Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
2 ವರ್ಷದ ಮಕ್ಕಳಲ್ಲೂ ಮಲಬದ್ಧತೆ ಕಂಡು ಬರುವುದೇಕೆ? ವೈದ್ಯರು ಹೇಳೋದೇನು?
ಮಲಬದ್ಧತೆ ಸಮಸ್ಯೆ ಎಲ್ಲಾ ವಯಸ್ಸಿನವರಲ್ಲೂ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆ ಎಂದು ತಿಳಿದುಬಂದಿದೆ. ಇತ್ತೀಚಿಗೆ ಎಲ್ಲಾ ವಯೋಮಾನದವರಲ್ಲೂ ಈ ಮಲಬದ್ಧತೆ ಸಮಸ್ಯೆ ನೋಡುತ್ತಿದ್ದೇವೆ. ಹಾಗೆ ಇತ್ತೀಚಿಗೆ ಮಕ್ಕಳಲ್ಲಿ ಈ ಮಲಬದ್ಧತೆ ಸಮಸ್ಯೆ ಉಂಟಾಗುತ್ತಿರುವುದು ಕೂಡ ನೋಡಬಹುದು.
ಹಾಗೆ ಇತ್ತೀಚಿಗೆ 2 ವರ್ಷದ ಮಕ್ಕಳಲ್ಲೂ ಮಲಬದ್ಧತೆ ಸಮಸ್ಯೆ ಕಂಡುಬರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಕಂಡುಬರಲು ಕಾರಣವೇನು ಎಂದು ನೋಡಿದಾಗ ಈಗಿನ ಆಹಾರ ಪದ್ಧತಿ ಪ್ರಮುಖ ಅಂಶವಾಗಿ ಕಂಡುಬಂದಿದೆ. ಅನಾರೋಗ್ಯಕರ ಆಹಾರ ಸೇವನೆ, ಜಂಕ್ ಫುಡ್, ಬ್ರೆಡ್, ಬಿಸ್ಕತ್ ಮತ್ತು ರಸ್ಕ್‌ಗಳ ಅತಿಯಾದ ಸೇವನೆ, ತರಕಾರಿ ಮತ್ತು ಹಣ್ಣುಗಳಂತಹ ಫೈಬರ್ ಭರಿತ ಆಹಾರ ಸೇವನೆಯ ಕೊರತೆ ಮತ್ತು ಸಾಕಷ್ಟು ದ್ರವ ಪದಾರ್ಥ ಸೇವನೆ ಮಾಡದಿರುವುದು ಪ್ರಮುಖ ಕಾರಣವಾಗಿದೆ.

ಅನೇಕ ಮಕ್ಕಳು ಅಸಮತೋಲನ ಆಹಾರ ಸೇವಿಸುತ್ತಿರುವುದು ಮಲಬದ್ಧತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ. ವಿ ಹೇಳಿದ್ದಾರೆ. ಮಲಬದ್ಧತೆ ಸಮಸ್ಯೆ ಕಂಡುಬರಲು ಪತ್ಯೇಕ ಪರಿಸರ, ಅಥವಾ ಕಾಲ ಎಂಬುದಿಲ್ಲ. ಆದ್ರೆ ಬೇಸಿಗೆಯಲ್ಲಿ ಈ ಸಮಸ್ಯೆ ಅತ್ಯಧಿಕವಾಗಿ ಕಂಡುಬರುತ್ತಿರುವುದು ಗುರುತಿಸಬಹುದು.
ಅದರಲ್ಲೂ ಮಕ್ಕಳು ಬೇಸಿಗೆಯ ಸಮಯದಲ್ಲಿ ಕಡಿಮೆ ನೀರು ಕುಡಿಯುವುದು. ಹಾಗೆ ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯದೆ ಇರುವುದು ಕೂಡ ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ. ಜಡವಾದ ಜೀವನಶೈಲಿಯನ್ನು ಅನುಸರಿಸುತ್ತಿರುವುದರಿಂದ ಕೂಡ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಅನೇಕ ಮಕ್ಕಳು ಮನೆಯ ಹೊರಗಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಬದಲು ಮನೆಯೊಳಗೆ ಸದಾ ಕುಳಿತಿರುವುದು, ತಿನ್ನುವುದು, ಟಿವಿ ಅಥವಾ ಮೊಬೈಲ್ ಪರದೆಯನ್ನು ನೋಡುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
ಈ ರೀತಿ ಜಡ ಜೀವನ ಶೈಲಿಯು ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಹೆಚ್ಚಾಗಲು ಕಾರಣ ಎನ್ನಬಹುದು. ಇದಲ್ಲದೆ ಹಾಲು ಮತ್ತು ಡೈರಿ ಉತ್ಪನ್ನಗಳ ಅತಿಯಾದ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು. ಹೊಟ್ಟೆ ನೋವು, ಹಸಿವು ಕಡಿಮೆಯಾಗುವುದು, ಹೊಟ್ಟೆಯಲ್ಲಿ ಅಸ್ವಸ್ಥತೆ, ಗಟ್ಟಿಯಾದ ಮಲ ಮತ್ತು ಅನಿಯಮಿತ ಕರುಳಿನಲ್ಲಿ ಸಂಕಟದ ಲಕ್ಷಣ ಅನುಭವಿಸುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದನ್ನು ನಾವು ನೋಡುತ್ತಿದ್ದು, ಮೂರರಿಂದ ನಾಲ್ಕು ದಿನಗಳಿಗೊಮ್ಮೆಯಾದ್ರು ಒಂದು ಪ್ರಕರಣ ದಾಖಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪರಿಹಾರವೇನು?
ಮಕ್ಕಳಲ್ಲಿ ಕಂಡುಬರುವ ಈ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಮಕ್ಕಳ ಆಹಾರ ಪದ್ಧತಿಯ ಮೇಲೆ ಪೋಷಕರು ಗಮನವಿಡಬೇಕು. ಹೆಚ್ಚು ಫೈಬರ್
ಭರಿತ ಆಹಾರವನ್ನು ಸೇವಿಸುವುದರ ಜೊತೆಗೆ ಸಾಕಷ್ಟು ದ್ರವ ರೂಪದ ಆಹಾರ ಸೇವಿಸುವಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.
ಒಂದು ವೇಳೆ ಈ ರೀತಿಯ ಆಹಾರ ಪದ್ಧತಿ ಅಳವಡಿಸಿಕೊಂಡ ನಂತರವೂ ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲವೆಂದರೆ ಕೂಡಲೇ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.
ಇದನ್ನು ಏಕೆ ನಿರ್ಲಕ್ಷಿಸಬಾರದು ?
ಮಕ್ಕಳು ದೀರ್ಘಕಾಲದ ಮಲಬದ್ಧತೆಯನ್ನು ಹೊಂದಿರುವ ಸಂದರ್ಭದಲ್ಲಿ ವೈದ್ಯರ ಸಲಹೆ ಮುಖ್ಯವಾಗುತ್ತದೆ. ದೀರ್ಘಕಾಲದ ಮಲಬದ್ಧತೆ ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಆಗಾಗ ಹೊಟ್ಟೆ ನೋವಿಗೆ ತುತ್ತಾಗಬಹುದು ಮತ್ತು ಅವರ ಸಾಮಾನ್ಯ ಚಟುವಟಿಕೆಗಳಲ್ಲಿ ಕುಂಠಿತ ಕಂಡುಬರಬಹುದು.
ಪೋಷಕರು ಮೂತ್ರದ ಸೋಂಕುಗಳು, ಜಠರಗರುಳಿನ ಸಮಸ್ಯೆಗಳು ಅಥವಾ ಹೈಪೋಥೈರಾಯಿಡ್ ನಂತಹ ಸಮಸ್ಯೆಗಳನ್ನು ಪರಿಶೀಲಿಸುವ ವೈದ್ಯರನ್ನು ಒಮ್ ಸಂಪರ್ಕಿಸಬೇಕು. ಮಕ್ಕಳಿಗೆ ನಿಯಮಿತವಾದ ಮಲವಿಸರ್ಜನೆ ತರಬೇತಿ ನೀಡುವುದು ಕೂಡ ಮುಖ್ಯವಾದ ಸಂಗತಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications