Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಹೋಳಿಯಾಟದಲ್ಲಿ ಅಸ್ತಮಾ ಸಮಸ್ಯೆವಿರುವವರು ಈ ರೀತಿ ಜಾಗ್ರತೆವಹಿಸಲೇಬೇಕು
ಬಣ್ಣದ ಹಬ್ಬ ಹೋಳಿ ಹಬ್ಬ. ಈ ಹಬ್ಬದಲ್ಲಿ ಓಕುಳಿ ಆಟವೇ ಪ್ರಮುಖ ಆಕರ್ಷಣೆ. ಎಲ್ಲರೂ ಖುಷಿಯಲ್ಲಿ ಬಣ್ಣವನ್ನು ಎರಚಿ ಆಟ ಆಡುವಾಗ ತುಂಬಾನೇ ಖುಷಿಯಾಗುವುದು, ಆದರೆ ಹೋಳಿ ಆಟ ಆಡುವಾಗ ಈ ಅಸ್ತಮಾ ರೋಗಿಗಳು ತುಂಬಾನೇ ಎಚ್ಚರಿಕೆ ವಹಿಸಬೇಕು, ಇಲ್ಲದಿದ್ದರೆ ಹೋಳಿ ಸಂಭ್ರಮ ಮುಗಿಯುವಷ್ಟರಲ್ಲಿ ಆರೋಗ್ಯ ದುರ್ಬಲವಾಗುವುದು. ಆದ್ದರಿಂದ ಹೋಳಿ ದಿನ ಅಸ್ತಮಾ ರೋಗಿಗಳು ಈ ತಪ್ಪು ಮಾಡಲೇಬಾರದು:

ಮಾಸ್ಕ್ ಧರಿಸದೆ ಇರುವುದು:
ನೀವು ಹೋಳಿ ಸಂಭ್ರಮದ ನಡುವೆ ಇರುವಾಗ ಮಾಸ್ಕ್ ಧರಿಸಲು ಮರೆಯಬೇಡಿ. ನೀವು ಆಡದೆ ಇರಬಹುದು, ಆದರೆ ನಿಂತು ಸ್ನೇಹಿತರ, ಮನೆಯವರ ಹೋಳಿ ಸಂಭ್ರಮ ನೋಡುವುದಾದರೂ ಕೂಡ ಮಾಸ್ಕ್ ಧರಿಸಿ. ಇನ್ನು ನೀವು ಭಾಗಿಯಾಗುವುದಾದರೆ ಕೃತಕ ಬಣ್ಣಗಳಿಂದ ಆಡಬೇಡಿ, ನೈಸರ್ಗಿಕ ಬಣ್ಣಗಳನ್ನು ಸ್ವಲ್ಪ ಹಚ್ಚಿದರೆ ತೊಂದರೆಯಾಗಲ್ಲ.
ಕುಣಿದು ಕುಪ್ಪಳಿಸಬೇಡಿ
ಹೋಳಿ ಸಂಭ್ರಮ ನೋಡುವಾಗ ಕುಣಿದು ಕುಪ್ಪಳಿಸಬೇಕು ಅನಿಸುವುದು, ಆದರೆ ಅಸ್ತಮಾ ಸಮಸ್ಯೆಯಿದ್ದರೆ ದೇಹಕ್ಕೆ ಸುಸ್ತುವಾಗುವಂತೆ ಕುಣಿಯುವುದು, ನೃತ್ಯ ಮಾಡುವುದು ಮಾಡಬೇಡಿ. ಹೀಗೆ ಮಾಡಿದರೆ ಉಸಿರಾಡಲು ಕಷ್ಟವಾಗುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆ.
ರಾಸಾಯನಿಕ ಬಣ್ಣಗಳು
ರಾಸಾಯನಿಕ ಬಣ್ಣಗಳು ಅಸ್ತಮಾ ರೋಗಿಗಳಿಗೆ ಮಾತ್ರವಲ್ಲ, ಯಾರಿಗೂ ಒಳ್ಳೆಯದಲ್ಲ, ಆದರೆ ಅಸ್ತಮಾ ರೋಗಿಗಳಿಗೆ ಹೆಚ್ಚು ಸಮಸ್ಯೆ ಉಂಟು ಮಾಡುವುದು. ಅದರ ಬದಲಿಗೆ ಅರಿಶಿಣ ಪುಡಿ, ಬೀಟ್‌ರೂಟ್ ಅಥವಾ ಸಾವಯವ ಬಣ್ಣ ಹಾಕಿ ಮಾಡಿದ ಬಣ್ಣಗಳನ್ನು ಬಳಸಿ. ಇದರಿಂದ ತ್ವಚೆಗೆ ಒಳ್ಳೆಯದು. ಅಸ್ತಮಾ ರೋಗಿಗಳ ಮೇಲೂ ಯಾವ ಕೆಟ್ಟ ಪರಿಣಾಮ ಬೀರುವುದಿಲ್ಲ. ಇನ್ನು ಮಕ್ಕಳಿಗೆ ಹಫಳಿಯಾಡಲು ಸಾವಯವ ಬಣ್ಣ ಮಾತ್ರ ನೀಡಿ.
ಮದ್ಯ ಸೇವಿಸಬೇಡಿ
ಹೋಳಿ ಹಬ್ಬದಲ್ಲಿ ಬೀರ್, ಮದ್ಯ, ಮಾದಕ ಸೊಪ್ಪು ಹಾಕಿದ ಥಂಡೈ ಸೇವಿಸಬೇಡಿ. ಇವುಗಳನ್ನು ಸೇವಿಸಿದರೆ ಅಸ್ತಮಾ ಸಮಸ್ಯೆ ಹೆಚ್ಚಿಸುವುದು, ಇವುಗಳ ಬದಲಿಗೆ ಜ್ಯೂಸ್ ಸೇವಿಸಿ, ಜ್ಯೂಸ್‌ನಲ್ಲಿಯೂ ನಿಮ್ಮ ಅಸ್ತಮಾ ಸಮಸ್ಯೆ ಹೆಚ್ಚಿಸುವ ಅಂದರೆ ಐಸ್ ಹಾಕಿದ, ತಂಪು ಪಾನೀಯಗಳು ಇವುಗಳನ್ನು ಸೇವಿಸಬೇಡಿ.
ಬಿಸಿಲಿನಲ್ಲಿ ತುಂಬಾ ಹೊತ್ತು ಇರಬೇಡಿ
ತುಂಬಾ ಬಿಸಿಲಿನಲ್ಲಿ ನಿಲ್ಲುವುದು ಕೂಡ ಅಸ್ತಮಾ ರೋಗಿಗಳಿಗೆ ಒಳ್ಳೆಯದಲ್ಲ. ಈಗಂತೂ ಬಿಸಿಲಿನ ತೀವ್ರತೆ ಹೆಚ್ಚಿದೆ, ಆದ್ದರಿಂದ ತುಂಬಾ ಹೊತ್ತು ಬಿಸಿಲಿನಲ್ಲಿ ಆಟವಾಡಬೇಡಿ.
ಈ ಬಗ್ಗೆ ಕೂಡ ಗಮನಹರಿಸಬೇಕು:
ವಾಯುಮಾಲಿನ್ಯ ಇರುವ ಕಡೆ ಹೋಗಬಾರದು, ಇನ್ನು ಸ್ಮೋಕಿ ಎಫೆಕ್ಟ್ ಮಾಡುವ ಕಡೆ ನಿಲ್ಲಬೇಡಿ, ಪಟಾಕಿ ಸಿಡಿಸುವುದು ಅಥವಾ ಬಣ್ಣಗಳನ್ನು ಎರಚಾಡುವ ಕಡೆ ನಿಲ್ಲಬೇಡಿ.
ಇನ್ ಹೇಲರ್ ಕೈಯಲ್ಲಿಯೇ ಇರಲಿ: ನೀವು ಸ್ನೇಹಿತ ಜೊತೆಗೆ ಆಟ ಆಡಲು ಹೋಗುವಾಗ ಇನ್‌ಹೇಲರ್ ಜೊತೆಯಲ್ಲಿಯೇ ಕೊಂಡೊಯ್ಯಿರಿ.
ಅಸ್ತಮಾ ಇರುವ ಮಕ್ಕಳ ಕಡೆ ಗಮನ ಹರಿಸಿ: ಮಕ್ಕಳಿಗೆ ಹೇಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುವುದು ಗೊತ್ತಾಗಲ್ಲ, ಬೇರೆ ಮಕ್ಕಳ ಜೊತೆಗೆ ಜೋಶ್‌ನಲ್ಲಿ ಆಡುತ್ತಾರೆ. ಹಾಗಾಗಿ ಅಸ್ತಮಾ ಇರುವ ಮಕ್ಕಳ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಿಬೇಕು. ಅವರಿಗೆ ಆಟ ಆಡಲು ನೀವು ಸಾವಯವ ಬಣ್ಣಗಳನ್ನು ಮಾತ್ರ ನೀಡಬೇಕು. ಅಲ್ಲದೆ ಮಾಸ್ಕ್ ಧರಿಸಿ ಇರುವಂತೆ ನೋಡಿಕೊಳ್ಳಿ.
ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳಿ
ಇನ್ನು ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳಿ, ಮಾಸ್ಕ್ ಧರಿಸುವುದು ಮರೆಯಲೇಬೇಡಿ.
ಈ ರೀತಿ ನೀವು ಸುರಕ್ಷಿತ ಕ್ರಮ ಅನುಸರಿಸಿ ನೀವು ಹೋಳಿಯನ್ನು ಆಚರಿಸಲು ಯಾವುದೇ ತೊಂದರೆಯಿಲ್ಲ, ಎಲ್ಲರಿಗೂ ಬಣ್ಣದ ಹಬ್ಬ ಹೋಳಿಯ ಶುಬಾಶಯಗಳು... ಈ ಹೋಳಿ ನಿಮ್ಮ ಬದುಕಿನಲ್ಲಿ ಸಂತೋಷದ ರಂಗು ತುಂಬಲಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











