Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೂದಲು ಉದುರುವಿಕೆ ನಿಲ್ಲುತ್ತಿಲ್ವಾ..? ಇದು ಸಾಮಾನ್ಯ ಸಮಸ್ಯೆ ಅಲ್ಲ, ಅಲ್ಲೊಂದು ಕಾರಣವಿದೆ..!
ಕೂದಲು ಉದುರುವಿಕೆ ಇತ್ತೀಚಿಗೆ ಹಲವರಲ್ಲಿ ಕಂಡುಬರುತ್ತಿರುವ ಸಮಸ್ಯೆಯಾಗಿದೆ. ಯುವ ವಯಸ್ಸಿನಲ್ಲಿದ್ದವರಿಂದಲೇ ಈಗ ಕೂದಲು ಉದುರುವಿಕೆ ಆರಂಭವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ವಯಸ್ಸಾದವರಲ್ಲೂ ತಲೆ ತುಂಬ ಕೂದಲು ನೋಡಬಹುದಿತ್ತು. ಆದ್ರೆ ಈಗ ಮಕ್ಕಳಲ್ಲೇ ಈ ಸಮಸ್ಯೆ ಕಾಣಿಸುತ್ತಿದೆ. ಆದ್ರೆ ಈ ರೀತಿ ಕೂದಲು ಉದುರುವಿಕೆಗೆ ಹತ್ತು ಹಲವು ಕಾರಣಗಳನ್ನು ನಾವು ಪಟ್ಟಿ ಮಾಡಬಹುದಾಗಿದೆ. ಹಾಗೆ ಇದಕ್ಕೆ ಬೇರೆ ಬೇರೆ ರೀತಿಯ ಬಾಹ್ಯ ಕಾರಣಗಳನ್ನು ಕೂಡ ಪಟ್ಟಿ ಮಾಡಬಹುದು.
ಆದ್ರೆ ಕೂದಲು ಉದುರುವಿಕೆಯ ಎಲ್ಲಾ ಪ್ರಕರಣಗಳಲ್ಲೂ ಕೂಡ ಸಾಮಾನ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಕೂದಲು ಉದುರುವಿಕೆ ಸಾಮಾನ್ಯ ಕ್ರಿಯೆ ಅಲ್ಲವೇ ಅಲ್ಲ. ಅತೀಯಾದ ಕೂದಲು ಉದುರುವಿಕೆ ಅಥವಾ ಕೂದಲು ಉದುರುವಿಕೆ ನಿಲ್ಲದೆ ಇದ್ದರೆ ಅಲ್ಲಿ ಅನಾರೋಗ್ಯ ಸಮಸ್ಯೆ ಎಂದು ಪರಿಗಣಿಸಬಹುದು. ಇತ್ತೀಚಿಗೆ ಆಹಾರ ಕ್ರಮ, ಜೀವನ ಶೈಲಿ, ಒತ್ತಡದಂತಹ ಜೀವನವು ಕೂದಲು ಉದುರುವಿಕೆಗೆ ಕಾರಣ ಎಂದು ನಾವು ಹೇಳಬಹುದು.

ಆದ್ರೆ ಇದಕ್ಕಿಂತ ಮುಖ್ಯವಾಗಿ ನಿಮ್ಮಲ್ಲಿ ನಿರಂತವಾಗಿ ಕೂದಲು ಉದುರುತ್ತಿದ್ದರೆ, ನೀವು ಯಾವುದೇ ಚಿಕಿತ್ಸೆ ನೀಡಿದರು ಕೂದಲು ಉದುರುವಿಕೆ ಕಡಿಮೆಯಾಗದೆ ಇದ್ದರೆ ಅದರ ಅರ್ಥವೇ ಬೇರೆ. ಹಾಗಾದ್ರೆ ಕೂದಲು ಉದುರುವಿಕೆ ನಿಲ್ಲದಿದ್ದರೆ ಯಾವೆಲ್ಲಾ ಅನಾರೋಗ್ಯದ ಸೂಚನೆ ಇರಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೂದಲು ಉದುರುವಿಕೆಗೆ ಹಾರ್ಮೋನಲ್ ಬದಲಾವಣೆಗಳ ಸೂಚಕವಾಗಿದೆ. ಅದರಲ್ಲೂ ಅಪಾಯಕಾರಿ ಮಟ್ಟದ ಹಾರ್ಮೋನ್ ಬದಲಾವಣೆಗಳ ಮುನ್ಸೂಚನೆಯಾಗಿ ಈ ಕೂದಲು ಉದುರುವಿಕೆ ನೋಡಬಹುದು. ಹಾಗಾದ್ರೆ ಯಾವೆಲ್ಲಾ ಹಾರ್ಮೋನಲ್ ಬದಲಾವಣೆಯ ಸೂಚಕವಿದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಆಂಡ್ರೋಜೆನ್: ಆಂಡ್ರೋಜೆನ್ ಪುರುಷರಲ್ಲಿ ಕಂಡುಬರುವ ಹಾರ್ಮೋನ್ ಆಗಿದೆ. ಪುರುಷತ್ವದ ಹಾರ್ಮೋನ್ ಎನ್ನಬಹುದು. ಬಾಲಕ ಪ್ರೌಢವಸ್ಥೆಗೆ ಬಂದಾಗ ಈ ಹಾರ್ಮೋನ್ ಹೆಚ್ಚಾಗಿ ಬಿಡುಗಡೆಯಾಗಲು ಆರಂಭಿಸುತ್ತದೆ. ಒಂದು ವೇಳೆ ಈ ಹಾರ್ಮೋನ್ ಬಿಡುಗಡೆ ಹೆಚ್ಚಾದಾಗ ಹಲವು ಸಮಸ್ಯೆಗಳು ಗೋಚರಿಸಲಿದೆ, ಅದರಲ್ಲಿ ಒಂದು ಈ ಕೂದಲು ಉದುರುವಿಕೆ. ಹಾಗೆ ಆಂಡ್ರೋಜೆನ್‌ಗಳ ಹೆಚ್ಚುವರಿ ಉತ್ಪಾದನೆ, ವಿಶೇಷವಾಗಿ ಡೈಹೈಡ್ರೊಟೆಸ್ಟೋಸ್ಟೆರಾನ್ (DHT), ಆಂಡ್ರೊಜೆನೆಟಿಕ್ ಅಲೋಪೆಸಿಯಾಕ್ಕೆ ಕಾರಣವಾಗುತ್ತದೆ. ಇದು ಕೂದಲು ಉದುರುವಿಕೆಗೆ ಕಾರಣವಾಗಿರಲಿದೆ.
ಥೈರಾಯ್ಡ್ ಸಮಸ್ಯೆ: ಅತೀಯಾಗಿ ಕೂದಲು ಉದುರುತ್ತಿದೆ, ಯಾವುದೇ ಶಾಂಪೂ, ಚಿಕಿತ್ಸೆ ಮಾಡಿದ್ರೂ ನಿಲ್ಲುತ್ತಿಲ್ಲ ಎಂದಾದರೆ ಅದಕ್ಕೆ ಥೈರಾಯ್ಡ್ ಸಮಸ್ಯೆಯೂ ಕಾರಣವಾಗಿರಬಹುದು. ಹೈಪರ್ ಥೈರಾಯಿಡಿಸಂ ಅಥವಾ ಹೈಫೋ ಥೈರಾಯ್ಡಿಸಮ್‌ನಲ್ಲೂ ಕೂದಲು ಉದುರುವಿಕೆ ಹೆಚ್ಚಾಗಿ ನೋಡಬಹುದು. ಈ ಹಾರ್ಮೋನ್ ಯಾವಾಗಲು ಸಮತೋಲನ ಕಾಪಾಡುವಂತೆ ಬಿಡುಗಡೆಯಾಗಬೇಕಾಗುತ್ತದೆ.
ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಎರಡು ಹಾರ್ಮೋನ್‌ಗಳು ಬಿಡುಗಡೆ ಹೆಚ್ಚಾದಾಗಲೂ ಕೂದಲು ಉದುರುವಿಕೆ ಪ್ರಕರಣ ಹೆಚ್ಚಾಗಿ ನೋಡಬಹುದು. ಗರ್ಬಾವಸ್ಥೆಯಲ್ಲಿ, ಹೆರಿಗೆಯ ಬಳಿಕ, ಕೂದಲು ಉದುರುವಿಕೆ ಹೆಚ್ಚಾದರೆ ಈ ಹಾರ್ಮೋನ್ ಕಾರಣವಾಗಿರಬಹುದು.
ಸಾಮಾನ್ಯ ಕಾರಣಗಳೇನು?
ಈ ಮೇಲೆ ಹೇಳಲಾಗಿರುವುದು ಹಾರ್ಮೋನ್ ಬದಲಾವಣೆಗಳ ಕಾರಣದಿಂದಾಗಿ ಕೂದಲು ಉದುರುವಿಕೆ ಸಮಸ್ಯೆ. ಆದ್ರೆ ಕೂದಲು ಉದುರುವಿಕೆಗೆ ಸಾಮಾನ್ಯ ಕಾರಣಗಳನ್ನು ಕೂಡ ಪಟ್ಟಿ ಮಾಡಬಹುದು. ಅದರಲ್ಲೂ ಸಾಮಾನ್ಯವಾಗಿ ನೀರಿನ ಸಮಸ್ಯೆ, ಶಾಂಪೂ, ಧೂಳು, ಆಹಾರ ಕ್ರಮ, ಒತ್ತಡ, ಪರಿಸರ, ಅನುವಂಶೀಯ ಸಮಸ್ಯೆಗಳು ಹೀಗೆ ಹತ್ತಾರು ರೀತಿಯ ಕಾರಣಗಳಿವೆ. ಇತ್ತೀಚಿಗೆ ಕೂದಲು ಉದುರುವಿಕೆ ಸಮಸ್ಯೆಯು ಯುವ ಜನತೆಯ ಮೇಲೆ ಮತ್ತಷ್ಟು ಒತ್ತಡಕ್ಕೆ ಕಾರಣವಾಗುತ್ತಿದೆ. ಹಾಗೆ ಮಾರುಕಟ್ಟೆಯಲ್ಲಿ ಹತ್ತಾರು ಔಷಧಿಗಳು ಕೂಡ ಬಂದಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications