Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Womens Day 2025: ಮಹಿಳೆಯರೇ ಖಿನ್ನತೆಯ ಬಲೆಗೆ ಸಿಲುಕುವುದೇಕೆ? ಹೊರಬರುವ ಮಾರ್ಗವೇನು?
ಇತ್ತೀಚಿನ ವರ್ಷಗಳಲ್ಲಿ ಭಾರತದ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಈ ಖಿನ್ನತೆ ಕೂಡ ಒಂದಾಗಿದೆ. ಮನೋವೈಜ್ಞಾನಿಕ ಸಮಸ್ಯೆಯಾಗಿ ಇಂದು ಭಾರತೀಯ ಮಹಿಳೆಯರಲ್ಲಿ ಈ ಖಿನ್ನತೆ ಕಾಡತೊಡಗಿದೆ. ನಗರವಾಸಿಗಳು ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಅಧಿಕವಾಗಿದೆ ಎಂದು ಅಧ್ಯಯನಗಳು ತಿಳಿಸುತ್ತವೆ.
ವ್ಯಕ್ತಿಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸುವ ದುಃಖ ಅಥವಾ ಕೋಪದ ಭಾವನೆಗಳು ಎಂದು ಖಿನ್ನತೆಯನ್ನು ವಿವರಿಸಬಹುದು. ಖಿನ್ನತೆ ವಾರದಿಂದ ಹಿಡಿದು ವರ್ಷಗಳ ವರೆಗೂ ನಿಮ್ಮನ್ನು ಕಾಡಬಹುದು. ಹಾಗೆ ಕೆಲವರು ಈ ಖಿನ್ನತೆಯಿಂದ ಹೊರಬರಲಾಗದೆ ತೀವ್ರ ಸಂಕಷ್ಟ ಎದುರಿಸಬಹುದು, ಕೆಲವೊಮ್ಮೆ ಪ್ರಾಣಹಾನಿಯೂ ಸಂಭವಿಸಲಿದೆ. ಮತ್ತೆ ಕೆಲವರಲ್ಲಿ ಸೂಕ್ತ ಚಿಕಿತ್ಸೆ ನೆರವಾಗಿ ಅವರು ಖಿನ್ನತೆಯಿಂದ ಹೊರಬರುತ್ತಾರೆ.

WHO ಪ್ರಕಾರ ಪ್ರತಿ ವರ್ಷ 8 ಲಕ್ಷ ಜನರು ಆತ್ಮಹತ್ಯೆ ಮೂಲಕ ಪ್ರಾಣ ಕಳೆದುಕೊಳ್ಳುತ್ತಾರೆ . ಪ್ರತಿ 40 ಸೆಕೆಂಡುಗಳಿಗೆ ಒಬ್ಬರು ಆತ್ಮಹತ್ಯೆಗೆ ಒಳಗಾಗುತ್ತಾರೆ. ಅಚ್ಚರಿ ಸಂಗತಿ ಎಂದರೆ ಭಾರತದಲ್ಲಿ ಪುರುಷರಿಗಿಂತ ಹೆಚ್ಚು ಬಾರಿ ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಎಂಬುದು ವರದಿಗಳು ಹೇಳುತ್ತವೆ. ಇದು ಪುರುಷರಿಗಿಂತ 2.5-3ರಷ್ಟು ಹೆಚ್ಚು ಎಂದು ತಿಳಿದುಬಂದಿದೆ.
ಈ ಪ್ರಕರಣಗಳಲ್ಲಿ ಶೇ 67ರಷ್ಟು ಮಂದಿ ಖಿನ್ನತೆಯ ಸಮಸ್ಯೆ ಹೊಂದಿರುವುದು ಆಘಾತಕಾರ ಸಂಗತಿಯಾಗಿತ್ತು. ಹಾಗೆ ಶೇ.55ರಷ್ಟು ಮಂದಿ ಮದ್ಯ ಅಥವಾ ಇತರೆ ವ್ಯಸನಗಳಿಗೆ ಒಳಗಾಗಿರುವವರು ಎಂದು ತಿಳಿದುಬಂದಿತ್ತು.
ಹಾಗೆ ನಾವಿಂದು ಮಹಿಳೆಯರಲ್ಲಿ ಖಿನ್ನತೆಗೆ ಕಾರಣವಾಗುತ್ತಿರುವ ಅಂಶಗಳೇನು? ಅವರು ಖಿನ್ನತೆಗೆ ಒಳಗಾಗಿರುವುದನ್ನು ಗುರುತಿಸುವುದಾದರು ಹೇಗೆ ಅನ್ನೋದನ್ನು ಕ್ಲಿನಿಕಲ್ ಸೈಕಾಲಜಿಸ್ಟ್ ಅರುಣ್ ಕುಮಾರ್ ಅವರಿಂದ ತಿಳಿದುಕೊಳ್ಳೋಣ.
ಮೊದಲಿಗೆ ಖಿನ್ನತೆಯಲ್ಲಿನ ವಿಧಗಳೇನು ಅನ್ನೋದನ್ನು ತಿಳಿದುಕೊಳ್ಳಿ
MDD ( Major Depressive Disorder) ಪ್ರಮುಖ ಖಿನ್ನತೆಯ ಅಸ್ವಸ್ಥತೆ: ಈ ರೀತಿಯ ಖಿನ್ನತೆಯನ್ನು ಕ್ಲೀನಿಕಲ್ ಖಿನ್ನತೆ ಅಂತಲೂ ಕರೆಯುತ್ತಾರೆ. ಇದು ನಿರಂತರ ದುಃಖ, ನೋವಿನ ಕಾರಣದಿಂದಾಗಿ ಉಂಟಾಗಬಹುದು. ಸಾಮಾನ್ಯವಾಗಿ ಪ್ರೀತಿ ಪಾತ್ರರು ಅಗಲಿದ್ದಾಗ, ದೂರಾದಾಗ ಹೆಚ್ಚಿನ ಜನರು ಈ ಸಮಸ್ಯೆಗೆ ಒಳಗಾಗುವುದು ನೋಡಬಹುದು. ಮಹಿಳೆಯರಲ್ಲೂ ಈ ಸಮಸ್ಯೆ ಹೆಚ್ಚು.
PDD ( Persistent Depressive Disorder) ನಿರಂತರ ಖಿನ್ನತೆಯ ಅಸ್ವಸ್ಥತೆ: ಕನಿಷ್ಠ ಎರಡು ವರ್ಷಗಳವರೆಗೆ ಕಾಡುವಂತಹ ಖಿನ್ನತೆ ಇದಾಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸಗೆ ಒಳಗಾಗದಿದ್ದರೆ ಇದು MDD ಸಮಸ್ಯೆಯಾಗಿ ರೂಪುಗೊಳ್ಳುತ್ತದೆ.
ಬೈಪೋಲಾರ್ ಡಿಸಾರ್ಡರ್ : ಖಿನ್ನತೆ ಮತ್ತು ಉನ್ಮಾದ ಅಥವಾ ಹೈಪೋಮೇನಿಯಾ ಸಮಸ್ಯೆ ಒಳಗೊಂಡಿದೆ. ವಾರಗಳು, ತಿಂಗಳ ಕಾಲ ಈ ಖಿನ್ನತೆ ಕಾಡುತ್ತದೆ. ಅಥವಾ ಆಗಾಗ ಎದುರಾಗುವ ಸಮಸ್ಯೆ ಎನ್ನಬಹುದು.
SAD ( Seasonal Affective Disorder) ಕಾಲೋಚಿತ ಪರಿಣಾಮಕಾರಿ ಅಸ್ವಸ್ಥತೆ : ವರ್ಷದ ನಿರ್ದಿಷ್ಟ ಸಮಯಗಳಲ್ಲಿ ಮಾತ್ರವೇ ಉಂಟಾಗುವ ಸಮಸ್ಯೆ.
ಪ್ರಸವಾನಂತರದ ಖಿನ್ನತೆ : ಹೆರಿಗೆಯ ನಂತರ ತಾಯಂದಿರಲ್ಲಿ ಸಂಭವಿಸುತ್ತದೆ, ತೀವ್ರ ಒತ್ತಡ, ತಾಯ್ತನದ ಕಾರಣದಿಂದಾಗಿಯೂ ಇದು ಸಂಭವಿಸಬಹುದು. ಆದರೆ ಬಹಳ ಕಾಲ ಇರುವುದಿಲ್ಲ.
ಖಿನ್ನತೆಯಿಂದ ಹೊರಬರುವ ಮಾರ್ಗವೇನು?
ಮಹಿಳೆರಯರಲ್ಲಿ ಸಾಮಾನ್ಯವಾಗಿ ಕೌಟುಂಬಿಕ ಸಮಸ್ಯೆಗಳಿಂದ ಖಿನ್ನತೆ ಹೆಚ್ಚಾಗಿ ನೋಡಬಹುದ. ಋಣಾತ್ಮಕ ಮನೋಭಾವವನ್ನು ಬಿಡುವುದು, ಕೀಳರಿಮೆ, ನಕಾರಾತ್ಮಕ ಆಲೋಚನೆಗಳಿಂದ ಹೊರಬರುವುದೇ ಇದಕ್ಕಿರುವ ಸೂಕ್ತ ಚಿಕಿತ್ಸೆ. ಎಲ್ಲದಕ್ಕಿಂತ ಮುಖ್ಯವಾಗಿ ಕ್ರಿಯಾಶೀಲರಾಗುವುದು, ದೈಹಿಕ ಕೆಲಸಗಳಲ್ಲಿ ಭಾಗಿಯಾಗುವುದು, ವ್ಯಾಯಾಮ, ಧ್ಯಾನ, ಯೋಗ, ಪ್ರವಾಸ ಹೀಗೆ ಮನಸ್ಸಿಗೆ ನೆಮ್ಮದಿ ನೀಡುವಂತಹ ಕೆಲಸದಲ್ಲಿ ಭಾಗಿಯಾಗುವುದು. ಉತ್ತಮ ಸ್ನೇಹಿತ ಸಂಪಾದನೆ ಕೂಡ ನಿಮ್ಮನ್ನು ಖಿನ್ನತೆಯಿಂದ ಹೊರಬರುವಂತೆ ಮಾಡಲಿದೆ ಎಂದು ಅರುಣ್ ಕುಮಾರ್ ವಿವರಿಸುತ್ತಾರೆ.
ಖಿನ್ನತೆಗೆ ಒಳಗಾಗಿರುವವರಿಗೆ ಚಿಕಿತ್ಸೆ ಏನು?
ಹಲವರಿಗೆ ಖಿನ್ನತೆಗೂ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಅನ್ನೋದೆ ತಿಳಿದಿರೋದಿಲ್ಲ. ಆದ್ರೆ ಆಯಾ ಹಂತಕ್ಕೆ ಅನುಸಾರವಾಗಿ ಚಿಕಿತ್ಸೆ ಕೂಡ ನಿಗಧಿಯಾಗಲಿದೆ. ವಿವಿಧ ಮನೋವೈಜ್ಞಾನಿಕ ಥೆರಪಿಗಳು ಖಿನ್ನತೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಖಿನ್ನತೆಗೆ ಒಳಗಾದವರು ಮಾತ್ರವಲ್ಲ ಅವರ ಕುಟುಂಬಸ್ಥರು ಕೂಡ ಆಪ್ತ ಸಮಾಲೋಚನೆಯ ಅಗತ್ಯವಿರಲಿದೆ. ಇದು ಒಂದು ದಿನದ ಚಿಕಿತ್ಸೆ ಅಲ್ಲವೇ ಅಲ್ಲ ಬದಲಿಗೆ ತಿಂಗಳುಗಳ ಕಾಲ ನಿರಂತರ ಕಾಳಜಿ, ಚಿಕಿತ್ಸೆ, ರಿಲಾಕ್ಸೇಶನ್, ಮನಸ್ಸನ್ನು ಹತೋಟಿಯಲ್ಲಿಡುವ ವಿಧಾನದ ಕುರಿತು ತಿಳಿ ಹೇಳಲಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications