Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಈ ವಿಚಾರ ನಿಮಗೆ ತಿಳಿದಿದ್ದರೇ ಜೀವನದಲ್ಲಿ ಎಂದೂ ಸ್ಟ್ರೋಕ್ ಬರಲ್ಲ..! ಯಾವುದು ಗೊತ್ತಾ?
ಇತ್ತೀಚಿಗೆ ಸ್ಟ್ರೋಕ್‌ಗೆ ಒಳಗಾಗುವ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇಳಿ ವಯಸ್ಸಿನಿಂದ ಹಿಡಿದು ಹಿರಿಯರು ಕೂಡ ಸ್ಟ್ರೋಕ್‌ಗೆ ಒಳಗಾಗುವುದು ನಾವು ನೋಡಬಹುದು. ಅದರಲ್ಲೂ ಆರೋಗ್ಯವಂತರಲ್ಲೂ ಪಾರ್ಶ್ವವಾಯು ಸಮಸ್ಯೆ ಕಾಣಬಹುದು. ಹಲವರಿಗೆ ಹೆಚ್ಚಾಗಿ ರಾತ್ರಿ ಮಲಗಿದ ಸಮಯದಲ್ಲಿ ಸ್ಟ್ರೋಕ್ ಕಾಣಿಸಿಕೊಳ್ಳುವುದು ನೋಡಬಹುದು. ಆದ್ರೆ ಸ್ಟ್ರೋಕ್ ಒಂದೇ ದಿನ ಸಂಭವಿಸೋ ಪ್ರಕ್ರಿಯೆ ಅಲ್ಲವೇ ಅಲ್ಲ.
ಪಾರ್ಶ್ವವಾಯು ಉಂಟಾಗುವ ಹಲವು ದಿನಗಳ ಮುನ್ನ ಅದರ ಲಕ್ಷಣಗಳು ಗೋಚರ ಆಗುವುದು ನೋಡಬಹುದು. ಹಾಗೆ ಸ್ಟ್ರೋಕ್ ಸಂಭವಕ್ಕೂ ಹಲವು ಕಾರಣಗಳನ್ನು ಕೂಡ ಪಟ್ಟಿ ಮಾಡಬಹುದು. ಮೆದುಳಿಗೆ ಆಮ್ಲಜನಕ ಹಾಗೂ ರಕ್ತದ ಪೂರೈಕೆ ಸರಿಯಾಗಿ ಆಗದೇ ಇದ್ದಾಗ ಬ್ರೈನ್ ಸ್ಟ್ರೋಕ್ ಅಥವಾ ಮೆದುಳಿನ ಪಾರ್ಶ್ವವಾಯು ಉಂಟಾಗುವುದು ನೋಡಬಹುದು. ದೇಹದ ಯಾವುದೇ ಭಾಗಕ್ಕೆ ಸ್ಟ್ರೋಕ್ ಆದಾಗ ಅಲ್ಲಿ ರಕ್ತ ಪರಿಚಲನೆಯಲ್ಲಿನ ತೊಡಕು ಪ್ರಮುಖ ಕಾರಣ ಎಂದು ಪಟ್ಟಿ ಮಾಡಬಹುದು.

ಸ್ಟ್ರೋಕ್‌ಗೆ ಒಳಗಾಗುವ ಮುನ್ನ ವ್ಯಕ್ತಿಯಿಂದ ವ್ಯಕ್ತಿಗೆ ಲಕ್ಷಣಗಳು ಬದಲಾಗಬಹುದು. ಹೀಗಾಗಿ ಎಲ್ಲರಲ್ಲೂ ಒಂದೇ ರೀತಿಯ ಲಕ್ಷಣಗಳಿರಬೇಕು ಎಂಬುದಿಲ್ಲ. ಹಾಗೆ ಸ್ಟ್ರೋಕ್ ಬಾರದಂತೆ ತಡೆಯಲು ಕೂಡ ಹಲವು ರೀತಿಯ ಅಂಶಗಳನ್ನು ನಾವು ಅನುಸರಿಸಿದರೆ ಸಾಕಾಗುತ್ತದೆ. ಹಾಗಾದ್ರೆ ಪಾರ್ಶ್ವವಾಯು ಬಾರದಂತೆ ತಡೆಯುವ ಉಪಾಯಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೊಲೆಸ್ಟ್ರಾಲ್ ಲೆವೆಲ್ ಹತೋಟಿಯಲ್ಲಿಡುವುದು
ಮುಖ್ಯವಾಗಿ ಕೊಲೆಸ್ಟ್ರಾಲ್‌ನಿಂದ ನೀವು ಹೃದಯಾಘಾತಕ್ಕೆ ಒಳಗಾಗುವ ಸಂಭವ ಹೆಚ್ಚಾಗಿರಲಿದೆ ಎಂದಷ್ಟೇ ತಿಳಿದಿದ್ದೀರಿ. ಆದರೆ ಕೊಲೆಸ್ಟ್ರಾಲ್‌ನಿಂದ ಸ್ಟ್ರೋಕ್‌ನ ಅಪಾಯ ಕೂಡ ಹೆಚ್ಚಾಗುತ್ತದೆ. ಹೃದಯನಾಳದಲ್ಲಿ ಉಂಟಾಗುವ ಬ್ಲಾಕೇಜ್‌ನಿಂದ ಹೃದಯಾಘಾತ ಸಂಭವಿಸುವಂತೆಯೇ ಮೆದುಳಿಗೆ ರಕ್ತ ಸಾಗಿಸುವ ನರಗಳಲ್ಲಿ ಉಂಟಾಗುವ ಕೊಲೆಸ್ಟ್ರಾಲ್ ಬ್ಲಾಕೇಜ್ ಈ ಸ್ಟ್ರೋಕ್ ಉಂಟಾಗಲು ಒಂದು ಕಾಣವಾಗುತ್ತದೆ. ನೀವು ಈ ಅಪಾಯದಿಂದ ಪಾರಾಗಬೇಕಾದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಆದಷ್ಟು ಹತೋಟಿಯಲ್ಲಿಡುವುದು ಒಳಿತು.
ಬೊಜ್ಜು ಉಂಟಾಗುವ ಅಪಾಯ ಕಡಿಮೆ ಮಾಡಿ
ಬಹಳ ಮುಖ್ಯವಾಗಿ ನಮ್ಮ ದೇಹಕ್ಕೆ ಉಂಟಾಗುವ ಹಲವು ಸಮಸ್ಯೆಗಳಿಗೆ ಬೊಜ್ಜು ಕಾರಣವಾಗುತ್ತದೆ. ಒಬೆಸಿಟಿ ಈಗ ಯುವ ಸಮುದಾಯವನ್ನೂ ಕೂಡ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಬೊಜ್ಜು ಹೃದಯ ಸಂಬಂಧಿ ಸಮಸ್ಯೆಯಿಂದ ಹಿಡಿದು ಬಹುತೇಕ ಎಲ್ಲಾ ಸಮಸ್ಯೆಗಳ ಮೂಲವಾಗಿ ಪರಿಣಮಿಸುತ್ತದೆ. ಹೀಗಾಗಿ ನಮ್ಮ ದೇಹದ ಬೊಜ್ಜಿನ ಪ್ರಮಾಣವನ್ನು ನಾವು ವ್ಯಾಯಾಮ, ಡಯೆಟ್‌ನಂತಹ ನಿಯಮದಿಂದ ಹತೋಟಿಯಲ್ಲಿಟ್ಟುಕೊಳ್ಳುವುದು ಸ್ಟ್ರೋಕ್‌ನ ಅಪಾಯ ಕಡಿಮೆ ಮಾಡಲು ಸಹಾಯ ಮಾಡಲಿದೆ.
ಮದ್ಯಪಾನ ಹಾಗೂ ಧೂಮಪಾನ
ಮದ್ಯಪಾನ ಹಾಗೂ ಧೂಮಪಾನ ಮಾಡುವವರಲ್ಲಿ ಹೃದಯ ಸಂಬಂಧಿ ಸಮಸ್ಯೆ, ಶ್ವಾಸಕೋಶ ಸಮಸ್ಯೆ ಹಾಗೆ ಪಾರ್ಶ್ವವಾಯುವಿನ ಅಪಾಯ ಕೂಡ ಬಹಳ ಹೆಚ್ಚಾಗುತ್ತದೆ. ಹೀಗಾಗಿ ಈ ವ್ಯಸನಗಳಿಂದ ದೂರ ಇದ್ದಷ್ಟು ಸಮಸ್ಯೆಯಿಂದ ದೂರಾಗಬಹುದು. ಧೂಮಪಾನ ಮಾಡಿದಾಗ ನರಗಳು ಸಂಕುಚಿತವಾಗುತ್ತಾ ಸಾಗುತ್ತದೆ. ಇದು ದೇಹದ ಭಾಗಗಳಿಗೆ ರಕ್ತ ಪರಿಚಲನೆಗೆ ಅಡ್ಡಿಯಾಗುವ ಅಪಾಯ ಹೆಚ್ಚಿಸುತ್ತದೆ.
ಮುನ್ನೆಚ್ಚರಿಕೆಯೇ ಚಿಕಿತ್ಸೆ
ಪಾರ್ಶ್ಚವಾಯು ಬರುವುದನ್ನು ತಡೆಯುವ ಮುನ್ನೆಚ್ಚರಿಕೆಯ ಜೊತೆಗೆ ಲಕ್ಷಣಗಳು ಮೊದಲೇ ಗೋಚರ ಆಗುವುದರ ಕಡೆಗೂ ನಾವು ಗಮನವಿಡಬೇಕು. ಅಂದತೆ ನೀವು ಮಾತನಾಡಲು ಶ್ರಮ ಹಾಕುತ್ತಿದ್ದರೆ ಅಥವಾ ಮುಖದಲ್ಲಿ ಬದಲಾವಣೆಗಳ ನೀವು ಗುರುತಿಸಿದರೆ. ಬಾಯಿ ಓರೆಯಾಗುವುದು, ಮಾತನಾಡುವಾಗ ತೊದಲುವುದು, ನಡೆದಾಡಲು ಕಷ್ಟವಾಗುವಂತಹ ಸಮಸ್ಯೆ ಎದುರಿಸುತ್ತಿದ್ದರೆ ತಕ್ಷಣ ಅವರನ್ನು ಚಿಕಿತ್ಸೆಗೆ ಕರೆದೊಯ್ದರೆ ಸ್ಟ್ರೋಕ್‌ನ ಅಪಾಯ ಕಡಿಮೆ ಮಾಡಬಹುದು.
ಇದಿಷ್ಟೇ ಅಲ್ಲ ನಮ್ಮ ಜೀವನ ಶೈಲಿಯಲ್ಲೊ ಆರೋಗ್ಯಕರ ಬದಲಾವಣೆಗಳ ಅಳವಡಿಸಿಕೊಳ್ಳುವುದು ಕೂಡ ಸ್ಟ್ರೋಕ್ ಸೇರಿ ಹಲವು ಅನಾರೋಗ್ಯಗಳ ತಡೆಯಲು ಸಹಕಾರಿಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications