಯಕ್ತಿ ಪ್ರತ್ಯೇಕವಾಗಿರುವಂತೆಯೂ ಹೇಳಲಾಗಿದೆ. ಏಕೆಂದರೆ ಈ ಜ್ವರ ತೀವ್ರ ರೀತಿಯಲ್ಲಿ ಹರಡುತ್ತಿರುವುದರಿಂದ ಇಂತಹ ಸೂಚನೆಗಳ ನೀಡಲಾಗಿದೆ. ಸದ್ಯ ಜಪಾನ್‌ನಲ್ಲಿ ಈಗ ಚಳಿಗಾಲ ಆರಂಭವಾಗುತ್ತಿದೆ. ಭಾರತದಂತಹ ಹವಾಮಾನ ಜಪಾನ್‌ನಲ್ಲಿ ನೋಡಬಹುದಾಗಿದೆ. ಹೀಗಾಗಿ ಭಾರತದಲ್ಲೂ ಈ ರೀತಿಯ ಸೋಂಕು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.
ಭಾರತದಲ್ಲೂ ಈ ವಾತಾವರಣ ಬದಲಾವಣೆಯ ಕಾರಣದಿಂದಾಗಿ ಹಲವು ರೀತಿಯ ಸೋಂಕುಗಳ ನೋಡಬಹುದು. ಕೆಲವು ಕಡೆ ಜ್ವರ ಶೀತದಂತಹ ಪ್ರಕರಣಗಳು ವರದಿಯಾಗಿವೆ. ಇದು ಸೋಂಕಿನ ಕಾರಣಕ್ಕೆ ಉಂಟಾಗಿರುವುದಲ್ಲವಾದರು ವಾತಾವರಣದಲ್ಲಿನ ಬದಲಾವಣೆಯು ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಜಪಾನ್ ಅನ್ನು ಹೊರತು ಪಡಿಸಿ ಉಳಿದ ಯಾವುದೇ ರಾಷ್ಟ್ರಗಳಲ್ಲಿ ಈ ಪ್ರಮಾಣದಷ್ಟು ಜ್ವರದ ಪ್ರಕರಣಗಳು ವರದಿಯಾಗಿಲ್ಲ.



Click it and Unblock the Notifications